Monday, September 23, 2013

ಮಾತ್ಗವಿತೆ-148

ತೊಗಲಿಗೆ ತೊಗಲು ತಗುಲಿದರೆ
ಮಡಿಯ ಸ್ನಾನದ ಮೂಢತನ ಬೇಕೆ ?
ದಡಪಡಿಕೆಯ ಜಂಜಡದಲ್ಲಿ
ಜಗುಲಿಯಲ್ಲೇ ಜೋತಾಡುವ
ಹೆಗಲಿನ ಭಾರ ಇಳಿಸಿಕೊಳ್ಳಲೇ ಬೇಕಲ್ಲ !
ಹಾಳಾಗಿ ಹೋಗಲಿ ಬಿಡು
ಜಾತಿ-ಮತಗಳ ಧಿಮಾಕು  !
ಕರೆದಾಗ ಬಂದವ ನಾನು ; 
ಬೆರೆಯುವಾಗ 'ಬೇರೆ' ಬೇರುಗಳಿರಲಿಲ್ಲ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.