Tuesday, November 08, 2011

ನನ್ನ ನಾಟಕ

 
 
'ಕಲ್ಯಾಣಕ್ಕೆ ಅಲ್ಲ ಈ ದಾರಿ' ಬಸವಣ್ಣನಿಗೆ ಸಂಬಂಧಿಸಿದ ನಾಟಕ ಇದು. ಇತಿಹಾಸಕಾರರು ಅಥವಾ ಬಹಳಷ್ಟು ಬರಹಗಾರರು ಬಸವಣ್ಣನ ಬಾಲ್ಯದ ಕೆಲ ಸಂಗತಿಗಳನ್ನು ಮುಚ್ಚಿಟ್ಟು ಹೇಳಿಕೊಳ್ಳುತ್ತಾರೆ. ಅರ್ಜುನವಾಡ ಶಾಸನವನ್ನು ನಾನು ಅಧ್ಯಯನ ಮಾಡಿದಾಗ ಅಲ್ಲಿ ನನಗೆ ಹೊಳೆದ ಕಲ್ಪನೆಗಳೇ ಬೇರೆ. ಅದನ್ನೇ ಮೂಲವಾಗಿಟ್ಟುಕೊಂಡು ನಾನು ಇನ್ನಷ್ಟು ಅಧ್ಯಯನ ಮಾಡಿದೆ. ಬಸವಣ್ಣ ಬಾಗೇವಾಡಿಯನ್ನು ಬಿಟ್ಟು ಹೋದಾಗ ಅಲ್ಲಿ ನಡೆದಿರಬಹುದಾದ ಪ್ರಸಂಗಗಳು ಘೋರವಾಗಿದ್ದವು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಹೀಗಾಗಿ ನಾನು ಬಸವಣ್ಣ ಬಾಗೇವಾಡಿಯನ್ನು ಬಿಟ್ಟು ಹೋದಾಗ ಮಾದರಸ, ಮಾದಲಾಂಬಿಕೆ ಮತ್ತು ದೇವರಾಜರನ್ನು ಇಟ್ಟುಕೊಂಡು ಅವರು ಹೇಗೆ ಅಲೆಮಾರಿಗಳಾಗಿ ಹುಕ್ಕೇರಿ ಸಮೀಪದ (ಅರ್ಜುನವಾಡ) ಕವಿಳಾಸಪುರಕ್ಕೆ ಬಂದರು ಎಂಬುದನ್ನು ವಸ್ತುನಿಷ್ಟವಾದ ಅಧ್ಯಯನದ ಮೂಲಕ ಬಿಡಿಸಿಟ್ಟಿದ್ದೇನೆ. ಎಚ್.ಎಸ್. ಶಿವಪ್ರಕಾಶರ ಮಹಾಚೈತ್ರ, ಡಾ. ಎಂ.ಎಂ. ಕಲಬುರ್ಗಿಯವರ ಕೆಟ್ಟಿತ್ತು ಕಲ್ಯಾಣ, ಲಂಕೇಶರ ಸಂಕ್ರಾಂತಿ ಮೊದಲಾದ ನಾಟಕಗಳಿಗಿಂತಲೂ ಭಿನ್ನವಾದ ಕಥಾವಸ್ತು ಇಲ್ಲಿದೆ. ಮೈಸೂರಿನ ಮಾತಾ ಪ್ರಿಂಟರ್ಸ್ 2009 ರಲ್ಲಿ ಪ್ರಕಟಿಸಿರುವ ಈ ನಾಟಕವನ್ನು ಓದಿ, ಪ್ರದರ್ಶನ ಮಾಡಿ ತಮ್ಮ ಅಭಿಪ್ರಾಯ ತಿಳಿಸುತ್ತೀರಿ ಎಂದು ನಂಬಿರುವೆ.

1 comment:

  1. ಮಾನ್ಯರೇ,
    78 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸದರಿ ಪುಸ್ತಕ ಕೊಂಡು ಓದುತ್ತೆನೆ. ನಂತರ ನಾಟಕ ಮಾಡಿಸುವುದೊ.. ಸಿನಿಮಾ ಮಾಡುವುದೊ ನಿರ್ಧರಿಸುವೆ.
    -ವಿಜಯ ಅಮೃತರಾಜ್.

    ReplyDelete

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.