Wednesday, July 04, 2012

ಮಾತ್ಗವಿತೆ-89

ಬರೀ ಹೋರಾಟ, ತತ್ವ, ಸಿದ್ಧಾಂತ, ಆದರ್ಶ
ನಮ್ಮ ಬದುಕನ್ನು ಕಟ್ಟಿ ಕೊಡಲಾರವು !
ಅವು ಕೇವಲ ವೇದಿಕೆಯ ಮಾತುಗಳು !
ಬದುಕು ಕಟ್ಟಿಕೊಳ್ಳುವ ಇಂದಿನ ದಿನಮಾನದಲ್ಲಿ
ರಾಜಿಯಾಗಬೇಕು ; ರಾಜಕೀಯ ಬೆರೆಯಬೇಕು !
ಘಾಸಿಯಾದರೂ ಹೇಸಿಕೆ ಎನಿಸಿದರೂ
ಪಾದಪೂಜೆ ಸಾಂಗವಾಗಿ ನಡೆಯಲೇ ಬೇಕು !
ಗುಲಾಮರೇ ಬೇಕಾಗಿರುವ ದೇಶಕ್ಕೆ
ಸಲಾಮು ಹೊಡೆಯುವುದನ್ನು ರೂಢಿ ಮಾಡಿಕೊಳ್ಳಬೇಕು
ಇಲ್ಲದಿದ್ದರೆ ಮುಲಾಮಿಲ್ಲದೆ ಒಣಗುವ
ನಮ್ಮ ಗಾಯವನ್ನು ಮತ್ತಷ್ಟು ಕೆರೆಯಲಾಗುತ್ತದೆ !
ರಕ್ತ ಜಿನುಗಿ ಆವಾಗಾವಾಗ ನರಳುತ್ತಲೇ ಇರಬೇಕಾಗುತ್ತದೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.