Friday, November 11, 2011

ವಚನ-2

ಮೌನದ ಬತ್ತಳಿಕೆಯಲ್ಲಿ ಬಾಣಗಳನ್ನಿಟ್ಟುಕೊಂಡು
ಮಾತಿನ ಮೂಲಕ ಎಸೆಯಲಾರದೆ
ಕಸಿವಿಸಿಗೊಂಡು ಹಸಿ ಹುಸಿಯಲ್ಲಿ ಏಸೊಂದು ದಿನ ಕಳೆದರೆ
ಮರಳಿ ಹೋದ ದಿನಗಳ ಹಳಿದರೆ ಫಲವೇನು ?
ಮಾತಿನಿಂ ಇಹಪರವ ಸಾಧಿಸಿದೊಡೆ ಮೆಚ್ಚುವನು ಕಾರಣಿಕ ಸಿದ್ಧರಾಮ !
ಅಳಿದುಳಿದು ಹಿಡಿದಿಟ್ಟಕೊಂಡಡೆ ಕಾಡಲಾರದೆ ಮನವ ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.