Showing posts with label ಮತದಾನ. Show all posts
Showing posts with label ಮತದಾನ. Show all posts
Saturday, September 15, 2012
ಗಾಂಧಿ-ಅಂಬೇಡ್ಕರ್ ಮತ್ತು ಪುಣೆ ಒಪ್ಪಂದ
ಸಾಮಾಜಿಕ
ಸಮಾನತೆಯ ಆಂದೋಲನದ ಜೊತೆ ಜೊತೆಗೆ ದೇಶದ ರಾಜಕಾರಣದಲ್ಲಿ ಭಾಗವಹಿಸುವುದರ ಅಗತ್ಯತೆ
ಡಾ.ಅಂಬೇಡ್ಕರರಿಗೆ ಮನವರಿಕೆಯಾಗಿತ್ತು. ಅಧಿಕಾರ ಪ್ರಾಪ್ತಿ ಮಾಡಿಕೊಳ್ಳದೆ ಗುರಿ ಸಾಧನೆ
ಯಾಗದೆಂಬುದು ಅವರ ಅರಿವಿಗೆ ಬಂದಿತ್ತು. ಮಹಾಡ್ ಸತ್ಯಾಗ್ರಹ, ಮನುಸ್ಮತಿ ದಹನ, ಕಾಳಾರಾಮ
ಮಂದಿರ ಪ್ರವೇಶ ಚಳವಳಿಗಳಿಂದ ಅಸ್ಪಶ್ಯರಲ್ಲಿ ಅಭೂತಪೂರ್ವ ಸಂಘಟನೆ ಮತ್ತು ಜಾಗೃತಿ
ಮೂಡಿತ್ತು. ಆದರೆ ಇಷ್ಟರಿಂದಲೇ ಅವರಿಗೆ ಸಮಾಧಾನವಿರಲಿಲ್ಲ. ಅದಕ್ಕಾಗಿಯೇ ಅವರು ಅಖಿಲ
ಭಾರತ ಬಹಿಷ್ಕೃತ ವರ್ಗಗಳ ಸಮಾವೇಶವನ್ನು ಆಯೋಜಿಸುವ ನಿರ್ಧಾರ ಮಾಡಿದರು. 1930ರ ಅಗಸ್ಟ್ 9
ಮತ್ತು 10ರಂದು ನಾಗಪುರದಲ್ಲಿ ಸಂಘಟಿಸಲಾದ ಪ್ರಥಮ ರಾಷ್ಟ್ರಮಟ್ಟದ ಅಧಿವೇಶನದ
ಅಧ್ಯಕ್ಷತೆಯನ್ನು ಡಾ.ಅಂಬೇಡ್ಕರ್ ವಹಿಸಿದ್ದರು.
Monday, July 02, 2012
ರಾಜಕೀಯ ದುರಾಡಳಿತಕ್ಕೆ ಪರ್ಯಾಯ ಏನು ?
ಟಿ.ವ್ಹಿ. ನೋಡುತ್ತಿದ್ದೆ. ಸರಕಾರದ ಬಗ್ಗೆ ಬೇಸತ್ತ ವ್ಯಕ್ತಿಯೊಬ್ಬ ಆತಂಕ ವ್ಯಕ್ತಪಡಿಸುತ್ತಿದ್ದ. ಆಂಕರ್ ಗಳು ಪಿಚಗುಟ್ಟುತ್ತಿದ್ದರು. ಆದರೆ ನನಗೆ ಅನ್ನಿಸುತ್ತೆ ಒಳ್ಳೆಯವರಿಗೆ ಮತದಾನ ಮಾಡಬೇಕು ; ಒಳ್ಳೆಯವರನ್ನು ಜನಪ್ರತಿನಿಧಿಯನ್ನಾಗಿ ಆರಿಸಿ ತರಬೇಕು ಎಂಬುದು ಇವತ್ತು ಹಳೆಯ ಮಾತು. ಯಾಕೆಂದರೆ ವ್ಯವಸ್ಥೆ ಬದಲಾಗುತ್ತಿಲ್ಲ. ಅದಕ್ಕೆ 'ಕಠಿಣ' ವಾದ (ಕಟ್ಟುನಿಟ್ಟಾದ) ನಿಯಮಗಳು, ನಿರ್ಬಂಧನೆಗಳು ಇರಬೇಕಾಗುತ್ತದೆ. ಒಬ್ಬ ವ್ಯಕ್ತಿಯ ಮೇಲೆ ಒಂದು ಕ್ರಿಮಿನಲ್ ಕೇಸ್ ದಾಖಲಾದರೆ ಸಾಕು, ಆ ವ್ಯಕ್ತಿಗೆ ಚುನಾವಣೆ ಸ್ಪರ್ಧಿಸಲು ಚುನಾವಣಾ ಆಯೋಗ ಅನುಮತಿ ನೀಡಬಾರದು. ಆತ ನ್ಯಾಯಾಲಯದ ಮೂಲಕ ನಿರಪರಾಧಿಯಾಗಿ ಹೊರಬಂದರೆ ಮಾತ್ರ ಅವಕಾಶ ನೀಡಬೇಕು, ಅದೂ ಷರತ್ತುಬದ್ಧವಾಗಿರಬೇಕು. ಹಾಗಾದಾಗ ಸರಕಾರ, ಆಡಳಿತ ಎಲ್ಲವೂ ಒಂದಿಷ್ಟು ಮಟ್ಟಿಗೆ ಬದಲಾವಣೆ ಕಾಣಬಹುದು. ಏನಂತೀರಿ ?
Subscribe to:
Comments (Atom)
ದಾಸಿಮಯ್ಯನ ವಚನ
ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ ಒಡಲುಗೊಂಡವನೆಂದು ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.
-
ತಪೋನಂದನ : ಮಹಾಶ್ವೇತೆಯ ತಪಸ್ಸು ೧ ಮನುಷ್ಯನ ಮನಸ್ಸು ಊರ್ಧ್ವಮುಖಿ. ಅವನ ಕನಸು ಗಗನಗಾಮಿ. ಅವನ ಕಲ್ಪನೆ ನಕ್ಷತ್ರಯಾತ್ರಿ. ಆ ಊರ್ಧ್ವಮುಖದ, ಗಗನಗಮನದ ಮತ್ತು ನಕ...