Friday, November 18, 2011

ವಚನ-9

ಕಳೆದುಕೊಂಡದ್ದೋ ಯಾರೋ ; ಹುಡುಕುವವರು ಯಾರೋ !
ಕಳೆಯ ಕಳೆದು ಬೆಳೆಯ ಬೆಳೆದರೆ ಕಳೆದುಕೊಳ್ಳಲು
ಇರುವುದಾದರೂ ಏನು ಕಾರಣಿಕ ಸಿದ್ಧರಾಮ
ಇಳಿದು ಬರುವ ಕಾಲಕ್ಕೆ ಮಳೆಯ ರಭಸ ನೋಡಾ !

2 comments:

  1. ನಿರಂತರ...

    ಕಳೆದೆ ಇಲ್ಲವೆಂದಾಗ ಹುಡುಕಾಟದ ಕುಲುಕಾಟವೇಕೆ?
    ಬೆಳೆಯೊಂದಿಗೆ ಕಳೆಯೂ ಸಹ ದೇವಸೃಷ್ಟಿಯಲ್ಲವೇ?
    ದೇವನಿಂದಲೇ ಅಭಾಸ-ದ್ವಂದ್ವ-ಗೊಂದಲಗಳ ಸೃಷ್ಟಿಯಾಯಿತೆಂದಲ್ಲವೇ?
    ದೇವನಿಂದಾದ ಮಳೆಯ ರಭಸಕೆ ಜೀವಜಂತುಗಳ ಪ್ರಾಣರಕ್ಷಣೆಯ ಹೋಣೆ ಅವನದಲ್ಲವೇ?
    ಇಂತಿಪ್ಪ ಸೃಷ್ಟಿಯಲಿ
    ಬೆಳೆಯುವುದು-ಕಳೆದುಕೊಳ್ಳುವುದು ನಿರಂತರವಲ್ಲವೇ?

    ReplyDelete
  2. ಮನಸಲ್ಲಿ ಸಾವಿರ ಮಾತಿದೆ ; ಹೇಳೋಕಾಗಲ್ಲ
    ಕಣ್ಣ ತುಂಬಾ ನೇರಿದೆ ; ಅಳೋಕಾಗಲ್ಲ
    ಹೃದಯಕೆ ಭಾರವಾದ ನೋವಿದೆ ; ತೋರಿಸೋಕಾಗಲ್ಲ
    ಯಾಕಂದ್ರೆ,
    ನಾವು ಅಂದಕೊಂಡ ಹಾಗೆ ಯಾವುದು ನಡೆಯಲ್ಲಾ...
    ಅದುವೇ ಜೀವನ...!!!

    ReplyDelete

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.