Friday, February 10, 2012

ಮಹಾತಾಯಿ ರಮಾಯಿ 114ನೇ ಜನ್ಮ ದಿನಾಚರಣೆ !




ಹೌದು ! ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ಬೆಳೆಸಲು ಕಾರಣೀಭೂತಳಾದ ರಮಾಬಾಯಿ ಭೀಮರಾವ್ ಅಂಬೇಡ್ಕರ್ ಅವರು ಜನ್ಮ ದಿನ  ಫೆಬ್ರುವರಿ 7. ಇದನ್ನು ಆಚರಿಸುವ ಒಂದು ಸೈದ್ಧಾಂತಿಕ ಬದ್ಧತೆಯಾದರೂ ನಮ್ಮ ದಲಿತ ಸಂಘಟನೆಗಳಿಗೆ ಇರಬೇಕಿತ್ತು. ಆಗಲಿಲ್ಲ. ಆದರೆ  ಡಾ. ಬಾಬಾಸಾಹೇಬ ಅಂಬೇಡ್ಕರ್ ಮತ್ತು ರಮಾಬಾಯಿ ಭೀಮರಾವ್ ಅಂಬೇಡ್ಕರ್ ನಡೆದಾಡಿ ಬೆಳೆಸಿದ ಧಾರವಾಡದ ಬುದ್ಧರಖ್ಕಿತ್ ಶಾಲೆಯಲ್ಲಿ ತಡವಾಗಿಯಾದರೂ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ನಾನು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಹಾಮಾತೆ ರಮಾಯಿಯ ಬಗ್ಗೆ ಮಾತನಾಡಿದೆ. ಅಧ್ಯಕ್ಷತೆಯನ್ನು ಭಾರತ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಷ್ಠಾನದ ಕೇಂದ್ರ ಉಪಾಧ್ಯಕ್ಷರಾದ  ಮಾನ್ಯಶ್ರೀ  ಎಫ್. ಎಚ್. ಜಕ್ಕಪ್ಪನವರ ವಹಿಸಿದ್ದರು. ಹಾಗೆಯೇ ಕರ್ನಾಟಕ ವಿಶ್ವವಿದ್ಯಾಲಯದ ಡಾ. ಅಂಬೇಡ್ಕರ್ ಅದ್ಯಯನ ಪೀಠದ ಸಂಯೋಜಕ ಡಾ. ಸುರೇಶ ಹುಲ್ಲೆನ್ನವರ ಉಪಸ್ಥಿತರಿದ್ದರು. ಇಲ್ಲಿ ಆ ಫೋಟೋಗಳನ್ನು ನೀಡಲಾಗಿದೆ.  


No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.