Thursday, September 12, 2013

ಪುರೋಹಿತರು ಮತ್ತು ಜ್ಯೋತಿಷಿಗಳ ಬೂಟಾಟಿಕೆ !


                                            Manju Rade 
ವೈಜ್ಞಾನಿಕ ಹಿನ್ನೆಲೆಯಲ್ಲೊಂದು ಮಾತು : ಸಹರಾ ಮರುಭೂಮಿಗೆ ಪುರೋಹಿತರನ್ನು ಕಳುಹಿಸಿ ಪರ್ಜನ್ಯ ಜಪ ಮಾಡಿಸಿದರೆ ಮಳೆ ಬಂದು ಫಲವತ್ತಾಗುತ್ತದೆಯೇ? ಅಥವಾ ಚಿರಾಪುಂಜಿಯಲ್ಲಿ ಮಳೆ ತಡೆಯಲು ಸಾಧ್ಯವೇ? ಮಂತ್ರಗಳ ಸಹಾಯದಿಂದ ಯಾವುದಾದರೂ ದೇಶದ ಮಹಾತ್ಮರನ್ನು ಅರೆಗಳಿಗೆ ಮತ್ತೆ ಬದುಕಿಸಲು ಸಾಧ್ಯವಾಗಿದೆಯೇ ? ಅಥವಾ ಪುಜಾರಿಗಳ ಮನೆಯಲ್ಲೇ ನೆಡೆಯುವ ಅವಘಡಗಳನ್ನು ಮೊದಲೇ ತಿಳಿದಿದ್ದಾರೆಯೇ ಅಥವಾ ತಡೆದಿದ್ದಾರೆಯೇ ?
ಜ್ಯೋತಿಷಿಗಳು ಹೆದರಿಸಿ ಬೆದರಿಸಿ, ಇಲ್ಲ-ಸಲ್ಲದನ್ನು ಹೇಳಿ ಆ ಶಾಂತಿ, ಈ ಶಾಂತಿ ಎಂದು ಹೇಳಿ ಪುರೋಹಿತರೋಂದಿಗೆ ಶಾಮೀಲಾಗಿ ಹಣ ದೋಚಿದ್ದಾರೆಯೇ ಹೊರತು, ಬದಲಾಗಿಸಲು ಸಾಧ್ಯವಾಗದ ಬ್ರಹ್ಮಬರಹವನ್ನು ತಿದ್ದೇ ಬಿಡುತ್ತೇವೆ ಎಂದು ನಟಿಸುತ್ತಲೇ ಬರುತ್ತಿದ್ದಾರೆ ! ಸತ್ತವರ ಮನೆ ಸೂತಕದಲ್ಲಿಯೂ ಹೂಟ್ಟೆ ಹೊರೆಯುವ ಇವರು ಯಾವತ್ತಾದರೂ ಮೈಮುರಿದು ಕೆಲಸ ಮಾಡಿದ್ದಾರೆಯೇ ? ಸ್ವರ್ಗದಲ್ಲಿ ನಿಶ್ಚಿತವಾಗಿರುವ ಮದುವೆಗಳನ್ನು ಕೂಡಿಸಲು ಇವರೇನು ಅಕಾಶದಿಂದ ಉದುರಿದವರಾ ?

ಇಲ್ಲಿಯ ಮೂಲನಿವಾಸಿ ದ್ರಾವಿಡರಾದ ನಮ್ಮಗಳ ಮೇಲೆ, ಎಲ್ಲಿಂದಲೋ ವಲಸೆ ಬಂದ ಆರ್ಯರು ನಮ್ಮ ನಮ್ಮಲ್ಲೇ ಜಾತಿ ಮತಾಂಧತೆಯನ್ನು ತುಂಬಿ ನಾನು ಮೇಲು, ನೀನು ಕೀಳು ಎಂಬಂತೆ ಮಾಡಿದ ಪಾಪಿಗಳಿವರು. ಈ ಜಾತಿಯ ವಿಷವರ್ತುಲದಿಂದ ನಾವು ಅನುಭವಿಸುತ್ತಿರುವ ಆರ್ತನಾದ ಕೇಳಿಸಿಕೋಂಡು ಆನಂದಿಸುತ್ತಿರುವವರಿವರು. ಅನ್ನ ಸಿಗದೆ ಹಸುವೆಯಿಂದ ಸಾಯುತ್ತಿರುವವರ ಮುಂದೆ ದೇವರ ಹೆಸರಿನಲ್ಲಿ ಆಹಾರವನ್ನು ಹಾಳುಮಾಡುವ ಇವರು ಗೋಮುಖ ವ್ಯಾಘ್ರರು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.