Friday, September 13, 2013

ಮಾತ್ಗವಿತೆ-144

ನನ್ನ ಪ್ರೀತಿ ನಿನಗೆ ಅರ್ಥವಾಗದು ಗೆಳತಿ
ರೀತಿ-ರಿವಾಜುಗಳ ಕಲ್ಲು ಚಪ್ಪಡಿ
ತಲೆ ಮೇಲೆ ಬಿದ್ದಾಗ ಜಗದ ಅರಿವು ಇರದು
ಧರ್ಮ-ಜಾತಿಗಳ ಸಂಕೋಲೆ ಕೊರಳು ಬಿಗಿದು
ಬರೀ ನಿಟ್ಟುಸಿರುಗಳ ಸರಮಾಲೆ ನಿನ್ನದು
ಬರೀ ನಿನ್ನದು ಅಲ್ಲ ; ನನ್ನದೂ ಕೂಡ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.