Sunday, November 27, 2011

ವಚನ-14

ಯಾಕೋ ಏನೋ ಯಾರಾದರೂ
ಬಸಿರಾದರೆ ಹೊಟ್ಟೆ ಮುಟ್ಟಿ ನೋಡಿಕೊಳ್ಳುವ
ಚಟ ಸುರುವಾಗಿದೆ ! ಕುಂಬಳ ಕಳ್ಳನಂತಲ್ಲ ;
ಅಕ್ಕ ಮಹಾದೇವಿ ಬಟಾ ಬತ್ತಲಾಗಿ
ಗಳಿಗೆಗೊಮ್ಮೆ ಮಲ್ಲಿಕಾರ್ಜುನನ ಧ್ಯಾನಿಸಿದಂತೆ !
ಬಸವಣ್ಣ ಲಿಂಗಾಂಗ ಸಾಮರಸ್ಯ ಬಯಸಿದಂತೆ !
ಅಲ್ಲಮ ಪ್ರಭು ಬಟಾ ಬಯಲಿನಲ್ಲಿ ಬಯಲಾದಂತೆ !
ಚೆನ್ನ ಬಸವಣ್ಣನ ಹುಟ್ಟನ್ನು ಹೊಟ್ಟೆಯಲ್ಲಿ ಇಟ್ಟುಕೊಂಡಂತೆ !
ಕಾಯಕ ತಪ್ಪಿದ ಕುಹಕ ನಿರಂತರವಾಗಿದೆ !
ಹೀಗಾಗಿ ಯಾರೋ ಬಸಿರಾದಾಗ ..... !
ಹೊಟ್ಟೆ ಮುಟ್ಟಿಕೊಂಡು ನೋಡುವ ಕಾರಣಿಕ ಸಿದ್ಧರಾಮ
ಹೀಗೂ ಉಂಟೆ ಎಂಬ ಅಚ್ಚರಿಗೆ ಬಸಿರಾದ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.