Thursday, November 10, 2011

ಮಾತ್ಗವಿತೆ

ಯಾಕೋ ಏನೋ ನೀನು 
ನೆನಪಾಗುತ್ತಿಯಾ !
ದಡ್ಡನೆದ್ದು ಕುಳಿತು ಒಂದಿಷ್ಟು ಕಾಲ
ಮಂದವಾಗುತ್ತೇನೆ !
ಬಂಧವಾಗದ ಬಂಧನವೋ
ಚೆಂದಗಾಣದ ಸಂಬಂಧವೋ
ಏನೊಂದೂ ತಿಳಿಯದೇ
ನಿದ್ದೆ ಮಾಡುವ ಪ್ರಯತ್ನ ಮಾಡುತ್ತೇನೆ.
ಅದು ಯಾಕೋ ಏನೋ 
ನಿದ್ದೆಗೂ ನನ್ನ ಮೇಲೆ ಮನಸ್ಸಿಲ್ಲ !
ಸಮೀಪವೂ ಸುಳಿಯುವುದಿಲ್ಲ !

1 comment:

  1. ನೆನಪುಗಳೇ ಹಾಗೇ !
    ಮರೆಯಬೇಕೆಂದರೂ ನೆನಪಾಗಿ ಕಾಡುತ್ತವೆ...
    ನೆನಪಾಗಿ ನಿದ್ದೆಗೆಡಿಸುತ್ತವೆ...
    ನಿದ್ದೆಗೆಡಿಸಿ ಮಂಡೆ ಬಿಸಿಯಾಗಿಸುತ್ತವೆ...
    ಬಿಸಿಯಾಗಿಸಿ ಬಿಂದುವಾಗಿಸುತ್ತವೆ...
    ನೆನಪುಗಳೇ ಹಾಗೆ !

    ReplyDelete

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.