ಚೆಂದಕ್ಕೆ ಚಂದ್ರಮನೇ ಬೇಕು ಅಂತಲ್ಲ
ಗೊಂದಲ ಗೂಡಿನ ಮನದ ಕೊಳೆಯನ್ನು
ಕಳೆಯಬೇಕು ; ಬೆಳೆಯಬೇಕು !
ಬಾಳು ಭವಣೆಯಲ್ಲ ; ಸದಾ ಕೊನರುವ ಕೊರಡು !
ಮರಡು ತಲೆಗೆರಡು ಕೊಡುವ ಕಾರಣಿಕ ಸಿದ್ಧರಾಮ
ಮೂಗಿಗಿಂತ ಮೂಗುತಿ ಭಾರದ ಬಡಿವಾರ ಬೇಡ !
ಗೊಂದಲ ಗೂಡಿನ ಮನದ ಕೊಳೆಯನ್ನು
ಕಳೆಯಬೇಕು ; ಬೆಳೆಯಬೇಕು !
ಬಾಳು ಭವಣೆಯಲ್ಲ ; ಸದಾ ಕೊನರುವ ಕೊರಡು !
ಮರಡು ತಲೆಗೆರಡು ಕೊಡುವ ಕಾರಣಿಕ ಸಿದ್ಧರಾಮ
ಮೂಗಿಗಿಂತ ಮೂಗುತಿ ಭಾರದ ಬಡಿವಾರ ಬೇಡ !
ಸೂರ್ಯ ಮಲಗಿದರೆ ಕತ್ತಲಾಗುತ್ತದೆ
ReplyDeleteಚಂದ್ರ ಮಲಗಿದರೆ ಬೆಳಕಾಗುತ್ತದೆ
ಆದರೆ...
ನಾನು ಮಲಗಿದರೆ ?
ನಿದ್ದೆ ಬರುತ್ತದೆ...
ಪ್ರಯತ್ನಿಸಬೇಕು
ಯಾಕಂದ್ರೆ
ಆರೋಗ್ಯಕ್ಕೆ ಒಳ್ಳೆಯದು !!!
ನಿಜ !
ReplyDeleteಮನವೆಂಬ ಗೊಂದಲ ಗೂಡಿನಲ್ಲಿಯ ಕಳೆಯೆಂಬ ಕೊಳೆಯನಳಿಸಲು
ಚಂದಮಾಮನ ಹಂಗೇಕೆ?
ಬಾಳೊಂದು ಭಾವಗೀತೆ ; ಸದಾ ಸ್ವರಗಳನ್ನು ಸಂಯೋಜಿಸುತ್ತಿರಬೇಕು !
ಪೆಟ್ಟಿನಿಂದ ತನ್ನಿಂತಾನೆ ಸರಿದಾರಿಗೆ ಸರಿಯುವ ಮೆದುಳ ಮಲ್ಲರಿಗೆ ಹೇಳಲೇನು !
ಮೂಗಿಲ್ಲದವರ ಊರಲ್ಲಿ ಮೊಂಡುಮೂಗಿನವಳದೇ ದಿಮಾಕೆಂಬುದು ಸುಳ್ಳಲ್ಲ !
ಊರಿಗೊಬ್ಬಳೇ ಪದ್ಮಾವತಿಯೆಂಬುದು ದಿಟ !