Thursday, July 11, 2013

ಮಾತ್ಗವಿತೆ-135

ಕನವರಿಕೆಗಳಿಗೆ ಕೊನೆಯಿಲ್ಲವೆಂದು
ಕೊರಗುವ ಬದುಕಿಗೆ ಕೊನರುವ ಕೊರಡು ಪಾಠವಾಗಬೇಕು
ಆಲದ ಮರದ ಕೆಳಗಿನ ಬದುಕು ಸರಿಸಿ
ಜಾಲಿ ಗಿಡದ ಬುಡಕೆ ಬರಬೇಕು..
ಬದುಕು ಬೆರಗಾಗುವಷ್ಟು ಬೆಳಕಿದೆ ಅಲ್ಲಿ.... !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.