Sunday, February 12, 2012

ಮಾತ್ಗವಿತೆ-41

ಗೂಢತೆಯ ಗೂಡಿನೊಳಗೆ
ತುಂಬಿದ ಕತ್ತಲೆಗೆ ಬೆದರಿ
ಬಲುದೂರ ಓಡುವ ಹೇಡಿಗೆ
ತನ್ನೊಳಗೆ ಬೆಳಕು ಚಿಮ್ಮಿಸಬಲ್ಲ
ಚೈತನ್ಯದ ತಾವಿದೆ ಎಂಬರಿವು
ಮರೆಯಾಗಿ ಹೋದಲ್ಲಿ
ಗುದಮುರುಗಿ ಬದುಕಿಗೆ ಅರ್ಥವಿಲ್ಲ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.