Thursday, July 11, 2013

ಮಾತ್ಗವಿತೆ-134

ಬುದ್ಧ ಮತ್ತೊಮ್ಮೆ ನಕ್ಕ
ಮರಳಿ ಬಾರದ ಅರಿವಿಗೆ
ಕರುಳ ಅರಿಯದ ಮರುಳತನಕ್ಕೆ
ಸರಿಸಿದಷ್ಟು ಕಣ್ಣುಪಟ್ಟಿಯ ಬಿಗಿದುಕೊಳ್ಳುವ
ಮನುಷ್ಯನ ಮೂಢತನಕ್ಕೆ
ಬುದ್ಧ ಮತ್ತೆ ಮತ್ತೇ ನಗುತ್ತಲೇ ಇದ್ದಾನೆ ¡

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.