Saturday, November 19, 2011

ಮಾತ್ಗವಿತೆ-3

ಭಯ-ಸಂಕೋಚ .... !
ಭಯ ಮನಸಿಗೆ
ಏನಾದರೂ ಸಂಭವಿಸಿದರೆ ಗತಿ ?
ಭಯ ಸಮಾಜದ್ದು
ಅನೌಚಿತ್ಯ ಘಟಿಸದಿದ್ದರೂ
ಆಡಿಕೊಳ್ಳುವ ಮಾತು !
ಸಂಕೋಚ ಮನಸಿಗೆ
ಕಣ್ಣುಗಳ ಹಾದರದ ಪರಿಕಂಡು !
ಜಾರಿದರೆ ಶ್ರಮದಿಂದ ಕಟ್ಟಿದ
ಗಡಿಗೆ ಒಡೆದು ಹೋಗದೆ ?
ಆದರೆ ಆಸೆ ..... ?
ಆಸೆ ಹಿಂಗದು ;
ಭವ ಹರಿಯದು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.