Wednesday, November 30, 2011
ಮಡೆ ಸ್ನಾನದ ಉತ್ತರೀಯದಲ್ಲಿ : ನನ್ನ ಜನ ; ನನ್ನ ದೇಶದ ಜನ !
Subscribe to:
Post Comments (Atom)
ದಾಸಿಮಯ್ಯನ ವಚನ
ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.
-
ತಪೋನಂದನ : ಮಹಾಶ್ವೇತೆಯ ತಪಸ್ಸು ೧ ಮನುಷ್ಯನ ಮನಸ್ಸು ಊರ್ಧ್ವಮುಖಿ. ಅವನ ಕನಸು ಗಗನಗಾಮಿ. ಅವನ ಕಲ್ಪನೆ ನಕ್ಷತ್ರಯಾತ್ರಿ. ಆ ಊರ್ಧ್ವಮುಖದ, ಗಗನಗಮನದ ಮತ್ತು ನಕ...
-
ಡಾ. ಸಿದ್ರಾಮ ಕಾರಣಿಕ ದಾಸ ಸಾಹಿತ್ಯದ ಇತಿಹಾಸದಲ್ಲಿ ಅಖಂಡ ಪ್ರತಿಭೆಯ ಕವಿತಾಶಕ್ತಿ ಹೊಂದಿದ ಪ್ರಮುಖರು ಎಂದರೆ ಕನಕದಾಸರು. ದಾಸ ಸಾಹಿತ್ಯದ ಕ...
ಒಂದೇಡೆ ಇಡೀ ವಿಶ್ವವೇ ಬೆಕ್ಕಸ ಬೆರಗಾಗುವಂತಹ ವೈಜ್ಞಾನಿಕ ಮುನ್ನಡೆಯೆಂದು ಬೊಂಬಡಾ ಹೊಡೆದುಕೊಳ್ಳುವ, ಚಿಲ್ಲರೆ ವಿಷಯಗಳಿಗೂ ವಿಶ್ವವನ್ನೇ ಆಹ್ವಾನಿಸುವ ಆರ್ಥಿಕ ಉದಾರೀಕರಣವೆಂಬ ಬೋಳೆ ಮಂತ್ರ ಜಪಿಸುವ ಸಮಕಾಲೀನ ಸಂದರ್ಭವೇ ಯಾಕೆ ನೀನಿಷ್ಟು ಕ್ರೂರನಾದೆ...ದೇವರು-ದಿಂಡಿರೆಂಬ ಕಾಲ್ಪನಿಕ ಜಗತ್ತಿನಲ್ಲಿ ತೇಲಾಡಿಸಿ ಭಾವನೆಗಳೊಂದಿಗೆ ಚೆಲ್ಲಾಟವಾಡುವ ವಿತಂಡಿಗಳ ಪಡೆ ಒಂದೆಡೆ ; ಅದನ್ನು ತಿಳಿಹೇಳಲು ಹೋದ ಶಿವರಾಮ್ ರಂತವರನ್ನು ರಕ್ಷಿಸದ ಸರ್ಕಾರವೇ...ಎಲ್ಲಿದೆ ನಿನ್ನ ಕಾನೂನು ಪಾಲನೆಯೆಂಬ ದಂಡವನ್ನು ಜಪಳಿಸಬಾರದೇ? ಮಡೆ ಸ್ನಾನವೆಂಬ ನೀಚ ಮತ್ತು ಹೊಲಸು ಪದ್ಧತಿಯ ಆರಾಧಕರೇ/ಪೋಷಕರೇ ನಿಮಗಾದರೂ ಬೀಳಲು ಬುದ್ಧಿ ಬೇಡವೇ? ನಾವೀಗ ಯಾವ ಕಾಲದಲ್ಲಿದ್ದೇವೆ ಎಂಬ ಕನಿಷ್ಟ ಅರಿವು-ಜ್ಞಾನ ಬೆಳೆಯುವುದು ಯಾವಾಗ ? ವರ್ಷಗಳಿಂದಲೂ ದೇಶವ್ಯಾಪಿ ವಿರೋಧ ವ್ಯಕ್ತವಾಗುತ್ತಿದ್ದರೂ ಲಜ್ಜಾಹೀನರಂತೆ ನೀವು ಎಂಜಲೆಲೆಯ ಮೇಲೆ ಹೊರಳಾಡಿ ಆಧುನಿಕ ಕಾಲದ ಗಂಭೀರ ಕಾಯಿಲೆಗಳ ಸೋಂಕನ್ನು ನಿಮ್ಮ ದೇಹ ಮೇಲೆ ಎಳೆದುಕೊಂಡಿದ್ದು ಎಷ್ಟು ಸರಿ ? ನೀವು ಇಂತಹ ಆಚರಣೆಗಳಿಗೆ ಮೈಯೊಡ್ಡಿಕೊಳ್ಳು ತಯಾರಿರುವತನಕ ಮೇಲ್ಜಾತಿಯವರು ಸಂಭ್ರಮದಿಂದ ಆಚರಣೆಗೆ ಸಮ್ಮತಿ ನೀಡುತ್ತಾರೆ. ಇನ್ನಾದರೂ ಆಧುನಿಕ ಕಾಲದ ವೈಜ್ಞಾನಿಕ ಆಲೋಚನೆಗಳಿಗೆ ನಿಮ್ಮನ್ನು ನೀವು ತೆರೆದುಕೊಳ್ಳಿರಿ...ನನ್ನಯ ಕಪ್ಪು ಜನರೇ...
ReplyDelete