ಉಳ್ಳವರು ಶಿವಾಲಯ ಮಾಡಿದರೆ
ನಾನೇನು ಮಾಡಲಿ ಎನ್ನಲಾಗದು ಇಂದು !
ಮನುಷ್ಯ-ಮುನುಷ್ಯರ ನಡುವೆ ಸಂಬಂಧ ಬೆಸೆಯುವ
ಮಹಾಲಯ ಮಾಡುವ ಕನಸುಗಾರಿಕೆ ಬೇಕು !
ಜಗದ ಕೋಟಿ ಕೋಟಿ ಕನಸುಗಳಿಗೆ ಕಸುವಾಗಬೇಕು
ನೀಗಬೇಕೋ ಅಳಲಿನ ಬದುಕ ಕಾರಣಿಕ ಸಿದ್ಧರಾಮ
ನೀಗಿಸಲಾಗದ ನಿಗಿ ನಿಗಿ ಕೆಂಡ ಕೊನೆಗೂ ಬೂದಿ !
ನಾನೇನು ಮಾಡಲಿ ಎನ್ನಲಾಗದು ಇಂದು !
ಮನುಷ್ಯ-ಮುನುಷ್ಯರ ನಡುವೆ ಸಂಬಂಧ ಬೆಸೆಯುವ
ಮಹಾಲಯ ಮಾಡುವ ಕನಸುಗಾರಿಕೆ ಬೇಕು !
ಜಗದ ಕೋಟಿ ಕೋಟಿ ಕನಸುಗಳಿಗೆ ಕಸುವಾಗಬೇಕು
ನೀಗಬೇಕೋ ಅಳಲಿನ ಬದುಕ ಕಾರಣಿಕ ಸಿದ್ಧರಾಮ
ನೀಗಿಸಲಾಗದ ನಿಗಿ ನಿಗಿ ಕೆಂಡ ಕೊನೆಗೂ ಬೂದಿ !
ಅವರು ಶಿವಾಲಯ ಮಾಡಿದರೇನು? ಅವರು ಮಾಡಿದ್ದು ಅವರಿಗೆ !
ReplyDeleteನೀನೇನು ಮಾಡಬಲ್ಲೆ ? ನಿನ್ನನ್ನು ಜಗಕರ್ಪಿಸಿದ ಮಾತೃದೇವಿಗೆ !
ನೀನು-ನಾನೆಂಬ ಅಭಾಸಗಳೆಕೆ? ನಾನೆಂಬ ನೀನಾದ ಸಮಭಾವದ ಬದುಕಿಗೆ !
ಕನಸುಗಾರಿಕೆಯ ಕಸುಬೊಂದೆ ಸಾಕೆ? ತನ್ನೋಳಗಿರಬೇಕು ಸಮರ್ಪಣಾ ಭಾವದೀವಿಗೆ !
ಕಸುವಿನ ಕನಸಿಗೇಕೆ ಬೇರೊಬ್ಬರ ಹಂಗು? ತೀವ್ರತೆಯ ಬುದ್ಧಿಬಲಕ್ಕೆ ಈಡಾಗುವವೇ ಜಗದ ಕನಸುಗಳು ಈ ಕನವರಿಕೆಗೆ !
ಅಳಮುಂಜಿನ ಬದುಕಿನ ಮಾತೇಕೆ? ಕೆಂಡದಂತೆ ಕಂಡ ಕನಸು ಕರಗಿ ಬೂದಿಯಾದರೂ ಛಲಬೇಕು ಪೀನಿಕ್ಸ್ ಹಕ್ಕಿಯಂತೆ ಮರಳಿ ಉದ್ಭವಿಸುವಿಕೆಗೆ !