ಗಂಡನೊಲ್ಲದ ಹೆಂಡತಿ ; ಹೆಂಡತಿಯನ್ನೊಲ್ಲದ ಗಂಡ
ಪರ ಗಂಡು-ಹೆಣ್ಣಿನ ಸಂಗವೆಲ್ಲ ಹಾದರವೇ ?
ಬರೀ ಕೂಡವುದು ಮಾತ್ರವಲ್ಲ
ನೋಡುವುದೂ ಹಾದರ ಎಂದುಕೊಂಡರೆ
ರೇಣುಕೆಯ ಪಾಪ ಇರುವುದ ಮರೆಯಬೇಕೆ ?
ಕದ್ದು ಮುಚ್ಚಿ ಮಾಡಿದರೆ ಸಂಪನ್ನರೇ ?
ಕಚ್ಚೆ ಹರುಕರು ಬೇರೆ ; ಇಚ್ಚೆಬುರುಕರು ಬೇರೆ
ಕಾರಣಿಕ ಸಿದ್ಧರಾಮ ಕಾಯವೇ ಕೈಲಾಸವಾದಲ್ಲಿ ಭಿನ್ನವುಂಟೆ ?
No comments:
Post a Comment