Thursday, November 17, 2011

ವಚನ-8

ಜಗದ ಜಗಳ ಸುರಿವ ಜಿಟಿ ಜಿಟಿ ಮಳೆ
ತಪ್ಪಿಸಿಕೊಳ್ಳಲು ಹಿಂಜಿಗಿದಷ್ಟು ಒತ್ತರಿಸಿ ಬರುತ್ತದೆ !
ತೊಳೆಯುವುದೂ ಇಲ್ಲ ಉಳಿಯುವುದೂ ಇಲ್ಲ
ಬರಿ ಮೈಯ ಹಸಿಯಾಗುತ್ತದೆ ;  ಖುಷಿಯಾಗದು
ಈ ಹಸಿ ಹಸಿ ಪಸೆಯಲ್ಲಿಯೇ ಬದುಕು ಕಾರಣಿಕ ಸಿದ್ಧರಾಮ
ಪರಿಹಾರವ ಹುಡುಕು ; ಪರ್ಯಾಯವನ್ನಾದರೂ ಸೃಜಿಸು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.