Sunday, November 13, 2011

ವಚನ-3-4-5

ನಂಬಿಕೆಗೆ ಇಂಬು ದೊರೆಯದ ಜಗತ್ತಿನಲ್ಲಿ
ನಂಬದವರ ಬದುಕು ಸಾಗಿಸುವ ಛಲ ಬೇಕು !
ಪಾಳು ಬಿದ್ದ ನಂಬಿಕೆಯ ಮನೆಯನ್ನು ;
ಮತ್ತೊಮ್ಮೆ ಕಟ್ಟುವ ಹಂಬಲ ಬೇಕು !
ಆಗದು ಎಂದರೆ ಆಗದು ! ಆಗಮಾಡಬೇಕು !
ಅದಕ್ಕೆ ಜಾಗ ಹುಡುಕಬೇಕು ಕಾರಣಿಕ ಸಿದ್ಧರಾಮ
ಮೊದಲು ನಮ್ಮ ನಂಬಿಕೆ ನಮ್ಮ ಮೇಲಿರಬೇಕು !
***** 
ಒಲುವಿನ ಆಸರೆ ಬಯಸಿ ಬಸಿರು ಆಗುವುದಾದರೆ
ಹುಳದ ಆಸೆಗೆ ಬಯಸಿ ಬಲೆಗೆ ಬಿದ್ದು ಮೀನ ಪರಿ
ಗುರುತಾಗದ ಬದುಕು ಕಟ್ಟಿಕೊಳ್ಳುವ ಬದಲು
ಭಿನ್ನ ಅರ್ಥಗಳ ಭಾವನೆಗಳ ಬಸಿರು ಮಾಡಿ
ಹೊಸ ಹಾಡಿಗೆ ಧ್ವನಿಯಾಗಬೇಕು ಕಾರಣಿಕ ಸಿದ್ಧರಾಮ
ಉಸಿರು ಕಳಕೊಂಡ ಬದುಕು ಯಾತರದು ?
***** 
ಸುಳ್ಳೆಂದು ತಿಳಿದರೂ
ಸತ್ಯವೆಂದೇ ಭಾವಿಸುವ
ಭಾವಿಕರ ನಡುವೆ
ಭಾವನೆಗಳೇ ಸತ್ತು ಹೋಗಿವೇನೋ ?
ಅಚ್ಚರಿಗೂ ಮಚ್ಚರ ಹುಟ್ಟುವಷ್ಟು
ಗೊಂದಲುಗಳ ಗೂಡಿನಲ್ಲಿ
ಗಾಳಕ್ಕೆ ಸಿಗದ ಮೀನಿನಂತಿರಬೇಕು ಕಾರಣಿಕ ಸಿದ್ಧರಾಮ !
ಸಿಕ್ಕು ಬಿದ್ದರೆ ಸುಖವೆನ್ನುವುದು ಬರೀ ಮರೀಚಿಕೆ

1 comment:

  1. ಅಧುನಿಕ - ಬದಲಾದ ಪರಿಸ್ಥಿತಿಗೆ ತಕ್ಕುದ್ದಾದ ವಚನ.....

    ReplyDelete

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.