Friday, September 06, 2013

ನಾನು ಅಸ್ಪ್ರಶ್ಯತೆ ಎಂಬ ಪೆಡಂಬೂತಕ್ಕೆ ಒಳಗಾದವನು !

Nagaraj Hettur

ನನ್ನ ಸಾಕಷ್ಟು (ಫೆಸ್ ಬುಕ್ ) ಗೆಳೆಯರು ಆಗಾಗ ಕೇಳುತ್ತಿರುತ್ತಾರೆ.... ನೀವೇಕೆ ಯಾವಾಗಲೂ ಹಿಂದೂ ವಿರೋಧಿಯಂತೆ ವರ್ತಿಸುತ್ತೀರಲ್ಲಾ...? ಅದರ ವಿರುದ್ಧವೇ ಮಾತನಾಡುತ್ತೀರಲ್ಲಾ...? ಹಿಂದೂ ಧರ್ಮದ ಬಗ್ಗೆ ಪ್ರಶ್ನಿಸಿದಂತೆ ಮುಸ್ಲಿಂ ಧರ್ಮದ ಬಗ್ಗೆಯಾಗಲೀ ಅಥವಾ ಕ್ರಿಶ್ಚಿಯನ್ ಬಗ್ಗೆಯಾಗಲೀ ಮಾತನಾಡಿ ನೋಡೋಣ ಎನ್ನುತ್ತಾರೆ. 
ಅದಕ್ಕೆ ನನ್ನು ಉತ್ತರ ಇಷ್ಟು...!
ನೋಡಿ ನಾನು ಹಿಂದೂ ಧರ್ಮದಲಿದ್ದವನು. ಅದರಲ್ಲು ಹಿಂದೂ ಧರ್ಮ ಒಪ್ಪಿಕೊಂಡ ಅಸ್ಪ್ರಶ್ಯತೆ ಎಂಬ ಪೆಡಂಬೂತಕ್ಕೆ ಒಳಗಾದವನು. ಅದರಿಂದ ನೊಂದವನು, ಬೆಂದವನು ಇನ್ನೂ ಕೂಡ ಅನುಭವಿಸುತ್ತಿರುವವನು, ನಮ್ಮದೇ ಊರುಗಳಲ್ಲಿ, ಹಳ್ಳಿಗಳಲ್ಲಿ ನಗರಗಳಲ್ಲಿ ಇದೇ ಹಿಂದೂ ಧರ್ಮದ ಕಟ್ಟಕಡೆಯ ಎನಿಸಿಕೊಂಡ ದಲಿತ ಅಥವಾ ಅಸ್ಪೃಶ್ಯ ಎನಿಸಿಕೊಂಡವರು ಒಂದೊಂದು ಥರದಲ್ಲಿ ಸಾಮಾಜಿಕ ಅಸಮಾನತೆ, ಕಿರುಕುಳ, ನೋವನ್ನು ಈ ಧರ್ಮದಿಂದ ಲಕ್ಷಾಂತರ ಜನರು ಇಂದಿಗೂ ಅನುಭವಿಸುತ್ತಿದ್ದಾರೆ. ಆ ನೋವು, ಅಸ್ಪೃಶ್ಯತೆಯ ಅನುಭವಕ್ಕೆ ಉಳಿದ ಯಾವ ನೋವು ಸಾಟಿಯಾಗಲಾರದು.
ಅದಕ್ಕೆ ಕಾರಣ ಈ ಧರ್ಮ ಮತ್ತು ಅದರಲ್ಲಿನ ವರ್ಣ ವ್ಯವಸ್ಥೆ. ಅದನ್ನು ಅನುಭವಿಸಿದವರಿಗೇ ಗೊತ್ತು ಅದರ ಕಠೋರತೆ. ಮನಷ್ಯತ್ವವನ್ನು ಒಪ್ಪಿಕೊಳ್ಳದಿದ್ದರೆ ಅದು ಒಂದು ಧರ್ಮ ಎನಿಸಿಕೊಳ್ಳುತ್ತದೆಯೇ...?

ಹಾಗೆಯೇ ಜಾತಿ ವಿನಾಶದ ಬಗ್ಗೆ ಮಾತನಾಡುವವರು ಇನ್ನೊಂದು ಧರ್ಮದ ಬಗ್ಗೆ ಅವರನ್ನು ದ್ವೇಷಿಸಿ ನೋಡಿ ಎನ್ನುವ ಬದಲು ಮೊದಲು ನಮ್ಮ ಧರ್ಮದಲ್ಲಿನ ಹುಳುಕುಗಳ ಬಗ್ಗೆ ಮೊದಲು ಸರಿಪಡಿಸಿಕೊಳ್ಳಲಿ... ಅಂದ ಹಾಗೆ ಕೆಲವರು ಸೋಕಾಲ್ಡ್ ಜಾತಿ ವಿರೋಧಿಗಳು ಹೇಳುತ್ತಿರುತ್ತಾರೆ. ಈಗ ಜಾತಿ ವ್ಯವಸ್ಥೆ ಇಲ್ಲ ನೀವು ಅದನ್ನು ಮರೆತು ಹೊರಬನ್ನಿ ಎನ್ನುತ್ತಾರೆ. ವಿಪರ್ಯಾಸ ಎಂದರೆ ಆ ಮಹಾನುಭವರು ದಲಿತರನ್ನು ಹೊರಬನ್ನಿ ಎನ್ನುತ್ತಾರೆಯೇ ಹೊರತು ತಾವು ಮೇಲ್ಜಾತಿಯಿಂದ ಹೊರಬಂದು ಯಾವತ್ತೂ ದಲಿತನಾಗಲು ಇಷ್ಟಪಡುವುದಿಲ್ಲ... ಇಂಥಹವರು ಜಾತಿಯ ವಿರುದ್ಧ ಹೋರಾಡುತ್ತಾರೆ....! ಹಿಂದೂ ಧರ್ಮದಲ್ಲಿನ ಅಸ್ಪ್ರಶ್ಯತೆ ಮತ್ತು ಜಾತಿಯತೆ ಇಡೀ ಸಮಾಜಕ್ಕೆ ಅಂಟಿದ ರೋಗ. ಹಾಗಾಗಿ ಅದನ್ನು ಆ ಧರ್ಮದಲಿದ್ದು ಅನುಭವಿಸುವರು ತಾನೇ ಅದರ ವಿರುದ್ಧ ಮಾತನಾಡಬೇಕು... ಗೊತ್ತಿಲ್ಲದ ಬೇರೆಯ ಧರ್ಮದ ಬಗ್ಗೆ ಮಾತನಾಡಿ ಫಲವೇನು ಅಲ್ಲವೇ...?

1 comment:

  1. ನಾಗರಾಜ್ ಸರ್,
    ಲೇಖನವೋ, ಅನುಭವ ಕಥಾನಕವೋ ಎಂಬಂತಿತ್ತಿರುವ ನಿಮ್ಮ ಬರಹ ಮನಸ್ಸಿಗೆ ತಲುಪಿತು. ಜಾತೀಯತೆಯ ಅನಿಷ್ಟದೆಡೆಗಿನ ನಮ್ಮ ಸೆಡವು ಇಲ್ಲಿಗೆ ನಿಲ್ಲಬಾರದು. ಜೀವವಿರುವರೆಗೂ ಆ ನಿಟ್ಟಿನಲ್ಲಿ ಸೆಣಸಾಡಲೇಬೇಕು ನಾವು. ನೊಂದವರಿಗೆ ನ್ಯಾಯ ದಕ್ಕುವವರೆಗೂ, ಜಾತಿಯತೆಯ ಅನಿಷ್ಟ ನಿಲ್ಲುವವರೆಗೂ ಒಗ್ಗಟ್ಟಿನಿಂದ ಹೋರಾಡೋಣ..

    ReplyDelete

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.