Friday, November 25, 2011

ಮಾತ್ಗವಿತೆ-7

ಅನಿವಾರ್ಯತೆಯ ಅರ್ಥ
ನನಗೀಗ ಹೊಳೆದಿದೆ
ಬುದ್ಧನಿಗೆ ಜ್ಞಾನೋದಯವಾಯಿತಲ್ಲ
ಹಾಗೇ !
ಮೂರು ದಿನಗಳ ತೊಳಲಾಟ ;
ಡೋಲಾಯಮಾನ ಸ್ಥಿತಿ
ಬಿಟ್ಟರೂ ಬಿಡೆನೆನ್ನುವ ಮಾಯೆಯ
ನೆರಳು ; ಕರುಳು
ಇವಾವವೂ ಇಂದಿಗಿಲ್ಲ ; ಎಲ್ಲ ನಿರಾಳ !
ನೀನೂ ನಿರಾಳವಾಗಬೇಕು ; ಹಗುರಾಗಬೇಕು
ಗರಿಗೆದರಿದ ಪುಕ್ಕಗಳನ್ನು ಕತ್ತರಿಸಬೇಕು
ಎತ್ತರಕ್ಕೇರದಂತೆ ; ಮತ್ತೊಮ್ಮೆ
ಬಿತ್ತರವಾಗದಂತೆ ಅಳುಕಿಸಿ ಬಿಡು
ನನ್ನ ಚಿತ್ತಾರ ಇದ್ದರೆ ;
ಇಲ್ಲದಿರೆ ಒಳತೇ ಆಯಿತು !
ಇಲ್ಲವೆಂದು ನಾನರಿತ ಮೇಲಲ್ಲವೇ
ನನಗೆ ಅನಿವಾರ್ಯತೆ ಅರ್ಥವಾದದ್ದು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.