- ಡಾ. ಸಿದ್ರಾಮ ಕಾರಣಿಕ
(ಬಹಳ ವರ್ಷಗಳ ಹಿಂದೆ 1997-98 ರ ಆಸುಪಾಸಿನಲ್ಲಿ ಬರೆದ ಈ ಕವಿತೆ 2003 ರಲ್ಲಿ ಪ್ರಕಟವಾದ ನನ್ನ'ಮೋಡ ಕಟ್ಟೇತಿ' ಕವನ ಸಂಕಲನದಲ್ಲಿದೆ. ಅದನ್ನು ಯಥಾವತ್ತಾಗಿ ಇಲ್ಲಿ ನೀಡುತ್ತಿದ್ದೇನೆ.)
ಅಂಕಿ ಬದಲಾದೊಡೆ
ಅಂಕ ತಪ್ಪಿದ ಮಂಗನ ತೆರದಿ
ಜಿಗಿಯುವ ಚಪಲ ಯಾಕೋ ?
ಹಾಡು ಹಳೆಯದೇ
ರಾಗವೂ ಹಳೆಯದೇ
ಹೊಸ ಬಾಟ್ಲಿಯ ಹಳೇ ಸೆರೆ
ಕುಡ್ದು ಮತ್ತಿನ ಕುಣಿತ ಯಾಕೋ ?
ಅಂಕಿ ಬದಲಾದೊಡೆ
ಚಳಿಯಲಿ ನಡುಗಿ ಬಿಸಿಲಲಿ ಬೆಂದು
ಮಳೆಯಲಿ ತೋಯ್ದು ಚಿಪ್ಪಾಡಿಯಾಗೋ
ಫೂಟ್ ಪಾತವಾಸಿಗಳಿಗೆ
ಆಸರೆಯಾಗಿ ಸೂರು ಸಿಗುವುದೇ ?
ಅಂಕಿ ಬದಲಾದೊಡೆ
ಹೊಟ್ಟೆ ಹೊರೆದುಕೊಳ್ಳಲು
ಕಾಮಾಂಧರ ತೆಕ್ಕೆಯಲಿ
ಉಸಿರುಗಟ್ಟಿ ಸಾಯುವ ಸೂಳೆಯ
ಬಾಳು ಹಸನಾಗಬಲ್ಲದೇ ?
ಅಂಕಿ ಬದಲಾದೊಡೆ
ತುತ್ತಿಗಾಗಿ ದುಡಿದು ಕಮರುವ
ಕೂಸುಗಳ ಕನಸುಗಳು
ಹೂವಾಗಿ ಅರಳಿ ನಿಲ್ಲಬಹುದೇ ?
ಅಂಕಿ ಬದಲಾದೊಡೆ
ರೈತ ಕಾರ್ಮಿಕರ ರಕ್ತ
ಬೆವರಾಗುವುದು ನಿಲ್ಲಬಲ್ಲದೇ ?
ಶೋಷಕರ ವ್ಯಗ್ರಮುಖವರಳಿ
ಒಂದು ನಗೆಹೂ ಅರಳಬಹುದೇ ?
ಅಂಕಿ ಬದಲಾದೊಡೆ
ಭ್ರಷ್ಟರ ಆಟ-ಪುಂಡಾಟ
ಪರಿಸಮಾಪ್ತಿಯಾಗಿ ಶಾಂತಿ-ಸಹನೆಯ
ತಂಗಾಳಿ ಹೊರಸೂಸಬಲ್ಲದೇ ?
ಅಂಕಿ ಬದಲಾದೊಡೆ
ಮನದೊಳಗೆ ಅಡಗಿರುವ
ಭೇದ-ಭಾವದ ಭೂತ ತೊಲಗಿ
ಸಮತೆಯ ದೀಪ ಬೆಳಗಬಲ್ಲದೇ ?
ಇಲ್ಲ ಗೆಳೆಯ ಇಲ್ಲ
ಇದು ಒಂದು ದಿನದ ತೆವಲು ಅಷ್ಟೆ !
ಬರೀ ಚರ್ವಿತ ಚರ್ವಣ
ಮರುದಿನ ಮತ್ತೆ ಅದೇ ಗೋಳು !
ಅಂಕ ತಪ್ಪಿದ ಮಂಗನ ತೆರದಿ
ಜಿಗಿಯುವ ಚಪಲ ಯಾಕೋ ?
ಹಾಡು ಹಳೆಯದೇ
ರಾಗವೂ ಹಳೆಯದೇ
ಹೊಸ ಬಾಟ್ಲಿಯ ಹಳೇ ಸೆರೆ
ಕುಡ್ದು ಮತ್ತಿನ ಕುಣಿತ ಯಾಕೋ ?
ಅಂಕಿ ಬದಲಾದೊಡೆ
ಚಳಿಯಲಿ ನಡುಗಿ ಬಿಸಿಲಲಿ ಬೆಂದು
ಮಳೆಯಲಿ ತೋಯ್ದು ಚಿಪ್ಪಾಡಿಯಾಗೋ
ಫೂಟ್ ಪಾತವಾಸಿಗಳಿಗೆ
ಆಸರೆಯಾಗಿ ಸೂರು ಸಿಗುವುದೇ ?
ಅಂಕಿ ಬದಲಾದೊಡೆ
ಹೊಟ್ಟೆ ಹೊರೆದುಕೊಳ್ಳಲು
ಕಾಮಾಂಧರ ತೆಕ್ಕೆಯಲಿ
ಉಸಿರುಗಟ್ಟಿ ಸಾಯುವ ಸೂಳೆಯ
ಬಾಳು ಹಸನಾಗಬಲ್ಲದೇ ?
ಅಂಕಿ ಬದಲಾದೊಡೆ
ತುತ್ತಿಗಾಗಿ ದುಡಿದು ಕಮರುವ
ಕೂಸುಗಳ ಕನಸುಗಳು
ಹೂವಾಗಿ ಅರಳಿ ನಿಲ್ಲಬಹುದೇ ?
ಅಂಕಿ ಬದಲಾದೊಡೆ
ರೈತ ಕಾರ್ಮಿಕರ ರಕ್ತ
ಬೆವರಾಗುವುದು ನಿಲ್ಲಬಲ್ಲದೇ ?
ಶೋಷಕರ ವ್ಯಗ್ರಮುಖವರಳಿ
ಒಂದು ನಗೆಹೂ ಅರಳಬಹುದೇ ?
ಅಂಕಿ ಬದಲಾದೊಡೆ
ಭ್ರಷ್ಟರ ಆಟ-ಪುಂಡಾಟ
ಪರಿಸಮಾಪ್ತಿಯಾಗಿ ಶಾಂತಿ-ಸಹನೆಯ
ತಂಗಾಳಿ ಹೊರಸೂಸಬಲ್ಲದೇ ?
ಅಂಕಿ ಬದಲಾದೊಡೆ
ಮನದೊಳಗೆ ಅಡಗಿರುವ
ಭೇದ-ಭಾವದ ಭೂತ ತೊಲಗಿ
ಸಮತೆಯ ದೀಪ ಬೆಳಗಬಲ್ಲದೇ ?
ಇಲ್ಲ ಗೆಳೆಯ ಇಲ್ಲ
ಇದು ಒಂದು ದಿನದ ತೆವಲು ಅಷ್ಟೆ !
ಬರೀ ಚರ್ವಿತ ಚರ್ವಣ
ಮರುದಿನ ಮತ್ತೆ ಅದೇ ಗೋಳು !
No comments:
Post a Comment