Tuesday, December 20, 2011

ಮಾತ್ಗವಿತೆ-21


 ಗಳಿಗೆಗೊಮ್ಮೆ ನೂಲ ಎಳೆಯಾಗಿ 
ಕೊರಳ ಕೊಯ್ಯುವ
ಮರ್ಮಕ್ಕೆ ಏನೆಂದು ಹೆಸರು ಕೊಡಲಿ ?
ಬೀಳು ಬಿದ್ದ ಭೂಮಿಯಲ್ಲಿ 
ಮಳೆ ಹನಿಗಾಗಿ ಕಾಯ್ದ ಬೀಜ
ನಾಳೆಯ ಬಾಳಿಗೆ 
ಆಸರೆಯ ಕನಸು ಕಾಣುತ್ತಿದೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.