Sunday, July 21, 2013

ಬಯಲಾಯ್ತು ಮೋದಿ ಯಶಸ್ಸಿನ ಗುಟ್ಟು !

  • ದೇಶದಲ್ಲಿ 28 ಮಂದಿ ಮುಖ್ಯಮಂತ್ರಿಗಳಿದ್ದರೂ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೊಬ್ಬರಿಗೆ ಮಾತ್ರ ಅತಿಯಾದ ಪ್ರಚಾರ ಸಿಗುತ್ತಿದೆ ಎಂದು ನಿಮಗೂ ಅನ್ನಿಸಿರಬಹುದು. ಆದರೆ ಅದು ಹೇಗೆ? ಮತ್ತು ಏಕೆ? ಎಂಬ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದ್ದು, ಮೋದಿ ಅವರ ಪ್ರಚಾರದ ರಹಸ್ಯವನ್ನು ಬಯಲು ಮಾಡಿರುವುದಾಗಿ ರಾಷ್ಟ್ರೀಯ ನಿಯತಕಾಲಿಕೆಯೊಂದು ಹೇಳಿಕೊಂಡಿದೆ. ಅದರ ಕಿರು ಪರಿಚಯ ಇಲ್ಲಿದೆ... 
    ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿರುವ ನರೇಂದ್ರ ಮೋದಿ ಅವರು ತಮ್ಮನ್ನು ಮಾಧ್ಯಮಗಳಲ್ಲಿ ಉತ್ತಮವಾಗಿ ಬಿಂಬಿಸಿಕೊಳ್ಳಲು ಎರಡು ಪತ್ರಿಕಾ ಪ್ರಚಾರ ಸಂಸ್ಥೆಗಳನ್ನು ನೇಮಕ ಮಾಡಿಕೊಂಡಿದ್ದಾರೆ. ಒಂದು ಸಂಸ್ಥೆ ದೇಶೀಯ ಮಟ್ಟದಲ್ಲಿ ಮೋದಿ ಅವರಿಗೆ ಪ್ರಚಾರ ನೀಡಿದರೆ, ಮತ್ತೂಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ದೊರಕಿಸಿಕೊಡುತ್ತಿದೆ. ಇದಲ್ಲದೆ, ಬೆಂಗಳೂರು ಹಾಗೂ ಮುಂಬೈನಲ್ಲಿ ಇರುವ ಬಿಜೆಪಿಯ ಇನ್ಫೋಟೆಕ್‌ ತಂಡಗಳು ಆನ್‌ಲೈನ್‌ ಸಾಮಾಜಿಕ ತಾಣಗಳಲ್ಲಿ ಮೋದಿ ಅವರ ಪರವಾಗಿ ಅಭಿಪ್ರಾಯ ಮೂಡಿಸುತ್ತಿವೆ. ಮೋದಿ ಅವರ ಅಭಿಮಾನಿ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರಿಂದಲೂ ಅವರಿಗೆ ಪ್ರಚಾರ ಸಿಗುತ್ತಿದೆ ಎಂದು 'ಓಪನ್‌' ನಿಯತಕಾಲಿಕೆ ವರದಿ ಪ್ರಕಟಿಸಿದೆ. 
    ತಮ್ಮನ್ನು ಮಾಧ್ಯಮಗಳಲ್ಲಿ ಚೆನ್ನಾಗಿ ಬಿಂಬಿಸಲಿ ಎಂಬ ದೂರದೃಷ್ಟಿಯಿಂದ ಹಿರಿಯ ಪತ್ರಕರ್ತರನ್ನು ಮೋದಿ ಅವರು ಔತಣ ಕೂಟಕ್ಕೆ ಆಹ್ವಾನಿಸುತ್ತಾರೆ. ಪತ್ರಕರ್ತರ ಪ್ರತಿಷ್ಠೆ ಹೆಚ್ಚಿಸುವಂತೆ ಮೋದಿ ಅವರ ಆಸುಪಾಸಿನಲ್ಲಿ ಆಸನ ವ್ಯವಸ್ಥೆ ಕಲ್ಪಿಸಿರಲಾಗುತ್ತದೆ. ಮೋದಿ ಪರವಾಗಿ ದುಡಿಯುತ್ತಿರುವ ಖಾಸಗೀ ಪತ್ರಿಕಾ ಪ್ರಚಾರ ಸಂಸ್ಥೆಗಳು ಇಲ್ಲಿವರೆಗೂ ನರೇಂದ್ರ ಮೋದಿ ಅವರ ಜತೆ ಹಲವಾರು ದಿನಪತ್ರಿಕೆ ಹಾಗೂ ನಿಯತಪಾಲಿಕೆ ಸಂಪಾದಕರನ್ನು ಭೇಟಿ ಮಾಡಿಸಿವೆ. ಮೋದಿ ಅವರ ವಿದೇಶ ಪ್ರವಾಸದ ವೇಳೆ ಪತ್ರಕರ್ತರನ್ನೂ ಕರೆದೊಯ್ಯುವ ಸಲುವಾಗಿ ಈ ವರ್ಷ ಗುಜರಾತ್‌ ಸರ್ಕಾರ ಬಜೆಟ್‌ನಲ್ಲಿ ಅನುದಾನ ಸಹ ಮೀಸಲಿಟ್ಟಿದೆ. ಮೋದಿ ಜತೆ ವಿದೇಶ ಪ್ರವಾಸ ಮುಗಿಸಿ ಬಂದ ಪತ್ರಕರ್ತರು ಅಸಲಿ ಬಿಲ್‌ಗ‌ಳನ್ನು ತೋರಿಸಿದರೆ, ಹಣ ಪಾವತಿಸುವ ವ್ಯವಸ್ಥೆ ಕೂಡ ಇದೆ ಎಂದು ವರದಿ ತಿಳಿಸಿದೆ. 

    ಹೊಸ ಪಿಆರ್‌ ಏಜೆನ್ಸಿ ನೇಮಕ 
    ಪತ್ರಿಕಾ ಪ್ರಚಾರ ಸಂಸ್ಥೆ (ಪಿಆರ್‌ ಏಜೆನ್ಸಿ)ಗಳನ್ನು ನೇಮಿಸಿಕೊಂಡಿಲ್ಲ ಎಂದು ನರೇಂದ್ರ ಮೋದಿ ಹಾಗೂ ಬಿಜೆಪಿ ಎಷ್ಟೇ ಹೇಳಿಕೊಂಡರೂ ಕಳೆದ ಐದು ವರ್ಷಗಳಿಂದ ಗುಜರಾತ್‌ ಸರ್ಕಾರ ಪಿಆರ್‌ ಏಜೆÕನಿಗಳನ್ನು ಇಟ್ಟುಕೊಂಡಿದೆ. ದೇಶೀಯ ಮಟ್ಟದಲ್ಲಿ ಪ್ರಚಾರ ಪಡೆಯುವ ಸಲುವಾಗಿ ಮೋದಿ ಅವರು ದೆಹಲಿ ಮೂಲದ ಮ್ಯೂಚುವಲ್‌ ಪಿಆರ್‌ ಎಂಬ ಕಂಪನಿಯನ್ನು ನೇಮಿಸಿಕೊಂಡಿದ್ದಾರೆ. ಆ ಕಂಪನಿಯ ಗುತ್ತಿಗೆ ಕೆಲವೇ ತಿಂಗಳುಗಳಲ್ಲಿ ಮುಗಿಯಲಿದೆ. ಇಷ್ಟು ದಿನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಅವರ ಪ್ರಚಾರ ಹೊಣೆ ಹೊತ್ತಿದ್ದ ಆಪ್ಕೋ ಎಂಬ ಅಮೆರಿಕದ ಲಾಬಿ ಕಂಪನಿಯ ಗುತ್ತಿಗೆ ಅವಧಿ ಕಳೆದ ಮಾರ್ಚ್‌ಗೇ ಮುಕ್ತಾಯಗೊಂಡಿದೆ. ಈ ಕಂಪನಿಗೆ ಮಾಸಿಕ 13 ಲಕ್ಷ ರೂ. ಹಣವನ್ನು ಗುಜರಾತ್‌ ಸರ್ಕಾರ ಸಂದಾಯ ಮಾಡುತ್ತಿತ್ತು ಎಂದು ಪತ್ರಿಕೆ ತಿಳಿಸಿದೆ. 
    ಹೊಸ ಪಿ.ಆರ್‌. ಏಜೆನ್ಸಿ ನೇಮಕಕ್ಕೆ ಗುಜರಾತ್‌ ಸರ್ಕಾರ 'ಕೋರಿಕೆ ಪ್ರಸ್ತಾಪ' ಸಿದ್ಧಪಡಿಸಿದ್ದು, ಗುಜರಾತ್‌ನಲ್ಲಿ ಆಗುವ ಧನಾತ್ಮಕ ಅಭಿವೃದ್ಧಿ ಹಾಗೂ ಬೆಳವಣಿಗೆಯನ್ನು ಕಾಲಕಾಲಕ್ಕೆ ಅಥವಾ ಗುಜರಾತ್‌ ಮಾಹಿತಿ ಆಯುಕ್ತರು ಸೂಚಿಸಿದಾಗ ಕಷ್ಟಪಟ್ಟು ಬಿಂಬಿಸಲು ಯತ್ನಿಸಬೇಕು ಎಂದು ಹೇಳುತ್ತದೆ. 

    ಪ್ರಸ್ತಾಪದಲ್ಲಿ ಏನೇನಿದೆ?: 
    ಮೋದಿ ಅವರಿಂದ ಪ್ರಚಾರದ ಗುತ್ತಿಗೆ ಪಡೆಯಬಯಸುವ ಪಿಆರ್‌ ಏಜೆನ್ಸಿಗಳಿಗೆ ಕೋರಿಕೆ ಪ್ರಸ್ತಾಪದಲ್ಲಿ ಗುಜರಾತ್‌ ಸರ್ಕಾರ ಹಲವಾರು ಬೇಡಿಕೆಗಳನ್ನು ಇಟ್ಟಿದೆ. ಅವೆಂದರೆ, 
    ರಾಜ್ಯ ಸರ್ಕಾರ ನೀಡಿದ ಮಾಹಿತಿಯನ್ನು ಆಧರಿಸಿ ಪ್ರತಿ ತ್ತೈಮಾಸಿಕಕ್ಕೊಮ್ಮೆ ರಾಷ್ಟ್ರೀಯ ಪತ್ರಿಕೆಗಳಲ್ಲಿ ಕನಿಷ್ಠ ಆರು ದೊಡ್ಡ ವರದಿಗಳನ್ನು ಪ್ರಕಟಿಸಬೇಕು. 
    ರಾಜ್ಯ ಸರ್ಕಾರದ ಮಾಹಿತಿಯನ್ವಯ ಪ್ರಾದೇಶಿಕ ಪತ್ರಿಕೆಗಳಲ್ಲಿ ತ್ತೈಮಾಸಿಕಕ್ಕೊಮ್ಮೆ ಕನಿಷ್ಠ ಆರು ದೊಡ್ಡ ವರದಿಗಳು ಪ್ರಕಟವಾಗುವಂತೆ ನೋಡಿಕೊಳ್ಳಬೇಕು. 
    ಕನ್ನಡ, ಹಿಂದಿ, ತಮಿಳು ಸೇರಿದಂತೆ ಪ್ರಮುಖ ಭಾಷಾ ಪತ್ರಿಕೆಗಳಲ್ಲಿ ತ್ತೈಮಾಸಿಕಕ್ಕೊಮ್ಮೆ ಕನಿಷ್ಠ ಆರು ವರದಿಗಳು ಪ್ರಕಟವಾಗಬೆಕು. 
    ರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಒಂದಾದರೂ ವರದಿ ಪ್ರಕಟವಾಗಬೇಕು. 
    ಪ್ರತಿ ತಿಂಗಳು ಒಂದು ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಗುಜರಾತ್‌ ಪರವಾಗಿ ಒಂದು ದೊಡ್ಡ ವರದಿಯಾದರೂ ಪ್ರಕಟವಾಗಬೆಕು. 

    ವಿದೇಶಗಳಲ್ಲಿ ಪ್ರಚಾರ ಹೇಗೆ? 
    ಅಂತಾರಾಷ್ಟ್ರೀಯ ಮಟ್ಟದ ಪಿ.ಆರ್‌. ಏಜೆನ್ಸಿಗೆ ಗುತ್ತಿಗೆ ನೀಡಲಾಗುತ್ತದೆ. 
    ಗುಜರಾತ್‌ ದೇಶದ ಮುಂಚೂಣಿ ರಾಜ್ಯ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿಂಬಿಸುವಂತೆ ಸೂಚಿಸಲಾಗುತ್ತದೆ. 
    ಹೂಡಿಕೆದಾರರಿಗೆ ಗುಜರಾತೇ ಅಚ್ಚುಮೆಚ್ಚಿನ ತಾಣವೆಂದು ಪ್ರಚಾರ ಪಡೆಯುವಂತೆ ನೋಡಿಕೊಳ್ಳಲಾಗುತ್ತದೆ. 

    ದೇಶೀಯವಾಗಿ ಹೇಗೆ ಸಿಗುತ್ತೆ ಪ್ರಚಾರ? 
    1 ದೇಶೀ ಮಟ್ಟದಲ್ಲಿ ಒಂದು ಪತ್ರಿಕಾ ಪ್ರಚಾರ ಸಂಸ್ಥೆ (ಪಿ.ಆರ್‌.)ಯನ್ನು ಮೋದಿ ನೇಮಿಸಿಕೊಳ್ಳುತ್ತಾರೆ. ಇದಕ್ಕೆ ಗುಜರಾತ್‌ ಸರ್ಕಾರ ಮಾಹಿತಿಗಳನ್ನು ನೀಡಿ, ಯಾವ ಮಾಧ್ಯಮಗಳಲ್ಲಿ ಎಷ್ಟು ವರದಿ ಪ್ರಕಟವಾಗಬೇಕು ಎಂಬ ಆದೇಶ ನೀಡುತ್ತದೆ. ಅದರಂತೆ ವರದಿಗಳು ಪ್ರಕಟವಾಗುವಂತೆ ಪಿ.ಆರ್‌. ಏಜೆನ್ಸಿ ನೋಡಿಕೊಳ್ಳುತ್ತದೆ. 
    2 ಹಿರಿಯ ಪತ್ರಕರ್ತರನ್ನು ಮೋದಿ ಔತಣ ಕೂಟಕ್ಕೆ ಆಹ್ವಾನಿಸುತ್ತಾರೆ. 
    3 ಹಿರಿಯ ಪತ್ರಕರ್ತರನ್ನು ತಮ್ಮ ಜತೆ ವಿದೇಶಕ್ಕೂ ಕರೆದೊಯ್ಯುತ್ತಾರೆ. ಇದಕ್ಕಾಗಿ ಗುಜರಾತ್‌ ಬಜೆಟ್‌ನಲ್ಲಿ ಹಣ ಕೂಡ ಮೀಸಲಿಟ್ಟಿದ್ದಾರೆ. 
    4 ಆನ್‌ಲೈನ್‌ ಸಾಮಾಜಿಕ ತಾಣಗಳಲ್ಲಿ ತಮ್ಮ ಪರ ಪ್ರಚಾರಕ್ಕೆ ಬೆಂಗಳೂರು, ಮುಂಬೈನಲ್ಲಿ ಇನ್ಫೋಟೆಕ್‌ ಸೆಲ್‌ ಹೊಂದಿದ್ದಾರೆ.

    ಕೃಪೆ :
    Udayavani | Jul 20, 2013

2 comments:

  1. ಸರ್ ನಿಮ್ಮ ಮಾತು ಸರಿ. ಹಾಗಾದರೆ, ನಿಮ್ಮ ಅಭೀಪ್ರಾಯದಲ್ಲಿ ಕಾಂಗ್ರೇಸ್ ಮಾಡುತ್ತಿರುವ ಪ್ರಚಾರ ಆಗಿರಬಹುದು, ಅಥವಾ ಬ್ರಷ್ಟಚಾರ ಆಗಿರಬಹುದು, ಇವರ ಮುಂದೆ ಮೋದಿಯು ಆಡಳಿತ ಸರಿ ಇಲ್ಲವೇ.....? ಮುಂದಿನ ಪಿ.ಎಂ ಗೆ ಮೋದಿ ಯೋಗ್ಯನಾಗಿದ್ದಾನೆಯೇ ಅಥವಾ ಇಲ್ಲವೂ ತಿಳಿಸಿ....

    ReplyDelete
  2. ಅದ್ಯಾಕೋ ಗೊತ್ತಿಲ್ಲ, ಮೋದಿಯನ್ನು ಅಥವಾ ಬಿ.ಜೆ.ಪಿ. ಯನ್ನು ವಿಮರ್ಶೆ ಮಾಡಿದರೆ, ಅಥವಾ ವಿರೋಧವಾಗಿ ಮಾತನಾಡಿದರೆ ಕಾಂಗ್ರೇಸ್ಸಿಗರು ಎಂದು ಹಣೆಪಟ್ಟಿ ಕಟ್ಟುತ್ತಾರೋ ಗೊತ್ತಿಲ್ಲ ! ಈಗೀಗ ಊರಿಗೊಂದು ಪಾರ್ಟಿ ಹುಟ್ಟಿಕೊಳ್ಳುತ್ತಿವೆಯಾದರೂ ಅವುಗಳ ಅರಿವು ಇಲ್ಲದಂತೆ ಮಾತನಾಡುವುದು ಸರಿಯಲ್ಲ. ಜೊತೆಗೆ ನಾನಂತೂ ಯಾವ ಪಕ್ಷದ ಸದಸ್ಯನೂ ಅಲ್ಲ...ಅನುಯಾಯಿನೂ ಅಲ್ಲ... ಬೆಂಬಲಿಗನಂತೂ ಅಲ್ಲವೆ ಅಲ್ಲ. ಇನ್ನು ಕಾಂಗ್ರೆಸ್ಸ್ ಬಗ್ಗೆ ಕೇಳಿದರೆ ನಾನೇನು ಹೇಳಲಿ Anonymous ?

    ReplyDelete

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.