Showing posts with label ನಾಟಕ. Show all posts

Monday, December 01, 2014
Friday, November 21, 2014
'ಕೋರೆಗಾಂವ...' ನಾಟಕದ ಒಂದು ಸಂಭಾಷಣೆ
ಡಾ. ಸಿದ್ರಾಮ ಕಾರಣಿಕ
----------------------------------
ರಾಮನಾಕ : ಮತ್ತ ನೀನೂ ಅಂವ್ನ ಜೋಡಿ ಹೋಗ್ಬೇಕಿತ್ತಿಲ್ಲೋ ?
ಮುದುಕ : ಅದೆಲ್ಲಿ ನನ್ನ ಹಣಿಬರದಾಗ ಬರ್ದೇತಿ ? ಅಂವಾ ಭಾಳ ಕರ್ದss ಕರ್ದ ಸಾಕಾದ... ನಾನss ಹೋಗ್ಲಿಲ್ಲ. ಕೂಡಿ ಹೋರಾಟ ಮಾಡಿದರ ಏನ ಬೇಕಾದ್ದ ಮಾಡಬೋದು ಅಂತ ನಾ ಆವಾಗ ತಿಳ್ಕೊಲಿಲ್ಲ... ಮಜಾ ಮಾಡ್ಕೊಂತ ತಿರಗಾಡಿದ್ನಿ... ಈಗ ಕೆಟ್ಟ ಅನ್ನಿಸ್ತೇತಿ... ಕೆಟ್ಟ ಮ್ಯಾಲ ಬುದ್ಧಿ ಬಂದ್ರ ಏನ ಉಪಯೋಗ ಹೇಳ್ರ್ಯಲಾ ? ಹುಡುಗೋರ್ಯಾ, ನೀವು ನನ್ನ ಹಾಂಗ ಮಾಡಬ್ಯಾಡ್ರಿ... ನಮ್ಮ ಜಾತ್ಯಾಗss ಖರೇ ತಾಕತ್ ಏತಿ... ಈ ಬೆನ್ನ ಹಿಂದ ಕಟ್ಕೊಂಡ ಕೊರಿ, ಕೊಳ್ಳಾಗಿನ ಪಟ್ಟಿ ಬಿಚ್ಚಬೇಕು...
ಸಿದ್ಧನಾಕ : ಅಷ್ಟss ಅಲ್ಲೋ ಅಜ್ಜಾ... ಇದೆಲ್ಲ ಆದದ್ದು ಈ ಪೇಶ್ವೆಗಳಿಂದ. ಭಾಳ ದೊಡ್ಡ ಕುತಂತ್ರ ಮಾಡಿ ನಮ್ಮನ್ನ ತುಳಿಯಾಕತ್ತಾರು... ಅವ್ರನ್ನ ನಿರ್ನಾಮ ಮಾಡಬೇಕು ಅನ್ನೋ ನಿರ್ಧಾರಕ ನಾವೆಲ್ಲ ಬಂದೇವಿ.
ಮುದುಕ : ಚೊಲೋ ಆತ ಬಿಡಪಾ... ನಿಮ್ಮಜ್ಜ ಮತ್ತ ನಿನ್ನ ರೂಪದಾಗ ಹುಟ್ಟಿ ಬಂದಾನು... ಜಾತಿ ಹೆಸರ ಮ್ಯಾಲ ನಮ್ಮನ್ನ ಹಾಳ ಮಾಡಿದಾವ್ರನ್ನ ದಿಕ್ಕಾಪಾಲ ಆಗೂಹಂಗ ಮಾಡೂ ಛಲಾ ಇರ್ಲಿ...
----------------------------------
ಮುದುಕ : ಯಾಕಿಲ್ಲೋ ಹುಡುಗಾ ! ನಿಮ್ಮ ನಡುವ ಕುಂತಾನಲ್ಲ ಈ ಸಿದ್ಧನಾಕ... ಇವರ ಅಜ್ಜ
ಸಂಭಾಜಿ ಮಾರಾಜರ ಸತ್ತ ನಂತರದ ಕಾಲದಾಗ ಅಂವ್ನೂ ನಿಮ್ಮಂಥವ್ರ ಟೋಳಿ ಕಟ್ಕೊಂಡ ಮರಾಠಾ
ಸೇನಾದಾಗ ಇದ್ದ. ನಿಮಗ ಗೊತ್ತಿಲ್ಲ... ಅಂವ್ನ ಹೆಸರೂ ಸಿದ್ಧನಾಕನss ! ದಿಲ್ಲಿ ಮುಸಲೇರ
ಸುದ್ದಾ ಅಂವ್ಗ ಅಂಜತಿದ್ರು ! ಸಾಹು ಮಾರಾಜನ ಕಾಲದಾಗ ಆ ಸಿದ್ಧನಾಕ ತನ್ನ ಪರಾಕ್ರಮ ತೋರಿ
ಸನ್ಮಾನ ಪಡ್ಕೊಂಡಿದ್ದ... ಪಲ್ಲಕ್ಕಿಯೊಳಗ ಕುಂಡ್ರಿಸಿ ಅಂವ್ನನ್ನ ಮೆರವಣಿಗಿ ಮಾಡಿದ್ರು
ಸಾಹು ಮಾರಾಜರು... ಜಾಗೀರದಾರಕೀ ಇನಾಮ ಪಡ್ಕೊಂಡಿದ್ದ ಅಂವಾ...
ರಾಮನಾಕ : ಮತ್ತ ನೀನೂ ಅಂವ್ನ ಜೋಡಿ ಹೋಗ್ಬೇಕಿತ್ತಿಲ್ಲೋ ?
ಮುದುಕ : ಅದೆಲ್ಲಿ ನನ್ನ ಹಣಿಬರದಾಗ ಬರ್ದೇತಿ ? ಅಂವಾ ಭಾಳ ಕರ್ದss ಕರ್ದ ಸಾಕಾದ... ನಾನss ಹೋಗ್ಲಿಲ್ಲ. ಕೂಡಿ ಹೋರಾಟ ಮಾಡಿದರ ಏನ ಬೇಕಾದ್ದ ಮಾಡಬೋದು ಅಂತ ನಾ ಆವಾಗ ತಿಳ್ಕೊಲಿಲ್ಲ... ಮಜಾ ಮಾಡ್ಕೊಂತ ತಿರಗಾಡಿದ್ನಿ... ಈಗ ಕೆಟ್ಟ ಅನ್ನಿಸ್ತೇತಿ... ಕೆಟ್ಟ ಮ್ಯಾಲ ಬುದ್ಧಿ ಬಂದ್ರ ಏನ ಉಪಯೋಗ ಹೇಳ್ರ್ಯಲಾ ? ಹುಡುಗೋರ್ಯಾ, ನೀವು ನನ್ನ ಹಾಂಗ ಮಾಡಬ್ಯಾಡ್ರಿ... ನಮ್ಮ ಜಾತ್ಯಾಗss ಖರೇ ತಾಕತ್ ಏತಿ... ಈ ಬೆನ್ನ ಹಿಂದ ಕಟ್ಕೊಂಡ ಕೊರಿ, ಕೊಳ್ಳಾಗಿನ ಪಟ್ಟಿ ಬಿಚ್ಚಬೇಕು...
ಸಿದ್ಧನಾಕ : ಅಷ್ಟss ಅಲ್ಲೋ ಅಜ್ಜಾ... ಇದೆಲ್ಲ ಆದದ್ದು ಈ ಪೇಶ್ವೆಗಳಿಂದ. ಭಾಳ ದೊಡ್ಡ ಕುತಂತ್ರ ಮಾಡಿ ನಮ್ಮನ್ನ ತುಳಿಯಾಕತ್ತಾರು... ಅವ್ರನ್ನ ನಿರ್ನಾಮ ಮಾಡಬೇಕು ಅನ್ನೋ ನಿರ್ಧಾರಕ ನಾವೆಲ್ಲ ಬಂದೇವಿ.
ಮುದುಕ : ಚೊಲೋ ಆತ ಬಿಡಪಾ... ನಿಮ್ಮಜ್ಜ ಮತ್ತ ನಿನ್ನ ರೂಪದಾಗ ಹುಟ್ಟಿ ಬಂದಾನು... ಜಾತಿ ಹೆಸರ ಮ್ಯಾಲ ನಮ್ಮನ್ನ ಹಾಳ ಮಾಡಿದಾವ್ರನ್ನ ದಿಕ್ಕಾಪಾಲ ಆಗೂಹಂಗ ಮಾಡೂ ಛಲಾ ಇರ್ಲಿ...
Subscribe to:
Comments (Atom)
ದಾಸಿಮಯ್ಯನ ವಚನ
ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.
-
ತಪೋನಂದನ : ಮಹಾಶ್ವೇತೆಯ ತಪಸ್ಸು ೧ ಮನುಷ್ಯನ ಮನಸ್ಸು ಊರ್ಧ್ವಮುಖಿ. ಅವನ ಕನಸು ಗಗನಗಾಮಿ. ಅವನ ಕಲ್ಪನೆ ನಕ್ಷತ್ರಯಾತ್ರಿ. ಆ ಊರ್ಧ್ವಮುಖದ, ಗಗನಗಮನದ ಮತ್ತು ನಕ...