Friday, December 02, 2011

ಮಡೆಸ್ನಾನಕ್ಕೆ ಹೇಸಿಕೆ !

ಮಡೆಸ್ನಾನದ ಬಗ್ಗೆ ಸಿದ್ಧರಾಮ ಹಿಪ್ಪರಗಿಯವರು ಹೇಸಿಕೊಂಡು, ನೊಂದುಕೊಂಡು ಹೇಳುತ್ತಾರೆ ; 
ಒಂದೆಡೆ ಇಡೀ ವಿಶ್ವವೇ ಬೆಕ್ಕಸ ಬೆರಗಾಗುವಂತಹ ವೈಜ್ಞಾನಿಕ ಮುನ್ನಡೆಯೆಂದು ಬೊಂಬಡಾ ಹೊಡೆದುಕೊಳ್ಳುವ, ಚಿಲ್ಲರೆ ವಿಷಯಗಳಿಗೂ ವಿಶ್ವವನ್ನೇ ಆಹ್ವಾನಿಸುವ ಆರ್ಥಿಕ ಉದಾರೀಕರಣವೆಂಬ ಬೋಳೆ ಮಂತ್ರ ಜಪಿಸುವ ಸಮಕಾಲೀನ  ಸಂದರ್ಭವೇ ಯಾಕೆ ನೀನಿಷ್ಟು ಕ್ರೂರನಾದೆ...
ದೇವರು-ದಿಂಡಿರೆಂಬ ಕಾಲ್ಪನಿಕ ಜಗತ್ತಿನಲ್ಲಿ ತೇಲಾಡಿಸಿ ಭಾವನೆಗಳೊಂದಿಗೆ ಚೆಲ್ಲಾಟವಾಡುವ ವಿತಂಡಿಗಳ ಪಡೆ ಒಂದೆಡೆ ; ಅದನ್ನು ತಿಳಿಹೇಳಲು ಹೋದ ಶಿವರಾಮ್ ರಂತವರನ್ನು ರಕ್ಷಿಸದ ಸರ್ಕಾರವೇ...ಎಲ್ಲಿದೆ ನಿನ್ನ ಕಾನೂನು ಪಾಲನೆಯೆಂಬ ದಂಡವನ್ನು ಜಳಪಳಿಸಬಾರದೇ ? 
ಮಡೆ ಸ್ನಾನವೆಂಬ ನೀಚ ಮತ್ತು ಹೊಲಸು ಪದ್ಧತಿಯ ಆರಾಧಕರೇ/ಪೋಷಕರೇ ನಿಮಗಾದರೂ ಬೀಳಲು ಬುದ್ಧಿ ಬೇಡವೇ? ನಾವೀಗ ಯಾವ ಕಾಲದಲ್ಲಿದ್ದೇವೆ ಎಂಬ ಕನಿಷ್ಟ ಅರಿವು-ಜ್ಞಾನ ಬೆಳೆಯುವುದು ಯಾವಾಗ ? 
ವರ್ಷಗಳಿಂದಲೂ ದೇಶವ್ಯಾಪಿ ವಿರೋಧ ವ್ಯಕ್ತವಾಗುತ್ತಿದ್ದರೂ ಲಜ್ಜಾಹೀನರಂತೆ ನೀವು ಎಂಜಲೆಲೆಯ ಮೇಲೆ ಹೊರಳಾಡಿ ಆಧುನಿಕ ಕಾಲದ ಗಂಭೀರ ಕಾಯಿಲೆಗಳ ಸೋಂಕನ್ನು ನಿಮ್ಮ ದೇಹ ಮೇಲೆ ಎಳೆದುಕೊಂಡಿದ್ದು ಎಷ್ಟು ಸರಿ ? 
ನೀವು ಇಂತಹ ಆಚರಣೆಗಳಿಗೆ ಮೈಯೊಡ್ಡಿಕೊಳ್ಳಲು ತಯಾರಿರುವತನಕ ಮೇಲ್ಜಾತಿಯವರು ಸಂಭ್ರಮದಿಂದ ಆಚರಣೆಗೆ ಸಮ್ಮತಿ ನೀಡುತ್ತಾರೆ. 
ಇನ್ನಾದರೂ ಆಧುನಿಕ ಕಾಲದ ವೈಜ್ಞಾನಿಕ ಆಲೋಚನೆಗಳಿಗೆ ನಿಮ್ಮನ್ನು ನೀವು ತೆರೆದುಕೊಳ್ಳಿರಿ...ನನ್ನಯ ಕಪ್ಪು ಜನರೇ...

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.