Showing posts with label ಕವಿತೆ. ನೀಲಾ. Show all posts
Showing posts with label ಕವಿತೆ. ನೀಲಾ. Show all posts

Wednesday, March 05, 2014

ರಾಮ-ರಹೀಮರ ಅವಶ್ಯಕತೆ ಇಲ್ಲ !

 ಡಾ. ಸಿದ್ರಾಮ ಕಾರಣಿಕ

ನನಗೆ ರಾಮ ಬೇಕಿಲ್ಲ ;
ಆತನ ಹೆಸರಿನಲ್ಲಿ ಹರಾಮಿ ಬದುಕೂ ಬೇಕಿಲ್ಲ !
ರಹೀಮನೂ ಬೇಕಿಲ್ಲ ನನಗೆ
ಆತನ ಹೆಸರಿನಲ್ಲಿ ಬೇನಾಮಿ ಬದುಕೂ ಬೇಕಿಲ್ಲ !

ಮನುಷ್ಯ, ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವ
ಎಲ್ಲೋ ಮನದ ಮೂಲೆಯಲ್ಲಿ ಅಡಗಿ ಕುಳಿತಿರೋ
ಮಾನವೀಯತೆಯ ಮನುಷ್ಯ ಬೇಕಾಗಿದ್ದಾನೆ !

ಬೇಕಾದರೆ ಅವನಿಗೆ ಗುಡಿ ಕಟ್ಟಬೇಕು
ಎಂಬ ಆಸೆ ನನಗೆ !
ಗುಡಿ ಕಟ್ಟದೇ ಗುಡುಗಬೇಕೆಂಬ ತಿನಿಸು !
ಏನೂ ಆಗದಿದ್ದರೂ ರಾಮ-ರಹೀಮರ ಹೆಸರಲ್ಲಿ
ಹರಾಮಕೋರಿತನ ಮಾಡಬಾರದು ಎಂಬ ಮೈ-ಮನ !
ಹಜಾಮತಿಗೆ ಹಲಾಲಿತನದ ಹೆಸರು ಬೇಕಿಲ್ಲ !

Sunday, March 02, 2014

ಸಂಕಟಬುರುಕರಿಗೆ..

 ನೀಲಾ ಕೆ.

ನೀಲಾ
ಹೊಂಟೆನ ಹೊಲಕ
ಮೇವ ತರಾಕ
ಸಂಕಟಬುರಕ್ಯಾರು
ನಿಂತಾರ ನನ್ನ ನೋಡಾಕ !

ಜುಮಕಿಯ ಹಾಕೆನ
ಗೆಜ್ಜೀ ಕಟ್ಟೇನ ಕಾಲಾಗ
ಕೊಳ್ಳಾಗ ಸರಮಾಲೆ ಹಾಕೇನ
ಸಂಕಟಬುರಕರು
ನಿಂತಾರು ನನ್ನ ನೋಡಾಕ !


ಜರೀ ಸೀರಿ ಉಟ್ಟೇನ
ಹಣಿ ತುಂಬಾ ಕುಂಕುಮ ಇಟ್ಟೆನ
ಕೈತುಂಬಾ ಬಂಗಾರ ಪಾಟ್ಲು ಹಾಕೇನ
ಸಂಕಟ ಬುರುಕರು ನಿಂತಾರ
ನನ್ನ ನೋಡಾಕ !


ಎಡಕ್ಕೆ ಸೆರಗ ಹೊತ್ತಾಕೊಂಡು
ಬಲಕ್ಕೆ ಕುರಪಿಯ ಹಿಡಕೊಂಡು
ಹೊಂಟೆನ ಹೊಲಕ
ಮೇವ ತರಾಕ

ಸಂಕಟಬುರುಕರು ನಿಂತಾರ ನನ್ನ ನೋಡಾಕ !


ಕುರುಪಿ ಏತಿ ನನ್ನ ಕೈಯಾಗ
ತಡ ಮಾಡಿದರ ಹೀರ್ತೇತಿ ರಗುತವ
ಅಲ್ಲೇ ನಿಲ್ಲಬೇಕು ಮಂದಿ ; ನಾ ಅಂದುಕೊಂಡ
ಸಂಕಟಬುರುಕ ಮಂದಿ !

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.