Thursday, November 17, 2011

ಮಾತ್ಗವಿತೆ-2

ಚೆಲುವೆಯ ಚಿತ್ತಾರ
ಬಿಡಿಸುವ ಗೊಂದಲದಲ್ಲದ್ದೇನೆ !
ಹರಿಣ ಕಣ್ಣಿನ ನಡುವೆ
ಹರನ ಮೂರನೇ ಕಣ್ಣದ ಮೂಗು
ಕೆಳಗೆ ಅಚ್ಚ ಬಿಳಿ ಹಲ್ಲಿನ ಬಾಯಿ
ಸುತ್ತಿಕೊಂಡಿರುವ ಹಾವು ತುಟಿ !
ನೋಡುತ್ತೇನೆ ...... !
ಕಣ್ಣಲ್ಲಿ ಒಬ್ಬಳು ; ಮೂಗ ತುದಿಯಲ್ಲಿ
ಇನ್ನೊಬ್ಬಳು ; ತುಟಿಯ ಕಿರುನಗೆಯಲ್ಲಿ
ಮತ್ತೊಬ್ಬಳು ..... !
ಚಿತ್ತಾರ ಬಿಡಿಸಿದಂತೆಲ್ಲ
ಒಂದೊಂದು ಅಂಗದಲ್ಲೂ ಒಬ್ಬೊಬ್ಬ
ಚೆಲುವೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.