Saturday, June 30, 2012

ಮಾತ್ಗವಿತೆ-87

ನಂಬಿಕೆಗೆ ಇಲ್ಲ ಇಲ್ಲಿ ಬೆಲೆ-ನೆಲೆ
ಅರ್ಥ-ಕಾಮಗಳ ಕೀಳು ಕೇಳಿಯೇ ಎಲ್ಲ !
ನಡೆಯುವ ದಾರಿಗೆ ನೂರೆಂಟು ಮುಳ್ಳು
ಹೊಳ್ಳು ಹೊಳ್ಳು ನೀನು ಇದೆಲ್ಲವನ್ನು ಮೆಟ್ಟಿ ಹೊಳ್ಳು
ಹಳ್ಳಕ್ಕೆ ಬೀಳುವ ಮೊದಲೇ ಸರಿ ದಾರಿಗೆ ಹೊಳ್ಳು !

Friday, June 29, 2012

ಮಾತ್ಗವಿತೆ-86

ದಿನಮಾನಗಳೇ ಸರಿ ಇಲ್ಲ ;
ದುಗುಡು-ದುಮ್ಮಾನಗಳ ಮಹಾಪೂರ !
ಈಜಿ ದಡ ಸೇರಿದರೆ ಬಹುಮಾನಗಳ ಸುರಿಮಳೆ
ನಡು ಮುಳುಗಿದಿರೋ ಮುಗೀತು
ಮೌನದಲ್ಲೂ ಬೈಯ್ಯುವವರಿದ್ದಾರೆ !
ಮನುಷ್ಯನನ್ನು, ಮನಸ್ಸನ್ನು ಅರ್ಥ ಮಾಡಿಕೊಳ್ಳದವರು
ಬೇರೇನು ಮಾಡಲು ಸಾಧ್ಯ ಹೇಳಿ ?

Saturday, June 23, 2012

ಬೌದ್ಧ ತಾತ್ವಿಕತೆಯ ಪ್ರತ್ಯಭಿಜ್ಞಾನ

ಬೌದ್ಧ ತಾತ್ವಿಕತೆಯ ಪ್ರತ್ಯಭಿಜ್ಞಾನ

* ಡಾ|ಎಸ್. ನಟರಾಜ ಬೂದಾಳು
  • ಕನ್ನಡದ ಬೌದ್ಧ ಧಾರ್ಮಿಕ/ತಾತ್ವಿಕ ಪಠ್ಯಗಳ ಅವಲೋಕನ ಅನೇಕ ಪ್ರಮುಖ ಸಂಗತಿಗಳನ್ನು ಅನಾವರಣ ಮಾಡುತ್ತದೆ. ಸಾಮಾನ್ಯವಾಗಿ ಸಮುದಾಯಗಳು ತಾತ್ವಿಕ ಪಠ್ಯಗಳನ್ನು ಆಯ್ಕೆ ಮಾಡಿಕೊಂಡರೆ, ಧಾರ್ಮಿಕ ಸಂಸ್ಥೆಗಳು ಪಾಂಥಿಕ ಪಠ್ಯಗಳನ್ನು ಮುಂದಿಡುತ್ತನ್ನಡದ ಬೌದ್ಧ ಧಾರ್ಮಿಕ/ತಾತ್ವಿಕ ಪಠ್ಯಗಳ ಅವಲೋಕನ ಅನೇಕ ಪ್ರಮುಖ ಸಂಗತಿಗಳನ್ನು ಅನಾವರಣ ಮಾಡುತ್ತದೆ. ಸಾಮಾನ್ಯವಾಗಿ ಸಮುದಾಯಗಳು ತಾತ್ವಿಕ ಪಠ್ಯಗಳನ್ನು ಆಯ್ಕೆ ಮಾಡಿಕೊಂವೆ. ಆದ್ದರಿಂದ ದರ್ಶನವೊಂದರ ಪೂರ್ಣಪಠ್ಯಕ್ಕಾಗಿ ಧಾರ್ಮಿಕ ಸಂಸ್ಥೆಗಳು ಮುಂದಿಡುವ ಪಠ್ಯಗಳನ್ನು ಅವಲಂಬಿಸುವಾಗ ಎಚ್ಚರಿಕೆ ಅಗತ್ಯ.

ಪೂರ್ವ ದೇಶಗಳ ಪ್ರಾಚೀನ ಜ್ಞಾನ ಪ್ರಸ್ಥಾನಗಳ ಅಧ್ಯಯನದಲ್ಲಿ ಎರಡು ಧಾರೆಗಳಿವೆ. ಪಾಶ್ಚಾತ್ಯ ವಿದ್ವಾಂಸರ 'ಓರಿಯಂಟಲ್' ಅಧ್ಯಯನಗಳು ಪ್ರಧಾನವಾಗಿ ಸಂಸ್ಕೃತ ಪಠ್ಯಗಳನ್ನು ತತ್ಸಮ' ವ್ಯಾಖ್ಯಾನಗಳನ್ನು ಆಧರಿಸಿರುತ್ತವೆ. ಭಾರತದ ಇಂಡಾಲಜಿಸ್ಟರ ಅಧ್ಯಯನಗಳು ವೇದೋಪನಿಷತ್ತುಗಳನ್ನು ಪ್ರಧಾನ ಆಕರಗಳನ್ನಾಗಿಯೋ, ಉಳಿದವನ್ನು ಅವುಗಳ ಒಡನಾಟದ (ಪರ/ವಿರುದ್ಧದ) ಉಪಉತ್ಪನ್ನಗಳೆಂದೋ ಪರಿಭಾವಿಸಿರುತ್ತವೆ. ಇವೆರಡೂ ಮೌಖಿಕ ಪರಂಪರೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಮಧ್ಯಯುಗೀನ ಭಾರತದ ತಾತ್ವಿಕ ಸಂಘರ್ಷವನ್ನು ಅತ್ಯಂತ ಸೂಕ್ಷ್ಮ ಸ್ತರದಲ್ಲಿ ಸಂಸ್ಕೃತದ 'ತತ್ಸಮ' ವಿದ್ವಾಂಸರು ನಿರ್ವಹಿಸುತ್ತಾರೆ. ಅವರ ಸಂಕಲನಾನುಸಂಧಾನದ (ಒಳಗೇ ಸೇರಿಕೊಂಡು ವಿರೋಧಿಸುವ ಕ್ರಮ) ಪರಿಣಾಮಗಳನ್ನು ಓರಿಯಂಟಲಿಸ್ಟರು ಗೊತ್ತಿಲ್ಲದೆ ನಿರ್ಲಕ್ಷಿಸಿದರೆ, ಇಂಡಾಲಜಿಸ್ಟರು ಅರಿವಿದ್ದೂ ನಿರ್ಲಕ್ಷಿಸುತ್ತಾರೆ.

ಕನ್ನಡದಲ್ಲಿ ಬೌದ್ಧ ಸಾಹಿತ್ಯದ ಪ್ರಕಟಣೆ 1907ರಿಂದಲೇ ಪ್ರಾರಂಭವಾಗಿದೆ. ಬಿದರೆ ಅಶ್ವತ್ಥನಾರಾಯಣರ ಬೌದ್ಧಾವತಾರ, ದಮ್ಮಪದ, ಬುದ್ಧಗೀತೆ, ಜಾತಕ ಕತೆಗಳಿಂದ ಪ್ರಾರಂಭವಾಗಿ ಗೋವಿಂದ ಪೈ ಅವರ ಸಿಗಾಲಸುತ್ತ, ದಮ್ಮಪದ; ಎಂಆರ್‌ಶ್ರೀ, ಸಾಲಿ ರಾಮಚಂದ್ರರಾಯರ ಜಾತಕ ಕತೆಗಳು, ಎಸ್. ನರಸಿಂಹ ಶಾಸ್ತ್ರಿಗಳ ಬುದ್ಧ ಗೀತಾವಳಿ, ರಾಜರತ್ನಂ ಅವರ ಚೀನಾ ದೇಶದ ಬೌದ್ಧ ಯಾತ್ರಿಕರು, ಬೌದ್ಧ ಧರ್ಮದ ಇತಿಹಾಸ; ಕಡವ ಶಂಭು ಶರ್ಮ, ಎಸ್.ವಿ. ಪರಮೇಶ್ವರ ಭಟ್ಟ ಮತ್ತು ಎಲ್.ಬಸವರಾಜು ಅವರು ಬೇರೆಬೇರೆಯಾಗಿ ಕನ್ನಡಕ್ಕೆ ತಂದ ಸೌಂದರನಂದ, ಬುದ್ಧ ಚರಿತೆಗಳು ಮತ್ತು ನಾನು ಕನ್ನಡಕ್ಕೆ ತಂದಿರುವ ನಾಗಾರ್ಜುನನ ಮೂಲಮಧ್ಯಮಕ ಕಾರಿಕಾ ಇತ್ಯಾದಿ ಕೃತಿಗಳು ಕನ್ನಡಕ್ಕೆ ಬಂದಿವೆ. ಮೂಲಮಧ್ಯಮಕ ಕಾರಿಕಾ, ಜಾತಕ ಕತೆಗಳು ಮತ್ತು ದಮ್ಮಪದಗಳ ಹೊರತಾಗಿ ಉಳಿದವೆಲ್ಲ ಸರ್ವಾಸ್ತಿವಾದದ ಪಠ್ಯಗಳೇ ಆಗಿವೆ. ವಸ್ತುವಾದಿಯಾದ ಸರ್ವಾಸ್ತಿವಾದವು ಸಾಂಖ್ಯಕ್ಕೆ ಹತ್ತಿರವಾಗಿರುವುದರಿಂದ ಮತ್ತು ಹಿಂದೂ ತಾತ್ವಿಕತೆಗೆ ಅದನ್ನು ನಿಭಾಯಿಸಲು ಸಾಧ್ಯವಾಗಿರುವುದರಿಂದ ಸರ್ವಾಸ್ತಿವಾದದ ಪಠ್ಯಗಳನ್ನು ಬೌದ್ಧ ತಾತ್ವಿಕತೆಯ ಕೇಂದ್ರ ಪಠ್ಯಗಳನ್ನಾಗಿ ಎದುರಿಗೆ ಇಟ್ಟುಕೊಳ್ಳುವರೇ ವಿನಾ ನಿಜವಾದ ಬೌದ್ಧ ತಾತ್ವಿಕತೆಯಾದ ವಿಜ್ಞಾನವಾದ (ಯೋಗಾಚಾರ) ಮತ್ತು ಮಧ್ಯಮ ಮಾರ್ಗಗಳ ಪಠ್ಯಗಳನ್ನು ಎದುರಾಗಲು ಹೋಗುವುದಿಲ್ಲ.

ಪ್ರಸ್ತುತ ಕೃತಿ ಥಿಯೋಡೋರ್ ಷೆರ್ಬಾಸ್ಕಿ ಎಂಬ ರಷ್ಯನ್ ವಿದ್ವಾಂಸ 1922ರಲ್ಲಿ ಪ್ರಕಟಿಸಿದ The Central Conception of Buddhism and the Meaning of the Word Dharmaದ ಕನ್ನಡಾನುವಾದ. ಇದು ಬೌದ್ಧ ಸರ್ವಾಸ್ತಿವಾದ ಪ್ರಸ್ಥಾನದ ನಿಲುವನ್ನಾಧರಿಸಿ ಲೋಕಾನುಸಂಧಾನ ನಡೆಸಿದ ತಾತ್ವಿಕ ಪಠ್ಯ. ಎದುರಿಗಿನ ಲೋಕಸತ್ತೆ ಸ್ವತಂತ್ರವಾಗಿದೆ ಎನ್ನುತ್ತದೆ ಸರ್ವಾಸ್ತಿವಾದ. ಈ ನಿಲುವನ್ನು ಹಿನ್ನೆಲೆಗಿಟ್ಟುಕೊಂಡು ಬೌದ್ಧ ಪರಿಕಲ್ಪನೆಗಳಾದ ಧರ್ಮ, ಅನಾತ್ಮವಾದ, ದುಃಖ, ಪ್ರತೀತ್ಯಸಮುತ್ಪಾದ ಮುಂತಾದವನ್ನು ವಿವರಿಸುವ ಪ್ರಯತ್ನ ಮಾಡುತ್ತದೆ. ಬುದ್ಧ ತನ್ನ ಕಾಲದ 63 ಚಿಂತನಾ ಪ್ರಸ್ಥಾನಗಳನ್ನು ಅಧ್ಯಯನ ಮಾಡಿ ಅವನ್ನು ಎರಡು ಗುಂಪುಗಳನ್ನಾಗಿ ಮಾಡಲು ಸಾಧ್ಯವೆಂದು ತೋರಿಸುತ್ತಾನೆ.

ಒಂದು ಗುಂಪು ಲೋಕದ ಈ ಸಮಸ್ತವೂ ಸ್ವತಂತ್ರವಾಗಿ 'ಇದೆ' ಎಂದು ನಂಬುತ್ತದೆ ಮತ್ತು ಇನ್ನೊಂದು ಗುಂಪು 'ಇಲ್ಲ' ಎನ್ನುತ್ತದೆ. ಆದರೆ ಬುದ್ಧ ಹೀಗೆ ಲೋಕವನ್ನು ಇದೆ ಎನ್ನಲೂ ಬರುವುದಿಲ್ಲ, ಇಲ್ಲ ಎನ್ನಲೂ ಬರುವುದಿಲ್ಲ. ಇದೆ, ಇಲ್ಲ, ಇದೆ ಇಲ್ಲ ಎರಡೂ ಅಲ್ಲ, ಇದೆ ಇಲ್ಲ ಎರಡೂ ಹೌದು (ಇದನ್ನು ಚತುಷ್ಕೋಟಿ tetralemma ಎನ್ನುತ್ತಾರೆ.)- ಈ ಕ್ರಮದಲ್ಲಿ ಲೋಕವನ್ನು ವಿವರಿಸಲಾಗದು ಎನ್ನುತ್ತಾನೆ. ವಿಜ್ಞಾನವು ಇಂದಿಗೂ ಲೋಕದ ಬಗೆಗೆ ಇದೇ ನಿಲುವನ್ನು ಹೊಂದಿದೆ. ಲೋಕದ ಪ್ರತಿ ವಿದ್ಯಮಾನವೂ ಸಂಬಂಧದಲ್ಲಿ ಉಂಟಾಗಿ ಸಂಬಂಧ ಭಂಗಗೊಂಡಾಗ ವಿಸರ್ಜನೆಗೊಳ್ಳುತ್ತದೆ ಎನ್ನುವ ಪ್ರತೀತ್ಯ ಸಮುತ್ಪಾದ ತತ್ವವನ್ನು ಲೋಕ ವಿವರಣೆಗೆ ಬುದ್ಧ ಮುಂದಿಟ್ಟನು. ಹಾಗೆ ವಿವರಿಸುವಾಗ ಲೋಕವನ್ನು ಇದೆ ಎನ್ನುವವರಿಗೆ ಇಲ್ಲವೆಂದೂ, ಇಲ್ಲವೆನ್ನುವವರಿಗೆ ಇದೆ ಎಂದೂ, ಇದೆ ಇಲ್ಲ ಎರಡೂ ಸರಿ ಎನ್ನುವವರಿಗೆ ಇದೆ ಇಲ್ಲ ಎರಡೂ ಸರಿಯಲ್ಲವೆಂದೂ, ಇದೆ ಇಲ್ಲ ಎರಡೂ ಸರಿಯಲ್ಲ ಎನ್ನುವವರಿಗೆ ಇದೆ ಇಲ್ಲ ಎರಡೂ ಸರಿ ಎಂದೂ ವಿವರಿಸಿ ಆ ನಿಲುವುಗಳನ್ನು ನಿರಾಕರಿಸುವುದರ ಮೂಲಕ ನಿವಾರಿಸಿದನು. ಈ ನಿರಾಕರಣೆ ಮತ್ತು ನಿವಾರಣೆಗಳು ಪಾಂಥಿಕ ಶಠತ್ವದ ವಿದ್ವಾಂಸರಿಂದಾಗಿ ಒಂದೊಂದು ಪಂಥಗಳಾಗಿ ಸ್ಥಾಪಿತವಾದವು. (ನೋಡಿ: ಜೆ ಜೆ ಕಲೂಪಹಾನ : ನಾಗಾರ್ಜುನನ ಮೂಲಮಧ್ಯಮಕಕಾರಿಕಾದ ಪ್ರಸ್ತಾವನೆ ಪುಟ 6).

***

ಬೌದ್ಧ ತಾತ್ವಿಕ ಪಠ್ಯಗಳ ಅನುವಾದದ ದೊಡ್ಡ ತೊಡಕೆಂದರೆ ಸಮಾನ ಪಾರಿಭಾಷಿಕ ಪದಗಳನ್ನು ಹೊಂದಿಸಿಕೊಳ್ಳುವುದು. ಉದಾಹರಣೆಗೆ ಬುದ್ಧಗುರು 'ಆಸೆಯೇ ದುಃಖಕ್ಕೆ ಮೂಲ' ಎಂದೂ ಎಲ್ಲೂ ಹೇಳಿಲ್ಲ. ಆದರೆ ಪಾಳಿ ಭಾಷೆಯ 'ತನ್ಹಾ' ಎನ್ನುವ ಪದವನ್ನು 'ಆಸೆ' ಎಂದು ತಪ್ಪಾಗಿ ಅನುವಾದಿಸಿದ್ದರಿಂದ (ಇದು ಆಕಸ್ಮಿಕವಾಗಿ ಆಗಿರುವ ಪ್ರಮಾದವಲ್ಲ) ಇಂತಹ ತಾತ್ವಿಕ ಅಪವ್ಯಾಖ್ಯಾನಗಳಾಗಿವೆ. ಪಾಳಿಯ ದುಃಖ ಎನ್ನುವ ಪದಕ್ಕೆ ಸಮಾನವಾದ ಪದ ಕನ್ನಡದಲ್ಲಾಗಲಿ, ಇಂಗ್ಲಿಷ್‌ನಲ್ಲಾಗಲಿ ಇಲ್ಲ. ಇಂಥ ಕಡೆ ಪ್ರಸ್ತುತ ಅನುವಾದಕರು ಅತ್ಯಂತ ನಿಷ್ಠ ಅನುವಾದವನ್ನು ಮಾಡಿದ್ದಾರೆ. ತಾತ್ವಿಕತೆಯ ಸೂಕ್ಷ್ಮ ಒಂದು ಕಡೆ, ಪಾರಿಭಾಷಿಕ ಪದಗಳ ತೊಡಕು ಮತ್ತೊಂದು ಕಡೆ ಇವೆರಡನ್ನೂ ನಿರ್ವಹಿಸುವುದು ತುಂಬಾ ಆಯಾಸಕರ ಕೆಲಸ. ಅದೆಷ್ಟು ಆಯಾಸದ ಕೆಲಸವೆಂಬುದಕ್ಕೆ ಈ ಲೇಖನದ ಓದೇ ಒಂದು ಸಮರ್ಥನೆ! ಬೌದ್ಧ ತಾತ್ವಿಕತೆಯ ಹಂತಗಳನ್ನು ಅಧ್ಯಯನ ಮಾಡಲು ಇಂತಹ ಕೃತಿಗಳು ಅನಿವಾರ್ಯ. ಕನ್ನಡಿಗರನ್ನು ಈ ಸಂಕೀರ್ಣ ತಾತ್ವಿಕತೆಯ ದಾರಿಯಲ್ಲಿ ಹೆಚ್ಚು ಆಯಾಸವಿಲ್ಲದ ಹಾಗೆ ಕರೆದುಕೊಂಡು ಹೋಗುವ ಕೃತಿ ನೀಡಿರುವ ಬಿ.ಆರ್. ಜಯರಾಮರಾಜೇ ಅರಸ್ ಅವರನ್ನು ಮತ್ತು ಪ್ರಕಟಿಸಿರುವ ಕುವೆಂಪು ಭಾಷಾ ಭಾರತಿ ಪ್ರಾಧಿಕಾರವನ್ನು ಅಭಿನಂದಿಸುತ್ತೇನೆ.

-----------------------------------

ಬೌದ್ಧ ಧರ್ಮದ ಕೇಂದ್ರ ಪರಿಕಲ್ಪನೆ
ಮೂಲ: ಥಿಯೋಡೋರ್ ಷೆರ್ಬಾಸ್ಕಿ
ಅನುವಾದ ಬಿ.ಆರ್. ಜಯರಾಮರಾಜೇ ಅರಸ್
ಪ್ರ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು-560 056
ಬೆಲೆ: ರೂ.75/

ಕೃಪೆ : ವಿಜಯ ಕರ್ನಾಟಕ

ಮಾತ್ಗವಿತೆ-85

ಇತ್ತೀಚೆ ಬಯಕೆ ಹೆಚ್ಚಾಗುತ್ತಿವೆ ;
ಜನ ನಕ್ಕಾರು ಎಂಬ ಅಂಜಿಕೆಯೂ ಇದೆ !
ಕಣ್ಣಂಚಲಿ ಪುಟಿಸಿದ ಕರೆಯ ಒರತೆಗೆ
ಕಳವಳಿಸಿ, ನೆರೆತರೂ ಮರೆಯದನುಭಾವ !
ಬತ್ತದದು ; ಉಕ್ಕುತ್ತಲೇ ಇದೆ ;
ಮನಸು ಹೇಳುವ ಪಲ್ಲವಿ ;
ಕಾಲವೂ ಪಕ್ವವಾಗಿದೆ ; ತಡಬೇಡಿನ್ನು
ತುಡುಗಾದರೂ ಸರಿ ತಡುವು !

Wednesday, June 20, 2012

ಕಪ್ಪು ಹಣದ ಚೆಲ್ಲಾಟ !

ಗಿರೀಶ್ ಕೆ.ನಾಶಿ
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ರೂಪಾಯಿ ಮೌಲ್ಯ ಕುಸಿಯುತ್ತಿರುವ ಸಂದರ್ಭದಲ್ಲೇ ಕೇಂದ್ರ ಸರ್ಕಾರ ಕಪ್ಪುಹಣದ ಕುರಿತಂತೆ ಸಂಸತ್ತಿನಲ್ಲಿ ಶ್ವೇತಪತ್ರ ಮಂಡಿಸಿದೆ. ಮೇಲ್ನೋಟಕ್ಕೆ ಇದು ಸರ್ಕಾರದ ಕಾಳಜಿಗೆ ಸಂಬಂಧಿಸಿದ ಅಂಶ ಎನಿಸಿದರೂ ಇದೊಂದು ವ್ಯರ್ಥ ಕಸರತ್ತು ಎಂಬುದರಲ್ಲಿ ಎರಡು ಮಾತಿಲ್ಲ.

ಕಪ್ಪುಹಣದ ಸಂಗ್ರಹ ಮತ್ತು ಅದರ ಚಲಾವಣೆಯಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಹೇಳಲಾಗುತ್ತಿದೆ. ಬಹುತೇಕ ವ್ಯವಹಾರಗಳಲ್ಲಿ ಕಪ್ಪುಹಣದ ವಹಿವಾಟು ನಿರ್ಭಿಡೆಯಿಂದ ಚಾಲ್ತಿಯಲ್ಲಿದೆ. ಅಲಿಖಿತವಾಗಿ ಕೊಡುಕೊಳ್ಳುವ ವ್ಯಕ್ತಿಗಳಿಬ್ಬರಲ್ಲೂ ಅದೊಂದು ಒಪ್ಪಿತ ವಿಧಾನವಾಗಿ ಮಾರ್ಪಟ್ಟಿದೆ.

ಭಾರತೀಯರು ಸ್ವಿಸ್ ಬ್ಯಾಂಕಿನಲ್ಲಿ ಸುಮಾರು 30 ಸಾವಿರ ಲಕ್ಷ ಕೋಟಿ ರೂಪಾಯಿ ಕಪ್ಪುಹಣ ಇಟ್ಟಿದ್ದಾರೆ ಎಂದು ಒಂದು ಸಮೀಕ್ಷೆ ಹೇಳುತ್ತದೆ. ಸಿಬಿಐ ಅಂದಾಜಿನ ಪ್ರಕಾರ 84 ಲಕ್ಷ ಕೋಟಿ ರೂಪಾಯಿ ಭಾರತೀಯರ ಕಪ್ಪುಹಣ ಅಲ್ಲಿ ಕೊಳೆಯುತ್ತಿದೆ ಎಂದು ಹೇಳಲಾಗಿದೆ.

ಈ ಅಂದಾಜುಗಳನ್ನು ನಾಚಿಸುವಂತೆ ದೇಶದೊಳಗೆ ಸರಿಸುಮಾರು 30 ಸಾವಿರ ಲಕ್ಷ ಕೋಟಿ ರೂಪಾಯಿಗಳಷ್ಟು ಪ್ರಮಾಣದ ಕಪ್ಪುಹಣ ಪರ್ಯಾಯ ರೂಪದಲ್ಲಿ ಚಲಾವಣೆಯಲ್ಲಿದೆ ಎನ್ನಲಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಪ್ಪುಹಣ ಹೇಗೆ ಹುಟ್ಟುತ್ತದೆ? ಅದನ್ನು ಹೇಗೆ ಬಳಸಲಾಗುತ್ತದೆ? ಈ ಹಣವೆಲ್ಲಾ ಎಲ್ಲಿ ಹೋಗುತ್ತದೆ ಮತ್ತು ಇದನ್ನು ಹೇಗೆ ತಡೆಗಟ್ಟಬಹುದು ಎನ್ನುವ ಪ್ರಶ್ನೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ಬಗ್ಗೆ ಯಾರೂ ಅಷ್ಟಾಗಿ ಚಿಂತಿಸುತ್ತಿಲ್ಲ.

ವಿಕಿಲೀಕ್ಸ್ ಭಾರತೀಯರ ಕಪ್ಪುಹಣದ ಕುರಿತಂತೆ ವಿವರಿಸುವ ಮುನ್ನ ರಾಜಕಾರಣಿಗಳ ಪಾಲಿಗೂ ಇದು ಗಂಭೀರ ಎನಿಸಿರಲೇ ಇಲ್ಲ. ಎಲ್ಲರೂ ಬೊಬ್ಬೆ ಹೊಡೆಯಲು ಶುರುಮಾಡಿದ ಮೇಲೆಯೇ ಕೇಂದ್ರ ಸರ್ಕಾರ ಶ್ವೇತಪತ್ರ ಮಂಡಿಸಿದೆ. ಈ ಮೂಲಕ ಟೀಕೆಗಳಿಗೆ ಪ್ರತ್ಯುತ್ತರ ಎಂಬಂತೆ ಔಪಚಾರಿಕ ಪ್ರಕ್ರಿಯೆಯೊಂದನ್ನು ಪೂರೈಸಿದೆಯೇ ಹೊರತಾಗಿ ಇದಕ್ಕೊಂದು  ತಾರ್ಕಿಕ ಅಂತ್ಯವನ್ನು ಕಾಣಿಸುವ ಪ್ರಾಮಾಣಿಕ ಪ್ರಯತ್ನವನ್ನೇನೂ ಮಾಡಿಲ್ಲ.

ಸಾಮಾನ್ಯವಾಗಿ ಕಪ್ಪುಹಣ ಎಂದರೆ ಲೆಕ್ಕಕ್ಕೆ ತೋರಿಸದೇ ಶೇಖರಿಸಿಟ್ಟ ಹಣ. ರಾಜಕಾರಣಿಗಳು ಹಾಗೂ ಅಧಿಕಾರಿಗಳು ಪಡೆಯುವ ಲಂಚ, ತೆರಿಗೆಗಳ್ಳತನ ಮತ್ತು ದೊಡ್ಡ ಪ್ರಮಾಣದ ದುಡ್ಡಿನ ಹಗರಣಗಳು ಕಪ್ಪುಹಣದ ಮೂಲ ಎನಿಸಿವೆ.

ಭಾರತದಲ್ಲಿ ಕಪ್ಪುಹಣವು ಲಂಚದ ಮುಖಾಂತರವೇ ಹುಟ್ಟುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ನಮ್ಮ ಬಹುತೇಕ ಜನಪ್ರತಿನಿಧಿಗಳು ಇವತ್ತು ಲಂಚ ಪಡೆಯುವವರೇ ಆಗಿದ್ದಾರೆ. ಈ ರೀತಿಯಾಗಿ ಪಡೆದ ಲಂಚದ ಹಣವನ್ನು ಇವರು ಆದಾಯ ತೆರಿಗೆಯಲ್ಲಿ ತೋರಿಸುವುದೇ ಇಲ್ಲ ಮತ್ತು ಇದನ್ನು ತೋರಿಸಲು ಬರುವುದೂ ಇಲ್ಲ.

ಈ ರೀತಿ ಮೋಸದಿಂದ ಶೇಖರಣೆಯಾದ ಹಣ ಕಪ್ಪುಹಣದ ಗುಡ್ಡೆಯಾಗಿ ಪರಿವರ್ತನೆಯಾಗುತ್ತದೆ. ಅಂತೆಯೇ ಅಧಿಕಾರಶಾಹಿ ಪಡೆಯುವ ಲಂಚದ ಹಣವೂ ಕಪ್ಪುಹಣದ ಮತ್ತೊಂದು ಪ್ರಬಲ ಉಗಮಸ್ಥಾನ.

ವ್ಯವಹಾರಸ್ಥರು, ರಿಯಲ್ ಎಸ್ಟೇಟ್, ಉತ್ಪಾದನಾ ವಲಯ, ಚಿಲ್ಲರೆ ವ್ಯಾಪಾರ...ಹೀಗೆ ಸಾಮಾನ್ಯ ಜನಜೀವನಕ್ಕೆ ಅನಿವಾರ್ಯವಾದ ಎಲ್ಲ ದೊಡ್ಡ ಮತ್ತು ಸಣ್ಣ ಕ್ಷೇತ್ರಗಳಲ್ಲಿನ ಕೊಡುಕೊಳ್ಳುವಿಕೆಯಲ್ಲಿ ಆದಾಯ ತೆರಿಗೆಯನ್ನು ಉದ್ದೇಶಪೂರ್ವಕವಾಗಿಯೇ ತಪ್ಪಿಸಲಾಗುತ್ತದೆ. ಸರ್ಕಾರಕ್ಕೆ ತೋರಿಸುವ ಮತ್ತು ಬಚ್ಚಿಡುವ ಅಂದರೆ ರಾಮನ ಲೆಕ್ಕ ಮತ್ತು ಕೃಷ್ಣನ ಲೆಕ್ಕಗಳನ್ನು ಇವರೆಲ್ಲರೂ ಬೇಕೆಂದೇ ಸೃಷ್ಟಿಸುತ್ತಾರೆ.

ಇದಕ್ಕೆ ಲೆಕ್ಕ ಪರಿಣತರೇ ಖುದ್ದು ಸಹಕರಿಸಿ ಎಲ್ಲೆಲ್ಲಿ ಲೆಕ್ಕ ತಪ್ಪಿಸಬೇಕೆಂಬುದನ್ನು ಹೇಳಿಕೊಡುತ್ತಾರೆ. ಯಾವಾಗ ಒಬ್ಬ ವ್ಯಾಪಾರಸ್ಥ ಅಥವಾ ಉದ್ದಿಮೆದಾರ ತಾನು ಗಳಿಸಿದ ಆದಾಯಕ್ಕೆ ಲೆಕ್ಕ ತೋರಿಸದೇ ವ್ಯಾಪಾರ ಮಾಡುತ್ತಾನೆಯೋ ಆ ಕ್ಷಣದಲ್ಲೇ ಕಪ್ಪುಹಣ ಜನ್ಮ ತಾಳುತ್ತದೆ. ಹೀಗಾಗಿ ಶ್ರೀಸಾಮಾನ್ಯರಾದಿಯಾಗಿ ಎಲ್ಲ ವರ್ಗದ ವ್ಯಾಪಾರಿಗಳು, ಮಾರಾಟಗಾರರು, ಹಂಚಿಕೆದಾರರು, ವ್ಯವಹಾರಸ್ಥರು ಇವತ್ತು ಕಪ್ಪುಹಣ ಎಂಬ ಅನಿಷ್ಟದ ಹುಟ್ಟಿಗೆ ಕಾರಣರಾಗಿದ್ದಾರೆ.

ರಾಜಕಾರಣಿಗಳು ಹಾಗೂ ಕಂಪೆನಿಗಳ ಹಗರಣದ ಸರಮಾಲೆಗಳಂತೂ ಲೆಕ್ಕಕ್ಕೇ ಇಲ್ಲ. ನೆಹರೂ ಕಾಲದಿಂದಲೂ ಇದ್ದ ಇಂತಹ ಹಗರಣಗಳ ಸರಮಾಲೆ ಈಗ ಅಗಣಿತ ಸ್ವರೂಪ ಪಡೆದುಕೊಂಡಿದೆ. ಅದರಲ್ಲೂ  2ಜಿ ರೇಡಿಯೊ ತರಂಗಾಂತರ ಪರವಾನಗಿ ಹಂಚಿಕೆ ಹಗರಣ, ಗಣಿ ಹಗರಣ, ನಕಲಿ ಛಾಪಾ ಕಾಗದ ಹಗರಣಗಳಂತಹ ಪ್ರಸಂಗಗಳು ಎಷ್ಟೊಂದು ದೊಡ್ಡ ಮೊತ್ತದ ಹಗರಣಗಳು ಎಂಬುದಕ್ಕೆ ಸಾಂಕೇತಿಕವಾಗಿವೆ.

ತೆರಿಗೆ ತಪ್ಪಿಸುವವರು ಹೇಗಿರುತ್ತಾರೆ ಎಂಬುದಕ್ಕೆ ಪುಣೆಯ ಹಸನ್ ಅಲಿಯಂಥವರು ನಮ್ಮ ಕಣ್ಣಿಗೆ ಗೋಚರಿಸುತ್ತಾರೆ. ರಾಜಕಾರಣಿಗಳು ತಾವು ಗಳಿಸಿದ ಮೋಸದ ಹಣವನ್ನೆಲ್ಲಾ ಸುರಕ್ಷಿತವಾಗಿ ಇಡಲು ಆರಿಸಿಕೊಳ್ಳುವುದು ಸ್ವಿಸ್ ಬ್ಯಾಂಕ್ ಅನ್ನೇ. ಅಲ್ಲಿನ ಬ್ಯಾಂಕುಗಳು ಇವರ ಪಾಲಿಗೆ ಸ್ವರ್ಗ ಸಮಾನ. ಹೀಗಾಗಿ ಸರಿ ಸುಮಾರು 30 ಸಾವಿರ ಲಕ್ಷ ಕೋಟಿ ರೂಪಾಯಿಗಳನ್ನು ಭಾರತೀಯರು ಸ್ವಿಸ್ ಬ್ಯಾಂಕ್‌ನಲ್ಲಿ ಇರಿಸಿದ್ದಾರೆ ಎಂದು ಅಂದಾಜಿಸಲಾಗಿದೆ.

ಈ ಬೃಹತ್ ಮೊತ್ತವು ಭಾರತದ ಪ್ರತಿಯೊಬ್ಬ ಪ್ರಜೆಯ ಹಣ. ಇದನ್ನು ಭಾರತಕ್ಕೆ ವಾಪಸು ತರುವುದು ಯಾವುದೇ ಸರ್ಕಾರದ ಆದ್ಯ ಕರ್ತವ್ಯ. ಆದರೇನು ಮಾಡುವುದು? ಈ ಕಪ್ಪು ಹಣವೆಲ್ಲಾ ಆಳುವ ಪ್ರತಿನಿಧಿಗಳದ್ದೇ ಆಗಿರುವುದರಿಂದ ಅವರ‌್ಯಾರಿಗೂ ಇದನ್ನು ವಾಪಸು ತರುವ ಆಲೋಚನೆ ಸುಲಭಕ್ಕೆ ರುಚಿಸುತ್ತಿಲ್ಲ. ಆದಾಗ್ಯೂ ಒಂದೊಮ್ಮೆ ಈ ಹಣವನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿ ಅದನ್ನು ರಾಷ್ಟ್ರದ ಅಭ್ಯುದಯಕ್ಕೆ ಬಳಸಿದ್ದೇ ಆದರೆ ಬಹುಶಃ ಯಾರೂ ಇದಕ್ಕೆ ತಕರಾರು ಒಡ್ಡುವುದಿಲ್ಲ ಎಂದೆನಿಸುತ್ತದೆ.

ಕಪ್ಪುಹಣವನ್ನು ಹೇಗೆ ತಪ್ಪಿಸಬಹುದು?
ಲಂಚದ ಹಾವಳಿಯನ್ನು ತಪ್ಪಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧೀನ ಲಂಚ ನಿರೋಧಕ ಸಂಸ್ಥೆಗಳು ನಿರತವಾಗಿದ್ದರೂ ಲಂಚವನ್ನು ತಪ್ಪಿಸುವುದು ಸಾಧ್ಯವಾಗಿಲ್ಲ. ಕೆಳದರ್ಜೆಯ ಸಾಮಾನ್ಯರ ಲಂಚಗುಳಿತನವನ್ನು ತಪ್ಪಿಸಲು ಮುಂದುವರೆದ ದೇಶಗಳಲ್ಲಿ ಇರುವಂತಹ `ಕನ್ಸಲ್ಟಿಂಗ್ ಸರ್ವೀಸ್ ಏಜೆನ್ಸೀಸ್` ಅಥವಾ ಹೊರಗುತ್ತಿಗೆ ಪದ್ಧತಿಯನ್ನು ಪರಿಚಯ ಮಾಡುವುದರಿಂದ ಸಾಧ್ಯವಾದಷ್ಟು ಮಟ್ಟಿಗೆ ಲಂಚವನ್ನು ತಪ್ಪಿಸಬಹುದಾಗಿದೆ.

ಉದಾಹರಣೆಗೆ ಮೊದಲು ನಾವು ಒಂದು ಪಾಸ್‌ಪೋರ್ಟ್ ಪಡೆಯಲು ಅಥವಾ ನವೀಕರಿಸಲು ಕಚೇರಿಗಳಲ್ಲಿ ಲಂಚ ಕೊಡುತ್ತಿದ್ದೆವು. ಇದೊಂದು ಪದ್ಧತಿಯಾಗಿಯೇ ಇತ್ತು. ಈಗ ಪಾಸ್  ಪೋರ್ಟ್ ಲೈಸೆನ್ಸ್ ನವೀಕರಣದಂತಹ ಪ್ರಕ್ರಿಯೆಗಳನ್ನು `ಬ್ಯಾಂಗಲೋರ್ ಒನ್` ಎನ್ನುವ ಹೊರಗುತ್ತಿಗೆ ಸಂಸ್ಥೆಗೆ ವಹಿಸಿರುವುದರಿಂದ `ಬ್ಯಾಂಗಲೋರ್ ಒನ್` ಕರಾರುವಾಕ್ಕು ಸಮಯದಲ್ಲಿ ಪಾಸ್‌ಪೋರ್ಟ್ ವಿತರಣೆ ಮಾಡುತ್ತದೆ. ಆದರೆ ಈ ಪ್ರಕ್ರಿಯೆಗೆ ಪ್ರೊಸೆಸ್ ಛಾರ್ಜ್ ಅಥವಾ ಫೀ ಎಂದು 500 ರೂಪಾಯಿಗಳನ್ನು ಪಡೆಯಲಾಗುತ್ತದೆ.

ಒಂದು ವೇಳೆ ನಾವು ಇದನ್ನು ಲಂಚದ ಹಣ ಎಂದೇನಾದರೂ ಕೊಟ್ಟಿದ್ದರೆ ಅದು ಕಪ್ಪಹಣದ ಸೃಷ್ಟಿಗೆ ಕಾರಣವಾಗುತ್ತಿತ್ತು. ಅದನ್ನೇ ಹೊರಗುತ್ತಿಗೆ ಏಜೆನ್ಸಿಗೆ ನೀಡಿದಾಗ ಅವರು ಇದಕ್ಕೆ ರಸೀದಿ ಕೊಡುತ್ತಾರೆ. ಆಗ ಇದು ಲಂಚದ ಹಣವಾಗಿ ಕಪ್ಪು ಪಟ್ಟಿಗೆ ಸೇರದೆ ಹೊರಗುಳಿಯುತ್ತದೆ.

ಯಾವುದಾದರೂ ನ್ಯಾಷನಲ್ ಬ್ಯಾಂಕಿನಲ್ಲಿ ನೀವು ಸಾಲ ಪಡೆಯಬೇಕೆಂದು ಅರ್ಜಿ ಹಾಕಿದರೆ ಅಂತಹ ಅರ್ಜಿಯ ಪ್ರೊಸೆಸ್ಸಿಂಗ್‌ಗೆ ಕನಿಷ್ಠ ಒಂದು ತಿಂಗಳಾದರೂ ಹಿಡಿಯುತ್ತದೆ. ಅದೇ ಐಸಿಐಸಿಐನಂತಹ ಖಾಸಗಿ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಿದಾಗ ಅದು ಕೇವಲ 2-3 ದಿನಗಳಲ್ಲೇ ಮುಗಿದುಹೋಗುತ್ತದೆ. ಈ ಪ್ರೊಸೆಸ್ಸಿಂಗ್ ಪರಿಶೀಲನೆಗೆ ಖಾಸಗಿ ಬ್ಯಾಂಕುಗಳು ಹೊರಗುತ್ತಿಗೆ ಸೇವೆಯನ್ನು ಆಧರಿಸುತ್ತವೆ ಮತ್ತು ಅದಕ್ಕಾಗಿ ಪ್ರತ್ಯೇಕ ಶುಲ್ಕ ವಿಧಿಸುತ್ತವೆ. ಈ ಶುಲ್ಕಕ್ಕೆ ಅವು ರಸೀದಿಯನ್ನೂ ನೀಡುವುದರಿಂದ ಅದು ಲೆಕ್ಕದಲ್ಲಿಯೇ ಸೇರುತ್ತದೆ. ಲೆಕ್ಕ ತಪ್ಪಿಸಿಕೊಳ್ಳಲು ಬರುವುದಿಲ್ಲ.

ಈ ರೀತಿಯಾಗಿ ಸಂಘ ಸಂಸ್ಥೆಗಳು ತಮ್ಮ ಕೆಲಸಗಳನ್ನು ಒಂದೊಂದಾಗಿ ಹೊರಗುತ್ತಿಗೆ ಸಂಸ್ಥೆಗಳಿಗೆ ಅಥವಾ `ಕನ್ಸಲ್ಟಿಂಗ್ ಸರ್ವೀಸ್ ಏಜೆನ್ಸೀಸ್`ಗಳಿಗೆ ಕೊಡುವುದರಿಂದ ಲಂಚ ಎನ್ನುವ ಶಬ್ದವನ್ನು ದುರ್ಬಲಗೊಳಿಸಿ `ಪ್ರೊಸೆಸ್ ಛಾರ್ಜ್` ಅಂತಾ ಮಾರ್ಪಡಿಸಬಹುದು. ಇದನ್ನು ಸಣ್ಣಪುಟ್ಟ ಸರ್ಕಾರಿ ಕೆಲಸಗಳಿಗೂ ಅನ್ವಯಿಸಬಹುದಾಗಿದೆ.

ಇನ್ನು ಸರ್ಕಾರಿ ಕಚೇರಿಗಳನ್ನು ಬ್ಯಾಂಕುಗಳ ತರಹ ಕಾರ್ಪೊರೇಟ್ ಪದ್ಧತಿಗೆ ಒಳಪಡಿಸುವ ಮೂಲಕ ಕರಾರುವಕ್ಕಾಗಿ ಕೆಲಸ ಮಾಡುವ ಹಾಗೆ ಮಾಡಿದರೆ ಅಲ್ಲೂ ಕೂಡಾ ಲಂಚವನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಈಗ `ಸಕಾಲ`ವನ್ನು ಪರಿಚಯಿಸಿದೆ. ಅಂದರೆ ಸಲಹಾ ಪದ್ಧತಿಯನ್ನು ಅಳವಡಿಸುವುದರಿಂದ ಲಂಚದ ಪದ್ಧತಿಯನ್ನು ಮತ್ತು ಇದರ ವ್ಯಾಖ್ಯಾನವನ್ನು ಧಾರಾಳವಾಗಿ ಬದಲಿಸಬಹುದು. ಆದರೆ ಇದು ಎಷ್ಟರಮಟ್ಟಿಗೆ ಫಲಿತಾಂಶ ನೀಡುತ್ತದೆ ಎಂಬುದೇ ನಮ್ಮೆದುರು ಇರುವ ಬಹು ದೊಡ್ಡ ಪ್ರಶ್ನೆ.

ತೆರಿಗೆಗಳ್ಳತನ ತಪ್ಪಿಸುವವರು
ಶೇಕಡ 99ರಷ್ಟು ಜನರು ಪ್ರತ್ಯಕ್ಷವಾಗಿಯೋ ಅಥವಾ ಅಪ್ರತ್ಯಕ್ಷವಾಗಿಯೋ ಕಪ್ಪುಹಣದ ಉತ್ಪಾದಕರೇ ಆಗಿದ್ದಾರೆ. ತೆರಿಗೆಗಳ್ಳತನದಿಂದ ತಪ್ಪಿಸಿಕೊಳ್ಳುವವರಲ್ಲಿ ಕೇವಲ ಹಣವಂತರೇ ಸೇರಿಲ್ಲ.

ಸಾಮಾನ್ಯರೂ ತಮಗೆ ಅರಿವಿಲ್ಲದೆ ಈ ವಿಷವರ್ತುಲದಲ್ಲಿ ಭಾಗಿಯಾಗುತ್ತಿದ್ದಾರೆ. ಆದ್ದರಿಂದ ಸರ್ಕಾರ ಈ ನಿಟ್ಟಿನಲ್ಲಿ ಭಿನ್ನ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಆದಾಯ ತೆರಿಗೆಯನ್ನು ಅಪ್ರತ್ಯಕ್ಷ ರೂಪದಲ್ಲಿ ಹೇರುವ ಚಿಂತನೆ ನಡೆಸಬಹುದು.

ಭಾರತದಲ್ಲಿ 2011-12ರಲ್ಲಿ 1.69 ಲಕ್ಷ ಕೋಟಿ ರೂಪಾಯಿಗಳ ವೈಯಕ್ತಿಕ ಆದಾಯ ತೆರಿಗೆಯನ್ನು ಸಂಗ್ರಹಿಸಲಾಗಿದೆ. ಒಂದು ವೇಳೆ ವೈಯಕ್ತಿಕ ಆದಾಯ ತೆರಿಗೆಯನ್ನು ರದ್ದುಗೊಳಿಸಿ ಅದನ್ನೇ ಅಪ್ರತ್ಯಕ್ಷವಾಗಿ ಆಸ್ತಿ ನೋಂದಣಿ ತೆರಿಗೆ ಎಂದು ವಿಧಿಸಿದರೆ ಅಂದಾಜು ಶೇಕಡ 6ರಂತೆ 1.8 ಲಕ್ಷ ಕೋಟಿ ಸಂಗ್ರಹಿಸಬಹುದು.

ಇದನ್ನು ಮೂಲದಲ್ಲಿಯೇ ಅಂದರೆ ನೋಂದಣಿ ಸಮಯದಲ್ಲಿಯೇ ಸಂಗ್ರಹಿಸುವುದರಿಂದ ಮತ್ತು ಆಸ್ತಿಗಳ ಬೆಲೆಯನ್ನು ಸರ್ಕಾರದವರೇ ನಿಗದಿಪಡಿಸುವುದರಿಂದ ಆಸ್ತಿ ತೆರಿಗೆಯನ್ನು ತಪ್ಪಿಸುವ ಪ್ರಮೇಯವೇ ಇರುವುದಿಲ್ಲ. ಈ ಆಸ್ತಿ ನೋಂದಾವಣಿ ಸಮಯದಲ್ಲಿ ಕಡಿಮೆ ಬೆಲೆಯಲ್ಲಿ ತೋರಿಸುವುದು ಆದಾಯ ತೆರಿಗೆಯನ್ನು ತಪ್ಪಿಸುವುದಕ್ಕಾಗಿಯೇ ಹೊರತು ಸ್ಟ್ಯಾಂಪ್ ಡ್ಯೂಟಿ ತಪ್ಪಿಸುವುದಕ್ಕಂತೂ ಅಲ್ಲ.

ಇದೇ ರೀತಿಯಾಗಿ ನಮ್ಮಲ್ಲಿ ಬಳಕೆಯಾದ ವಾಹನಗಳನ್ನು ಮಾಲೀಕತ್ವದ ಹೆಸರು ಬದಲಾಯಿಸುವಾಗ ಶೇಕಡ 10ರಷ್ಟು ತೆರಿಗೆ ವಿಧಿಸಿದರೆ ಇಷ್ಟೇ ಮೊತ್ತವನ್ನು `ಹಸ್ತಾಂತರ ತೆರಿಗೆ` ಎಂದು ಸಂಗ್ರಹ ಮಾಡಬಹುದು. ಇಲ್ಲಿಯೂ ಕೂಡಾ ಮೂಲದಲ್ಲಿಯೇ ತೆರಿಗೆಯನ್ನು ಸಂಗ್ರಹಿಸುವುದರಿಂದ ತೆರಿಗೆಗಳ್ಳತನದ ಪ್ರಶ್ನೆಯೇ ಉದ್ಭವಿಸುವುದಿಲ್ಲ.

ತೆರಿಗೆಗಳ್ಳತನ ಇಲ್ಲವೆಂದ ಮೇಲೆ ಕಪ್ಪುಹಣದ ಪ್ರಶ್ನೆಯೇ ಇರುವುದಿಲ್ಲ. ಇವೆರಡೂ ಸಣ್ಣ ಉದಾಹರಣೆಯಷ್ಟೇ. ಸರ್ಕಾರವು ಈ ನಿಟ್ಟಿನಲ್ಲಿ ಚಿಂತಿಸಿ ಆದಾಯ ತೆರಿಗೆಯನ್ನು ಹಂಚುವಾಗ ಅಂದರೆ ಮೊದಲು ವೈಯಕ್ತಿಕ ಆದಾಯ ತೆರಿಗೆಯನ್ನು ಅನಂತರ ಕಾರ್ಪೋರೇಟ್ ತೆರಿಗೆಯನ್ನು ರದ್ದುಗೊಳಿಸಿ ಅಷ್ಟೇ ಸಮಾನವಾದ ಅಪ್ರತ್ಯಕ್ಷ ತೆರಿಗೆಯನ್ನು ವಿಧಿಸಿ ಕಪ್ಪುಹಣ ತಡೆಗೆ ನಾಂದಿ ಹಾಡಬಹುದು.

ಭಾರತವು ಅಮೆರಿಕ ಸರ್ಕಾರದಿಂದ ಏನಾದರೂ ಲಾಭ ಪಡೆಯಬೇಕೆಂದರೆ ಅಲ್ಲಿರುವ ಕನ್ಸಲ್ಟಿಂಗ್ ಫರ್ಮ್ಸಗಳ ಉಪಯೋಗದಿಂದ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತದೆ ಮತ್ತು ಅದಕ್ಕೆ ಕನ್ಸಲ್ಟಿಂಗ್ ಫೀ ಎಂದು ಶುಲ್ಕ ಭರಿಸುತ್ತದೆ. ಇದಕ್ಕಾಗಿಯೇ ಅಲ್ಲಿ ಅಧಿಕೃತ ಕನ್ಸಲ್ಟಿಂಗ್ ಸಂಸ್ಥೆಗಳಿವೆ. ಅಮೆರಿಕ ಸರ್ಕಾರ ಇವುಗಳಿಗೆ ಅಧಿಕೃತ ಮಾನ್ಯತೆಯನ್ನೂ ನೀಡಿದೆ. ಹೀಗಾಗಿ ಇವುಗಳನ್ನು ಅಲ್ಲಿ `ಲಾಬಿಯಿಂಗ್ ಫರ್ಮ್ಸ` ಎಂದೇ ಕರೆಯಲಾಗುತ್ತದೆ.

ನೀರಾ ರಾಡಿಯಾ ಹಗರಣದಲ್ಲಿ ಆದದ್ದು ಇಂತಹುದೇ ಪ್ರಕ್ರಿಯೆ. ಆದರೆ ಭಾರತದಲ್ಲಿ ಈ ಪ್ರಕ್ರಿಯೆಗೆ ಮಾನ್ಯತೆ ಇಲ್ಲವಾದ್ದರಿಂದ ಅದು ಲಂಚದ ಹಗರಣ ಎನಿಸಿಕೊಂಡಿತು.
ಭಾರತ ಮತ್ತು ಅಮೆರಿಕ ನಡುವಣ ನಾಗರಿಕ ಪರಮಾಣು ಒಪ್ಪಂದದ ಪ್ರಕ್ರಿಯೆಯಲ್ಲಿ ಭಾರತ ಅಮೆರಿಕದ ಬಾರ್ಬರ್ ಗ್ರಿಫಿತ್ ಅಂಡ್ ರೋಜರ್ಸ್‌ ಎಂಬ ಸಂಸ್ಥೆಯ ಮುಖಾಂತರ (ಬಿಜಿಆರ್) ವ್ಯವಹರಿಸಿತ್ತು.

ಬಿಜಿಆರ್ ಅಮೆರಿಕ ಸರ್ಕಾರಕ್ಕೆ ಭಾರತದ ಪರ ಮಧ್ಯಸ್ಥಗಾರನಾಗಿ ವ್ಯವಹಾರ ನಡೆಸಿತು. ಇದಕ್ಕಾಗಿ ಭಾರತ ಬಿಜಿಆರ್ ಸಂಸ್ಥೆಗೆ ವರ್ಷವೊಂದಕ್ಕೆ 3.4 ಕೋಟಿ ರೂಪಾಯಿಗಳನ್ನು ನೀಡಿದೆ. ಇದನ್ನು ಅಮೆರಿಕದ `ಮೇಲ್ ಟುಡೆ` ಪತ್ರಿಕೆಯೇ ವಿವರಿಸಿದೆ.

ಅಂದರೆ ಇಂತಹ ಕನ್ಸಲ್ಟಿಂಗ್ ಸಂಸ್ಥೆಗಳು ಪ್ರೊಸೆಸ್ಸಿಂಗ್ ಕಾರ್ಯವನ್ನು ನಡೆಸಿ ಅದಕ್ಕೆ ಶುಲ್ಕ ಪಡೆದಾಗ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯೇನೂ ಆಗುವುದಿಲ್ಲ. ಪರಿಶೀಲನೆ, ಪರವಾನಗಿ ಅಥವಾ ರದ್ದುಗೊಳಿಸುವ ಅಂತಿಮ ಅಧಿಕಾರ ಮೂಲ ಸಂಸ್ಥೆಯಾದ ಸರ್ಕಾರದ ಬಳಿಯೇ ಇರುತ್ತದೆ. ಈ ದಿಸೆಯಲ್ಲಿ ಗಂಭೀರ ಚಿಂತನೆ ನಡೆಯಬೇಕಷ್ಟೇ.

ಕೃಪೆ : ಪ್ರಜಾವಾಣಿ 

Sunday, June 17, 2012

ದಲಿತ ರಾಜಕಾರಣಕ್ಕೆ ಯಾರು ಮಾದರಿ? - ದಿನೇಶ ಅಮೀನಮಟ್ಟು

`ನಾ ವು ರಾಜಕೀಯ ಕ್ಷೇತ್ರದಲ್ಲಿ ಸಮಾನತೆ ಪಡೆಯಲಿದ್ದೇವೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಕ್ಷೇತ್ರದ ಅಸಮಾನತೆ ಎಂದಿನಂತೆ ಮುಂದುವರಿಯಲಿದೆ. ಈ ವಿರೋಧಾಭಾಸವನ್ನು ನಿವಾರಿಸಿಕೊಳ್ಳದೆ ಹೋದರೆ ಅಸಮಾನತೆಯಿಂದ ನೊಂದವರು ಮುಂದೊಂದು ದಿನ ರಾಜಕೀಯ ಪ್ರಜಾಪ್ರಭುತ್ವವನ್ನು ಕಿತ್ತೊಗೆಯಲಿದ್ದಾರೆ` ಎಂದು 1950ರ ಜನವರಿ 26ರಂದು ಭಾರತ ಸಂವಿಧಾನವನ್ನು ಒಪ್ಪಿಕೊಂಡ ದಿನವೇ ಬಿ.ಆರ್.ಅಂಬೇಡ್ಕರ್ ಹೇಳಿದ್ದರು.

ಸಮಾನತೆಯನ್ನು ಸಾರುವ ಪ್ರಜಾಪ್ರಭುತ್ವ ಮತ್ತು ಅಸಮಾನತೆಯೇ ಸಾರವಾಗಿರುವ ಸಾಮಾಜಿಕ ವ್ಯವಸ್ಥೆಯ ನಡುವಿನ ವೈರುಧ್ಯದ ಅರಿವು ಅವರಿಗಿದ್ದ ಕಾರಣದಿಂದಲೇ ಕಟ್ಟಾ ಪ್ರಜಾಪ್ರಭುತ್ವ ಪ್ರೇಮಿಯಾಗಿದ್ದ ಅಂಬೇಡ್ಕರ್ ಕೂಡಾ ಇಂತಹ ಕಟುಮಾತುಗಳನ್ನು ಆಡಿದ್ದರು. ಅರವತ್ತೆರಡು ವರ್ಷಗಳ ನಂತರವಾದರೂ ಪರಿಸ್ಥಿತಿ ಬದಲಾಗಿದೆಯೇ?
ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲವೇ ಎಲ್ಲವನ್ನೂ ನಿರ್ಣಯಿಸುತ್ತದೆ ಎಂದು ಹೇಳುವವರಿದ್ದಾರೆ.

ರಾಜಕೀಯ ನಾಯಕರ ಯಶಸ್ಸಿನಲ್ಲಿ ಜಾತಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ವಿಶ್ಲೇಷಿಸುವವರಿದ್ದಾರೆ. ಹೀಗಿದ್ದರೂ ದೇಶದ ಜನಸಂಖ್ಯೆಯಲ್ಲಿ ಶೇಕಡಾ 16.2ರಷ್ಟಿರುವ ಪರಿಶಿಷ್ಟ ಜಾತಿಯವರಲ್ಲಿ ಯಾರೊಬ್ಬರೂ ಪ್ರಧಾನಮಂತ್ರಿ ಆಗಲಿಲ್ಲ. ಪ್ರಧಾನಿಯಾಗುವ ಅರ್ಹತೆಯನ್ನು ಸಾಧನೆಯ ಬಲದಿಂದಲೇ ಹೊಂದಿದ್ದ ಬಾಬು ಜಗಜೀವನರಾಂ ಅವರಿಗೆ ಪ್ರಧಾನಿ ಪಟ್ಟದ ಸಮೀಪವೂ ಸುಳಿಯಲೂ ಸಾಧ್ಯವಾಗಲಿಲ್ಲ.


ಆಂಧ್ರಪ್ರದೇಶ (ಸಂಜೀವಯ್ಯ), ರಾಜಸ್ತಾನ (ಜಗನ್ನಾಥ ಪಹಾಡಿಯಾ), ಉತ್ತರ ಪ್ರದೇಶ (ಮಾಯಾವತಿ), ಬಿಹಾರ (ರಾಮಸುಂದರ ದಾಸ್) ಮತ್ತು ಮಹಾರಾಷ್ಟ್ರವನ್ನು (ಸುಶೀಲ್‌ಕುಮಾರ್ ಶಿಂಧೆ) ಹೊರತುಪಡಿಸಿದರೆ ಬೇರೆ ಯಾವ ರಾಜ್ಯಗಳಲ್ಲಿಯೂ ದಲಿತರು ಮುಖ್ಯಮಂತ್ರಿಯಾಗಲಿಲ್ಲ. ಹಿಮಾಚಲಪ್ರದೇಶ, ಪಶ್ಚಿಮ ಬಂಗಾಳ, ಹರಿಯಾಣ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿದ್ದರೂ ಆ ರಾಜ್ಯಗಳಲ್ಲಿ ಯಾರೂ ಮುಖ್ಯಮಂತ್ರಿ ಆಗಲಿಲ್ಲ.

ಮಹಾರಾಷ್ಟ್ರವನ್ನು ಹೊರತುಪಡಿಸಿದರೆ ದಲಿತ ಚಳವಳಿ ಹೆಚ್ಚು ಸಕ್ರಿಯವಾಗಿರುವ ಕರ್ನಾಟಕದಲ್ಲಿಯೂ ದಲಿತರೂ ಮುಖ್ಯಮಂತ್ರಿಯಾಗಲಿಲ್ಲ. ಪ್ರಧಾನಿ ಇಲ್ಲವೇ ಮುಖ್ಯಮಂತ್ರಿಗಳ ಸ್ಥಾನ ಒತ್ತಟ್ಟಿಗಿರಲಿ, ಉತ್ತರಪ್ರದೇಶವೊಂದನ್ನು ಹೊರತುಪಡಿಸಿ ಬೇರೆ ಯಾವ ರಾಜ್ಯಗಳ ರಾಜಕೀಯದಲ್ಲಿಯೂ ದಲಿತರು ನಿರ್ಣಾಯಕ ಸ್ಥಾನದಲ್ಲಿ ಇಲ್ಲ.

ಇವೆಲ್ಲವನ್ನು ಮೊದಲೇ ತಿಳಿದುಕೊಂಡಿದ್ದ ಪ್ರವಾದಿಯಂತೆ ಅಂಬೇಡ್ಕರ್ ತಮ್ಮ ಜೀವಿತಾವಧಿಯಲ್ಲಿ ಮಾತನಾಡಿದ್ದರು.

1952ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸ ಪಕ್ಷವೊಂದನ್ನು ಕಟ್ಟಿ ಚುನಾವಣೆ ಎದುರಿಸಿದ ಅವರು ಜಲಂಧರ್ ನಡೆದ ಪ್ರಚಾರಸಭೆಯಲ್ಲಿ ದಲಿತ ರಾಜಕೀಯದ ಭವಿಷ್ಯದ ಹೊಳಹುಗಳನ್ನು ನೀಡಿದ್ದರು. ಕಾಂಗ್ರೆಸ್ ಪಕ್ಷದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ದಲಿತರನ್ನು ಅವರು `ಕಾಂಗ್ರೆಸ್‌ನ ಗುಲಾಮರು` ಎಂದು ಚುಚ್ಚಿದ್ದರು. `ಬಹಳಷ್ಟು ಅಸ್ಪೃಶ್ಯರು ಕಾಂಗ್ರೆಸ್ ಟಿಕೆಟ್‌ನಿಂದ ಗೆದ್ದು ಲೋಕಸಭೆ ಪ್ರವೇಶಿಸಿದ್ದಾರೆ.


ಅಂತಹ 30 ಸದಸ್ಯರಿದ್ದಾರೆ. ಇವರು ಎಂದಾದರೂ ಸದನದಲ್ಲಿ ಯಾವುದಾದರೂ ಪ್ರಶ್ನೆಗಳನ್ನು ಕೇಳಿದ್ದಾರೆಯೇ? ಯಾವುದಾದರೂ ಗೊತ್ತುವಳಿ ಇಲ್ಲವೇ ಮಸೂದೆಯನ್ನು ಮಂಡಿಸಿದ್ದಾರೆಯೇ? ತಮಗೆ ಅನಿಸಿದ್ದನ್ನು ಮುಲಾಜಿಲ್ಲದೆ ಹೇಳುವ ಧೈರ್ಯ ತೋರಿದ್ದಾರೆಯೇ? ಕಾಂಗ್ರೆಸ್ ಪಕ್ಷಕ್ಕೆ ಅರ್ಹ ದಲಿತರು ಬೇಕಾಗಿಲ್ಲ, ಗುಲಾಮರು ಬೇಕಾಗಿದೆ. ಇಂತಹ ಪಕ್ಷದ ಗುಲಾಮರು ದಲಿತರ ಪ್ರತಿನಿಧಿಗಳು ಹೇಗಾಗುತ್ತಾರೆ?` ಎಂದು ಅವರು ಪ್ರಶ್ನಿಸಿದ್ದರು.


ಸ್ವಾತಂತ್ರ್ಯಾನಂತರದ ಭಾರತದಲ್ಲಿ ರಾಜಕೀಯವಾಗಿ ದಲಿತರ ಸ್ಥಿತಿ ಏನಾಗಲಿದೆ ಎಂಬ ಸ್ಪಷ್ಟ ಅರಿವು ಅಂಬೇಡ್ಕರ್ ಅವರಿಗಿತ್ತು. ಅದಕ್ಕಾಗಿಯೇ ಅವರು `ದಲಿತ ಪ್ರತಿನಿಧಿಗಳನ್ನು ದಲಿತ ಮತದಾರರೇ ಆಯ್ಕೆ ಮಾಡುವಂತಹ ಪ್ರತ್ಯೇಕ ಮತದಾನದ ಹಕ್ಕನ್ನು ನೀಡುವಂತೆ ದುಂಡುಮೇಜಿನ ಪರಿಷತ್‌ನಲ್ಲಿ ವಾದಿಸಿದ್ದರು. ದಲಿತ ಮತದಾರರು ಉಳಿದೆಲ್ಲರ ಜತೆಯಲ್ಲಿ ಸೇರಿ ಸಾಮಾನ್ಯ ಅಭ್ಯರ್ಥಿಗೆ ಮತದಾನ ಮಾಡುವ ಜತೆಯಲ್ಲಿ, ಕೇವಲ ತಮ್ಮ ಮತದಿಂದಲೇ ದಲಿತ ಅಭ್ಯರ್ಥಿಯನ್ನು ಚುನಾಯಿಸುವ ಅಧಿಕಾರವೂ ಇರಬೇಕು.


ಇಲ್ಲದೆ ಹೋದರೆ ದಲಿತ ಜನಪ್ರತಿನಿಧಿಗಳು ರಾಜಕೀಯ ಪಕ್ಷಗಳ ಗುಲಾಮರಾಗುತ್ತಾರೆ` ಎಂದು ಅವರು ಪ್ರತಿಪಾದಿಸಿದ್ದರು. ಕೊನೆಗೂ ಬ್ರಿಟಿಷ್ ಪ್ರಧಾನಿ ರಾಮ್ಸೆ ಮ್ಯಾಕ್‌ಡೊನಾಲ್ಡ್ ಅಂಬೇಡ್ಕರ್ ಅಭಿಪ್ರಾಯವನ್ನು ಒಪ್ಪಿಕೊಂಡರೂ ಗಾಂಧೀಜಿಯವರ ವಿರೋಧದಿಂದಾಗಿ ಅದು ಕಾರ್ಯರೂಪಕ್ಕೆ ಬರಲಿಲ್ಲ.

ದಲಿತರಿಗೆ ಪ್ರತ್ಯೇಕ ಮತದಾನದ ಹಕ್ಕು ನೀಡುವುದನ್ನು ವಿರೋಧಿಸಿ ಗಾಂಧೀಜಿ ಪ್ರಾರಂಭಿಸಿದ್ದ ಆಮರಣಾಂತ ಉಪವಾಸಕ್ಕೆ ಮಣಿದ ಅಂಬೇಡ್ಕರ್ ಒಲ್ಲದ ಮನಸ್ಸಿನಿಂದಲೇ ತಮ್ಮ ಬೇಡಿಕೆಯನ್ನು ಕೈಬಿಟ್ಟು `ಪೂನಾ ಒಪ್ಪಂದ`ಕ್ಕೆ ಸಹಿ ಹಾಕಿದ್ದರು. ಇದರ ಪರಿಣಾಮ ತಿಳಿದುಕೊಳ್ಳಲು ಬಹಳ ಕಾಲವೇನೂ ಬೇಕಾಗಲಿಲ್ಲ. ಸ್ವತಂತ್ರಭಾರತದಲ್ಲಿ ಸ್ವಂತ ಪಕ್ಷ ಕಟ್ಟಿ ಸ್ಪರ್ಧಿಸಿದ್ದ ಎರಡೂ ಚುನಾವಣೆಗಳಲ್ಲಿ ಅಂಬೇಡ್ಕರ್ ಸೋಲಬೇಕಾಯಿತು.


ಈಗಲಾದರೂ ಪರಿಸ್ಥಿತಿ ಬದಲಾಗಿದೆಯೇ? ಬೇರೆಬೇರೆ ರಾಜ್ಯಗಳಲ್ಲಿ ದಲಿತ ಸಮುದಾಯಕ್ಕೆ ಸೇರಿರುವ ಐದು ಮಂದಿ ಮುಖ್ಯಮಂತ್ರಿಗಳಾದರೂ ಅವರಲ್ಲಿ ನಾಲ್ಕು ಮಂದಿ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳು. ಅವರೆಲ್ಲ ಮುಖ್ಯಮಂತ್ರಿಯಾಗಿದ್ದು ಸ್ವಂತ ಬಲದಿಂದ ಅಲ್ಲ, ಕಾಂಗ್ರೆಸ್ ಬೆಂಬಲದಿಂದ. ಇದಕ್ಕೆ ಹೊರತಾದವರೆಂದರೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮಾಯಾವತಿಯವರೊಬ್ಬರೇ.


ಈ ಕಾರಣದಿಂದಲೇ ದಲಿತ ರಾಜಕೀಯದ ಯಶಸ್ವಿ ಮಾದರಿ -ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷದ್ದು ಮಾತ್ರ. ಕಳೆದ ಚುನಾವಣೆಯಲ್ಲಿ ಬಿಎಸ್‌ಪಿ ಪರಾಭವಗೊಂಡಿದ್ದರೂ ತಳ್ಳಿಹಾಕಿ ಬಿಡುವಂತಹ ಪಕ್ಷ ಅದಲ್ಲ ಎನ್ನುವುದು ಅದರ ಬೆಳವಣಿಗೆಯನ್ನು ಗಮನಿಸುತ್ತ ಬಂದವರಿಗೆಲ್ಲರಿಗೂ ಗೊತ್ತು. ಅದರ ಈ ಶಕ್ತಿಯನ್ನು ತಿಳಿದುಕೊಳ್ಳಬೇಕಾದರೆ  ಆ ಪಕ್ಷದ ಸ್ಥಾಪಕರಾದ ಕಾನ್ಸಿರಾಮ್ ಅವರನ್ನು ಮೊದಲು ಅರ್ಥಮಾಡಿಕೊಳ್ಳಬೇಕು.


ಅಂಬೇಡ್ಕರ್ ಅವರ ನಂತರದ ಬಹುಮುಖ್ಯ ದಲಿತ ರಾಜಕೀಯ ನಾಯಕ ಕಾನ್ಸಿರಾಮ್ ಎನ್ನುವುದರಲ್ಲಿ ಅನುಮಾನ ಇಲ್ಲ. ವಿದ್ಯೆಯಲ್ಲಿಯಾಗಲಿ, ವಿದ್ವತ್‌ನಲ್ಲಿಯಾಗಲಿ  ಅಂಬೇಡ್ಕರ್ ಅವರಿಗೆ ಕಾನ್ಸಿರಾಮ್ ಸಮ ಅಲ್ಲ. ಆದರೆ ರಾಜಕೀಯವಾಗಿ ಅಂಬೇಡ್ಕರ್ ಅವರಿಗಿಂತಲೂ ಕಾನ್ಸಿರಾಮ್ ಯಶಸ್ವಿ ರಾಜಕಾರಣಿ.


1918ರಿಂದ 1930ರ ವರೆಗಿನ ಅಂಬೇಡ್ಕರ್ ಅವರ ಜೀವನದ ಮೊದಲ ಘಟ್ಟದಲ್ಲಿ ಬಹಿಷ್ಕೃತ ಹಿತಕರಣೆ ಸಭಾ ಸ್ಥಾಪನೆ, ಮಹಾಡ್ ಸತ್ಯಾಗ್ರಹ, ಪೂನಾದ ಪಾರ್ವತಿ ದೇವಸ್ಥಾನ ಮತ್ತು ನಾಸಿಕ ಕಾಳಾರಾಮ ದೇವಸ್ಥಾನ ಪ್ರವೇಶ ಹೋರಾಟಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಮಾಜಿಕ ಚಳವಳಿಯನ್ನು ಮುನ್ನಡೆಸಿದ್ದ ಅಂಬೇಡ್ಕರ್, ನಂತರ 1930ರಿಂದ 1951ರ ವರೆಗಿನ ಅವಧಿಯಲ್ಲಿ ತಮ್ಮನ್ನು ರಾಜಕೀಯವಾಗಿ ತೊಡಗಿಸಿಕೊಂಡಿದ್ದರು.


ಈ ಅವಧಿಯಲ್ಲಿ ಸ್ವತಂತ್ರ ಕಾರ್ಮಿಕ ಪಕ್ಷ, ಪರಿಶಿಷ್ಟ ಜಾತಿ ಒಕ್ಕೂಟ ಮತ್ತು ಭಾರತೀಯ ರಿಪಬ್ಲಿಕನ್ ಪಕ್ಷ ಎಂಬ ಮೂರು ರಾಜಕೀಯ ಪಕ್ಷಗಳನ್ನೂ ಅವರು ಕಟ್ಟಿದ್ದರು. ಆದರೆ ಅಂಬೇಡ್ಕರ್ ಅವರಿಗೆ ರಾಜಕೀಯ ಯಶಸ್ಸು ಸಿಗಲೇ ಇಲ್ಲ. ಈ ವೈಫಲ್ಯಕ್ಕೆ ಅಂಬೇಡ್ಕರ್ ಅವರ ಕಡು ಸೈದ್ಧಾಂತಿಕ ನಿಷ್ಠೆ ಮತ್ತು ದಲಿತ ಕೇಂದ್ರಿತ ರಾಜಕಾರಣದ ಮಿತಿಯೂ ಕಾರಣವಾಗಿರಬಹುದು. ಇದನ್ನು ಇನ್ನಷ್ಟು ಸ್ಪಷ್ಟಪಡಿಸಿಕೊಳ್ಳಬೇಕಾದರೆ ಕಾನ್ಸಿರಾಮ್ ರಾಜಕಾರಣವನ್ನು ಇನ್ನಷ್ಟು ಒಳಹೊಕ್ಕು ನೋಡಬೇಕಾಗುತ್ತದೆ.


ಶುದ್ಧ ಸೈದ್ಧಾಂತಿಕ ರಾಜಕಾರಣದ ಬಗ್ಗೆ ಕಾನ್ಸಿರಾಮ್ ಅವರಿಗೆ ನಂಬಿಕೆ ಇರಲಿಲ್ಲ ಎಂದು ಹೇಳಲಾಗದು. ಆದರೆ ಅದರ ಬಗ್ಗೆ ಅವರು ಸಾರ್ವಜನಿಕವಾಗಿ ಮಾತನಾಡುತ್ತಿದ್ದದ್ದು ಕಡಿಮೆ. ಅವರದ್ದು ವಾಸ್ತವದ ನೆಲೆಗಟ್ಟಿನ ರಾಜಕಾರಣ. ಈ ಮೂಲಕ ಅವರು ದಲಿತರು ಮತ್ತು ಬಹುಜನರ ನಡುವಿನ ಸಂಬಂಧದ ವ್ಯಾಕರಣವನ್ನೇ ಬದಲಿಸಿದ್ದರು. ಜೀವನದ ಪ್ರಾರಂಭದ ದಿನಗಳಲ್ಲಿ ಅವರು ಮಹಾರಾಷ್ಟ್ರದಲ್ಲಿ ಒಂದಷ್ಟು ಕಾಲ ಭಾರತೀಯ ರಿಪಬ್ಲಿಕನ್ ಪಕ್ಷದ (ಆರ್‌ಪಿಐ) ಜತೆಯಿದ್ದರೂ ಆ ಪಕ್ಷದ ದಲಿತ ಕೇಂದ್ರಿತ ರಾಜಕಾರಣವನ್ನು ಇಷ್ಟಪಡುತ್ತಿರಲಿಲ್ಲ.


ಹಿಂದುಳಿದ ಜಾತಿ ಮತ್ತು ಅಲ್ಪಸಂಖ್ಯಾತ ಸಮುದಾಯ `ಬಹುಜನ ಸಮಾಜ`ದ ಭಾಗವೆಂದೇ ಅವರು ಹೇಳುತ್ತಿದ್ದರು. ಇದರಿಂದಾಗಿ ಅವರು ಪ್ರಾರಂಭದಲ್ಲಿ ಕಟ್ಟಿದ `ಅಖಿಲ ಭಾರತ ಹಿಂದುಳಿದ (ಎಸ್‌ಸಿ, ಎಸ್‌ಟಿ, ಒಬಿಸಿ) ಮತ್ತು ಅಲ್ಪಸಂಖ್ಯಾತ ಸಮುದಾಯದ ನೌಕರರ ಒಕ್ಕೂಟ` (ಬಿಎಎಂಸಿಇಎಫ್) ವಾಗಲಿ, ಅದರ ನಂತರ ಸ್ಥಾಪಿಸಿದ್ದ `ದಲಿತ್ ಶೋಷಿತ್ ಸಮಾಜ್ ಸಂಘರ್ಷ ಸಮಿತಿ, ಇಲ್ಲವೇ ಡಿಎಸ್-4 ಆಗಲಿ ಕೊನೆಗೆ ಸ್ಥಾಪಿಸಿದ ಬಹುಜನ ಸಮಾಜ ಪಕ್ಷವಾಗಲಿ (ಬಿಎಸ್‌ಪಿ) ಕೇವಲ ದಲಿತ ಕೇಂದ್ರಿತ ಸಂಘಟನೆಗಳಾಗಿರಲಿಲ್ಲ.

ಮೀಸಲಾತಿಯ ಕಾರಣದಿಂದಾಗಿ ಎಷ್ಟೋ ಕಡೆ ಹಿಂದುಳಿದ ಜಾತಿಗಳಿಗಿಂತ ದಲಿತರು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ಅವರು ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದರು.  ಬಿಎಸ್‌ಪಿಯ ಬ್ಯಾನರ್, ಪೋಸ್ಟರ್ ಇಲ್ಲವೇ ಲೆಟರ್‌ಹೆಡ್‌ಗಳಲ್ಲಿ ಕಡ್ಡಾಯವಾಗಿ ಅಂಬೇಡ್ಕರ್ ಅವರ ಜತೆಯಲ್ಲಿ ಜ್ಯೋತಿಬಾ ಪುಲೆ, ಸಾಹು ಮಹಾರಾಜ್, ಪೆರಿಯಾರ್ ಮತ್ತು ನಾರಾಯಣ ಗುರುಗಳ ಭಾವಚಿತ್ರ ಅಚ್ಚುಹಾಕಿಸುವುದನ್ನು ಅವರು ಕಡ್ಡಾಯಗೊಳಿಸಿದ್ದರು.


1995ರಲ್ಲಿ ಮುಖ್ಯಮಂತ್ರಿಯಾದ ಮಾಯಾವತಿ ತಮ್ಮ ಬಜೆಟ್‌ನ ಶೇಕಡಾ 27ರಷ್ಟು ಹಣವನ್ನು ಹಿಂದುಳಿದ ಜಾತಿಗಳಿಗೆ ಮೀಸಲಿಟ್ಟಿದ್ದರು. ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಎಲ್ಲ ಸೌಲಭ್ಯಗಳನ್ನು ಮುಸ್ಲಿಮ್ ವಿದ್ಯಾರ್ಥಿಗಳಿಗೂ ವಿಸ್ತರಿಸಿದ್ದರು. ಸರ್ಕಾರಿ ನೌಕರಿಗಳಲ್ಲಿ ಮುಸ್ಲಿಮರಲ್ಲಿರುವ ಹಿಂದುಳಿದ ಸಮುದಾಯಗಳಿಗೂ ಮೀಸಲಾತಿ ನೀಡಬೇಕೆಂಬ ಉತ್ತರಪ್ರದೇಶ ಹಿಂದುಳಿದ ಜಾತಿಗಳ ಒಕ್ಕೂಟದ ವರದಿಯನ್ನು ಮಾಯಾವತಿ ಜಾರಿಗೊಳಿಸಿದ್ದರು.


ಹಿಂದುಳಿದ ಜಾತಿಗಳ ಶೇಕಡಾ 27ರ ಮೀಸಲಾತಿಯಲ್ಲಿ ಶೇಕಡಾ ಎಂಟರಷ್ಟನ್ನು ಮುಸ್ಲಿಮರಲ್ಲಿನ ಹಿಂದುಳಿದ ಜಾತಿಗಳಿಗೆ ನೀಡಿದ್ದರು. 1996ರ ವಿಧಾನಸಭಾ ಚುನಾವಣೆಯಲ್ಲಿನ ಬಿಎಸ್‌ಪಿ ಅಭ್ಯರ್ಥಿಗಳಲ್ಲಿ ಶೇಕಡಾ 29ರಷ್ಟು ಮಾತ್ರ ಪರಿಶಿಷ್ಟ ಜಾತಿಗೆ ಸೇರಿದವರಿದ್ದರು. ಉಳಿದಂತೆ ಶೇಕಡಾ 34ರಷ್ಟು ಹಿಂದುಳಿದ ಜಾತಿಗಳು, ಶೇಕಡಾ 18ರಷ್ಟು ಮುಸ್ಲಿಮರಿದ್ದರು.


ಆಂತರಿಕ ಪ್ರಜಾಪ್ರಭುತ್ವವೇ ಇಲ್ಲದ ಬಿಎಸ್‌ಪಿಯಲ್ಲಿ ಮಾಯಾವತಿಯವರೇ ಎಲ್ಲವೂ ಆಗಿದ್ದರೂ ಪಕ್ಷದ ಪದಾಧಿಕಾರಗಳನ್ನು ಜಾತಿಜನಸಂಖ್ಯೆಗೆ ಅನುಗುಣವಾಗಿ ನೀಡುತ್ತಾ ಬಂದಿದ್ದಾರೆ. ಹಿಂದುಳಿದ ಜಾತಿಗಳಲ್ಲಿ ಮುಖ್ಯವಾಗಿ ಅತೀ ಹಿಂದುಳಿದಿರುವ ನಿಷಾದ್, ಸೈನಿ, ಶಾಖ್ಯ, ಬಗೇಲ್, ಕಶ್ಯಪ್ ಮತ್ತು ರಾಜ್‌ಭರ್ ಸಮುದಾಯಕ್ಕೆ ಬಿಎಸ್‌ಪಿಯಲ್ಲಿ ಈಗಲೂ ಹೆಚ್ಚಿನ ಪ್ರಾತಿನಿಧ್ಯ ಇದೆ.


ವಿಧಾನಸಭೆ ನಮ್ಮ ಸುತ್ತಲಿನ ಸಮಾಜದ ರಚನೆಯನ್ನು ಪ್ರತಿಬಿಂಬಿಸುವಂತಿರಬೇಕು ಎನ್ನುವುದು ಕಾನ್ಸಿರಾಮ್ ಅವರ ಚಿಂತನೆಯಾಗಿತ್ತು. ಈ ಕಾರಣದಿಂದಾಗಿಯೇ ಮೇಲ್ಜಾತಿಯೂ ಸೇರಿದಂತೆ ಎಲ್ಲರಿಗೂ ಅವರ ಜಾತಿ ಜನಸಂಖ್ಯೆಯ ಆಧಾರದಲ್ಲಿ ಪ್ರಾತಿನಿಧ್ಯ ನೀಡಬೇಕೆಂದು ಅವರು ಹೇಳುತ್ತಿದ್ದದ್ದು ಮಾತ್ರವಲ್ಲ, 2002ರ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಹೇಳಿದಂತೆ ಮಾಡಿಯೂ ತೋರಿಸಿದ್ದರು. ನಂತರದ ದಿನಗಳಲ್ಲಿ ಮಾಯಾವತಿಯವರೂ ಆ ಸೂತ್ರವನ್ನು ಪಾಲಿಸಿಕೊಂಡು ಬಂದಿದ್ದಾರೆ.


ಮಾಯಾವತಿಯವರೂ ಸೇರಿದಂತೆ ಸ್ಪರ್ಧಿಸಿದ್ದ ಎಲ್ಲ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದ ಮೊದಲ ಚುನಾವಣೆಯಿಂದ ಸ್ವಂತ ಬಲದಿಂದ ಸರ್ಕಾರ ರಚಿಸುವಷ್ಟು ಬಹುಮತ ಗಳಿಸಿದ್ದ 2007ರ ಚುನಾವಣೆಯ ವರೆಗೆ ಬಿಎಸ್‌ಪಿ ಸಾಗಿ ಬಂದ ಹಾದಿಯನ್ನು ನೋಡುತ್ತಾ ಬಂದರೆ ಉದ್ದಕ್ಕೂ ಈ ರೀತಿ ತನ್ನ ನೆಲೆಯನ್ನು ವಿಸ್ತರಿಸುತ್ತಾ ಬಂದಿರುವುದನ್ನು ಕಾಣಬಹುದು.


ಬಿಜೆಪಿ ಜತೆಗಿನ ಮೈತ್ರಿ, `ಬ್ರಾಹ್ಮಣ್ ಜೋಡೋ`-ಎಲ್ಲವೂ ಈ ಕಾರ್ಯತಂತ್ರದ ಭಾಗವೇ ಆಗಿತ್ತು. ಇದರಿಂದ ಬಿಎಸ್‌ಪಿ ಗಳಿಸಿದ್ದು ಹೆಚ್ಚು ಕಳೆದುಕೊಂಡದ್ದು ಬಹಳ ಕಡಿಮೆ. ಈ ಬಾರಿಯ ಚುನಾವಣೆಯಲ್ಲಿಯೂ ಬಿಎಸ್‌ಪಿ ಸೋಲಿಗೆ ಗೆಲುವಿನ ಮದದಿಂದ ನಡೆಸಿದ ವೈಯಕ್ತಿಕ ಹುಚ್ಚಾಟಗಳೇ ಕಾರಣ ಹೊರತು, ಅದರ ರಾಜಕೀಯ ಕಾರ್ಯತಂತ್ರದ ವೈಫಲ್ಯ ಅಲ್ಲ.


ಇದರಿಂದಾಗಿಯೇ ರಾಜಕೀಯ ಪಕ್ಷಗಳ ಗುಲಾಮಗಿರಿಯಿಂದ ಹೊರತಾದ ಸ್ವತಂತ್ರ ಮತ್ತು ಸ್ವಾಭಿಮಾನಿ ದಲಿತ ರಾಜಕಾರಣಕ್ಕೆ ಅಂಬೇಡ್ಕರ್ ಪ್ರೇರಣೆ ಒದಗಿಸಬಹುದು, ಆದರೆ ಮಾದರಿಯಾಗಿ ಕಾನ್ಸಿರಾಮ್ ಅವರನ್ನೇ ಸ್ವೀಕರಿಸಬೇಕಾಗುತ್ತದೆ.
ಕೃಪೆ : ಪ್ರಜಾವಾಣಿ 

Saturday, June 16, 2012

ಇಂಗ್ಲಿಷ್ ಸಂವಹನಕ್ಕಾಗಿ ಮಾತ್ರವಲ್ಲ, ಜಗತ್ತಿನ ಜ್ಞಾನ, ಸಾಹಿತ್ಯ ಗ್ರಹಿಸುವ ಕಿಟಕಿ !


                               - ಡಾ. ನಟರಾಜ್ ಹುಳಿಯಾರ್

ಎರಡು ವರ್ಷಗಳ ಕೆಳಗೆ ಗುಲ್ಬರ್ಗ ಸೆಂಟ್ರಲ್ ಯೂನಿವರ್ಸಿಟಿಯ ಇಂಗ್ಲಿಷ್ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡುತ್ತಿದ್ದಾಗ ಒಂದು ಅಂಶವನ್ನು ಗಮನಿಸಿದ್ದೆ: ಇಂಗ್ಲಿಷ್ ಎಂ.ಎ. ಓದುತ್ತಿದ್ದ ಒಟ್ಟು ಅರವತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರಲ್ಲಿ ಕೇವಲ ಇಬ್ಬರು ಮಾತ್ರ ತಪ್ಪಿಲ್ಲದೆ ಇಂಗ್ಲಿಷ್ ಮಾತಾಡಬಲ್ಲವರಾಗಿದ್ದರು.

ಇನ್ನುಳಿದ ವಿದ್ಯಾರ್ಥಿಗಳಿಗೆ ಈ ಸಾಮರ್ಥ್ಯ ಇಲ್ಲದಿರುವುದಕ್ಕೆ ಅವರ ಸಾಮಾಜಿಕ ಹಿನ್ನೆಲೆಯ ಜೊತೆಗೇ ಅವರೆಲ್ಲ ಇಂಗ್ಲಿಷ್ ಕಲಿಕೆಯನ್ನು ತಡವಾಗಿ ಆರಂಭಿಸಿದ್ದು ಕೂಡ ಕಾರಣವಾಗಿತ್ತು. ಈ ಸ್ಥಿತಿಯನ್ನು ನೋಡಿದಾಗ, ಇಂಗ್ಲಿಷ್ ಭಾಷೆಯನ್ನು ತಡವಾಗಿ ಕಲಿಯುತ್ತಿರುವವರ ಕಷ್ಟಗಳು ನನಗೆ ಮನದಟ್ಟಾಯಿತು. ಬಾಲ್ಯದಲ್ಲಿ ಎಲ್ಲ ಮಕ್ಕಳಿಗೂ ಸಾಧ್ಯವಿರುವ ಭಾಷಾಕಲಿಕೆಯ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳದಿರುವುದೇ ಮಕ್ಕಳ ಕಷ್ಟಕ್ಕೆ ಕಾರಣವಾಗಿತ್ತು.


ಈಗಾಗಲೇ ಸಿದ್ಧವಾಗಿರುವ ಹಾಗೆ ಬಾಲ್ಯದಲ್ಲಿ ಸಹಜವಾಗಿ ಇರುವ `ಲಿಂಗ್ವಿಸ್ಟಿಕ್ ಪ್ಲಾಸಿಸಿಟಿ` ಅಥವಾ ಭಾಷಾಕಲಿಕೆಯ ಸಾಮರ್ಥ್ಯದಿಂದಾಗಿ ಮಕ್ಕಳು ನಾಲ್ಕು ಭಾಷೆಗಳನ್ನು ಕಲಿಯಬಲ್ಲರು. ಆದರೆ ಆ ಹಂತ ದಾಟಿದ ನಂತರ ಇಂಗ್ಲಿಷ್ ಕಲಿಕೆಯನ್ನು ಆರಂಭಿಸಿದ ಮಕ್ಕಳು ಅನೇಕ ಬಗೆಯ ಹಿನ್ನಡೆ, ಕೀಳರಿಮೆಗಳನ್ನು ಅನುಭವಿಸುತ್ತಿರುವುದನ್ನು ದಿನನಿತ್ಯ ನೋಡುತ್ತಿದ್ದೇವೆ.


ಆದರೆ ನಮ್ಮ ಸರ್ಕಾರಗಳು ಖಾಸಗಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆರಂಭವಾದ ನಂತರವೂ ಎಲ್ಲ ಶಾಲೆಗಳಲ್ಲೂ ಕನ್ನಡ ಮಾಧ್ಯಮವನ್ನು ಜಾರಿಗೆ ತರುತ್ತೇವೆಂದು ಹುಸಿ ಭರವಸೆ ಕೊಡುತ್ತಾ ಕಳೆದ ಇಪ್ಪತ್ತು ವರ್ಷಗಳಿಂದ ಕಾಲ ತಳ್ಳುತ್ತಲೇ ಬಂದವು. ಸರ್ಕಾರಿ ಶಾಲೆಗಳ ಮಕ್ಕಳು ಹಿಂದುಳಿಯುತ್ತಲೇ ಬಂದವು. ಆರು ವರ್ಷಗಳ ಕೆಳಗೆ ವಿವಾದ ಕೋರ್ಟಿನಲ್ಲಿದೆ ಎಂಬ ನೆಪವೊಡ್ಡಿ ಕೆಲವರು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಲೂ ಅಡ್ಡಗಾಲು ಹಾಕಲು ಯತ್ನಿಸಿದ್ದರು.

ಇಷ್ಟಾಗಿಯೂ ಕಳೆದ ನಾಲ್ಕು ವರ್ಷಗಳಲ್ಲಿ ಇಂಗ್ಲಿಷನ್ನು ಒಂದು ಭಾಷೆಯಾಗಿ ಸುಮಾರಾಗಿಯಾದರೂ ಕಲಿಯಲೆತ್ನಿಸಿರುವ ಮಕ್ಕಳಿಗೆ ಆರನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮವನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರ ಬದಲಾದ ಸಾಮಾಜಿಕ ಸನ್ನಿವೇಶದಲ್ಲಿ ಅನಿವಾರ್ಯವಾಗಿದೆ.


ಒಂದು ಅಂದಾಜಿನ ಪ್ರಕಾರ, ರಾಜ್ಯದಲ್ಲಿರುವ ಸುಮಾರು ಇಪ್ಪತ್ತೈದು ಸಾವಿರ ಪ್ರಾಥಮಿಕ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಹಾಗೂ ಉರ್ದು ಮಾಧ್ಯಮದ ಶಾಲೆಗಳಿವೆ. ಹತ್ತು ಸಾವಿರಕ್ಕೂ ಹೆಚ್ಚು ಅಧಿಕೃತ, ಅನಧಿಕೃತ ಇಂಗ್ಲಿಷ್ ಮಾಧ್ಯಮ ಶಾಲೆಗಳಿವೆ.


ಅವುಗಳಲ್ಲೂ ಹಲಬಗೆಯ ಶ್ರೇಣಿಗಳಿವೆ. ಆದರೆ ಕರ್ನಾಟಕದ ಅರ್ಧ ಭಾಗಕ್ಕಿಂತ ಹೆಚ್ಚು ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿದ್ದಾರೆ. ಈ ಎರಡು ಬಗೆಯ ಶಾಲೆಗಳ ನಡುವಣ ಸ್ಪರ್ಧೆಗಳಲ್ಲಿ ಸರ್ಕಾರಿ ಶಾಲೆಗಳ ಮಕ್ಕಳು ಬಡತನ, ವಾತಾವರಣ ಹಾಗೂ ಇಂಗ್ಲಿಷ್ ಭಾಷೆಯ ಕೊರತೆಯ ಕಾರಣದಿಂದಾಗಿಯೂ ಹಿಂದೆ ಬಿದ್ದ್ದ್ದಿದಾರೆ.


ಮೊನ್ನೆ ತಾನೇ ಫಲಿತಾಂಶ ಪ್ರಕಟವಾಗಿರುವ ಪಿಯುಸಿ ನಂತರದ ಸಿ.ಇ.ಟಿ. ಪರೀಕ್ಷೆಯಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದಿದ ತೊಂಬತ್ತರಷ್ಟು ಭಾಗದ ಮಕ್ಕಳು ರ‌್ಯಾಂಕುಗಳನ್ನು ಪಡೆದಿದ್ದಾರೆ. ಹೀಗಾಗಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಕೂಡ ಇಂಗ್ಲಿಷ್ ಮಾಧ್ಯಮದ ಅನುಕೂಲವನ್ನು ಒದಗಿಸುವುದು ಅನಿವಾರ್ಯ.


ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಶಾಲೆಗಳ ಶೇ.18 ಭಾಗ ಶಿಕ್ಷಕ, ಶಿಕ್ಷಕಿಯರು ಇಂಗ್ಲಿಷ್ ಮಾಧ್ಯಮದಲ್ಲಿ ಬೋಧಿಸಲು ತರಬೇತಿಗೊಂಡಿದ್ದಾರೆ; ಜೊತೆಗೆ, ಈಗಾಗಲೇ ವಿಜ್ಞಾನ ವಿಷಯಗಳನ್ನು ಇಂಗ್ಲಿಷಿನಲ್ಲಿ ಕಲಿಸುತ್ತಿರುವವರು ಹಾಗೂ ಇಂಗ್ಲಿಷ್ ಮಾಧ್ಯಮದಲ್ಲಿ ಡಿ.ಎಡ್ ಪದವಿ ಪಡೆದಿರುವವರು ಕೂಡ ಈ ಕಾರ್ಯಕ್ಕೆ ಸಿದ್ಧವಾಗಿದ್ದಾರೆ. ಆದ್ದರಿಂದ ಇಂಗ್ಲಿಷ್ ಮಾಧ್ಯಮ ಕೇವಲ ಕೆಲವು ಆಯ್ದ ಶಾಲೆಗಳಲ್ಲಿ ಮಾತ್ರ ಅಲ್ಲ; ಕರ್ನಾಟಕದಾದ್ಯಂತ ಮಾಧ್ಯಮಿಕ ಹಂತದಲ್ಲಿ ಐಚ್ಛಿಕವಾಗಿಯಾದರೂ ಆರಂಭವಾಗಬೇಕು.


ಆದರೆ, ಸರ್ಕಾರಿ ಶಾಲೆಗಳಲ್ಲಿ ಈಗಾಗಲೇ ಖಾಸಗಿ ಶಾಲೆಗಳಲ್ಲಿರುವಂತೆ ಅವೈಜ್ಞಾನಿಕವಾಗಿ, ಮಾತೃಭಾಷೆಯನ್ನು ಸಂಪೂರ್ಣವಾಗಿ ಹೊರಗಿಟ್ಟು ವಿಷಯಗಳನ್ನು ಕಲಿಸಬಾರದು. ಬದಲಿಗೆ ಮಾತೃಭಾಷೆ ಹಾಗೂ ಇಂಗ್ಲಿಷ್ ಎರಡೂ ಮಾಧ್ಯಮಗಳನ್ನು ಬೆರೆಸಿ ಕಲಿಸುವ ಕ್ರಮವನ್ನು ಆರಂಭಿಸಬೇಕು.


ಇದು ಯಾಂತ್ರಿಕ  ಅನುವಾದ ವಿಧಾನ ಅಲ್ಲ. ಬದಲಿಗೆ ಮಾತೃಭಾಷೆಯಲ್ಲಿ ವಿಷಯವನ್ನು ಗ್ರಹಿಸುವ ಹಾಗೂ ಅದನ್ನು ಎರಡು ಭಾಷೆಗಳಲ್ಲಿ ಮಂಡಿಸುವ ಸಾಮರ್ಥ್ಯವನ್ನು ಕಲಿಸುವ ವಿಧಾನ. ಅದಕ್ಕಾಗಿ ಒಂದು ಪಠ್ಯಪುಸ್ತಕದ ಎಡ ಪುಟದಲ್ಲಿ ಕನ್ನಡ ಅಥವಾ ಇನ್ನಿತರ ಮಾತೃಭಾಷೆಯಲ್ಲಿಯೂ ಹಾಗೂ ಬಲಪುಟದಲ್ಲಿ ಇಂಗ್ಲಿಷ್ ಭಾಷೆಯಲ್ಲಿಯೂ ವಿಷಯಗಳನ್ನು ಮುದ್ರಿಸಬೇಕು. ಪುಸ್ತಕ ದೊಡ್ಡದಾಗುತ್ತದೆ ಎಂಬ ಹುಸಿ ನೆಪ ಹೇಳದೆ ಈ ಕೆಲಸ ಮಾಡಬೇಕು.


ಯಾಕೆಂದರೆ ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ಪುಸ್ತಕಗಳ ಗಾತ್ರಗಳಿಗೆ ಹೋಲಿಸಿದರೆ, ಸರ್ಕಾರಿ ಶಾಲೆಗಳ ಪುಸ್ತಕಗಳು ತೀರಾ ಕಡಿಮೆ ವಿಷಯಗಳನ್ನು ಒಳಗೊಂಡಿವೆ. ಜೊತೆಗೆ, ಉಚಿತವಾಗಿ ಕೊಡುತ್ತಿದ್ದೇವೆ ಎಂಬ ಅಹಂಕಾರದಿಂದ ಈ ಪುಸ್ತಕಗಳನ್ನು ಆಕರ್ಷಕವಾಗಿ ಮುದ್ರಿಸುತ್ತಲೂ ಇಲ್ಲ. ಸರ್ಕಾರಿ ಶಾಲೆಗಳ ಕಲಿಕೆಯ ವಾತಾವರಣವನ್ನು ಆಕರ್ಷಕವಾಗಿಸಿ, ಮಕ್ಕಳಲ್ಲಿ ಉತ್ಸಾಹ ಉಕ್ಕುವಂತೆ ಮಾಡಬೇಕಾಗಿದೆ.


ಇವತ್ತು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಭಾವುಕವಾಗಿ ವಿರೋಧಿಸುತ್ತಿರುವವರು ತಮಗರಿವಿಲ್ಲದೆಯೇ ಎಲ್ಲ ಜಾತಿಗಳ ಕಡುಬಡವರ ಪ್ರಗತಿಗೆ ವಿರುದ್ಧವಾಗಿದ್ದಾರೆ. ಯಾಕೆಂದರೆ ಇವತ್ತು ಮಕ್ಕಳಿಗಾಗಿ ತಿಂಗಳಿಗೆ ಕನಿಷ್ಠ ಐನೂರು ರೂಪಾಯಿಯನ್ನು ಖರ್ಚು ಮಾಡಬಲ್ಲ ಬಡ ತಂದೆ ತಾಯಂದಿರು ಕೂಡ ತಮ್ಮ ಮಕ್ಕಳನ್ನು ಎಂಥದೋ ಒಂದು ಖಾಸಗಿ ಇಂಗ್ಲಿಷ್ ಶಾಲೆಗೆ ಕಳಿಸುತ್ತಿದ್ದಾರೆ.


ಇತ್ತ ಬಹುತೇಕ ಕಾಲೇಜು, ವಿವಿಗಳ ಶಿಕ್ಷಕ, ಶಿಕ್ಷಕಿಯರು, ಅನೇಕ ಸಾಹಿತಿಗಳು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕಳಿಸುತ್ತಿದ್ದಾರೆ. ಇವರ‌್ಯಾರಿಗೂ ಇಲ್ಲದ ಕನ್ನಡ ರಕ್ಷಣೆ ಜವಾಬ್ದಾರಿಯನ್ನು ಅತಿ ಬಡ ಮಕ್ಕಳು ಮತ್ತು ಅವರ ಪಾಲಕರು ಮಾತ್ರ ಯಾಕೆ ಹೊರಬೇಕು? ಹಲ ಬಗೆಯ ಪ್ರತಿಕೂಲ ವಾತಾವರಣಗಳಲ್ಲಿ ಕಲಿಯುತ್ತಾ, ಕನ್ನಡವನ್ನು ಕಾಪಾಡುತ್ತಿರುವ ಈ ಮಕ್ಕಳಿಗೆ ಆರನೆಯ ತರಗತಿಯಿಂದ ಕೂಡ ಉಳ್ಳವರ ಮಕ್ಕಳ ಜೊತೆ ಸ್ಪರ್ಧಿಸಲು ಅವಕಾಶ ಕೊಡಬಾರದೆಂದು ವಾದಿಸುವುದು ಭಯಾನಕ ಕ್ರೌರ್ಯವಾಗುತ್ತದೆ.


ಹಾಗೆ ನೋಡಿದರೆ, ಈ ಮಕ್ಕಳಿಗೆ ಭಾಷೆಯ ಬಲ ಹಾಗೂ ಆತ್ಮವಿಶ್ವಾಸ ತುಂಬುವ ಸಲುವಾಗಿ ಇಂಗ್ಲಿಷ್ ಬರವಣಿಗೆ ಹಾಗೂ ಅಭಿವ್ಯಕ್ತಿಯನ್ನು ಅತ್ಯಂತ ಸಮರ್ಥವಾಗಿ ಕಲಿಸಿ ಹೊಸ ಜಗತ್ತಿಗೆ ಅಣಿಗೊಳಿಸುವುದು ನಮ್ಮ ಆದ್ಯತೆಯಾಗಬೇಕು. ಇಂಗ್ಲಿಷನ್ನು ಸಂವಹನಕ್ಕಾಗಿ ಮಾತ್ರವಲ್ಲದೆ, ಜಗತ್ತಿನ ಜ್ಞಾನ, ಸಾಹಿತ್ಯವನ್ನು ಗ್ರಹಿಸುವ ಕಿಟಕಿಯಾಗಿಯೂ ಕಲಿಸಬೇಕು.


ಅತಿಯಾದ ಉಚ್ಚಾರಣೆಯ ಸಮಸ್ಯೆಯನ್ನು ಮೈಮೇಲೆ ಹಾಕಿಕೊಳ್ಳದೆ, ಜಗತ್ತಿನಲ್ಲಿ ಬಗೆಬಗೆಯ ಇಂಗ್ಲಿಷುಗಳಿವೆ, ಉಚ್ಚಾರಣೆಗಳಿವೆ ಎಂಬ ಅರಿವಿನಲ್ಲಿಯೂ ಇಂಗ್ಲಿಷನ್ನು ಕಲಿಸಬೇಕು. ಇಂಗ್ಲಿಷ್ ಶಿಕ್ಷಣದ ವ್ಯಾಪಾರಿಗಳ ದಂಧೆಗೆ ಕೊನೆ ಹೇಳಲು ಸರ್ಕಾರಿ ಶಾಲೆಗಳಲ್ಲಿ ಅದನ್ನು ಸರಿಯಾಗಿ ಕಲಿಸಬೇಕು.


ಈ ಸನ್ನಿವೇಶವನ್ನು ಸರಿಯಾಗಿ ಗ್ರಹಿಸಲು ಒಂದು ಉದಾಹರಣೆ ನೋಡಿ: ಹಿಂದುಳಿದ ಪ್ರದೇಶವೊಂದರಲ್ಲಿ ಎಕನಾಮಿಕ್ಸ್ ಎಂ.ಎ. ಕಲಿಯುತ್ತಿರುವ  ಬಡ ವಿದ್ಯಾರ್ಥಿಯೊಬ್ಬ ತನ್ನ ಎರಡು ವರ್ಷಗಳ ಎಂ.ಎ.ಕೋರ್ಸಿಗೆ ವಿಶ್ವವಿದ್ಯಾಲಯಕ್ಕೆ ಪಾವತಿಸುತ್ತಿರುವ ಬೋಧನಾ ಶುಲ್ಕ 1000 ರೂಪಾಯಿ; ಆದರೆ  ಖಾಸಗಿ ಸಂಸ್ಥೆಯೊಂದರಲ್ಲಿ ಎರಡು ತಿಂಗಳ ಇಂಗ್ಲಿಷ್ ಕಲಿಕೆಯ ಕೋರ್ಸಿಗೆ ಕೊಟ್ಟ ಶುಲ್ಕ 5000 ರೂಪಾಯಿ! ಅಲ್ಲಿ ಕೂಡ ಅವನು ಸಾಂದರ್ಭಿಕವಾಗಿ ಬಳಸುವ ಇಂಗ್ಲಿಷನ್ನು ತಕ್ಕಮಟ್ಟಿಗೇ ಕಲಿತನೇ ಹೊರತು ಚೆನ್ನಾಗಿಯೇನೂ ಕಲಿಯಲಿಲ್ಲ. ಬಾಲ್ಯದಲ್ಲೇ ಶಾಲೆಯಲ್ಲಿ  ಇಂಗ್ಲಿಷ್ ಭಾಷೆ ಕಲಿತಿದ್ದರೆ ಆ ಸಮಸ್ಯೆಯಿಂದ ಪಾರಾಗುತ್ತಿದ್ದನೇನೋ.


ಇದೇ ಸಂದರ್ಭದಲ್ಲಿ ಉರ್ದು ಮಾಧ್ಯಮದಲ್ಲಿ ಓದುತ್ತಿರುವ ಬಡ ಮುಸ್ಲಿಂ ಮಕ್ಕಳ ಕಷ್ಟವನ್ನು ಕೊಂಚ ವಸ್ತುನಿಷ್ಠವಾಗಿ ಗಮನಿಸಬೇಕು. ಈ ಮಕ್ಕಳಿಗೆ ಏಳನೆಯ ತರಗತಿಯ ನಂತರ ಯಾವ ವಿಷಯಗಳನ್ನೂ ಉರ್ದುವಿನಲ್ಲಿ ಕಲಿಸುತ್ತಿಲ್ಲ. ಹಾಗಾದರೆ ಈ ಮಕ್ಕಳು ಎಲ್ಲಿಗೆ ಹೋಗಬೇಕು? ಈ ಮಕ್ಕಳು ಹೈಸ್ಕೂಲ್ ಹೊತ್ತಿಗೆ ಸ್ಕೂಲು ಬಿಡುತ್ತಿವೆ ಅಥವಾ ಅನಿವಾರ್ಯವಾಗಿ ಎಲ್ಲೋ ವಿರಳವಾಗಿಯಷ್ಟೇ ಇರುವ ಇಂಗ್ಲಿಷ್ ಮಾಧ್ಯಮವನ್ನು ಹುಡುಕಿಕೊಂಡು ಹೋಗುತ್ತಿವೆ.


ಈ ಮಕ್ಕಳು ತಮ್ಮ ಆರ್ಥಿಕ ಬೆಳವಣಿಗೆಗಾಗಿಯಾದರೂ ವಿಷಯಗಳನ್ನು ಅತ್ಯಂತ ಸಮರ್ಥವಾಗಿ ಇಂಗ್ಲಿಷಿನಲ್ಲಿ ಕಲಿಯುವುದು ಅನಿವಾರ್ಯವಾಗಿದೆ. ಇನ್ನು ಇವತ್ತಿನ ಖಾಸಗಿ ಉದ್ಯೋಗಗಳ ಜಗತ್ತಿನಲ್ಲಿ ಇಂಗ್ಲಿಷನ್ನು ಚೆನ್ನಾಗಿ ಬಳಸುವ ಸಾಮರ್ಥ್ಯವನ್ನು ರಾಜ್ಯದ ಒಳಹೊರಗೆ ಬಗೆಬಗೆಯ ಉದ್ಯೋಗಗಳನ್ನು ಹುಡುಕುವ ಎಲ್ಲ ವರ್ಗದವರೂ ಪಡೆಯಬೇಕಾಗಿದೆ; ಇದು ಹೊಟ್ಟೆಪಾಡಿಗೆ ಸಂಬಂಧಿಸಿದ ಪ್ರಶ್ನೆ ಕೂಡ.


ಭಾಷೆಯೇ ಒಂದು ಆಸ್ತಿಯಾಗಿರುವ ಈ ಕಾಲದಲ್ಲಿ ಹೆಣ್ಣುಮಕ್ಕಳ ಉದ್ಯೋಗದ ಸಾಧ್ಯತೆಗಳು ಹಾಗೂ ಆತ್ಮವಿಶ್ವಾಸ ಹೆಚ್ಚಿರುವುದರಲ್ಲಿ ಇಂಗ್ಲಿಷಿನ ಪಾಲೂ ಹೆಚ್ಚಾಗಿದೆ ಎಂಬುದನ್ನು ಮರೆಯಬಾರದು.


ಇವತ್ತು ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಜಾರಿಯನ್ನು ವಿರೋಧಿಸುತ್ತಿರುವವರು  ಹಾಗೂ ಅದನ್ನು ಕನ್ನಡ ವಿರೋಧಿ ಎಂದು ತಿಳಿದವರು ನಿಜಕ್ಕೂ ಕನ್ನಡವನ್ನು ಉಳಿಸಬೇಕಾಗಿರುವುದು ಖಾಸಗಿ ಶಾಲೆಗಳಲ್ಲಿ. ಕನ್ನಡವನ್ನು ಒಂದು ಭಾಷೆಯಾಗಿ ಕೂಡ ಕಲಿಯಲು ಅವಕಾಶ ಕೊಡದ ಅನೇಕ ಶಾಲೆಗಳು ಇಂಗ್ಲಿಷ್, ಹಿಂದಿ, ಸಂಸ್ಕೃತಗಳನ್ನು ಕಲಿಸುತ್ತಿರುವುದರಿಂದ ಹಾಗೂ ಈ ಧೋರಣೆಗೆ ಕನ್ನಡ ತಂದೆತಾಯಿಗಳೇ ಕುಮ್ಮಕ್ಕು ಕೊಡುತ್ತಿರುವುದರಿಂದ ಕನ್ನಡಕ್ಕೆ ಹೆಚ್ಚಿನ ಧಕ್ಕೆಯಾಗುತ್ತಿದೆ.


ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಪ್ರತಿ ತರಗತಿಗೆ ಎರಡು ಕನ್ನಡ ಭಾಷಾಪಠ್ಯಗಳನ್ನಿಟ್ಟು ಈ ಮಕ್ಕಳು ಕನ್ನಡವನ್ನು ದಕ್ಷವಾಗಿ ಕಲಿಯುವಂತೆ ಮಾಡುವುದು ಅತ್ಯಂತ ಮುಖ್ಯವಾಗಿದೆ. ಹಾಗೆಯೇ ಕನ್ನಡ ಮಾಧ್ಯಮದ ಮಕ್ಕಳು ಕಲಿಯುತ್ತಿರುವ ಇಂಗ್ಲಿಷಿನ ಕ್ರಮವನ್ನು ಇನ್ನಷ್ಟು ಸುಧಾರಿಸಬೇಕು.


ಹಾಗೆಯೇ ಐದನೇ ತರಗತಿಯವರೆಗೆ ಹಾಗೂ ಆನಂತರ ಕನ್ನಡ ಮಾಧ್ಯಮದಲ್ಲಿ ಕಲಿತವರಿಗೆ ಸರ್ಕಾರಿ ಹುದ್ದೆಗಳನ್ನು ಹಾಗೂ ಹೆಚ್ಚು ಶೈಕ್ಷಣಿಕ ಅವಕಾಶಗಳನ್ನು ಮೀಸಲಿಟ್ಟು, ಪ್ರೋತ್ಸಾಹ ವೇತನಗಳನ್ನು ಕೂಡ ನೀಡಿ ಈ ಬಡ ಮಕ್ಕಳ ಭವಿಷ್ಯವನ್ನು ರೂಪಿಸಬೇಕು. 

ಕೃಪೆ : ಪ್ರಜಾವಾಣಿ - ಅಂತರಾಳ

ಕೋರೆಗಾವ ಕದನ-ಇತಿಹಾಸದ ಒಳಸುಳಿ

ಈ ದೇಶದ ಜಾತೀಯತೆಯ ಒಳಸುಳಿಗಳನ್ನು ಬಿಚ್ಚಿಡುವ ಕೃತಿ ‘ಕೋರೆಗಾವ ಕದನ: ದಲಿತ ದಿಗ್ವಿಜಯ’. ಸುಧಾಕರ ಖಾಂಬೆ ಅವರ ಮರಾಠಿ ಕೃತಿ ‘ಶೌರ್ಯ ಆಣಿ ಪರಾಕ್ರಮಾಚೆ ಪ್ರತೀಕ: ಭೀಮಾ ಕೋರೆಗಾವಾಚಾ ವಿಜಯ ಸ್ತಂಭ’ ಕೃತಿಯನ್ನು ಸಿದ್ರಾಮ ಕಾರಣಿಕ ಅವರು ಕನ್ನಡಕ್ಕೆ ತಂದಿದ್ದಾರೆ. ಸ್ಫೋಟಕ ಅಂಶಗಳನ್ನು ಹೊರಗಿ ಡುವ ಈ ಪುಟ್ಟ ಕೃತಿ, ಈ ದೇಶದ ಪೂರ್ವಾಗ್ರಹ ಪೀಡಿತ ಇತಿಹಾಸ, ವರ್ಣಸಂಘರ್ಷ ಮತ್ತು ಸ್ವಾತಂತ್ರದ ವಿರೋಧಾಭಾಸಗಳನ್ನು ತೆರೆದಿಡು ತ್ತದೆ. ಕೃತಿಯ ಕುತೂಹಲಕಾರಿ ಅಂಶವೆಂದರೆ, ಇಲ್ಲಿ ಕದನ ನಡೆಯುವುದು ಬ್ರಿಟಿಷರು ಮತ್ತು ಪೇಶ್ವೆಗಳ ನಡುವೆ.
ಈ ಕದನದಲ್ಲಿ ಮಹಾರ ದಲಿತ ಕಲಿ ಗಳು ಬ್ರಿಟಿ ಷರ ಪರವಾಗಿ ನಿಂತು ಎರಡನೆ ಬಾಜಿ ರಾಯನ ವಿರುದ್ಧ ಖಡ್ಗ ಬೀಸುತ್ತಾರೆ. ಮೇಲ್ನೋಟಕ್ಕೆ ಇದು ಬ್ರಿಟಿಷರ ವಿರುದ್ಧ ಪೇಶ್ವೆಗಳ ಕದನ ದಂತೆ ಕಂಡರೂ, ತಳದಲ್ಲಿ ಇದು ಈ ದೇಶದ ಜಾತೀ ಯತೆ ಮತ್ತು ಅಸ್ಪಶತೆಯ ವಿರುದ್ಧ ನಡೆಯುವ ಕದನದ ರೂಪ ಪಡೆಯುತ್ತದೆ. ವಿಶೇಷವೆಂದರೆ, ಇಲ್ಲಿ ದೇಶದ ಜಾತೀ ಯತೆ, ಶೋಷಕ ಸಮಾಜವನ್ನು ಪೇಶ್ವೆಗಳು ಪ್ರತಿನಿಧಿಸಿದರೆ, ಬೆನ್ನಿಗೆ ನಿಂತ ದಲಿತರ ಕಾರಣದಿಂದ, ಬ್ರಿಟಿ ಷರು ಜಾತೀಯತೆಯ ವಿರೋಧಿಗ ಳಾಗಿ ಗುರುತಿಸಲ್ಪಡುತ್ತಾರೆ. ಸ್ವಾತಂತ್ರ ಹೋರಾಟದ ವ್ಯಾಖ್ಯೆ ಇಲ್ಲಿ ವಿಸ್ತರಿಸಿ ಕೊಳ್ಳುತ್ತದೆ.
ಬ್ರಿಟಿಷರಿಂದ ರಾಜಕೀ ಯವಾಗಿ ಬಿಡುಗಡೆ ಪಡೆದರಷ್ಟೇ ದಲಿತರಿಗೆ ಸ್ವಾತಂತ್ರ ಸಿಕ್ಕಂತಾಗುವು ದಿಲ್ಲ. ಬ್ರಿಟಿಷರು ಈ ದೇಶಕ್ಕೆ ಕಾಲಿ ಡುವ ಮುಂಚೆಯೇ, ಶತ ಶತಮಾನ ಗಳ ಹಿಂದೆಯೇ ಈ ನೆಲದಲ್ಲಿ ದಲಿ ತರು ಪಾರತಂತ್ರವನ್ನು ಅನುಭ ವಿಸುತ್ತಿದ್ದರು. ಶೋಷಣೆಯನ್ನು ಅನು ಭವಿಸುತ್ತಿದ್ದರು. ಸಾರ್ವಜನಿಕ ಕೆರೆ, ಬಾವಿಗಳನ್ನು ಮುಟ್ಟುವುದಕ್ಕೂ ಅವ ಕಾಶವಿರಲಿಲ್ಲ. ಇಂತಹ ಹೀನ ಸ್ಥಿತಿ ಯಲ್ಲಿ ಬದುಕಿದ ದಲಿತರ ಪಾಲಿಗೆ, ಬ್ರಿಟಿಷರ ಪ್ರವೇಶ ಒಂದು ವರವಾ ಯಿತು. ಬ್ರಿಟಿಷರ ಶಿಕ್ಷಣ, ಕಾನೂನು ದಲಿತರ ಬದುಕಿನಲ್ಲಿ ಬದಲಾವಣೆ ತಂದಿತು.
ಕೋರೆಗಾವ ಕದನವನ್ನು ನಾವು ಅರ್ಥ ಮಾಡಿಕೊಳ್ಳಬೇಕಾದರೆ ಇದನ್ನೆಲ್ಲ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇಲ್ಲವಾದರೆ, ಬ್ರಿಟಿಷರ ಪರವಾಗಿ ನಿಂತ ದಲಿತರನ್ನು ‘ದೇಶದ್ರೋಹಿ’ ಗಳಾಗಿ ಗುರುತಿಸುವ ಅಪಾಯವಿದೆ. ಶಿವಾಜಿಯ ಕಾಲದಲ್ಲಿ ಧೈರ್ಯ, ಸಾಹ ಸಕ್ಕೆ ಹೆಸರಾಗಿದ್ದ ಮಹಾರ ಯೋಧರು ಪೇಶ್ವೆಗಳ ಕಾಲದಲ್ಲಿ ಅವರ ವಿರುದ್ಧ ಬಂಡೆದ್ದರೂ. ಶಿವಾಜಿ ಶೂದ್ರನಾಗಿದ್ದ. ಇದೇ ಸಂದರ್ಭದಲ್ಲಿ, ಶಿವಾಜಿಯ ನಂತರ ಆಡಳಿತ ಚುಕ್ಕಾಣಿ ಹಿಡಿದ ಪೇಶ್ವೆಗಳು ಮೇಲ್ವರ್ಣವನ್ನು ಪ್ರತಿನಿಧಿಸು ತ್ತಿದ್ದರು. ಶಿವಾಜಿಗಾಗಿ ಎಲ್ಲವನ್ನು ತೊರೆದ ಮಹಾರರನ್ನು ಈ ಪೇಶ್ವೆಗಳು ಹೀನಾಯವಾಗಿ ಕಾಣಲಾರಂಭಿಸಿ ದರು.
ಅನುಮಾನ, ಶಂಕೆ, ಅಸ್ಪಶತೆ ಇತ್ಯಾದಿಗಳ ಮೂಲಕ, ಮಹಾರ ಯೋಧರಿಗೆ ಪೇಶ್ವೆಯ ಆಡಳಿತ ನರಕ ವಾಯಿತು. ಕೋರೆಗಾವ್ ಕದನದ ಸಂದರ್ಭದಲ್ಲಿ ಈ ಮಹಾರ ಯೋಧರನ್ನು ವಿಶ್ವಾಸಕ್ಕೆ ತೆಗೆದು ಕೊಂಡಿದ್ದರೆ ಅವರು ಬಾಜೀರಾ ಯನ ಪರವಾಗಿಯೇ ನಿಲ್ಲುತ್ತಿ ದ್ದರೋ ಏನೋ. ಆದರೆ ಅವರನ್ನು ಸಂಪೂರ್ಣವಾಗಿ ಪೇಶ್ವೆಗಳು ನಿರ್ಲ ಕ್ಷಿಸಿದರು. ಪರಿಣಾಮವಾಗಿ ಮಹಾರ್ ಯೋಧರು ಪೇಶ್ವೆಗಳ ವಿರುದ್ಧ ನಿಂತರು. ಬ್ರಿಟಿ ಷರ ಸೇನೆ ಸೇರಿದರು. ಅವರಿಗೆ ಹೋರಾಡ ಬೇಕಾಗಿದ್ದದ್ದು ಪೇಶ್ವೆಗಳ ಜಾತೀ ಯತೆಯ ವಿರುದ್ಧ, ಅವರ ಅಸ್ಪ ಶತೆಯ ವಿರುದ್ಧ.
ಅವರ ಶೋಷ ಣೆಯ ವಿರುದ್ಧ. ಬ್ರಿಟಿಷರು ಕೊಟ್ಟ ಮನ್ನಣೆ ಅವರಲ್ಲಿ ಆತ್ಮ ವಿಶ್ವಾಸವನ್ನು ತುಂಬಿತು. ಪರಿಣಾಮವಾಗಿ, ಪೇಶ್ವೆ ಗಳ ಮಹಾಸೇನೆಯನ್ನು ಮಹಾರರು ಎದುರಿಸಲು ಸಿದ್ಧರಾದರು. ಒಂದು ಹಂತದಲ್ಲಿ ಬ್ರಿಟಿ ಷರು ಸೋಲುವ ಸನ್ನಿವೇಶವಿದ್ದಾಗ, ಮಹಾರರ ಹೋರಾಟ, ಬಲಿದಾನ ದಿಂದ ಫಲಿತಾಂಶ ಬದಲಾಯಿತು. ಬ್ರಿಟಿ ಷರು ಗೆದ್ದರು. ಬಾಜೀರಾಯ ತನ್ನ ಕಾರಣದಿಂದಲೇ ಯುದ್ಧದಲ್ಲಿ ಸತ್ತ. (ಇದೇ ಪೇಶ್ವೆಗಳು ಟಿಪ್ಪು ಸುಲ್ತಾ ನನ ವಿರುದ್ಧ ಯುದ್ಧದಲ್ಲಿ ಬ್ರಿಟಿಷರ ಪರವಾಗಿದ್ದರು ಎನ್ನು ವುದನ್ನು ಇಲ್ಲಿ ನೆನೆಯಬೇಕು). ಕೋರೆಗಾವ ಯುದ್ಧ ದಲ್ಲಿ ಅಸ್ಪಶತೆ, ಜಾತೀಯತೆ ಹೀನಾ ಯವಾಗಿ ಸೋತಿತು. ದಲಿತರು ಗೆದ್ದರು.
ಶಬ್ದ ಶಬ್ದದ ಅನುವಾದ ಇದಲ್ಲ ವಾದುದರಿಂದ ಓದಿಸಿಕೊಂಡು ಹೋಗುತ್ತದೆ. ಬರೇ ಒಣ ಇತಿಹಾ ಸದ ದಾಖಲೆಯೂ ಇದಲ್ಲ. ಬರಹ ಕಥನ ಗುಣವನ್ನು ಹೊಂದಿದೆ. ಅನುವಾದ ಸೃಜನಾತ್ಮಕವಾಗಿದೆ.
ಮೂಲಭೂತವಾದಿಗಳು ಈ ದೇಶದ ಇತಿಹಾಸವನ್ನು ತಿರುಚುವ ಪ್ರಯತ್ನ ನಡೆಸುತ್ತಿರುವ ಈ ಸಂದರ್ಭದಲ್ಲಿ ಗದಗದ ಲಡಾಯಿ ಪ್ರಕಾಶನ ಈ ಕೃತಿಯನ್ನು ಹೊರ ತಂದಿರುವುದು ಶ್ಲಾಘನೀಯವಾಗಿದೆ. ಕೃತಿಯ ಮುಖಬೆಲೆ 40 ರೂ.

Friday, June 15, 2012

ಮಾತ್ಗವಿತೆ-84

ಕಸ ಕಡ್ಡಿಗಳನ್ನೆಲ್ಲ ಆರಿಸಿ ತೆಗೆದು
ಹರಳುಗಳನ್ನು ಹೊರಚೆಲ್ಲಿ
ಅನ್ನ ಮಾಡುವ ತಿಳಿವು ಇರಬೇಕು !
ನೆನಪಿರಲಿ ಬರೀ ಅದಷ್ಟೇ ಅಲ್ಲ ;
ಪ್ರಮಾಣಬದ್ಧ ನೀರು ;
ಬೆಂಕಿಯ ಮರ್ಮವನ್ನೂ ತಿಳಿದಿರಬೇಕು !
ಬೆಂದರೆ ಅನ್ನ ; ಪರಮಾನ್ನ
ನೆನಪಿಡಿ
ಉಣ್ಣುವಾಗ ಹಸಿದವರ ನೆನಪೂ ಇರಲಿ !

Tuesday, June 12, 2012

ಮಾತ್ಗವಿತೆ-83

ಕಾಯು ಕಾಯು ಎಂದರೆ ಎಷ್ಟಾದರೂ ಕಾಯಬೇಕು
ಕಾಯವು ಕಾಯ್ದು ಕಾಯ್ದು ಬೆಂಕಿ ಕೆಂಡವಾಗಿದೆ !
ದ್ರವರೂಪವಾಗಿ ಹರಿದು ಹೋಗುವ ಮುನ್ನ
ಒಂದೊಮ್ಮೆ ಹೊಡೆದು ನೋಡು ಸುತ್ತಿಗೆಯ ಏಟು ;
ನೀನಳಿಸಿದ ಚಿತ್ತಾರ ಮತ್ತೊಮ್ಮೆ ಪ್ರಕಟವಾಗುತ್ತದೆ !

Monday, June 11, 2012

ಮಾತ್ಗವಿತೆ-82

ಕೈ ಹಿಡಿದು ನಡೆದ ಹಾದಿ ಪಾಳು ಬಿದ್ದಿದೆ
ಮಳೆಯ ಹನಿ ಸುರಿದು ಹಸಿರು ಗರಿಕೆ ಹುಟ್ಟಿಸಬಾರದೆ ?
ನೆನಪುಗಳು ಮತ್ತೊಮ್ಮೆ ಚಿಗಿಯಲಿಕ್ಕಿಲ್ಲ
ಹಸಿದ ಪ್ರಾಣಿಗಳಿಗೆ ಮೇವಾದರೂ ಆದೀತು !

ಸಾಹಿತಿಗಳ ಮಕ್ಕಳಿಗೆ ಇಂಗ್ಲಿಷ್ : ಪರರ ಮಕ್ಕಳಿಗೆ ಕನ್ನಡ !

                                                      -ಸೂರ್ಯ ಮುಕುಂದರಾಜ್
                                                                
ಸರ್ಕಾರ 6ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಆರಂಭಿಸುವ ಆದೇಶವನ್ನು ಕನ್ನಡದ ಖ್ಯಾತ ಸಾಹಿತಿಗಳೆಲ್ಲ ವಿರೋಧಿಸಿ, ಆದೇಶವನ್ನು ಹಿಂಪಡೆಯದಿದ್ದರೆ ಗೋಕಾಕ್ ಮಾದರಿಯ ಚಳವಳಿ ನಡೆಸುವುದಾಗಿ ಒಬ್ಬರು, ಸಾಹಿತ್ಯ ಪರಿಷತ್ತಿನ ಮುಂದೆ ಆಮರಣಾಂತ ಉಪವಾಸ ಕೂಡುವುದಾಗಿ ಪರಿಷತ್ತಿನ ಅಧ್ಯಕ್ಷರು ಹೀಗೆ ತಮಗೆ ತೋಚಿದ ಹೋರಾಟದ ಮಾದರಿಗಳನ್ನೆಲ್ಲಾ ಪ್ರಯೋಗ ಮಾಡುವುದಾಗಿ ಗುಡುಗಿದ್ದಾರೆ. ಇವರೆಲ್ಲರಿಗೂ ಸಾಮಾನ್ಯವಾಗಿ ಎದುರಾಗುವ ಒಂದು ಪ್ರಶ್ನೆಯೆಂದರೆ ನಿಮ್ಮ ಮಕ್ಕಳನ್ನ ಕನ್ನಡ ಶಾಲೆಗೆ ಕಳುಹಿಸಿದ್ದೀರಾ? ಈ ಪ್ರಶ್ನೆಗೆ ಅವರ ಉತ್ತರ ಯಾವ ಸರ್ಕಾರಿ ಶಾಲೆ ಚೆನ್ನಾಗಿದೆ ರೀ ಸೇರಿಸೋದಕ್ಕೆ? ಅಂತ ಪ್ರತಿ ಪ್ರಶ್ನೆ ಎದುರಾಗುತ್ತದೆ. ಅಂದರೆ ಇವರ ಮಕ್ಕಳು ಮೊಮ್ಮಕ್ಕಳು ಮಾತ್ರ ಖಾಸಗಿ ಶಾಲೆಗಳಲ್ಲಿ ಓದಬೇಕು, ಬಡ ಕನ್ನಡಿಗನ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕನ್ನಡ ಕಲಿಬೇಕು. ಸರ್ಕಾರದ ಮೇಲೆ ಇಷ್ಟೆಲ್ಲಾ ಭೀಕರ ಯುದ್ಧ ಸಾರುವ ಈ ವೀರ ಕನ್ನಡಿಗರು ಯಾವ ನೈತಿಕತೆಯಿಟ್ಟುಕೊಂಡು ಹೋರಾಟ ಮಾಡುತ್ತಾರೋ ತಿಳಿಯದು.
ಇದಕ್ಕೆ ಸಂಬಂಧಪಟ್ಟಂತೆ ಒಂದು ಘಟನೆಯನ್ನು ಇಲ್ಲಿ ಪ್ರಾಸ್ತಾಪ ಮಾಡುತ್ತೇನೆ. ಕೆಲವು ತಿಂಗಳ ಹಿಂದೆ 5 ಕ್ಕಿಂತ ಕಡಿಮ ಮಕ್ಕಳಿರುವ ಸರ್ಕಾರಿ ಶಾಲೆಗಳನ್ನು ಮುಚ್ಚುವಂತೆ ಸರ್ಕಾರ ಹೊರಡಿಸಿದ ಆದೇಶದ ವಿರುದ್ಧ ಒಂದು ವಿದ್ಯಾರ್ಥಿ ಸಂಘಟನೆ ಶಾಸಕರ ಭವನದಲ್ಲಿ ಸಭೆ ಕರೆದಿತ್ತು. ಆ ಸಭೆಗೆ ಭಾಗವಹಿಸಿದ್ದ ಬಹುಪಾಲು ವಿದ್ಯಾರ್ಥಿಗಳು ಹಳ್ಳಿಗಳಿಂದ ಬಂದು ನಗರದ ಸರ್ಕಾರಿ ಕಾಲೇಜುಗಳಲ್ಲಿ ಕಲಿಯುತ್ತಿರುವ ಬಡ ರೈತ ಕೂಲಿ ಕಾರ್ಮಿಕರ ಮಕ್ಕಳೇ ಇದ್ದರು. ಇವರನ್ನು ಎದುರಿಗೆ ಕೂರಿಸಿಕೊಂಡು ನಟ ಕಂ ಚಿಂತಕರೊಬ್ಬರು ನನಗೆ ಈ ವಯಸ್ಸಿನಲ್ಲಿ ರಕ್ತ ಕುದಿತಾ ಇದೆ, ನಿಮಗೆಲ್ಲಾ ಏನೂ ಅನ್ನಿಸ್ತಲ್ಲವಾ? ಅಂತ ಪಾಪದ ಹುಡುಗರ ಮುಂದೆ ತಮ್ಮ ಭಾಷಾ ಪ್ರೇಮವನ್ನು ಪ್ರದರ್ಶಿಸಿ ಒಂದೆರೆಡು ನಿಮಿಷ ವೇದಿಕೆಯಲ್ಲಿದ್ದು ನಿರ್ಗಮಿಸಿದರು.
ಬೆಳಿಗ್ಗೆ 10ಕ್ಕೆ ಆರಂಭವಾದ ಈ ಸಭೆ ಮಧ್ಯಾಹ್ನ 2.30 ರವರೆಗೂ ಧೀರ್ಘವಾಗಿ ನಡೆಯಿತು. ಅಲ್ಲಿಯವರೆಗೂ ಈ ಬಡ ಹಾಸ್ಟೆಲ್ ವಾಸಿಗಳು ಹಸಿದ ಹೊಟ್ಟೆಯಲ್ಲಿ ಸರ್ಕಾರದ ಆದೇಶದ ಬಗ್ಗೆ ಕಣ್ಣುಗಳಲ್ಲಿ ಕೆಂಡಕಾರುವಂತಹ ಭಾಷಣಗಳನ್ನು ಕೇಳಿ ಹೋರಾಟಕ್ಕೆ ಸಜ್ಜಾಗಿದ್ದರು. ನಂತರ ವಿವಿಧ ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳ ಅಭಿಪ್ರಾಯಕ್ಕೆ ವೇದಿಕೆ ಕರೆದರು. ಅಷ್ಟರೊಳಗೆ ಹಿರಿಯ ಭಾಷಣಕಾರರೆಲ್ಲಾ ವೇದಿಕೆ ತ್ಯಜಸಿದ್ದರು. ನನ್ನ ಸರಣಿ ಬಂದಾಗ ನೇರವಾಗಿ ಆ ವಿದ್ಯಾರ್ಥಿಗಳಿಗೆ ಕೇಳಿದೆ, “ಬೆಳಿಗ್ಗೆ ಮಾತನಾಡಿದ ಚಿಂತಕರು ನಿಮಗೆ ರಕ್ತ ಕುದಿತಾ ಇಲ್ಲವಾ ಅಂತ ರೋಷ ಇಲ್ಲವಾ ಅಂತ ನಿಮ್ಮಗಳನ್ನ ತಿವಿದು ಹೋದರು. ಅಲ್ಲಾ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ನಿಮಗ್ಯಾಕಿರಬೇಕು ರೋಷ? ನೀವೆಲ್ಲಾ ನೇರವಾಗಿ ಕೇಳಬೇಕು, ಸಾರ್ ನಿಮ್ ಮಕ್ಕಳನ್ನ ಯಾವ ಶಾಲೆಗೆ ಸೇರಿಸಿದ್ದೀರಾ? ಬಡ ರೈತ ಕೂಲಿಕಾರ್ಮಿಕರ ಮಕ್ಕಳು ಮಾತ್ರ ಸರ್ಕಾರಿ ಶಾಲೆಗೆ ಹೋಗಬೇಕು ಸಮಾನತೆ ಸಮಾಜವಾದ ಮಾತಾಡೋ ನಿಮ್ಮ ಮಕ್ಕಳು ಮಾತ್ರ ಇಂಗ್ಲಿಷ್ ಶಾಲೆಗೆ ಹೋಗ್ಬೇಕು. ನೀವು ನಮಗಲ್ಲ ಹೇಳಬೇಕಾಗಿರೋದು ಈ ಮಾತನ್ನ,” ಅಂತ ಅವರಿಗೆ ಹೇಳಿ ಅಂತಂದು ವೇದಿಕೆಯಿಂದಿಳಿದೆ.
ಇಷ್ಟೆಲ್ಲಾ ಹೋರಾಟ ಮಾಡುವ ಬದಲು ಶಿಕ್ಷಣ ಸಚಿವರಿಗೆ ಗಡುವು ನೀಡುವುದನ್ನ ಬಿಟ್ಟು ಮೊದಲು ಇವರೆಲ್ಲಾ ತಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗೆ ಸೇರಿಸಿ ಕನ್ನಡ ಕಲಿಸಲಿ. ಇತ್ತೀಚೆಗೆ ಸಾಹಿತ್ಯ ವಲಯದೊಬ್ಬರ ಶಾಲೆಗೆ ಭೇಟಿನೀಡಿದ್ದಾಗ ಅವರ ಶಾಲೆಯಿರುವ ಹಳ್ಳಿಯ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳ ದುಃಸ್ಥಿತಿ ಬಗ್ಗೆ ಹೇಳುತ್ತಾ ಒಂದನೇ ಕ್ಲಾಸಿನಿಂದ ಐದನೇ ಕ್ಲಾಸಿನವರೆಗೆ ಒಬ್ಬನೇ ಶಿಕ್ಷಕನಿದ್ದರೆ ಎಲ್ಲಿಂದ ಮಕ್ಕಳು ವಿದ್ಯಾವಂತರಾಗುತ್ತಾರೆ. ಒಂದು ತರಗತಿಯಲ್ಲಿ ಕೇವಲ ಇಬ್ಬರು ವಿದ್ಯಾರ್ಥಿಗಳಿದ್ದರೆ ಅವರಿಗೆ ಶಾಲೆಯ ವಾತಾವರಣ ಇಷ್ಟವಾಗಲು ಸಾಧ್ಯಾನಾ. ಇಂತಹ ಶಾಲೆಗಳಿಗೆ ಸೇರಿಸೋದು ಅಂದರೆ ಸುಸೈಡ್ ಮಾಡಿಕೊಂಡಂತೆ ಅಂತ ಹೇಳಿ, ಇಷ್ಟೆಲ್ಲಾ ಮಾತನಾಡುವ ಸಾಹಿತಿಗಳು ಒಂದೊಂದು ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ರೆ ಸಾಕೆಂದು ಅಭಿಪ್ರಾಯಪಟ್ಟರು.
ನನ್ನ ತಂದೆ ಸಾಹಿತಿಯಾಗಿ ಸರ್ಕಾರಿ ಕಾಲೇಜಿನ ಕನ್ನಡ ಉಪನ್ಯಾಸಕನಾಗಿ ನನ್ನನ್ನು ನಾಗರಬಾವಿಯ ಸರ್ಕಾರಿ ಶಾಲೆಗೆ ಸೇರಿಸಿದಾಗ ಇದೇ ಸಾಹಿತಿಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳೇ ಯಾಕೆ ಸೇರಿಸಿದ್ದೀರಾ ಯಾವುದಾದ್ರು ಖಾಸಗಿ ಶಾಲೆಗೆ ಸೇರ್ಸಿ ನಾವು ಸೀಟ್ ಕೊಡಿಸ್ತೀವಿ ಅಂದವರ ಸಂಖ್ಯೆಯೇ ಹೆಚ್ಚು. 5ನೇ ತರಗತಿ ಎಲ್.ಕೆ.ಜಿ. ಮಕ್ಕಳು ಕಲಿಯುವ ‘ಎ’ ಫಾರ್ ಆಪಲ್ ಕಲಿಯೋಕೆ ನನ್ನ ಸಹಪಾಠಿಗಳು ತಿಣುಕಾಡುತ್ತಿದ್ದನ್ನು ನೆನೆಸಿಕೊಂಡರೆ ಈಗಲೂ ದುಃಖವಾಗುತ್ತೆ. ನಗರದಲ್ಲೇ ಇದ್ದು ಇಲ್ಲಿನ ಇಂಗ್ಲಿಷ್ ಕಾಂಪ್ಲೆಕ್ಸ್‌ಗಳ ಮಧ್ಯೆ ಸಿಲುಕಿ ತಮ್ಮ ವಿದ್ಯಾಭ್ಯಾಸವನ್ನೇ ನಿಲ್ಲಿಸಿದವರ ಸಂಖ್ಯೆ ಹೆಚ್ಚು. ಬೆಳಿಗ್ಗೆಯೆದ್ದು ಪೇಪರ್ ಹಾಕಿ, ತಂದೆಯೊಂದಿಗೆ ಇಡ್ಲಿ ಮಾರಿ, ಮನೆ ಮನೆಗೆ ಹೂ ಮಾರಿ 10 ಗಂಟೆಗೆ ಶಾಲೆಗೆ ಬರುತ್ತಿದ್ದ ಈ ಪ್ರತಿಭಾವಂತರು 5ನೇ ಕ್ಲಾಸಿನ ಇಂಗ್ಲಿಷ್ ಗುಮ್ಮಕ್ಕೆದಿರಿ ಓದಿಗೆ ವಿದಾಯ ಹೇಳಿದರು. ಈ ಮಕ್ಕಳ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲದೆ ತಮ್ಮ ಮಕ್ಕಳ ಸುಖದ ಬಗ್ಗೆ ಅವರು ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿ, ಇವರ ಮಕ್ಕಳು ಬರೆದ ಇಂಗ್ಲಿಷ್ ಕವನಕ್ಕೆ ಚಪ್ಪಾಳೆ ತಟ್ಟಿ ಆನಂದಿಸುವವರು ಬಡವರ ಮಕ್ಕಳು ಇಂಗ್ಲಿಷ್ ಕಲಿತರೆ ಸಹಿಸದಿರೋದು ಎಷ್ಟು ಸರಿ.
ಸುಶಿಕ್ಷಿತ ತಂದೆತಾಯಿಗಳ ಮಕ್ಕಳಲ್ಲದ, ಸ್ಲಂಗಳಿಂದ ಬಂದು ವಿದ್ಯೆ ಕಲಿಯುವ ಈ ಮಕ್ಕಳು ಯಾಕೆ ಕೀಳರಿಮೆಯಿಂದ ನರಳಬೇಕು? ಭ್ರಷ್ಟಾಚಾರದ ಬಗ್ಗೆ ಕವಿತೆ ಬರೆಯುವ ಕವಿ ಉಪನ್ಯಾಸಕರೊಬ್ಬರು ತಮ್ಮ ಮಗನನ್ನು ಒಂದನೇ ಕ್ಲಾಸಿಗೆ ಇಂಗ್ಲಿಷ್ ಕಲಿಯಲಿ, ನನ್ನಂತ ಕನ್ನಡ ಎಂ.ಎ. ಮಾಡಿ ಕಷ್ಟ ಪಡಬಾರದು ಅಂತ ಸೇರಿಸಿದ್ದು ಯಾವ ಶಾಲೆಗೆ ಗೊತ್ತಾ? ರಿಂಗ್ ರಸ್ತೆ ಪಕ್ಕದ ಜಾಗವನ್ನು ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಿಸಿ ಕೇಸು ಹಾಕಿಸಿಕೊಂಡ ಹಾಲಿ ಸಚಿವರೊಬ್ಬರು ನಡೆಸುತ್ತಿರುವ ಶಾಲೆಗೆ. ಸಾಹಿತಿಗಳಲ್ಲೇ ದ್ವಂದ್ವವಿರುವಾಗ ಹೇಗೆ ಇಂಗ್ಲಿಷ್ ಮಾಧ್ಯಮ ಆರಂಭಿಸುವುದನ್ನು ವಿರೋಧಿಸುತ್ತಿರುವುದು ಮಾತ್ರ ಅಸಹನೀಯ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಕನ್ನಡದ ಜೊತೆಗೆ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಯಲಿ. ನಗರದ ಖಾಸಗಿ ಶಾಲೆಗಳ ಮಕ್ಕಳಿಗೆ ಪೈಪೋಟಿ ನೀಡುವಂತೆ ಬೆಳೆಯಬೇಕು. ಹಾಗಾದರೆ ಮಾತ್ರ ಸಾಹಿತಿಗಳು ಹೇಳುವ ಸಮಾನ ನ್ಯಾಯ ಪಾಲನೆಯಾಗುತ್ತದೆ. ಪರರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುವುದನ್ನು ಬಿಟ್ಟು ತಮ್ಮ ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗಳಿಗೆ ಕಳುಹಿಸುವ ಮೂಲಕ ಹೊಸ ಮಾದರಿಯ ಹೋರಾಟ ಮಾಡಲಿ.
 ಕೃಪೆ : ವರ್ತಮಾನ

ಮಾತ್ಗವಿತೆ-81

ಬಂದವರು ಯಾರೆಂದು ನೋಡಿದರೆ
ಮತ್ತದೇ ಹಳೇ ಮುಖವೇ ಕಾಣಿಸಬೇಕೆ ?
ಬಂದದ್ದು ಬರಲಿ ; ಪಾಲಿಗೆ ಬಂದದದ್ದಲ್ಲವೆ
ಎಂದುಕೊಂಡರೂ
ಹಳತೆಲ್ಲವೂ ಹೊನ್ನಾಗಲಾರದಲ್ಲವೆ ?
ಮತ್ತೇ ಕಸಿವಿಸಿ ; ಬೇಸರಿಕೆ
ಯಾಕೆ ಬರುತ್ತಾವೋ ಇಂಥ ವಿಚಾರಗಳು !

Sunday, June 10, 2012

ಶ್ರೀಮದ್ವಾಲ್ಮೀಕಿ ರಾಮಾಯಣದ ಮಡಿಪೆಟ್ಟಿಗೆಯೊಳಗೆ...!

ಡಿ.ಎ.ಶಂಕರ್




ಎಷ್ಟೋ ಕಾಲದ ನಂತರ ಶ್ರೀ ಮದ್ವಾಲ್ಮೀಕಿ ರಾಮಾಯಣವನ್ನು ಮತ್ತೆ ಇಡಿಯಾಗಿ ಓದಿದಾಗ ಆಶ್ಚರ್ಯದ ಸಂಗತಿಯೊಂದು ಕಾಣಿಸಿಕೊಂಡಿತು. ಆಶ್ಚರ್ಯದ ಜೊತೆಯಲ್ಲಿ ವಾಲ್ಮೀಕಿಯ ಶ್ರೀರಾಮ `ಪಾನಕ, ಪನಿವಾರ, ಕೋಸಂಬರಿ; ಕರಬೂಜ ಸಿದ್ದೋಟುಗಳ ಹೋಳು, ಸೀಕರಣೆ`ಗಳ ಶ್ರೀರಾಮನಾಗಿ ಪರಿವರ್ತಿತವಾಗಿದ್ದು, ಮೂಲ ಚಿತ್ರಪಲ್ಲಟವಾದದ್ದು, ಯಾವಾಗ, ಯಾರ ಕಾಲದಲ್ಲಿ, ಯಾವ ಬಲಿಷ್ಠ ಜೈನ, ವೈದಿಕ ಬ್ರಾಹ್ಮಣ ಸಂಪ್ರದಾಯದ ಹೊರೆಯ ಭಾರದಲ್ಲಿ ಎನ್ನುವ ಪ್ರಶ್ನೆ ಕಾಡತೊಡಗಿತು.  ಏಕೆಂದರೆ ವಾಲ್ಮೀಕಿಯ ಶ್ರೀರಾಮ ಆಹಾರ ವಿಹಾರಗಳಲ್ಲಿ ಬ್ರಾಹ್ಮಣ ಆಹಾರ ವಿಹಾರಗಳಿಂದ ಅತ್ಯಂತ ಭಿನ್ನನಾದವನು, ಭಿನ್ನ ಪ್ರಕೃತಿಯವನು. `ವೇದೋಪನಿಷದಗಳ ಭೂತಗನ್ನಡಿಯೊಳಗೆ ಪಡಿಮೂಡಿದಾಕೃತಿಗೆ` ತಾನೆ ಮುಗ್ಧನಾದವನಲ್ಲ. ಇವೊತ್ತು ನಮಗೆ ಸಾಂಸ್ಕೃತಿಕವಾಗಿ ಯಾವ ಆಹಾರ ಬಳಕೆಯ ಬಗ್ಗೆ ಸಂಕೋಚ, ದಾಕ್ಷಿಣ್ಯಗಳಿವೆಯೋ ಅವಕ್ಕೆ ಹೊರತಾದವನು. ಅಷ್ಟೇ ಅಲ್ಲ ಇವು ಸ್ವಾಭಾವಿಕ ಎಂದೇ ತಿಳಿದವನು ಭಾಷ್ಯಕ್ಕಿಂತ ಮೂಲ ಪಠ್ಯ ಹೇಗೆ ಸ್ವೀಕಾರಾರ್ಹವೋ ಹಾಗೆ ವಿವರಣೆಗಳಿಗಿಂತ ಉದಾಹರಣೆಗಳೇ ಹೆಚ್ಚು ವಿಶ್ವಾಸಾರ್ಹ. ಹಾಗಾಗಿ ಇಲ್ಲಿ ಮೂಲ ಪಾಠದ ವಿವರವನ್ನೇ ಮೊದಲು ಕೊಡುತ್ತೇನೆ.

ಅಯೋಧ್ಯಾಕಾಂಡದಲ್ಲಿ, ಗುಹನ ಭೇಟಿ ನಂತರ, ಅರಣ್ಯಾಭಿಮುಖವಾಗಿ ಗಂಗಾನದಿಯನ್ನು ದಾಟಿ ಹೋಗಬೇಕಾದ ಸೀತೆ ಈ ಪ್ರಾರ್ಥನೆ ಸಲ್ಲಿಸುತ್ತಾಳೆ.


ಸುರಾಘಟಸ್ರೇಣ ಮಾಂಸಭೂತೌದನೇನ ಚ/

ಯಕ್ಷ್ಯೇ ತ್ವಾಂ ಪ್ರಯತಾ ದೇವಿ ಪುರೀಂ ಪುನರುಪಾಗತಾ//
(ಅಯೋಧ್ಯಾಕಾಂಡ, ಸರ್ಗ 52, ಶ್ಲೋಕ 89, ಪುಟ 406)

“ದೇವಿ, ನಾನು ಅಯೋಧ್ಯೆಗೆ ಬಂದ ಮೇಲೆ ವ್ರತನಿಷ್ಠಳಾಗಿ ಒಂದು ಸಾವಿರ ಮದ್ಯ ಕಲಸಗಳನ್ನರ್ಪಿಸಿ ಮಾಂಸದಿಂದ ನಿನಗೆ ಮಹಾಬಲಿಯನ್ನು ಸಮರ್ಪಿಸುವೆನು”

ಮದ್ಯ, ಮಾಂಸಗಳ ನೈವೇದ್ಯ, ಅದೂ ಸೀತೆಯಿಂದ ಎನ್ನುವುದು ಇವೊತ್ತಿಗೆ ಅಸ್ವಾಭಾವಿಕ ಎನ್ನಿಸುತ್ತದೆ. ಇಂಥ ನೈವೇದ್ಯ ಪದ್ಧತಿ ಮೇಲುಜಾತಿಗಳು ಎನ್ನಿಸಿಕೊಂಡಿರುವವರಲ್ಲಿ ಇಂದು ಇಲ್ಲ.

ಗಂಗೆಯನ್ನು ದಾಟಿ ರಾಮಲಕ್ಷಣ ಸೀತೆಯರು ವತ್ಸ ದೇಶಕ್ಕೆ ಬಂದಾಗ ಅವರಿಗೆ ಹಸಿವಾಗಿ ಆಹಾರ ಬೇಕು ಅನ್ನಿಸಿತು. ಆಗ:


ತೌ ತತ್ರ ಹತ್ವಾ ಚತುರೋ ಮಹಾಮೃಗಾನ್

ವರಹಾಮೃಶ್ಯಂ ಪೃಷತಂ ಮಹಾರುರುಮ್/
ಆದಾಯ ಮೇಧ್ಯಂ ತ್ವರಿತಂ ಭುಭಕ್ಷಿತೌ
ವಾಸಾಯ ಕಾಲೇ ಯಯತುರ್ವನಸ್ಪತಿ ಮ್//
(ಅದೇ ಭಾಗ, ಸರ್ಗ 52 ಶ್ಲೋಕ 102, ಪುಟ 408)

“ಆಗ ರಾಮಲಕ್ಷ್ಮಣರು ಒಂದು ವರಾಹವನ್ನೂ ರಷ್ಯ ಪೃಷತ ಮಹಾರುರು ಎಂಬ ಜಿಂಕೆಯ ಜಾತಿಗಳಲ್ಲಿ ಒಂದೊಂದನ್ನೂ ಸಂಹರಿಸಿದರು. ಆ ನಾಲ್ಕು ಮೃಗಗಳ ಪರಿಶುದ್ಧವಾದ ಮಾಂಸವನ್ನು ಸ್ವೀಕರಿಸಿ. ಸಾಯಂಕಾಲ ನಿವಾಸಾರ್ಥವಾಗಿ ಬಂದು ಮರದಡಿಯನ್ನು ಸೇರಿದರು”.


ಸ್ಪಷ್ಟವಾಗಿ ಕಾಣುವಂತೆ ಇಲ್ಲಿ ಆಹಾರ ಸ್ವೀಕಾರ್ಯದ ಬಗ್ಗೆ, ಸಸ್ಯಾಹಾರ ಮಾಂಸಾಹಾರಗಳ, ವೈದಿಕ-ಅವೈದಿಕಗಳ ಬಗ್ಗೆ ಯಾವ ತಾರತಮ್ಯವೂ ಇಲ್ಲ.


ಯಮುನಾ ನದಿಯನ್ನು ದಾಟುವಾಗಲೂ ಸೀತೆ, ಗಂಗೆಗೆ ಅರ್ಪಿಸುವ ಬಾಗಿನದಂತೆ ಇಲ್ಲೂ, ಕ್ಷೇಮವಾಗಿ ಹಿಂತಿರುಗಿದ ನಂತರ “ಗೋಸಹಸ್ರೇಣ, ಸುರಾಘಟ ಶತೇನ”ದಿಂದ ಅರ್ಚಿಸುತ್ತೇನೆ ಎನ್ನುತ್ತಾಳೆ (ಅದೇ ಸರ್ಗ 55, ಶ್ಲೋಕ 20) ಗೋದಾನ, ಮದ್ಯದಾನಗಳ ನಡುವೆ ಮಡಿ ಮೈಲಿಗೆಯ ವಿಚಾರ ಇಲ್ಲಿ ಸುಳಿಯುವುದಿಲ್ಲ.


ಯಮುನೆಯನ್ನು ದಾಟಿ, ಒಂದು ಹರಿದಾರಿ ನಡೆದ ನಂತರ ರಾಮ ಲಕ್ಷ್ಮಣ ಸೀತೆಯರು `ಬಹೂನ್ ಮೇಧ್ಯಾನ್ ಮೃಗಾನ್ ಹತ್ವಾ ಚೇರುತುರ್ಯಮುನಾವತೇ` (ಅದೇ ಶ್ಲೋಕ 34, ಸರ್ಗ 55, ಪುಟ 429) ಅಂದರೆ `ಆಹಾರ ಯೋಗ್ಯವಾದ ಕೆಲವು ಮೃಗಗಳನ್ನು ಸಂಹರಿಸಿ ಭಕ್ಷಿಸಿದರು` ಎಂದರ್ಥ.


ಮುಂದೆ, ಚಿತ್ರಕೂಟದಲ್ಲಿ ಒಂದು ಪರ್ಣಶಾಲೆಯನ್ನು ಕಟ್ಟಿ ಅಲ್ಲಿ ವಾಸಮಾಡುವ ಮೊದಲು ಶ್ರೀರಾಮ ಲಕ್ಷ್ಮಣನನ್ನು ಕುರಿತು ಹೀಗೆ ಹೇಳುತ್ತಾನೆ. `ವತ್ಸ, ಜಿಂಕೆಯ ಮಾಂಸವನ್ನು ತಂದು ಈ ಪರ್ಣಶಾಲೆಗೆ ಬಲಿ ಕರ್ಮವನ್ನು ನೆರವೇರಿಸೋಣ` ಎಂದಾಗ ಲಕ್ಷ್ಮಣ ಒಂದು ಕೃಷ್ಣಮೃಗವನ್ನು ಕೊಂದು, ಜ್ವಲಿಸುವ ಅಗ್ನಿಯಲ್ಲಿ ಹಾಕಿ ಬೇಯಿಸಿದನು. ರಕ್ತವು ಶೋಷಿಸಿ ಮಾಂಸವು ಚೆನ್ನಾಗಿ ಬೆಂದ ಮೇಲೆ, ಶ್ರೀರಾಮನನ್ನು ಕರೆದು

“ತಂ ತು ಪಕ್ವಂ ಸಮಾಜ್ಞಾಯ ನಿಷ್ಟಸ್ತಂ ಛಿನ್ನಶೋಣಿತಮ್/

`ಅಯಂ ಕೃಷ್ಣಃ ಸಮಾಪ್ತಾಂಗ: ಶೃತಃ ಕೃಷ್ಣಮೃಗೋ ಯಥಾ
ದೇವತಾಂ ದೇವಸಂಕಾಶ ಯಜಸ್ವ ಕುಶಲೋಹ್ಯಸಿ//

ಅಂದರೆ “ಅಣ್ಣಾ, ಸರ್ವಾಂಗಗಳಿಂದಲೂ ಯುಕ್ತವಾದ ಈ ಜಿಂಕೆಯನ್ನು ಯಥಾವಿಧಿಯಾಗಿ ಪಕ್ವ ಮಾಡಿದ್ದೇನೆ. ದೇವತೋದ್ದೇಶವಾಗಿ ಇದನ್ನು ಅರ್ಪಿಸು” ಎನ್ನುತ್ತಾನೆ. ಮಾಂಸ ದೇವತಾಕರ್ಮಕ್ಕೂ ಸಲ್ಲುವಂಥಾದ್ದು ಎನ್ನುವುದು ಸ್ಪಷ್ಟ.

(ಅಯೋಧ್ಯಾಕಾಂಡ, ಸರ್ಗ 56, ಶ್ಲೋಕ 26-28, ಪುಟ 434-436)

ಚಿತ್ರಕೂಟದ ಮಂದಾಕಿನಿ ನದಿಯ ತೀರದಲ್ಲಿ ಕೂತು, ಪ್ರಕೃತಿಯ ಸೌಂದರ್ಯವನ್ನು ಸೀತೆಗೆ ವರ್ಣಿಸಿ ಹೇಳುತ್ತ, ಶ್ರೀರಾಮ ಆಕೆಯ ಎದುರಿಗೆ ಮಾಂಸವನ್ನಿಟ್ಟು, “ಪ್ರಿಯ, ಇದು ಪರಿಶುದ್ಧವಾಗಿದೆ, ಇದು ರುಚಿಯಾಗಿದೆ, ಇದಿನ್ನು ಚೆನ್ನಾಗಿ ಬೆಂದಿದೆ; ತಿನ್ನು” ಎಂದು ಉಪಚರಿಸುತ್ತಾನೆ. (ಅದೇ, ಸರ್ಗ 96, ಶ್ಲೋಕ 1-2, ಪುಟ 244) ಸಾಮಾನ್ಯ ಸಾಮೂಹಿಕ ವೈದಿಕ ಮನಸ್ಸಿಗೆ ಸೀತಾ, ರಾಮರು ಮಾಂಸ ತಿನ್ನುತ್ತಾರೆ ಎನ್ನುವುದು ಅಸ್ವಾಭಾವಿಕ, ಇದು ಪ್ರಕ್ಷಿಪ್ತ ಎನ್ನುವಂತಾಗಿದೆ.


ಮಾಂಸ ವೈವಿಧ್ಯವೂ ಶ್ರೀಮದ್ರಾಮಯಣದಲ್ಲಿ ಯಥೇಚ್ಛವಾಗಿದೆ. ಭರದ್ವಾಜ ಮುನಿಗಳು ಶ್ರೀರಾಮನ ಸಹಚರರಿಗೆ ತಮ್ಮ ತಪಶ್ಶಕ್ತಿಯಿಂದ ಏರ್ಪಡಿಸಿದ ಔತಣದಲ್ಲಿ


ಅಜೈಶ್ಚಾಪಿ ಚ ವಾರಾಹ್ಯೆರ್ನೀಷ್ಠಾನವರಸಂಚಯೈಃ/

ಫಲನಿರ್ವ್ಯೆಹಸಂಸಿದ್ಧೈ ಸೂಪೈರ್ಗಂಧರ ಸಾನ್ವಿತೈಃ/

ಒಂದು ಕಡೆ ಮೇಕೆಯ ಮಾಂಸ/ ಇನ್ನೊಂದು ಕಡೆ ಹಂದಿಯ ಮಾಂಸ.... ಚೆರಿಗೆಗಳಲ್ಲಿ ಪಕ್ವವಾದ ಜಿಂಕೆ, ನವಿಲು ಮತ್ತು ಕೋಳಿಗಳ ಮಾಂಸಗಳು ಅಣಿಯಾದವು” (ಅಯೋಧ್ಯಾಕಾಂಡ, ಉತ್ತರಾರ್ಧ, ಸರ್ಗ 91, ಶ್ಲೋಕ 67, 70, ಪುಟ 219, 220)


ಮಾಂಸ ಬರಿಯ ಔತಣಕ್ಕೆ ಅಷ್ಟೆ ಅಲ್ಲ. ಅದು ಶ್ರಾದ್ಧದಂಥ ವೈದಿಕ ಕಾರ್ಯದಲ್ಲೂ ಶ್ರೇಷ್ಠವಾದದ್ದು. ರಾವಣನಿಂದ ಹತನಾದ ಜಟಾಯುವಿಗೆ ಶ್ರೀರಾಮ ತನ್ನ ಬಂಧುವಿಗೆ ದಹನ ಸಂಸ್ಕಾರ ಮಾಡುವಂತೆ ಸಂಸ್ಕಾರ ಕಾರ್ಯನೆರವೇರಿಸಲು


ಸ್ಥೂಲಾನ್ ಹತ್ಯಾ ಮಹಾರೋಹೀನನುತಸ್ತಾರ ತ್ವಂ ದ್ವಿಜಮ್

ರೋಹಿಮಾಂಸಾನಿ ಚೋತ್ಕೃತ್ಯ ಪೇಶೀಕೃತ್ಯ ಮಹಾಯಶಾಃ
(ಅರಣ್ಯಕಾಂಡ, ಸರ್ಗ 68, ಶ್ಲೋಕ 33, ಪುಟ 430)

“ದೊಡ್ಡ ದೊಡ್ಡ ಜಿಂಕೆಗಳನ್ನು ಕೊಂದು ತಂದು ಜಟಾಯುವಿಗೆ ಪಿಂಡವನ್ನರ್ಪಿಸುವುದಕ್ಕಾಗಿ ದರ್ಭೆಗಳನ್ನು ಹರಡಿ.... ಜಿಂಕೆಗಳ ಮಾಂಸ ಪಿಂಡಗಳನ್ನು ನಿರ್ಮಿಸಿದನು”.


ರಾಮ ಲಕ್ಷ್ಮಣರು ಪಂಪಾಸರೋವರದ ದಾರಿ ಹಿಡಿದು ನಡೆಯುವಾಗ ಕಂಬಂಧ ಹೇಳುತ್ತಾನೆ: “ರಾಘವ, ಹೆರೆದುಪ್ಪದಂತಿರುವ ದೊಡ್ಡ ದೊಡ್ಡ ಆ ಹಕ್ಕಿಗಳನ್ನು ನೀವು ಭಕ್ಷಿಸಬಹುದು. ಲಕ್ಷ್ಮಣನು ರೋಹಿತ, ವಕ್ರತುಂಡ, ನಡೆಮೀನ ಮೊದಲಾದ ಉತ್ತಮ ಜಾತಿಯ ಮೀನುಗಳನ್ನು ಬಾಣಗಳಿಂದ ಹೊಡೆದು ತರುವನು. ಅವುಗಳ ಚರ್ಮ, ರೆಕ್ಕೆ, ಮುಳ್ಳುಗಳನ್ನು ತೆಗೆದು ಕಬ್ಬಿಣ ಶೂಲದಲ್ಲಿ ಬೇಯಿಸಿ ಭಕ್ತಿಯಿಂದ ನಿನಗೆ ಕೊಡುವೆನು. ಆ ಮೀನುಗಳನ್ನು ನೀನು ಯಥೇಚ್ಚವಾಗಿ ತಿನ್ನಬಹುದು”. (ಅರಣ್ಯಕಾಂಡ, ಸರ್ಗ 73, ಶ್ಲೋಕ 14-16 ಪುಟ 459).


ತಾತ್ಪರ್ಯವೇನೆಂದರೆ ಬಗೆ ಬಗೆಯ ಮಾಂಸ ಆಹಾರಕ್ಕೆ, ದೇವಕಾರ್ಯಕ್ಕೆ, ಶ್ರಾದ್ಧಕಾರ್ಯಕ್ಕೆ ಎಲ್ಲ ಕಡೆಯೂ ಸಲ್ಲುತ್ತಿತ್ತು. ಅದರ ಬಳಕೆಯ ಬಗ್ಗೆ ಇದ್ದದ್ದು ಸಂಕೋಚರಾಹಿತ್ಯವಷ್ಟೇ ಅಲ್ಲ. ಪರಿಶುದ್ಧ ಸ್ವೀಕಾರಾರ್ಹತೆ ಎನ್ನಬಹುದು: ಸಾತ್ವಿಕತೆಯನ್ನೂ ಸಸ್ಯಾಹಾರವನ್ನು ಸಮೀಕರಿಸುವ ನಮ್ಮಂಥವರಿಗೆ ಇದು ಬಿಸಿ ತುಪ್ಪವಾಗಿ ತಲ್ಲಣಕಾರಿಯಾಗಿ ಕಾಣುತ್ತದೆ.


ಮಾಂಸ ಭಕ್ಷಣೆಯ ಜೊತೆಗೆ ಮದ್ಯವೂ ನಿಸ್ಸಂಕೋಚವಾಗಿ ಬಳಕೆಯಾಗುತ್ತಿತ್ತು. ಭರದ್ವಾಜ ಮುನಿಗಳ ಆತಿಥ್ಯ ವರ್ಣನೆಯನ್ನೇ ನೋಡಿ. ಅವರು ಆಜ್ಞಾಪಿಸಿದ ಕೂಡಲೇ “....ನದೀ ದೇವತೆಗಳು ಖರ್ಜೂರಾದಿ ಫಲಗಳಿಂದ ಹುಟ್ಟುವ ಮೈರೇಯವೆಂಬ ಮದ್ಯವನ್ನೂ ಕೆಲವು ದೇವತೆಗಳು ಗೌಡಿ ಪೈಷ್ಟಿ ಮಾಧ್ವಿ ಎಂಬ ಸುರೆಯನ್ನೂ ಒದಗಿಸಿದರು “ಭರತನ ಸೈನಿಕರು ಕಂಠ ಪೂರ್ತಿಯಾಗಿ ಭೋಜನ ಮಾಡಿ ಉಬ್ಬಿ ಮದ್ಯಪಾನವಾದ ನಂತರ ಮೈ ಮರೆತು ಭೋಗ ದ್ರವ್ಯಗಳನ್ನು ಸೇವಿಸಿ ನಲಿದಾಡಿದರು. ಕುದುರೆಯ ಕೆಲಸದವನಿಗೆ ಕುದುರೆಯಾವುದೆಂದು ಗೊತ್ತಾಗಲಿಲ್ಲ!


ಮಾವುತನಿಗೆ ಆನೆ ಯಾವುದೆಂದು ತಿಳಿಯಲಿಲ್ಲ. ಹೊಂಡಗಳು ಮದ್ಯದಿಂದ ತುಂಬಿದವು. ಮದ್ಯಪಾನದಿಂದ ಮತ್ತರಾದವನು ಹಾಗೆಯೇ ಮದಿಸಿದ್ದರು. ದಿವ್ಯಾಗರುಚಂದನಗಳನ್ನು ಬಳಿದು ಕೊಂಡವರು ಬಳಿದುಕೊಂಡೇ ಇದ್ದರು”.

(ಅಯೋಧ್ಯಾಕಾಂಡ, ಉತ್ತರಾರ್ಧ, ಸರ್ಗ 99, ಪುಟ 210-222)

ನಮ್ಮ ಇಂದಿನ ವಿಚಿತ್ರ ವಿಮರ್ಶೆಯ ಭಾಷೆಯಲ್ಲಿ ಇದು `ಅಥೆಂಟಿಕ್` ಅನ್ನಲು ಅಡ್ಡಿಯೇ ಇಲ್ಲ.

ಶ್ರೀಮದ್ವಾಲ್ಮೀಕಿ ರಾಮಾಯಣದಲ್ಲಿ ನಾವು ಮಾಡಿಟ್ಟಿರುವ ಮಡಿಪೆಟ್ಟಿಗೆಯೊಳಗಿನ ಕೆಲವು ಕೌತುಕಗಳು ಇವು. ಇಂಥವು ಇನ್ನೂ ಎಷ್ಟೋ ಇದ್ದಾವು.
 ಕೃಪೆ : ಪ್ರಜಾವಾಣಿ

आठवणीं !

ಇದು ದಲಿತರ ಭದ್ರತೆಯ ಬದುಕೆ !?




- ಸುಭಾಶ್‌ ಗಟಾದೆ

ಇದು ದಲಿತರ ಭದ್ರತೆಯ ಬದುಕೆ!?
ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಾಧೀಶ ಹಾಗೂ ರಾಷ್ಟ್ರೀಯ ಮಾನವಹಕ್ಕುಗಳ ಆಯೋಗದ ಹಾಲಿ ಅಧ್ಯಕ್ಷ ನ್ಯಾ.ಕೆ.ಜಿ. ಬಾಲಕೃಷ್ಣನ್ ನಿವೃತ್ತಿಯ ಬಳಿಕ ತಪ್ಪು ಕಾರಣಗಳಿಗಾಗಿ ಈಗಾಗಲೇ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಗುಜರಾತ್‌ಗೆ ಭೇಟಿ ನೀಡುವ ಮೂಲಕ ಅವರು ತನ್ನ ಟೀಕಾಕಾರರಿಗೆ ಮತ್ತಷ್ಟು ಗ್ರಾಸ ಒದಗಿಸಿ ದರು. ದಲಿತರ ಏಳಿಗೆಗಾಗಿ ಗುಜರಾತ್ ಸರಕಾರ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಅವರು ಪ್ರಶಂಸೆಯ ಸುರಿಮಳೆಗೈದರು. ಅಷ್ಟೇ ಅಲ್ಲ, ಇತರ ಹಲವಾರು ರಾಜ್ಯಗಳಿಗೆ ಹೋಲಿಸಿದರೆ ಗುಜರಾತ್‌ನಲ್ಲಿ ದಲಿತರ ಭವಿಷ್ಯ ಭದ್ರವಾಗಿದೆ ಎಂದು ಗುಣಗಾನ ಮಾಡಿದರು. ಆದರೆ, ಇದು ದಲಿತ ಚಿಂತಕರನ್ನು ಕೆರಳಿಸಿದೆ. ಇದು 2002ರ ಗುಜರಾತ್ ಹಿಂಸಾಚಾರದ ಹಿನ್ನೆಲೆಯಲ್ಲಿ ಹಲವಾರು ವಿವಾದಗಳಲ್ಲಿ ಸಿಲುಕಿಕೊಂಡಿರುವ ರಾಜ್ಯ ಸರಕಾರಕ್ಕೆ ಕ್ಲೀನ್‌ಚಿಟ್ ನೀಡುವ ಹಾಗೂ ಅದರ ಕಳಂಕವನ್ನು ತೊಡೆದುಹಾಕುವ ಕ್ರವಾಗಿದೆ ಎಂದು ಅವರು ಬಣ್ಣಿಸಿದ್ದಾರೆ.ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ದಲಿತ ದೌರ್ಜನ್ಯಗಳ ಬಗ್ಗೆ ಬಹಿರಂಗ ವಿಚಾರಣೆ ನಡೆಸುವ ಆಯೋಗದ ಕಾರ್ಯಕ್ರಮದ ಅಂಗವಾಗಿ ಬಾಲಕೃಷ್ಣನ್ ಗುಜರಾತ್‌ಗೆ ಎರಡು ದಿನಗಳ (ಮಾರ್ಚ್ 14-15) ಭೇಟಿ ನೀಡಿದ್ದರು. ಇದು ಕೆ. ಬಿ. ಸಕ್ಸೇನ ಸಮಿತಿಯ ಮಹತ್ವದ ಶಿಫಾರಸುಗಳ ಪೈಕಿ ಒಂದಾಗಿದೆ.

ಕೆಲವು ವರ್ಷಗಳ ಹಿಂದೆ ಸಮಿತಿಯು ದೇಶದಲ್ಲಿ ನಡೆಯುತ್ತಿರುವ ದಲಿತ ದೌರ್ಜನ್ಯಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿ ವರದಿಯೊಂದನ್ನು ಸಲ್ಲಿಸಿತ್ತು.ಕೆಲವು ಸಮಯದ ಹಿಂದೆ ಆಯೋಗ ಈ ಮಾದರಿಯ ತನ್ನ ಮೊದಲ ಬಹಿರಂಗ ವಿಚಾರಣೆಯನ್ನು ಒಡಿಶಾದಲ್ಲಿ ನಡೆಸಿತ್ತು.ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ನ್ಯಾ.ಬಾಲಕೃಷ್ಣನ್ ಗುಜರಾತ್ ಸರಕಾರದ ಮೇಲೆ ಪ್ರಶಂಸೆಗಳ ಸುರಿಮಳೆಯನ್ನೇ ಹರಿಸಿದರು.ಆದರೆ, ದಲಿತರ ನೈಜ ಬದುಕು ಬೇರೆಯದೇ ಆದ ಚಿತ್ರಣ ನೀಡಿತು.ಗುಜರಾತ್‌ನ ವಿವಿಧ ಭಾಗಗಳಿಂದ ಬಂದಿದ್ದ ದಲಿತರು ದೂರುಗಳ ಮಹಾಪೂರವನ್ನೇ ಹರಿಸಿದರು. ದೂರು ಸಲ್ಲಿಸುವ ವೇಳೆ ಪೊಲೀಸರಿಂದ ಅಸಹಕಾರ, ಸರಕಾರಿ ಅಧಿಕಾರಿಗಳ ನಿರ್ಲಕ್ಷ, ಪುನರ್ವಸತಿಯ ಕೊರತೆ ಮುಂತಾದವುಗಳತ್ತ ಅವರು ಬೆಟ್ಟು ಮಾಡಿದರು.

ಗ್ರಾಮಾಧಿಕಾರಿಯಾಗಿರುವ ಸಾನಂದ್ ಸಮೀಪದ ಕುಂಡ್ಲ ಗ್ರಾಮದ ನಿವಾಸಿ ಹಾಗೂ ದಲಿತ ಸುರೇಶ್ ಜಾದವ್, 2009ರಲ್ಲಿ ತನ್ನ ಗ್ರಾಮದಲ್ಲಿ ದೇವಸ್ಥಾನವೊಂದು ನಿರ್ಮಾಣಗೊಂಡ ಬಳಿಕ ತಾನು ಯಾವ ರೀತಿಯ ಸಾಮಾಜಿಕ ಬಹಿಷ್ಕಾರ ಎದುರಿಸಿದೆ ಎಂಬುದನ್ನು ವಿವರಿಸಿದರು.ಸಾರ್ವಜನಿಕ ಸ್ಥಳದಲ್ಲಿ ದೇವಸ್ಥಾನ ವನ್ನು ನಿರ್ಮಿಸಲಾಗಿತ್ತು.ದೇವಸ್ಥಾನ ನಿರ್ಮಾಣಕ್ಕೆ ಎಲ್ಲರಂತೆ ಸುರೇಶ್ ಜಾದವ್ ಕೂಡ ದೇಣಿಗೆ ನೀಡಿದ್ದರು. ಆದರೆ, ದೇವಸ್ಥಾನ ಆರಂಭಗೊಂಡ ಬಳಿಕ ಅದನ್ನು ಪ್ರವೇಶಿಸಲು ಜಾದವ್‌ಗೆ ಅನುಮತಿ ನೀಡಲಿಲ್ಲ. ಅದನ್ನು ಪ್ರತಿಭಟಿಸಿದಾಗ ಅವರು ಹಾಗೂ ಅವರ ಕುಟುಂಬದ ವಿರುದ್ಧ ಸಾಮಾಜಿಕ ಬಹಿಷ್ಕಾರ ಹಾಕಲಾಯಿತು.
ಅಹ್ಮದಾಬಾದ್‌ನಿಂದ 100 ಕಿ.ಮೀ. ದೂರ ದಲ್ಲಿರುವ ಸಬರ್‌ಕಾಂತ ಜಿಲ್ಲೆಯ ತಾಜುಪುರ ಗ್ರಾಮದಲ್ಲಿ ಎಪ್ರಿಲ್‌ನಲ್ಲಿ ದಲಿತ ಕುಟುಂಬ ವೊಂದರಲ್ಲಿ ಮದುವೆಯಿತ್ತು.ಕುಟುಂಬವು ಮದುವೆ ಮೆರವಣಿಗೆ ನಡೆಸಲು ಮುಂದಾ ದಾಗ ಇತರ ಸಮುದಾಯಗಳ ಜನರು ತಡೆಯೊಡ್ಡಿದರು.ಪೊಲೀಸ್ ರಕ್ಷಣೆಯ ಹೊರತಾಗಿಯೂ ಮೆರವಣಿಗೆ ಮೇಲೆ ಆಕ್ರಮಣ ನಡೆಸಲಾಯಿತು ಹಾಗೂ ಕಲ್ಲು ತೂರಲಾಯಿತು.‘‘ದೂರು ನೀಡುವಾಗ ಪೊಲೀಸರು ಮೇಲ್ಜಾತಿಯವರ ಪರವಾಗಿ ನಿಂತರು’’ ಎಂದು ದಲಿತ ಕಾರ್ಯಕರ್ತ ಸಂಜಯ್ ಪಾರ್ಮರ್ ಆರೋಪಿಸಿದರು.

1,589 ಗ್ರಾಮಗಳಲ್ಲಿ ತಾನು ನಡೆಸಿದ ಸಮೀಕ್ಷೆಯ ಫಲಿತಾಂಶವನ್ನು ಸ್ವಯಂಸೇವಾ ಸಂಘಟನೆ ‘ನೌಸರ್ಜನ್’ನ ಪ್ರತಿನಿಧಿಯೊಬ್ಬರು ಹಂಚಿಕೊಂಡರು. ಸಮೀಕ್ಷೆ ನಡೆಸಲಾದ ಗ್ರಾಮಗಳ ಪೈಕಿ 98 ಶೇ. ಗ್ರಾಮಗಳಲ್ಲಿ ಅಸ್ಪಶತೆ ಆಚರಣೆ ಇನ್ನೂ ಜಾರಿಯಲ್ಲಿದೆ ಎಂದು ಸಮೀಕ್ಷೆಯಲ್ಲಿ ಕಂಡುಕೊಳ್ಳಲಾಗಿದೆ.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆಯ ಪ್ರಕಾರ,ದಲಿತ ಸಮುದಾಯಗಳಿಗೆ ಸಂಬಂಧಿಸಿದ ಪ್ರಕರಣಗಳ ಉಸ್ತುವಾರಿಯನ್ನು ರಾಜ್ಯ ಮಟ್ಟದ ಸಮಿತಿಯೊಂದು ನಡೆಸಬೇಕು. ಹಾಗೂ ಸಮಿತಿಯು ವರ್ಷಕ್ಕೆ ಎರಡು ಬಾರಿ ಸಭೆ ಸೇರಬೇಕು. ವರ್ಷಕ್ಕೆ ಎರಡು ಸಭೆಗಳನ್ನು ಬಿಡಿ, ಸಮಿತಿ ಕಳೆದ 17 ವರ್ಷಗಳಲ್ಲಿ ಕೇವಲ ಆರು ಬಾರಿ ಸಭೆ ಸೇರಿದೆ. ದಲಿತ ದೌರ್ಜನ್ಯ ಪ್ರಕರಣಗಳ ಇತ್ಯರ್ಥಕ್ಕೆ ಒಂದು ವಿಶೇಷ ನ್ಯಾಯಾಲಯ ಮತ್ತು ಒಂದು ವಿಶೇಷ ಪಬ್ಲಿಕ್ ಪ್ರಾಸಿ ಕ್ಯೂಟರ್ ನೇಮಿಸಬೇಕೆಂದು ಈ ಕಾಯ್ದೆ ಹೇಳುತ್ತದೆ. ಆದರೆ, ಇದಕ್ಕೆ ತನ್ನ ಬಳಿ ಹಣವಿಲ್ಲ ಎಂದು ಸರಕಾರ ಹೇಳುತ್ತದೆ.

2006ರಲ್ಲಿ ಬನಸ್ಕಾಂತ ಜಿಲ್ಲೆಯಲ್ಲಿ ತಾನು ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ದೌರ್ಜನ್ಯ) ಆಗಿದ್ದಾಗ ದಲಿತರ ವಿರುದ್ಧದ 1,000ಕ್ಕೂ ಅಧಿಕ ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದಾಗ ಹಿರಿಯ ಅಧಿಕಾರಿಗಳು ತನಗೆ ಹೇಗೆ ಕಿರುಕುಳ ನೀಡಿದರು ಎಂಬುದನ್ನು ಅಮಾನತುಗೊಂಡ ಡಿಎಸ್‌ಪಿ ಎಸ್.ಕೆ.ಮಕ್ವಾನ್ ಬಹಿರಂಗ ವಿಚಾರಣೆಯ ವೇಳೆ ನ್ಯಾಯಾಧೀಶರಿಗೆ ಹೇಳಿದರು.ತಾನು ಕರ್ತವ್ಯ ನಿರ್ವಹಿಸುವುದರಿಂದ ಹಾಗೂ ಆರೋಪಿಗಳನ್ನು ಹಿಡಿಯುವುದರಿಂದ ತನ್ನನ್ನು ಪ್ರತಿ ಬಂಧಿಸಲಾಯಿತು ಎಂದು ಅವರು ವಿವರಿಸಿದರು.

ಸ್ಥಳೀಯ ಅಧಿಕಾರಿಗಳ ಕುರಿತು ಮಾಹಿತಿ ಕೇಳಿ ಮಾಹಿತಿ ಹಕ್ಕು ಕಾಯ್ದೆಯನ್ವಯ ಅರ್ಜಿ ಸಲ್ಲಿಸಿದ ಏಕೈಕ ಕಾರಣಕ್ಕಾಗಿ ಪೊಲೀಸರು ತನಗೆ ಯಾವ ರೀತಿ ಕಿರುಕುಳ ನೀಡಿದರು ಎಂಬ ಬಗ್ಗೆ ಭಾವ ನಗರದ ಲಾಲ್‌ಜಿ ಮಕ್ವಾನ ಎನ್‌ಎಚ್‌ಆರ್‌ಸಿ ಸಮಿತಿಗೆ ವಿವರಿಸಿದರು. ತನ್ನ ಗಂಡ ಮೇಲ್ಜಾತಿಯ ಜನರಿಂದ ಕೊಲೆ ಯಾಗಿದ್ದು ಪೊಲೀಸರು ಈ ಬಗ್ಗೆ ನಿರ್ಲಕ್ಷ ವಹಿಸಿ ದ್ದಾರೆ ಎಂದು ರಜುಲಾ ತಾಲೂಕಿನ ಮೀನಾಬೆನ್ ಮಕ್ವಾನ ಹೇಳಿದರು.
ಗೋರಜ್ ಮತ್ತು ರೆತಾಲ್ ಗ್ರಾಮಗಳಲ್ಲಿ ದಲಿತರನ್ನು ಬಲವಂತವಾಗಿ ವಲಸೆ ಹೋಗುವಂತೆ ಮಾಡಲಾಗುತ್ತಿದೆ ಹಾಗೂ ಅವರ ವಿರುದ್ಧ ಸಾಮಾಜಿಕ ಬಹಿಷ್ಕಾರ ವಿಧಿಸಲಾಗುತ್ತಿದೆ. ಆದರೆ ಈ ಬಗ್ಗೆ ದೂರು ನೀಡಿದರೂ ಅಹ್ಮದಾಬಾದ್ ಗ್ರಾಮೀಣ ಪೊಲೀಸರು ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸಾನಂದ್ ಗ್ರಾಮದ ದಲಿತರು ದೂರಿದರು. ಸಮುದಾಯದ ವ್ಯಕ್ತಿ ಯೊಬ್ಬನ ಹತ್ಯೆಯಾದಾಗ ಅದರ ವಿರುದ್ಧ ತಾನು ಜನರನ್ನು ಸಂಘಟಿಸಿದುದಕ್ಕಾಗಿ ತನ್ನನ್ನು ಕ್ರಿಮಿನಲ್ ಪ್ರಕರಣವೊಂದರಲ್ಲಿ ಸಿಲುಕಿಸಲಾಯಿತು ಎಂದು ಸಾನಂದ್ ಗ್ರಾಮದ ದಲಿತ ಸಮುದಾಯದ ನಾಯಕ ಬಾಬು ವನಿಯಾ ಆರೋಪಿಸಿದರು.ಕಳೆದ 10 ವರ್ಷಗಳಲ್ಲಿ ಗುಜರಾತ್‌ನಲ್ಲಿ 167 ಸ್ವಚ್ಛತಾ ಕಾರ್ಮಿಕರ ಸಾವು ಸಂಭವಿಸಿದೆ ಎಂದು ರಾಜ್ಯದಲ್ಲಿ ಸ್ವಚ್ಛತಾ ಕೆಲಸಗಾರರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಪುರುಷೋತ್ತಮ್ ವೇಲಾ ಹೇಳಿದರು. ಆದಾಗ್ಯೂ, ರಾಜ್ಯದಲ್ಲಿ ಭೂಗತ ಚರಂಡಿಗಳನ್ನು ಸ್ವಚ್ಛ ಮಾಡುವುದಕ್ಕಾಗಿ ಮ್ಯಾನ್‌ಹೋಲ್‌ಗಳಿಗೆ ಕಾರ್ಮಿಕರನ್ನು ಇಳಿಸುವ ವ್ಯವಸ್ಥೆ ಈಗಲೂ ಮುಂದುವರಿದಿದೆ ಎಂದರು.

ಪೂರ್ವ ತಯಾರಿಯ ಕೊರತೆ
ಬಹಿರಂಗ ವಿಚಾರಣೆಯನ್ನು ಏರ್ಪಡಿಸುವ ಭರದಲ್ಲಿ ಆಯೋಗ ಪೂರ್ವ ತಯಾರಿ ಮಾಡದಿರುವುದು ಎದ್ದು ಕಾಣುತ್ತಿತ್ತು. ಆಯೋಗದ 2009ರ ವರದಿಯೇ ಹೇಳು ವಂತೆ, ದೇಶಾದ್ಯಂತ ದಾಖಲಾದ ಒಟ್ಟು 94,559 ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳ ಪೈಕಿ 3,813 ಗುಜರಾತ್ ರಾಜ್ಯದಲ್ಲೇ ಘಟಿಸಿವೆ. ಗುಜರಾತ್ ಈ ಪಟ್ಟಿಯಲ್ಲಿ ಉತ್ತರಪ್ರದೇಶ ಮತ್ತು ದಿಲ್ಲಿಗಳಿಗಿಂತ ಮಾತ್ರ ಕೆಳಗಿದೆ.ರಾಜ್ಯದ ಸಾಮಾಜಿಕ ನ್ಯಾಯ ಇಲಾಖೆಯು ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಕಾನೂನು ಇಲಾಖೆಗೆ ಸಲ್ಲಿಸಿದ 23 ಪುಟಗಳ ರಹಸ್ಯ ವರದಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣಗಳನ್ನು ಕುಲಗೆಡಿಸಿದ ಹಲವಾರು ದೃಷ್ಟಾಂತಗಳನ್ನು ನೀಡಿದೆ. ಈ ಕಾಯ್ದೆಯನ್ವಯ ರಾಜ್ಯದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾದ ಪ್ರಮಾಣ ಕೇವಲ 2.5 ಶೇ. ಹಾಗೂ ದೋಷಮುಕ್ತರಾದವರ ಪ್ರಮಾಣ 97.5 ಶೇ.

ಇದು ಪೊಲೀಸರು ತನಿಖೆಯನ್ನು ಯಾವ ರೀತಿ ನಡೆಸುತ್ತಾರೆ ಹಾಗೂ ವಿಚಾರಣೆಗಳ ಸಮಯದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ಹೇಗೆ ಪ್ರತಿಕೂಲವಾಗಿ ವರ್ತಿಸುತ್ತಾರೆ ಎಂಬು ದನ್ನು ಸೂಚಿಸುತ್ತದೆ.ಈ ಕಾಯ್ದೆಯಡಿಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ವಿಚಾರಣೆ ಯನ್ನು ಡಿವೈಎಸ್‌ಪಿ ದರ್ಜೆಗಿಂತ ಕೆಳಗಿನ ಅಧಿಕಾರಿಗಳು ಮಾಡುವಂತಿಲ್ಲ. ಆದರೆ, 4,000ಕ್ಕೂ ಅಧಿಕ ಇಂಥ ಪ್ರಕರಣಗಳ ವಿಚಾರಣೆಯನ್ನು ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಅಥವಾ ಸಬ್ ಇನ್ಸ್‌ಪೆಕ್ಟರ್‌ಗಳು ನಡೆಸಿದ್ದಾರೆ. ಸಂತ್ರಸ್ತರನ್ನು ಎಸ್‌ಸಿ/ಎಸ್‌ಟಿ ಸಮುದಾಯದ ಸದಸ್ಯರು ಎಂದು ಗುರುತಿಸದ ಹಿನ್ನೆಲೆಯಲ್ಲಿ ಆರೋಪಿಗಳು ದೋಷ ಮುಕ್ತರಾಗುತ್ತಿದ್ದಾರೆ.

ಪ್ರಕರಣಗಳಿಗೆ ಸಂಬಂಧಿಸಿದ ಕಡತಗಳಲ್ಲಿ ಸಂತ್ರಸ್ತರ ಜಾತಿ ಪ್ರಮಾಣಪತ್ರಗಳನ್ನು ಲಗತ್ತಿಸದಿರುವುದೇ ಕಾರಣವಾಗಿದೆ.ದಲಿತ ದೌರ್ಜನ್ಯ ಕಾಯ್ದೆಯಲ್ಲಿ ಅವಕಾಶವಿಲ್ಲದಿದ್ದರೂ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಲಾಗುತ್ತಿದೆ.ದಲಿತ ದೌರ್ಜನ್ಯ ಕಾಯ್ದೆ ಪ್ರಕಾರ ಸುಳ್ಳು ದೂರು ದಾಖಲಿಸುತ್ತಿರುವುದೇ ಆರೋಪಿಗಳ ಭಾರೀ ಪ್ರಮಾಣದ ದೋಷಮುಕ್ತಿಗೆ ಕಾರಣ ಎಂಬುದಾಗಿ ಸಾರ್ವಜನಿಕವಾಗಿ ವ್ಯಾಖ್ಯಾನಿಸಲಾಗುತ್ತಿದೆ.ಆದರೆ, ಈ ಬಗ್ಗೆ ಅಧ್ಯಯನ ನಡೆಸಿದ ಸಾಮಾಜಿಕ ನ್ಯಾಯ ಸಮಿತಿಯ ಕಾರ್ಯದರ್ಶಿ ವಜಿಭಾಯ್ ಪಟೇಲ್, ವಿಚಾರಣೆ ಪ್ರಕ್ರಿಯೆಯಲ್ಲಿ ನಡೆಯುತ್ತಿರುವ ಹಲವು ಲೋಪದೋಷಗಳತ್ತ ಬೆಟ್ಟು ಮಾಡಿದೆ.

ಸರಕಾರದ ಶಾಮೀಲಾತಿಯೇ ಪ್ರಕರಣಗಳು ವಿಫಲವಾಗಲು ಕಾರಣ ಎಂಬುದಾಗಿ ಅದು ಸಾಧಿಸಿ ತೋರಿಸಿದೆ. ಇದಕ್ಕಾಗಿ ವಜಿಭಾಯ್ 400 ತೀರ್ಪುಗಳ ವ್ಯವಸ್ಥಿತ ಅಧ್ಯಯನ ನಡೆಸಿದ್ದರು.ಅವರ ಅಧ್ಯಯನದ ಮುಖ್ಯಾಂಶಗಳನ್ನು ‘ಕಮ್ಯುನಲಿಸಂ ಕಾಂಬ್ಯಾಟ್’ನಲ್ಲಿ ಬರೆದ ಲೇಖನವೊಂದರಲ್ಲಿ (ಮಾರ್ಚ್ 2005) ತೀಸ್ತಾ ಸೆಟಲ್ವಾದ್ ಹೀಗೆ ನೀಡಿದ್ದಾರೆ.

• 95 ಶೇಕಡಕ್ಕೂ ಅಧಿಕ ಪ್ರಕರಣಗಳಲ್ಲಿ ತನಿಖೆ ಮತ್ತು ಪ್ರಾಸಿಕ್ಯೂಶನ್ ಅವಧಿಯ ಲ್ಲಿನ ತಾಂತ್ರಿಕ ದೋಷದಿಂದಾಗಿ ಆರೋಪಿಗಳ ದೋಷಮುಕ್ತಿಯಾಗುತ್ತಿದೆ. ಉಳಿದ 5 ಶೇ. ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶಗಳನ್ನು ಸರಕಾರ ಉಲ್ಲಂಘಿಸುತ್ತಿದೆ.ಹೆಚ್ಚಿನ ಸಂದರ್ಭಗಳಲ್ಲಿ ಐಪಿಸಿಯಡಿ ದಾಖಲಾದ ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುತ್ತಿದೆ. ಆದರೆ, ದಲಿತ ದೌರ್ಜನ್ಯ ಪ್ರಕರಣಗಳ ಅಡಿಯಲ್ಲಿ ದಾಖಲಾದ ಪ್ರಕರಣಗಳು ಸಾಬೀತಾಗುತ್ತಿಲ್ಲ. ಹಾಗಾಗಿ, ಈ ಕಾಯ್ದೆಯ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ಮುಂದುವರಿಯುವಲ್ಲಿ ವ್ಯವಸ್ಥಿತ ಪಕ್ಷಪಾತ ಎದ್ದು ಕಾಣುತ್ತಿದೆ.

•ರಾಜ್ಯ ಪೊಲೀಸರು ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ಮನೋಭಾವದ ಪರಿಣಾಮವಾಗಿ ದಲಿತ ದೌರ್ಜನ್ಯ ಕಾಯ್ದೆಯಡಿ ಕೊಲೆ ಮತ್ತು ಅತ್ಯಾಚಾರ ಆರೋಪ ಎದುರಿಸುತ್ತಿರುವ ಆರೋಪಿಗಳು ಬಿಡುಗಡೆ ಗೊಳ್ಳುತ್ತಿದ್ದಾರೆ.

•ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಹೆಚ್ಚುತ್ತಿರುವ ಆರೋಪಿಗಳ ದೋಷಮುಕ್ತಿಯ ಹಿನ್ನೆಲೆಯಲ್ಲಿ ಗುಜರಾತ್‌ನಲ್ಲಿ ಇದೇ ಕಾಯ್ದೆಯಡಿಯಲ್ಲಿ ಸ್ಥಾಪನೆಗೊಂಡ ವಿಶೇಷ ನ್ಯಾಯಾಲಯಗಳ ಹಲವು ತೀರ್ಪುಗಳು ಪೊಲೀಸರು ಮತ್ತು ಪ್ರಾಸಿಕ್ಯೂಟರ್‌ಗಳ ನಿರ್ಲಕ್ಷದ ವಿರುದ್ಧ ಛೀಮಾರಿ ಹಾಕಿವೆ ಹಾಗೂ ಕ್ರಮ ಜಾರಿ ವರದಿಯನ್ನು ನಿರ್ದಿಷ್ಟ ಸಮಯದಲ್ಲಿ ಸಲ್ಲಿಸುವಂತೆಯೂ ಸೂಚಿಸಿವೆ.

• ಕಾಯ್ದೆಯ 4ನೆ ಪರಿಚ್ಛೇದದ ಪ್ರಕಾರ, ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರದ ಯಾವುದೇ ಸರಕಾರಿ ಸೇವಕನೊಬ್ಬ ಈ ಕಾಯ್ದೆಯ ಪ್ರಕಾರ ತಾನು ಮಾಡಬೇಕಾದ ಕರ್ತವ್ಯವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದರೆ ಅಂಥ ನೌಕರನಿಗೆ ಆರು ತಿಂಗಳ ಸೆರೆಮನೆ ವಾಸ (ಇದನ್ನು ಒಂದು ವರ್ಷಕ್ಕೂ ವಿಸ್ತರಿಸಬಹುದು) ವಿಧಿಸಬೇಕು ಎಂದು ಕಾಯ್ದೆ ಹೇಳುತ್ತದೆ. ನ್ಯಾಯಾಲಯಗಳು ನೀಡಿರುವ 95 ಶೇಕಡ ತೀರ್ಪುಗಳು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾಯ್ದೆಯ 4ನೆ ಪರಿಚ್ಛೇದದ ಪ್ರಕಾರ ಛೀಮಾರಿ ಹಾಕಿವೆ. ಆದರೆ, ಗುಜರಾತ್ ಸರಕಾರ ಇಂಥ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳನ್ನು ಶಿಕ್ಷಿಸುವ ಬದಲು ಭಡ್ತಿ ನೀಡಿ ಗೌರವಿಸುತ್ತಿದೆ.

ಹಲವು ವಿಧಗಳು
ಸರಕಾರಿ ಯಂತ್ರ ಆರೋಪಿಗಳೊಂದಿಗೆ ಹಲವು ವಿಧಗಳಲ್ಲಿ ಶಾಮೀಲಾಗಿ ಅವರು ದೋಷಮುಕ್ತಗೊಳ್ಳುವಂತೆ ಮಾಡುತ್ತಿದೆ. ಅವುಗಳೆಂದರೆ-
• ಪ್ರಕರಣಗಳನ್ನು ಕೆಳದರ್ಜೆಯ ಅಧಿಕಾರಿಗಳು ನಡೆಸಿದ ಕಾರಣಕ್ಕಾಗಿ ಆರೋಪಿಗಳ ದೋಷಮುಕ್ತಿ: 1995ರ ಈ ಕಾಯ್ದೆಯನ್ವಯ ದಾಖಲಾದ ದೂರುಗಳನ್ನು ಡಿವೈಎಸ್‌ಪಿ ಅಥವಾ ಅದಕ್ಕಿಂತ ಮೇಲಿನ ದರ್ಜೆಯ ಅಧಿಕಾರಿಗಳು ನಡೆಸಬೇಕು. ತಮ್ಮ ವರದಿಗಳನ್ನು ಅವರು ನೇರವಾಗಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ರವಾನಿಸಬೇಕು. ಪ್ರಕರ ಣದ ತನಿಖೆಯನ್ನು ಡಿವೈಎಸ್‌ಪಿ ದರ್ಜೆಯ ಅಧಿಕಾರಿಗಿಂತ ಕೆಳ ದರ್ಜೆಯ ಅಧಿಕಾರಿಗಳು ನಡೆಸಿದ್ದಾರೆ ಎಂಬ ಕಾರಣ ಕ್ಕಾಗಿಯೇ 95 ಶೇ. ಪ್ರಕರಣಗಳಲ್ಲಿ ಆರೋಪಿಗಳ ಖುಲಾಸೆಯಾಗುತ್ತದೆ.

• ಪೊಲೀಸರು ಜಾತಿ ಪ್ರಮಾಣಪತ್ರವನ್ನು ಲಗತ್ತಿಸಿಲ್ಲ ಎನ್ನುವ ಕಾರಣಕ್ಕಾಗಿ ಖುಲಾಸೆ: ದಲಿತ ದೌರ್ಜನ್ಯ ಕಾಯ್ದೆ ಯ ಪ್ರಕಾರ ದಾಖಲಾದ ದೂರಿಗೆ ಸಂಬಂಧಿಸಿದಂತೆ ಸೂಕ್ತ ಪ್ರಾಧಿಕಾರ ನೀಡುವ ದೂರುದಾರನ ಜಾತಿ ಪ್ರಮಾಣಪತ್ರ ವನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು. ದೂರುದಾರನ ಜಾತಿ ಪ್ರಮಾಣಪತ್ರವನ್ನು ತನಿಖಾಧಿಕಾರಿ ಲಗತ್ತಿಸಿಲ್ಲ ಎಂಬ ಕಾರಣಕ್ಕಾಗಿ ಹಲವು ಅತ್ಯಾಚಾರ ಪ್ರಕರಣದ ಆರೋಪಿಗಳು ಖುಲಾಸೆಗೊಂಡಿದ್ದಾರೆ.

• ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ನಿರ್ಲಕ್ಷ:ಈ ಪ್ರಕರಣಗಳಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳ ನೇಮಕ ಕಡ್ಡಾಯ. ಆದರೆ, ಈ ಪ್ರಾಸಿಕ್ಯೂಟರ್‌ಗಳು ದೂರುದಾರ ರಿಗೆ ಪ್ರತಿಕೂಲವಾಗಿ ವರ್ತಿಸುತ್ತಿರುವುದು ಮೊಕದ್ದಮೆಗಳು ಬಿದ್ದು ಹೋಗಲು ಕಾರಣವಾಗಿದೆ.ಇಂಥ ಪ್ರಾಸಿಕ್ಯೂಟರ್ ಗಳ ತಂತ್ರಗಾರಿಕೆಯಿಂದಾಗಿ ಮೊಕದ್ದಮೆಯೊಂದು ವಿಚಾರಣೆಯ ಹಂತ ತಲುಪುವಾಗ ವರ್ಷಗಳೇ ಉರುಳುತ್ತವೆ. ಸಂತ್ರಸ್ತ/ದೂರುದಾರ ಸಾಕ್ಷ ನುಡಿಯಲು ಕಟಕಟೆಗೆ ತಲುಪುವಾಗ ಅವರಿಗೆ ಪಬ್ಲಿಕ್ ಪ್ರಾಸಿಕ್ಯೂಟರ್ ಯಾರೆಂಬುದೇ ಗೊತ್ತಿರುವುದಿಲ್ಲ.

ಕಾಯ್ದೆಯ ವಿಶೇಷ ವಿಧಿಗಳನ್ನು ಜಾರಿ ಗೊಳಿಸುವುದನ್ನು ತಡೆಯಲು ಹಾಗೂ ಆ ಮೂಲಕ ಮೊಕದ್ದಮೆಗಳನ್ನು ದುರ್ಬಲ ಗೊಳಿಸಲು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳು ನಡೆಸುವ ಉದ್ದೇಶಪೂರ್ವಕ ಪ್ರಯತ್ನಗಳನ್ನು ನ್ಯಾಯಾಲಯಗಳು ಹಲವು ಪ್ರಕರಣಗಳಲ್ಲಿ ಖಂಡಿಸಿವೆ.

ಈ ಕಾಯ್ದೆಯ ಬಗ್ಗೆ ಗುಜ ರಾತ್ ಸರಕಾರ ನಿರಾಸಕ್ತಿ ಹೊಂದಿ ರುವುದು ಹಾಗೂ ಅದರನ್ವಯ ದಾಖಲಾದ ದೌರ್ಜನ್ಯಗಳ ಆರೋಪಿಗಳನ್ನು ಶಿಕ್ಷಿಸಲು ಇಚ್ಛಾಶಕ್ತಿಯ ಕೊರತೆ ಹೊಂದಿರುವುದು ಕಾಯ್ದೆಯನ್ನು ಅರ್ಥಹೀನಗೊಳಿಸಿದೆ. ಅದೂ ಅಲ್ಲದೆ, ದಲಿತರು ಮತ್ತು ಆದಿವಾಸಿಗಳಿಗೆ ಸಾಮಾಜಿಕ ನ್ಯಾಯ ಒದಗಿಸಿಕೊಡುವ ಉದ್ದೇಶದಿಂದ ರಚಿಸಲಾಗಿರುವ ರಾಜ್ಯ ಸರಕಾರದ ಪರಿಶಿಷ್ಟ ಜಾತಿ ಕಲ್ಯಾಣ ಇಲಾಖೆಯಲ್ಲಿ ಹಲವಾರು ಮಹತ್ವದ ಹುದ್ದೆಗಳು ಖಾಲಿ ಯಾಗಿವೆ. ಹಾಗಾಗಿ, ಸಾಮಾಜಿಕ ನ್ಯಾಯ ಕ್ರಮಗಳನ್ನು ಜಾರಿಗೊಳಿಸುವುದು ಭಾರೀ ಸವಾಲಿನ ಸಂಗತಿಯಾಗಿದೆ. ಇಲಾಖೆಯಲ್ಲಿ 300 ಹುದ್ದೆಗಳು ಖಾಲಿಯಾಗಿವೆ.

ದಲಿತರ ಬಗ್ಗೆ ಅನಾದರ
ಬೃಹತ್ ಸ್ವರೂಪದ ಕಾನೂನು ವ್ಯವಸ್ಥೆ ಮತ್ತು ಕಾನೂನುಗಳ ಸರಮಾಲೆ ಇರುವ ಹೊರತಾಗಿಯೂ ನ್ಯಾಯ ಮರೀಚಿಕೆಯಾಗಿರುವುದು ದಲಿತರನ್ನು ಸಮಾಜ ಹೇಗೆ ಕಾಣುತ್ತಿದೆ ಹಾಗೂ ಅವರ ಹಕ್ಕುಗಳಿಗೆ ಯಾವ ರೀತಿಯ ಗೌರವ ನೀಡುತ್ತಿದೆ ಎಂಬುದನ್ನು ಸೂಚಿಸುತ್ತದೆ.ಇಲ್ಲಿ ದಲಿತರು ಭಾರೀ ಪ್ರಮಾಣದ ತಾರತಮ್ಯ ಎದುರಿಸುತ್ತಿರುವುದು ಮೇಲ್ನೋಟಕ್ಕೇ ಸಾಬೀತಾಗುತ್ತದೆ. ಅವರಿಗೆ ಶ್ಮಶಾನ ಜಾಗವನ್ನು ನಿರಾಕರಿಸಲಾಗುತ್ತದೆ, ಹೊರವಲಯದಲ್ಲಿ ಪ್ರತ್ಯೇಕವಾಗಿ ವಾಸಿಸುವಂತೆ ಬಲವಂತಪಡಿಸಲಾಗುತ್ತದೆ ಹಾಗೂ ಮೀಸಲಾತಿ ಕಾರ್ಯಕ್ರಮಗಳ ಸೌಲಭ್ಯಗಳನ್ನು ನಿರಾಕರಿಸಲಾಗುತ್ತದೆ. ಅನುದಾನರಹಿತ ಶಾಲೆಗಳಿಗೆ ದಲಿತರನ್ನು ಶಿಕ್ಷಕರಾಗಿ ನೇಮಿಸುತ್ತಿಲ್ಲ ಎನ್ನುವುದು ಚರ್ಚಾರ್ಹ ವಿಷಯವಾಗಿದೆ. ಗುಜರಾತ್ ರಾಜ್ಯ ಸೆಕೆಂಡರಿ ಮತ್ತು ಹಯರ್ ಸೆಕೆಂಡರಿ ಶಿಕ್ಷಣ ಮಂಡಳಿಯ ವೆಬ್‌ಸೈಟ್ ಪ್ರಕಾರ, ರಾಜ್ಯದಲ್ಲಿ 3255 ಅನುದಾನರಹಿತ ಶಾಲೆಗಳಿವೆ. 

ಈ ಶಾಲೆಗಳ ನಡುವೆ ಹಲವಾರು ಸಾಮ್ಯತೆ ಗಳಿರಬಹುದು.ಆದರೆ, ಎದ್ದು ತೋರುವಂಥ ಒಂದು ಸಾಮ್ಯತೆಯೆಂದರೆ ಇವುಗಳು 1972ರ ಶಿಕ್ಷಣ ಕಾಯ್ದೆಯನ್ನು ಉಲ್ಲಂಘಿ ಸುತ್ತಿವೆ.ಶಿಕ್ಷಣ ಕಾಯ್ದೆಯ ವಿಧಿಗಳನ್ನು ಪಾಲಿ ಸುವುದು ಕಡ್ಡಾಯವಾಗಿದ್ದರೂ ಯಾವುದೇ ಶಾಲೆಗಳು ಇದನ್ನು ಪಾಲಿ ಸುವ ಗೊಡವೆಗೆ ಹೋಗುತ್ತಿಲ್ಲ.ಈ ಕಾಯ್ದೆಯ ಪ್ರಕಾರ, ಅನು ದಾನಿತ ಹಾಗೂ ಅನುದಾನ ರಹಿತ ಎಲ್ಲ ಶಾಲೆಗಳು ನೇಮಕಾತಿಯ ವೇಳೆ ಮೀಸಲಾತಿ ನಿಯಮಗಳನ್ನು ಅನುಸರಿಸಬೇಕು. ಈ ಶಾಲೆಗಳಲ್ಲಿ ಕೇವಲ ಬೆರಳೆಣಿಕೆಯಷ್ಟು ದಲಿತ ಶಿಕ್ಷಕರಿದ್ದಾರೆ.

ಶಿಕ್ಷಣ ಕಾಯ್ದೆಯ ವಿಧಿಗಳನ್ನು ಉಲ್ಲಂಘಿಸುವ ಶಾಲೆಗಳ ಮಾನ್ಯತೆ ರದ್ದುಪಡಿಸ ಬೇಕು ಎಂದು ಕಾಯ್ದೆ ಹೇಳುತ್ತದೆ. ಆದರೆ, ಆಶ್ಚರ್ಯದ ಸಂಗತಿಯೆಂದರೆ, ಈ ಶಾಲೆಗಳಿಗೆ ಅನುದಾನ ನೀಡುತ್ತಿಲ್ಲ ವಾದುದರಿಂದ ಮೀಸಲಾತಿಯನ್ನು ಅನುಸರಿಸುವಂತೆ ಅವುಗಳನ್ನು ಬಲವಂತಪಡಿಸುವ ಹಾಗಿಲ್ಲ ಎಂದು ಸರಕಾರ ಹೇಳುತ್ತದೆ.

ದಲಿತ ಸೊಸೈಟಿಗಳು
ನಗರಗಳಲ್ಲಿ ದಲಿತರ ವಿರುದ್ಧ ‘ಒಂದು ರೀತಿಯ ವರ್ಣಭೇದ ನೀತಿ’ಯನ್ನು ಅನುಸರಿಸುತ್ತಿರುವುದು ಎಲ್ಲ ಮಟ್ಟಗಳಲ್ಲಿ ಗೋಚರಿಸುತ್ತಿದೆ. ವಿವಿಧ ವರ್ಗಗಳ ಜನರು ವಾಸಿಸುವ ಸ್ಥಳಗಳಲ್ಲಿ ದಲಿತನೊಬ್ಬ ಮನೆ ಮಾಡುವುದು ಬಹುತೇಕ ಅಸಾಧ್ಯವಾಗಿದೆ. ದಲಿತನೊಬ್ಬ ಮನೆಗಾಗಿ ಮೇಲ್ಜಾತಿಯ ಬಿಲ್ಡರ್‌ನನ್ನು ಸಂಪರ್ಕಿಸಿದರೆ ಒಂದೋ ಆತನಿಗೆ ನೇರವಾಗಿ ಇಲ್ಲ ಎಂದು ಹೇಳಲಾಗುತ್ತದೆ, ಇಲ್ಲವೇ ಪರೋಕ್ಷವಾಗಿ ನಿರಾಕರಿಸಲಾಗುತ್ತದೆ. ಮನೆ ಹುಡುಕುವ ದಲಿತನ ಹಣಕಾಸು ಹಿನ್ನೆಲೆ ಉತ್ತಮವಾಗಿದ್ದರೂ ಹೀಗೆ ಮಾಡಲಾಗುತ್ತದೆ. ಒಂದೇ ಒಂದು ದಲಿತ ಕುಟುಂಬಕ್ಕೆ ಆಸ್ತಿ ಮಾರಿದರೂ ಅದು ಬಿಲ್ಡರ್‌ಗಳು ಅಥವಾ ರಿಯಲ್ ಎಸ್ಟೇಟ್ ಏಜೆಂಟ್‌ಗಳ ವ್ಯಾಪಾರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಬಹುಶಃ ಇದು ಸಮಾಜದಲ್ಲಿ ಆಳವಾಗಿ ಬೇರೂರಿರುವ ವರ್ಣ/ಜಾತಿ ಮನೋಭಾವದ ಸೂಚನೆಯಾಗಿದೆ. 2002ರ ಗುಜರಾತ್ ಹತ್ಯಾಕಾಂಡ ಬಳಿಕ ಈ ಮನೋಭಾವ ಪುನರುಜ್ಜೀವನಗೊಂಡಿದೆ ಎಂಬಂತೆ ಭಾಸವಾಗುತ್ತಿದೆ. ಉದಾಹರಣೆಗೆ, ಅಹ್ಮದಾಬಾದ್‌ನಲ್ಲಿ ಈಚೆಗೆ ‘ದಲಿತರಿಗಾಗಿ ಮಾತ್ರ ರೆಸಿಡೆನ್ಶಿಯಲ್ ಸೊಸೈಟಿ’ಗಳು ತಲೆಯೆ ತ್ತುತ್ತಿವೆ. ಈ ಮಾದರಿಯ 300 ಸೊಸೈಟಿಗಳು ಸ್ಥಾಪನೆಯಾ ಗಿವೆ. ಇದು ಆಯ್ಕೆಯಲ್ಲ, ಅನಿವಾರ್ಯ ಎಂದು ‘ಇಂಡಿ ಯನ್ ಎಕ್ಸ್‌ಪ್ರೆಸ್’ (ಜೂನ್ 17, 2007)ನ ವರದಿ ಯೊಂದು ಹೇಳುತ್ತದೆ.

‘‘ಮೇಲ್ಜಾತಿಯ ಜನರು ವಾಸಿಸುವ ಸ್ಥಳಗಳಲ್ಲಿ ಮನೆ ಖರೀದಿಸಲು ದಲಿತನೊಬ್ಬನಿಗೆ ಸಾಮರ್ಥ್ಯವಿದ್ದರೂ, ಹೆಚ್ಚಿನ ಸಂದರ್ಭಗಳಲ್ಲಿ ಬಿಲ್ಡರ್‌ಗಳು ಮತ್ತು ಮಾರಾಟಗಾರರು ಅವರಿಗೆ ಮನೆಗಳನ್ನು ನಿರಾಕರಿಸುತ್ತಾರೆ’’ ಎಂದು ನಿವೃತ್ತ ಐಎಎಸ್ ಅಧಿಕಾರಿ ಪಿ.ಕೆ. ವಲೇರ ಹೇಳುತ್ತಾರೆ.ಅವರು ರಾಮ್‌ದೇವ್‌ನಗರದ ದಲಿತ ಸೊಸೈಟಿಯೊಂದರಲ್ಲಿ ವಾಸಿಸುತ್ತಿದ್ದಾರೆ.ಈ ಪ್ರವೃತ್ತಿ 1982ರಲ್ಲಿ ನಡೆದ ಮೀಸಲಾತಿ ವಿರೋಧಿ ಚಳವಳಿಯ ಬಳಿಕ ಆರಂಭವಾಯಿತು ಎಂದು ಕೆಲವು ಸಮಾಜ ವಿಜ್ಞಾನಿಗಳು ಹೇಳುತ್ತಾರೆ.ಆದಾಗ್ಯೂ, ಇತ್ತೀಚಿನ ವರ್ಷಗಳಲ್ಲಿ ಜಾತಿ ಮತ್ತು ವರ್ಗ ತಾರತಮ್ಯ ಹೆಚ್ಚಿನ ತೀವ್ರತೆ ಪಡೆದುಕೊಂಡಿದೆ ಎಂಬುದನ್ನು ಅವರು ಒಪ್ಪುತ್ತಾರೆ. ಈ ಪ್ರವೃತ್ತಿಯನ್ನು ಅಹ್ಮದಾಬಾದ್‌ನ ಭವ್ಯ ಪ್ರದೇಶಗಳಾದ ಪಶ್ಚಿಮ ಅಹ್ಮದಾಬಾದ್‌ನ ಸೆಟಲೈಟ್, ವಸ್ತ್ರಪುರ, ಬೊದಕ್‌ದೆವ್, ಅಂಬವಾಡಿ ಮುಂತಾದ ಪ್ರದೇಶಗಳಲ್ಲೂ ಕಾಣಬಹುದು.

‘‘ನಗರದಲ್ಲಿ 300ಕ್ಕೂ ಅಧಿಕ ದಲಿತ ಸೊಸೈಟಿಗಳಿವೆ. ಚಾಂದ್‌ಖೇಡವೊಂದರಲ್ಲೆ 200 ಸೊಸೈಟಿಗಳಿವೆ. ಅವುಗಳ ಪೈಕಿ ಹೆಚ್ಚಿನವು 2002ರ ಹತ್ಯಾಕಾಂಡದ ಬಳಿಕ ಸ್ಥಾಪನೆ ಯಾದವು. ಗಲಭೆಯ ಸಂದರ್ಭದಲ್ಲಿ ಜನರು ಗೋಮತಿಪುರ, ಬಾಪುನಗರ್ ಮತ್ತು ದಾನಿಲಿಮ್ಡ ಪ್ರದೇಶಗಳಿಂದ ಹೊರ ಹೋಗಿದ್ದು ಈಗ ಸಾಮೂಹಿಕವಾಗಿ ಸೊಸೈಟಿಗಳಲ್ಲಿ ವಾಸಿಸುತ್ತಿದ್ದಾರೆ.ಇಲ್ಲಿ ದಲಿತ ಸೊಸೈಟಿಗಳನ್ನು ಮಾತ್ರ ನಿರ್ಮಿಸುವ ಗುತ್ತಿಗೆದಾರನ್ನೂ ಕಾಣಬಹುದಾಗಿದೆ’’ ಎಂದು ಸಾಮಾಜಿಕ ರಾಜಕೀಯ ಕಾರ್ಯಕರ್ತ ಅಚ್ಯುತ್ ಯಾಗ್ನಿಕ್ ಹೇಳುತ್ತಾರೆ.

‘ಹಿಂದೂ ರಾಷ್ಟ್ರ’ದಲ್ಲಿ ಜೀವಂತವಿರುವ ದಲಿತರಿಗೆ ಘನತೆಯಿಂದ ಬದುಕುವ ಸ್ಥಳವೇ ಇಲ್ಲದಿರುವಾಗ, ಸತ್ತವರ ಪರಿಸ್ಥಿತಿಯನ್ನು ಊಹಿಸಲೂ ಸಾಧ್ಯವಿಲ್ಲ.2001ರಲ್ಲಿ ನರೇಶ್ ಸೋಳಂಕಿಯ ಅಕ್ಕನ ಎರಡೂವರೆ ವರ್ಷದ ಮಗು ಮೃತಪಟ್ಟಿತು. ಬಣಸ್‌ಕಾಂತ ಜಿಲ್ಲೆಯ ಪಾಲನ್‌ಪುರ ಬ್ಲಾಕ್‌ನ ಹುಡ ಗ್ರಾಮದಲ್ಲಿ ವಾಸಿಸುವ ಕುಟುಂಬವು ಸಮುದಾಯದ ಸ್ಮಶಾನದಲ್ಲಿ ಮಗುವನ್ನು ದಫನ ಮಾಡಿತು. ಆದರೆ, ಅದೇ ಗ್ರಾಮದ ಪಟೇಲ್ ಸಮುದಾ ಯದ ವ್ಯಕ್ತಿಯೊಬ್ಬ ಟ್ರಾಕ್ಟರ್ ಮೂಲಕ ಮಗುವಿನ ಮೃತ ದೇಹವನ್ನು ಅಗೆದು ತೆಗೆದನು ಎಂಬ ಸುದ್ದಿ ದುಃಖತಪ್ತ ಕುಟುಂಬ ಮನೆ ತಲುಪುವ ಮೊದಲೆ ತಿಳಿದುಬಂತು. ಅದಕ್ಕೆ ಕಾರಣವೆಂದರೆ, ಆ ವ್ಯಕ್ತಿ ಶ್ಮಶಾನಕ್ಕೆ ಸಮೀಪದ ಭೂಮಿ ಯನ್ನು ಅತಿಕ್ರಮಿಸಿದ್ದ. ಶ್ಮಶಾನದಲ್ಲಿ ಮಗುವಿನ ಹೆಣ ದಫನ ಮಾಡಿದುದಕ್ಕಾಗಿ ಆತ ಆಕ್ರೋಶಿತನಾಗಿದ್ದ.

ಈ ಘಟನೆ ನಡೆದು ಸುದೀರ್ಘ 11ವರ್ಷಗಳೇ ಕಳೆದರೂ ಶ್ಮಶಾನ ಸ್ಥಳಕ್ಕಾಗಿ ಹೂಡ ಗ್ರಾಮದ ದಲಿತರು ಇನ್ನೂ ಕಾಯುತ್ತಿದ್ದಾರೆ.ಆದರೆ, ಅವರಿಗೆ ಜಾಗ ನೀಡಲು ಜಿಲ್ಲಾಧಿಕಾರಿ ಮತ್ತು ಗ್ರಾಮ ಪಂಚಾಯತ್ ಇನ್ನೂ ಮನಸ್ಸು ಮಾಡಿಲ್ಲ. ಕಳೆದ ವರ್ಷ ವೃದ್ಧನೊಬ್ಬ ಸತ್ತಾಗ ದೇಹವನ್ನು ಪಕ್ಕದ ಹಳ್ಳಿಗೆ ಹೊತ್ತುಕೊಂಡು ಹೋಗಿ ದಫನ ಮಾಡಬೇಕಾಯಿತು. ಅದೃಷ್ಟವಶಾತ್ ಅಲ್ಲಿ ಪ್ರತ್ಯೇಕ ಶ್ಮಶಾನವಿತ್ತು.

ಗುಜರಾತ್ ರಾಜ್ಯ ಗ್ರಾಮಪಂಚಾಯತ್ ಸಾಮಾಜಿಕ ನ್ಯಾಯ ಸಮಿತಿ ಮಂಚ ನಡೆಸಿದ ಸಮೀಕ್ಷೆಯ ಪ್ರಕಾರ, ಗುಜರಾತ್‌ನ 657 ಗ್ರಾಮಗಳ ಪೈಕಿ 397 ಗ್ರಾಮಗಳಲ್ಲಿ ದಲಿತರಿಗೆ ಅಧಿಕೃತ ಶ್ಮಶಾನಗಳಿಲ್ಲ. ಅದೂ ಅಲ್ಲದೆ, ಶ್ಮಶಾನ ಕ್ಕಾಗಿ ಭೂಮಿ ಲಭಿಸಿದ 260 ಗ್ರಾಮಗಳ ಪೈಕಿ 94 ಗ್ರಾಮ ಗಳಲ್ಲಿ ಶ್ಮಶಾನ ಭೂಮಿಯನ್ನು ಮೇಲ್ಜಾತಿಯ ಬಲಿಷ್ಠ ಜಾತಿಗಳ ಜನರು ಅತಿಕ್ರಮಿಸಿಕೊಂಡಿದ್ದಾರೆ. 26ಗ್ರಾಮಗಳಲ್ಲಿನ ಶ್ಮಶಾನ ತಗ್ಗು ಸ್ಥಳಗಳಲ್ಲಿದೆ ಹಾಗಾಗಿ,ಮಳೆಗಾಲದಲ್ಲಿ ಜಲಾವೃತವಾಗಿರುತ್ತದೆ.

ಮುಸ್ಲಿಮರದೂ ಅದೇ ಸಮಸ್ಯೆ
ಮೃತರನ್ನು ದಫನಗೊಳಿಸುವ ವಿಷಯ ಬಂದಾಗ ಗುಜರಾತ್‌ನಲ್ಲಿ ದಲಿತರು ಮತ್ತು ಮುಸ್ಲಿಮರು ಸಮಾನ ದುಃಖಿಗಳು. ಇಲ್ಲಿ ದಲಿತ ರಂತೆ ಮುಸ್ಲಿಮರ ದಫನ ಭೂಮಿಗಳನ್ನೂ ಪ್ರಭಾವ ಶಾಲಿ ಜಾತಿಗಳ ಜನರು ಆಕ್ರಮಿಸಿಕೊಳ್ಳುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಗುಜರಾತ್ ಹೈಕೋರ್ಟ್, ಪಟಾನ್‌ನಲ್ಲಿರುವ ಮುಸ್ಲಿಮರ ದಫನ ಭೂಮಿ ಯನ್ನು ಅತಿಕ್ರಮಣದಾರ ರಿಂದ ರಕ್ಷಿಸಲು ಪೊಲೀಸರನ್ನು ನಿಯೋಜಿಸುವಂತೆ ಆದೇಶ ನೀಡಿದ್ದನ್ನು ಸ್ಮರಿಸಬಹುದಾಗಿದೆ.

ನೈಜ ಪರಿಸ್ಥಿತಿ
ರಾಷ್ಟ್ರೀಯ ಮಾನವಹಕ್ಕುಗಳ ಆಯೋಗದ ಬಹಿರಂಗ ವಿಚಾರಣೆಯ ಕೊನೆಯ ವೇಳೆಗೆ ‘ಭವ್ಯ ಗುಜರಾತ್ (ವೈಬ್ರಾಂಟ್ ಗುಜರಾತ್)’ನ ಅಸಲಿ ಮುಖ ಹೊರಬಿತ್ತು. ರಾಜ್ಯ ಸರಕಾರದ ದೊಡ್ಡ ದೊಡ್ಡ ಹೇಳಿಕೆಗಳ ಹೊರತಾಗಿಯೂ ಇಲ್ಲಿ ಹೆಚ್ಚಿನ ಸಂಖ್ಯೆಯ ದಲಿತರು ಎರಡನೆ ದರ್ಜೆ ಪ್ರಜೆಗಳಾಗಿ ಬದುಕುತ್ತಿದ್ದಾರೆ.

ಕೃಪೆ : ವಾರ್ತಾಭಾರತಿ

Thursday, June 07, 2012

ಪೇಜಾವರ ಸ್ವಾಮಿಗಳೆ, ಮಾಂಸಾಹಾರಿ, ಮಧ್ಯಪಾನಿ ಬ್ರಾಹ್ಮಣರನ್ನೂ ಬಿಟ್ಟು ಬಿಡುತ್ತೀರಾ ?


-®ÚÃ}Û®é ÒMÔÚ  
1980ÁÚ ¥ÚËÚOÚ¥Ú D}Ú¡ÁÛ¨Ú%¥ÚÆÇ ÔÛVÚà 90ÁÚ ¥ÚËÚOÚ¥Ú A¦¾ÚßÆÇ @¾æàÞ¨æ´À ^Ú×ÚÈÚØVæ ®æÞeÛÈÚÁÚ *VÚ×Û¥Ú ÉËæ‡ÞËÚ~Þ¢Ú%ÁÚß ¨ÚßÈÚßßP¥Ú§«Úß„ OÚMsÛVÚ ÕM¥Úà ¨ÚÈÚß% eÛVÚä~Væ ÈÚß}æà¡…¹ ÉÈæÞOÛ«ÚM¥ÚÁæÞ @ÈÚ}ÚÂÒ …M¥ÚÁæÞ«æàÞ GM…M}æ ºÛÑÚÈÛW}Úß¡. DsÚ߯¾Úß ÈÚáÛ¨Ú´‡ ÈÚßpÚVÚØVæ ÒÞÉß}ÚÈÛW¥Ú§ @ÈÚÂVæ ÁÛÎÚoñÈÚßlo¥ÚÆÇ ÔæÑÚÁÚß, SÛÀ~ }ÚM¦¥æ§Þ @¾æàÞ¨æ´À ^Ú×ÚÈÚØ.
A ÈÚßàÄOÚ @ÈÚÁÚß ÕM¥ÚàVÚ×Ú ÑÚMYÚl«æVæ ÔæàÁÚn¥Ú§ÁÚß. ËÚà¥ÚÃ×Û¥Ú DÈÚáÛºÛÁÚ~¾ÚßÈÚÂVæ ¦ÞOæÐ Oæàno¥æ§Þ ®æÞeÛÈÚÁÚ *VÚ×Úß. «ÚÈÚß½ ¥ÚPÐy ºÛÁÚ}Ú¥ÚÆÇ ¾ÚáÛÁÛ¥ÚÁÚà ¾Úß~¾æà…¹ÁÚß @¾æàÞ¨æ´À ÕM¥ÚàVÚ×Ú¥Úߧ, *ÁÛÈÚß«Ú ¥æÞÈÛľÚß @ÆǾæßÞ ¬ÈÚáÛ%yÈÛVÚ†æÞOæM¥Úß VÚno¾ÚáÛW ®ÚÃ~®Û¦Ò¥Ú§Áæ @¥Úß ®æÞeÛÈÚÁÚ *.
A¥ÚÁæ..BÈÚ}Úß¡ «ÛÈÚâ´ OÛyß~¡ÁÚßÈÚâ´¥Úß ¬dOÚàQ @¥æÞ ®æÞeÛÈÚÁÚ *VÚ×Ú«æ„Þ? OÚ×æ¥Ú JM¥æÁÚsÚß ÈÚÎÚ%VÚØM¥Ú @ÈÚÁÚß OæàsÚß~¡ÁÚßÈÚ ÔæÞØOæVÚ×Úß ¾ÚáÛÈÚ ÂÞ~ BÈæ? @ÈÚÁæà…¹ ÕM¥Úà ¾Úß~¾æàÞ @¢ÚÈÛ †ÛÃÔÚ½yÂVæ ÈÚáÛ}Úà ÒÞÉß}ÚÈÛ¥Ú ÑÛ‡Éß¾æàÞ? BÎÚßo ¦«Ú «ÛÈÚâ´ @ÈÚÁÚ«Úß„ ÑÚÈÚßÑÚ¡ ÕM¥ÚàVÚ×Ú ¾Úß~¾æßM¥Úß ºÛÉÒ ÈæàÞÑÚ ÔæàÞ¥æÈÛ? eÛ~ÈÛ¦ ÉËæ‡ÞËÚ~Þ¢Ú%ÁÚß «ÚÈÚß½«Úß„ @M¢Ú¥æà§M¥Úß ºÚ´ÃÈæß¾ÚßÆÇno¥Ú§ÁÛ? BÎÚoOÚàQ OÚ×æ¥Ú ËÚ¬ÈÛÁÚ ÌÈÚÈæàVÚX¥ÚÆÇ A¾æàÞd«æ¾ÚáÛW¥Ú§"É®Úà eÛVÚä~ ÑÚÈÚáÛÈæÞËÚ'¥ÚÆÇ @ÈÚÁÚß AtÁÚßÈÚ ÈÚáÛ}ÚßVÚ×Û¥ÚÁÚà ¾ÚáÛÈÚâ´ÈÚâ´?
"@«ÚÀ eÛ~¾ÚßÈÚÁÚÆÇ ÈÚߥÚÀ, ÈÚáÛMÑÚ AÔÛÁÚ ®Ú¥Úª~¿ß¥æ. ÑÚÔÚ®ÚMP¡¾ÚßÆÇ @M¢ÚÈÚÁæàM¦Væ ºæàÞd«Ú ÈÚáÛt¥ÚÁæ @ÈÚÁÚ Ñæ„ÞÔÚ †æ×æ¥Úß ÑÛ~‡OÚ AÔÛÁÚ ÑæÞÉÑÚßÈÚÈÚÁÚà «ÚM}ÚÁÚ ÈÚߥÚÀ, ÈÚáÛMÑÚ ÑæÞÈÚ«æVæ BؾÚß…ÔÚߥÚß. ÕÞVÛW «Û«Úß ÑÚÔÚ®ÚMP¡ ºæàÞd«ÚÈÚ«Úß„ ÉÁæàÞƒÑÚß}æ¡Þ«æ'!
B¥æM¢Û ÈÚáÛ}Úß ÑÛ‡ÉßÞf? ÈÚáÛMÑÛÔÛÁÚ, ÈÚߥÚÀ ÑæÞÉÑÚßÈÚÈÚÁÚ d}æ ºæàÞd«Ú ÈÚáÛt¥ÚÁæ ÑÚÔÚ®ÚMP¡¾ÚßÆÇ OÚßØ}ÚÈÚÂVÚà @MnOæà×ÚßÙ}Ú¡Èæ @«Úß„ÈÚâ´¥Û¥ÚÁæ @ÈÚâ´VÚØM¥Ú ¥ÚàÁÚÉÁÚßÈÚÈÚÁÚ ÑÚ}ÚÓMVÚ ÈÚáÛt¥ÚÁæ ÈÚáÛMÑÛÔÛÂVÚ×Úß, OÚßsÚßOÚÂM¥ÚÄà A ^ÚlVÚ×Úß ¥ÚàÁÚÈÛW ¬ÈÚß½M}æ ®ÚÂËÚߥڪÁÛW ¸sÚ…ÔÚߥÚÄÇÈæ?  C }ÚOÚ%ÈÚ«Úà„ ¬ÞÈÚâ´ J®Ú°†æÞOÛVÚß}Ú¡¥ÚÄÇÈæÞ? B~¡Þ^æVæ }Û«æÞ 80 ÈÚÎÚ% ®ÚãÁæçÒÁÚßÈÚ C ®æÞeÛÈÚÁÚ *VÚØVæÞ«ÛW¥æ? HOæ ÉÈæÞ^Ú«æ¿ßÄÇ¥æ ÈÚáÛ}Ú«ÛsÚß~¡¦§ÞÂ? OÚ×æ¥Ú ÈÚÎÚ%"¥ÚÆ}Ú OæÞÂVÚ×ÚÆÇ ®Û¥Ú¾ÚáÛ}æà «ÛlOÚ' ÈÚáÛt¥Ú ÑÚM¥ÚºÚ%¥ÚÆÇ ¥ÚÆ}ÚÁÚß ÑÚÔÚ®ÚMP¡ ºæàÞd«Ú ÈÚáÛt GM¥Úß ÑÚÈÛÄß ÔÛP¥ÛVÚ ®æÞeÛÈÚÁÚ *VÚ×Úß ®ÚÁÛ¾ÚáÛW ¸no¥Ú§ÁÚß. *VÚ×Û¥ÚÈÚÁÚß ¾ÚáÛÁæàM¦VÚà ºæàÞd«Ú ÈÚáÛsÚßÈÚâ´¦ÄÇ GM¥Úß @ÈÚÁÚ ºÚloMWVÚ×Úß ÑÚÈÚßeÛ¿ßÏ Oæàno¥Ú§ÁÚß. A¥ÚÁæ É®Úà eÛVÚä~ ÑÚÈÚáÛÈæÞËÚ¥ÚÆÇ ÑÚÔÚ®ÚMP¡ ºæàÞd«ÚÈÚ«Úß„ HOæ ÈÚáÛsÚ†ÛÁÚ¥Úß GM¥Úß ®æÞeÛÈÚÁÚÁÚß OæànoÁÚßÈÚ ÔæÞØOæ @ÈÚÁÚ ¬dÈÛ¥Ú …y|ÈÚ«Úß„ …¾ÚßÄß ÈÚáÛt¥æ, @ÄÇÈæ? ¬ÈÚß½ ÔæÞØOæ¾ÚßÆÇ OÛyß~¡ÁÚßÈÚâ´¥Úß eÛ~ÈÛ¥Ú¥Ú ¥ÚàÈÛ%ÑÚ«æ¾ÚßÄÇ¥æ ÈÚß}æ¡Þ«Úß ÑÛ‡ÉßÞf?                                
¬ÈÚß½ †ÛÃÔÚ½{OæVæ ÈÚáÛMÑÛÔÛÁÚ, ÈÚߥÚÀ ÑæÞÈÚ«æ @ÎæàoM¥Úß @tu¾ÚáÛVÚß}Ú¡¥æ GM¥ÚÁæ ËÚߥڪ ÈÚáÛMÑÛÔÛ¾ÚáÛ¥Ú *OÚäÎÚ|«Ú«Úß„ HOæ DsÚ߯¾ÚßÆÇ ®ÚãfÑÚß~¡ÞÂ? ÁÛdOÛÁÚ{VÚ×Ú«Úß„ ®Úâ´ÑÚÅÛ¿ßÒ"OÚäÎÚ| ¥æÞÈÛľÚß'OæQ"OÚäÎÚ|ÈÚßpÚ'ÈæM… †æàÞsé% }ÚVÚßÄß ÔÛPOæàMsÚß ÈÚßßdÁÛ¿ß BÅÛSæ ÈÛÀ¯¡Væ ÑæÞÁÚ¥ÚM}æ ¬¾ÚßM~ÃÒOæà×ÚßÙÈÚ ¥Ú¥Úß% ¬ÈÚßVæÞ¬}Úß¡? OÚäÎÚ| ÔÚßno¬M¥Ú OÚÐ~þÚß, †æ×榥Úߧ VæàÄÇÁÚ ÈÚß«æ¾ÚßÆÇ. B…¹ÁÚà †ÛÃÔÚ½zæÞ}ÚÁÚÁÚß. ÔÛVÛ¥ÚÁæ OÚäÎÚ|¬Væ ÒPQ¥ÚৠOælo ÑÚMÑÛQÁÚ G«Úß„~¡ÞÁÛ? ÁÛÈÚß, OÚäÎÚ| B…¹ÁÚà ÔÚßno¬M¥Ú ÔÛVÚà A^ÛÁÚ¦M¥ÚÄà OÚmÛo ÈÚáÛMÑÚÔÛÂVÚ×Úß. @M}ÚÔÚ OÚäÎÚ|«Ú ÈÚßà~%¾Úß«Úß„ ¬ÈÚß½ ÈÚßpÚ¥ÚÆÇ BlßoOæàMt¦§ÞÁÚÅÛÇ ÈÚáÛ¨Ú´‡ÁÛ¥Ú ¬ÈÚß½ eÛ~ OæsÚßÈÚâ´¦ÄÇÈæ?
Ôè¥Úß, JM¥Úß ÈÚßVÚßÉ«Ú †æ×ÚÈÚ{Væ¾ÚßÆÇ «æÞ^ÚÁé (®ÚÂÑÚÁÚ) ÔÛVÚà «Ú^Ú%ÂMVé (OæàsÚßÈÚ ÑÚMÑÛQÁÚ) …ÔÚ×Ú ÈÚßßRÀ®Û}Úà ÈÚÕÑÚß}Ú¡¥æ. A¥ÚÁæ ÈÚßVÚßÉ«Ú ÑÚÈÚ%}æàÞÈÚßßR †æ×ÚÈÚ{VæVæ «ÛÈÚâ´ ÑÚäÏoÑÚ†æÞOÛ¥Ú ®ÚÂÑÚÁÚ ÔÛVÚà OæàsÚ†æÞOÛ¥Ú ÑÚMÑÛQÁÚ ¾ÚáÛÈÚâ´¥ÛWÁÚ†æÞOÚß? «æç~OÚ}æ, ®ÛÃÈÚáÛ{OÚ}æ, ËÚߥڪÔÚÑÚ¡}æ, Oneness  @¢ÚÈÛ HOÚ}æ¾Úß«æà„Þ AÔÛÁÚ ®Ú¥Úª~ ÈæßÞÅæ @×æ¾ÚßßÈÚ eÛ~¾Úß«æà„Þ? ÑÚàQÅéVÚ×ÚÆÇ HOÛW ÑÚÈÚßÈÚÑÚ¡ðÈÚ«Úß„ @×ÚÈÚtÒ¥ÚÁÚß? …sÚÈÚ-…ÆÇ¥Ú, ÈæßÞÄß-PÞ×æM… ºæÞ¥ÚÉÄÇ¥æ GÄÇÁÚà ÑÚÈÚáÛ«ÚÁÚß, GÄÇÁÚà JM¥æÞ GM… ºÛÈÚ«æ ÈÚßàsÚ†æÞOÚß GM… OÛÁÚyOÚQÄÇÈæ? A¥ÚÁæ ¬ÞÈÚâ´ †æàÞƒÑÚÄß ÔæàÁÚnÁÚßÈÚâ´¥Úß InclusivenessVæ …¥ÚÅÛW Exclusiveness«ÚÄÇÈæ? ÔÛVÛ¥ÚÁæ eÛ~ GM…ߥÚà JM¥Úß Virtue«Û ÑÛ‡ÉßÞf? JM¥Úß ÈÚßVÚß ÔÚßlßoÈÚ Èæà¥ÚÄß eÛ~¾Úß«Úß„ A¾æßQ ÈÚáÛtOæà×ÚßÙÈÚ @ÈÚOÛËÚÉ¥æ¾æßÞ? BÎÚoOÚàQ †ÛÃÔÚ½yÀ GM¥ÚÁæÞ«Úß? Maturity of understanding @ÄÇÈæ? B«Úß„ ¾ÚáÛÁÚß"¦‡d'«ÛVÚß}Û¡«æ? ÉËÛ‡Éß}Úà ¦‡d«ÛVÚÄß GÎÚßo ÈÚÎÚ% }Ú®ÚÑÚßÓ ÈÚáÛt¥Ú? ÔÛVÛ¥ÚÁæ †ÛÃÔÚ½yÀÈæM…ߥÚß ÔÚßno¬M¥Ú …ÁÚß}Ú¡¥æ¾æßÞ?
d«Ú½«Û eÛ¾Úß}æÞ ËÚà¥ÚÃN
ÑÚMÑÛQÁÛ}é ¦‡d D^ÚÀ}æÞ
ÔÛVÚM¥ÚÁæÞ«Úß? ÔÚßlßoÈÛVÚ GÄÇÁÚà ËÚà¥ÚÃÁæÞ, ÑÚMÑÛQÁÚ¦M¥Ú D^Ú`ÁÛVÚ…ÔÚߥÚß. OÚ¥Ú%ÈÚß, ÈÚÒÎÚr, ®ÚÁÛËÚÁÚ, OÚäÎÚ| ¥æ‡>ç®Û¾Úß«Ú (ÈÛÀÑÚ), OÚ¯Ä, ¥ÚÈÚ%~ (ÈÚáÛ}ÚMW), ÑÚ}ÚÀOÛÈÚß eÛ†ÛÄ, ÈÛƽP, ÉËÛ‡Éß}Úà ÈÚßßM}Û¥Ú FßÏÈÚß߬VÚ×Ú ÈÚßàÄÈÚ«Úß„ ÔÚßsÚßPOæàMsÚß ÔæàÞ¥ÚÁæ @ÈÚ¾ÚáÛ%ÁÚà †ÛÃÔÚ½yÁÚÄÇ. sÛOÚoÁé ÈÚßVÚ sÛOÚoÁé, GMf¬¾ÚßÁé ÈÚßVÚ GMf¬¾ÚßÁæ%Þ AVÚ†æÞOæM… ¬¾ÚßÈÚß ÔæÞVæ BÄÇÈæãÞ ÔÛVæ¾æßÞ ÔÚßmæàoM¥ÚÂM¥ÚÅæÞ †ÛÃÔÚ½y«ÛVÚÄß ÑÛ¨Ú´ÀÉÄÇ. eÛk«Ú ÑÚM®Û¥Ú«æ ÈÚáÛtOæàMsÛVÚ ÈÚßÁÚß ÔÚßlßo Ä»ÑÚß}Ú¡¥æ ÔÛVÚà A}Ú ¦‡d«ÛVÚß}Û¡«æ. ÈÚßÔÚÏ% @ÁÚÉM¥é, ®ÚMt}é ËÛÀÈÚßf OÚäÎÚ|ÈÚÈÚß%. ÑÛ‡Éß ¥Ú¾ÚáÛ«ÚM¥Ú ÑÚÁÚÑÚ‡~, ÑÛ‡Éß ÉÈæÞOÛ«ÚM¥Ú, ÅÛÅé…ÔÚ¥Úà§Áé ËÛÒ¡ð, ÁÛeæÞM¥Úà ®ÚÃÑÛ¥é BÈÚ¾ÚáÛ%ÁÚà †ÛÃÔÚ½yÁÚÄÇ, OÚÆ}Úß ËæÃÞÎÚrÁæÒOæàMsÚÁÚß. ÈÛƽP …Áæ¥Ú ÁÛÈÚáÛ¾Úßy, ÈÛÀÑÚ …Áæ¥Ú ÈÚßÔÛºÛÁÚ}ÚÈÚã ¬ÈÚßVæ ÈÚdÀ%ÈæÞ? ÈæÞ¥Ú-ËÛÑÚ¡ðVÚ×Ú ®ÚÃOÛÁÚ †ÛÃÔÚ½y«Û¥ÚÈÚ«Úß ¾ÚáÛÁÚ @ƒÞ«Ú¥ÚÄàÇ BÁÚßÈÚM~ÄÇ. @M¥ÚÁæ ¾ÚáÛÁÚ OæçOæ×ÚVÚà OæÄÑÚ ÈÚáÛsÚßÈÚM~ÄÇ. @M}ÚÔÚ ÁÛd-ÈÚßÔÛÁÛdÁÚ OÛÄ¥ÚÄàÇ †ÛÃÔÚ½yÁÚß @ÈÚÂVæ @ƒÞ«ÚÈÛWÁÚÆÄÇ. @¥æÞ }ÚOÚ%ÈÚ«Úß„ CVÚÄà @«Ú‡¿ßÑÚßÈÚâ´¥Û¥ÚÁæ ¬ÈÚß½ÆÁÚß ÁÛdÇ ËæÞ.95 ºÛVÚ †ÛÃÔÚ½yÁæÞ @ÄÇ. †ÛÃÔÚ½y«Û¥ÚÈÚ«Úß «ÛÄßQ ÈæÞ¥ÚVÚ×Ú«Úß„ ÑÚM®Úãy%ÈÛW K¦ÁÚ†æÞOÚß GM¦¥æ. ¬ÞÈæÞ A}Û½ÈÚÅæàÞOÚ«Ú ÈÚáÛtOæàØÙ, ¬ÈÚß½ÆÇ GÎÚßo ÈÚßM¦ †ÛÃÔÚ½yÁÚß ÈæÞ¥ÚVÚ×Ú«Úß„ K¦OæàMt¥Û§Áæ? ÑÛ‡ÉßÞf, ÈÚß«ÚßÎÚÀ¬Væ †æÞOÛWÁÚßÈÚ J×æÙ¾Úß}Ú«Ú. J×æÙ¾Úß ÑÚMÑÛQÁÚÈæM…ߥÚß JM¥Úß eÛ~¾Úß ÑÚ‡}Ú¡ÄÇ. d}æVæ GÆǾÚßÈÚÁæVÚà A}Ú½eÛk«ÚÉÁÚßÈÚâ´¦ÄÇÈæãÞ @ÆǾÚßÈÚÁæVÚà ¾ÚáÛÁÚà }Û«Úß †ÛÃÔÚ½y GM¥Úß ¸ÞVÚÄß ÑÛ¨Ú´ÀÉÄÇ.
JM¥Úß ÈæÞ×æ, ¬ÞÈÚâ´ ÑÚÑÛÀÔÛÁÚ¥Ú ®ÛÃÈÚßßRÀ}æ, ÈÚáÛMÑÛÔÛÁÚ ¥æÞÔÚOÚàQ J×æÙ¾ÚߥÚÄÇ GM¥Úß GÄÇÂVÚà PÉÈÚáÛ}Úß ÔæÞØ¥Ú§Áæ ¾ÚáÛÁÚà †æÞsÚÈæ«Úß„~¡ÁÚÆÄÇ. A¥ÚÁæ"@«ÚÀ eÛ~¾ÚßÈÚÁÚÆÇ ÈÚߥÚÀ, ÈÚáÛMÑÚ AÔÛÁÚ ®Ú¥Úª~¿ß¥æ. @ÈÚÁÚ eæà}æ ÑÚÔÚ®ÚMP¡ ºæàÞd«ÚÈÛVÚÆÞ @M}ÚeÛ%~ ÉÈÛÔÚÈÛVÚÆ OÚàsÚ¥Úß' G«Úß„~¡ÞÁÚÅÛÇ B¥Úß ¬ÈÚß½ eÛ~…ߦª¾ÚßÄÇ¥æ ÈÚß}æ¡Þ«Úß? BÎÚoOÚàQ ÈæÞ¥ÚVÚ×Ú OÛÄ¥ÚÆÇ †ÛÃÔÚ½yÁÚß ¥Ú«Ú¥Ú ÈÚáÛMÑÚ ~«Úß„~¡ÁÚÆÄÇÈæ? ËÛÃ¥Úª ÈÚáÛsÚßÈÛVÚ …Væ…Væ¾Úß ÈÚáÛMÑÛÔÛÁÚÈÚ«Úß„ Ò¥Úª®ÚtÑÚÅÛVÚß~¡}Úß¡ GM¥Úß ÑÚ‡}ÚN ÈæÞ¥ÚVÚ×æÞ ÔæÞ×Úß}Ú¡Èæ. ¬ÞÈÚâ´ ÈæÞ¥Û¨Ú´À¾Úß«Ú ÈÚáÛtÄÇ¥æ ÔæàÞ¥ÚÁæ …ÔÚߺÛÎÛ É¥Û‡MÑÚÁÛ¥Ú ËÚ}ÚÈÛ¨Û¬ AÁé. VÚzæÞËé @¢ÚÈÛ sÛ. GÑé.GÅé. ºæçÁÚ®Ú°«ÚÈÚÁÚ«Úß„ OæÞØ. ÑÚÔÚ®ÚMP¡ ºæàÞd«Ú ÈÚáÛt¥ÚÁæ Oælo ®ÚúÛÈÚ ¸ÞÁÚß}Ú¡¥æ G«Úß„~¡ÞÁÚÅÛÇ …¬¾ÚáÛ VÛMƒÞf ËÚߥڪ ËÛSÛÔÛ¾ÚáÛ¥ÚÁæ @ÈÚÁÚ d}æ¾æßÞ BÁÚß~¡¥Ú§ OÛ̽Þ ®ÚMt}Ú «æÔÚÁÚß ÈÚáÛMÑÚÈÚ«Úà„ ~«Úß„~¡¥Ú§ÁÚß, ÒÞVÚÁæÞl«Úà„ ÑæÞ¥Úß~¡¥Ú§ÁÚß. ÈÚßÁÛq, OÛ̽ÞÂ, †æMVÛÆ †ÛÃÔÚ½yÁÚß «Û«éÈæeé ÑæÞÉÑÚßÈÚâ´¦ÄÇÈæ? @ÄÇ ÈÚáÛMÑÚ ~M¥Ú GÎÚßo †ÛÃÔÚ½yÁÚß @¥æÞ Oæç¾ÚßÆÇ ¬ÈÚß½ ®Û¥Ú®Úãeæ ÈÚáÛt¥Û§Áæ GM…ߥګÚß„ GM¥Û¥ÚÁÚà ®ÚÂÞPÐÒOæàMt¦§ÞÁÛ? ÈÚáÛMÑÚ ~«Úß„ÈÚÈÚÁÚ d}æ ÑÚÔÚ®ÚMP¡ ºæàÞd«Ú ÈÚáÛsÚßÈÚâ´¥Ú«Úß„ ÉÁæàÞƒÑÚßÈÚ ¬ÞÈÚâ´ ÈÚáÛMÑÛÔÛÂVÚ×Úß, ®æVé ¯Ã¾Úß †ÛÃÔÚ½yÁÚ«Úß„ eÛ~¿ßM¥Ú ~ÁÚÑÚQÂÑÚß~¡ÞÁÛ? @ÈÚÁÚ«Úß„ eÛ~¿ßM¥Ú …ÕÎÚQÂÑÚßÈÚ G¥æVÛÂOæ ¬ÈÚßW¥æ¾æßÞ? BÎÚoOÚàQ †ÛÃÔÚ½yÁÛ¥ÚÈÚÁÚß ÔæàÁÚVæ «Û«éÈæeé ~M¥Úß, Gzæ| OÚßt¥Úß ÈÚß«æ¾ÚßÆÇ ÈÚßMtÈÚM}Ú @®Ú°-@ÈÚß½, ÑÚÔæàÞ¥ÚÁÚ-ÑÚÔæàÞ¥Ú¾ÚßÁÚ d}æ OÚßØ}Úß El ÈÚáÛsÚßÈÛVÚÄà «æVænÈé ®ÚÂzÛÈÚßÈÛVÚ…ÔÚߥÚÄÇÈæ? BÈÚ}Úß¡ ¬}ÚÀÈÚã ÑÚM¨ÛÀÈÚM¥Ú«æ ÈÚáÛsÚßÈÚ, ÈæÞ¥Û¨ÛÀ¾Úß«Ú ÈÚáÛsÚßÈÚ, ¾ÚáÛÁÚ @ƒÞ«Ú¥ÚÄàÇ BÁÚ¥Ú, ÈÚáÛMÑÚ-ÈÚߥÚÀVÚØM¥Ú ¥ÚàÁÚÉÁÚßÈÚ @¥æÎÚßo †ÛÃÔÚ½yÂ¥Û§Áæ ÔæÞØ? OÚmÛo †ÛÃÔÚ½y«Û¥Ú, VÚvÚ¥Û§W ÈÚáÛMÑÚ ~«Úß„~¡¥Ú§ ÁÛÈÚy«Ú«Úß„ ¬ÞÈÚâ´ ÈÚáÛ¥Ú ÈÚÀP¡¾ÚáÛW, ÈæßÞÄ°MP¡¾ÚáÛW Ò‡ÞOÚÂÑÚß~¡ÞÁÛ? ÈÚáÛMÑÚºÚOÚÐOÚ ÁÛÈÚß«Ú«Úß„ ºÚfÑÚßÈÚ …¥ÚÄß †ÛÃÔÚ½y«Û¥Ú ®ÚÁÚËÚßÁÛÈÚß«Ú«Úß„ ¬ÞÈæÞOæ ®ÚãfÑÚßÈÚâ´¦ÄÇ?
@ÈÚÁÚ ÑÚMVÚ ÈÚáÛsÚ†æÞt, @ÈÚÁÚ d}æ OÚà}Úß ~«Ú„†æÞt G«Úß„ÈÚâ´¥Úß ÑÚ«Û?
A¨Ú߬OÚ ÑÚÈÚáÛd¥ÚÆÇ ÂÆf¾ÚßÑé AWÁÚÄß ÑÛ¨Ú´ÀÉÄÇ, Ò°Â^ÚßÀÈÚÅé AWÁÚÅæÞ†æÞOÚß. HOÚ}æ, J«é«æÑé @«Úß„ J¯°Oæà×ÚÙÅæÞ†æÞOÚß. BÄǦ¥Ú§Áæ @¥Úß ±Ú³ãÀsÚÅé ÈÚß«ÚÒ¤~ GM¥ÛVÚß}Ú¡¥æ. J…¹ †ÛÃÔÚ½y Oælo VÚßyVÚØ¥Ú§ÁÚà ®ÚãdÀ, ËÚà¥Úà f}æÞM¦Ã¾Úß«ÛW¥Ú§ÁÚà ®ÚãdÀ«ÚÄÇ GM… OÚÈÚß%pÚ ÈÚß«ÚÒ¤~¾Úß«Úß„ ¸t. «ÚÈÚß½ ÑÚÈÚáÛd A eÛ~, C eÛ~¾ÚáÛW Js榥ڧ«æ„Þ ÅÛºÚ ÈÚáÛtOæàMsÚß ÈÚßßÑÚÅÛ½«ÚÁÚß, ¸ÃnÎÚÁÚß «ÚÈÚß½ ÈæßÞÅæ ®ÚúÚß}Ú‡ ÑÛƒÒ¥Ú§ÄÇÈæ? ËÚäMVæÞ ÈÚßpÚ¥Ú ¾Úß~VÚ×ÛW¥Ú§ É¥ÛÀÁÚyÀÁÚß ÔÚOÚQ-…ßOÚQ GM… OÚßÁÚß… ¾ÚßßÈÚOÚÂVæ ®æÃÞÁÚzæ ¬Þt ÕM¥Úà ÑÛÈÚáÛÃdÀ OÚno¥ÚÁÚß. JM¥Úß ÈæÞ×æ †ÛÃÔÚ½yÁÛ¥Ú ÁÛÈÚßOÚäÎÚ| ®ÚÁÚÈÚßÔÚMÑÚÁÚß ¬ÈÚß½M}æ¾æßÞ ¾æàÞ_Ò¥Ú§Áæ ÉÈæÞOÛ«ÚM¥ÚÁÚß ¨ÚÈÚß%ÁÚOÚÐOÚÁÛW ÔæàÁÚÔæàÈÚßß½~¡ÁÚÆÄÇÈæÞ«æàÞ? BÈÚ~¡VÚà ~ÃÈÚßà~%VÚ×Û¥Ú …ÃÔÚ½, ÉÎÚß|, ÌÈÚ«Ú ÈÚߨæ´À¾æßÞ (@ÈÚÁÚ AÁÛ¨ÚOÚÁÚ) HOÚ}æ ÈÚßàtÄǦÁÚßÈÚâ´¥Úß «ÚÈÚß½ ÕM¥Úà ÑÚÈÚáÛd¥Ú ¥ÚßÁÚM}Ú. @¦ÁÚÆ, ¾Úß~ÈÚ¾Úß%ÁÛ¥Ú ¬ÞÈÚâ´ ¨ÚÈÚß%ËÛÑÚ¡ðOÚQ«ÚßVÚßyÈÛW¾æßÞ «Úsæ¥ÚßOæà×ÚßÙ~¡¦§ÞÁÛ? ÈÛÔÚ«Ú HÂÁÚßÈÚ ¾Úß~¾Úß«Úß„ OÚMsÚÁæ ÑÛ„«Ú ÈÚáÛsÚ†æÞOÚß GM¥Úß ÔæÞØÁÚßÈÚâ´¥Úß Væà~¡ÄÇÈæ? ÔÛVÛ¥ÚÁæ ¬ÞÈÚâ´ ÈÛÔÚ«Ú ÔÚ}Úß¡ÈÚâ´¦ÄÇÈæ? ¾Úß~¾ÚáÛ¥ÚÈÚ«Úß JM¥Úß ¦«ÚPQM}Ú Ôæ^Úß`OÛÄ JM¥æÞ ÑÚ¤×Ú¥ÚÆÇ DؾÚ߆ÛÁÚ¥Úß, EÁÚß ~ÁÚßW »OæÐ G~¡ Ôæàmæo }ÚßM¸ÒOæà×ÚÙ†æÞOÚß GM… ¬¾ÚßÈÚßÉ¥æ. ÈÚßpÚ OÚnoOæàMsÚß ÑÛÈÚáÛÃdÀ «ÚsæÑÚß~¡ÁÚßÈÚ «ÚÈÚß½ ¾ÚáÛÈÚ ÑÛ‡ÉßVÚ×Úß C ¬¾ÚßÈÚßOæQ @«ÚßVÚßyÈÛW «Úsæ¥ÚßOæà×ÚßÙ~¡¥Û§Áæ? B¥Úß ®æÞeÛÈÚÁÚ J…¹ÁÚ OÚ¢æ¾ÚßÄÇ JOÚQÆVÚ, ÆMVÛ¾Úß}Ú ÑÛ‡ÉßVÚ×ÚÆÇ Ôæ_`«ÚÈÚÁÚà B¥æÞ ÈÚß«ÚÒ¤~¾ÚßÈÚÁÚß. ®æÞeÛÈÚÁÚÁÚß †Û¿ß¸lßo …y| …¾ÚßÄß ÈÚáÛtOæà×ÚßÙ}Û¡Áæ. C ÆMVÛ¾Úß}Ú JOÚQÆVÚ ÑÛ‡ÉßVÚ×Úß J×ÚMW¥æà×ÚVæÞ PÞ×Úß eÛ~ÈÛ¥Ú ÈÚáÛsÚß}Û¡Áæ @ÎæoÞ. †ÛÃÔÚ½yÁÚß DØ¥ÚÈÚÁÚ«æ„ÄÇ PÞ×ÛW «æàÞsÚßÈÚâ´¥Úß, ÆMVÛ¾Úß}ÚÁÚß B«Úß„Ø¥ÚÈÚÁÚ«Úß„ Oæ×ÚVæ OÛyßÈÚâ´¥Úß, JOÚQÆVÚÁÚß ÕM¥ÚßØ¥Ú eÛ~¾ÚßÈÚÁÚ«Úß„ PÞ×ÛW «æàÞsÚßÈÚâ´¥Úß, ÑÚÈÚáÛdOÚàQ, ÁÛÎÚoñOÚàQ J×æÙ¾ÚߥÚÄÇ. ÑÚÈÚáÛd¥Ú «Û¾ÚßOÚÁÛ¥ÚÈÚÁÚß BM¢Ú eÛ~ ÈÚß«ÚÒ¤~¾Úß«Úß„ BlßoOæà×ÚÙ†ÛÁÚ¥Úß, B«éÒW„²OæMmé ÈÚÀP¡VÚ×Úß BlßoOæàMsÚÁæ ®ÚÁÚÈÛWÄÇ.
B¥æÞ«æÞ BÁÚÆ, Oæà«æVÚà ®æÞeÛÈÚÁÚÁÚ ÈÚáÛ~«ÚÆÇ OÛyßÈÚâ´¥Úß Difference is absolute, @M¥ÚÁæ ºæÞ¥ÚÈÚâ´ ®ÚÁÚÈÚáÛ¢Ú% ÑÚ}ÚÀ G«Úß„ÈÚ @ÈÚÁÚß «ÚM¸OæàMtÁÚßÈÚ }Ú}Ú‡¥Ú ÑÚMOÚß_}Ú}æ. A¥ÚÁæ Transcending the differences and realising the equanimity with universe, ºæÞ¥ÚÈÚ«Úß„ ÉßÞ ÑÚÈÚßVÚà ÉËÚ‡¥æàM¦Væ @É«ÛºÛÈÚ ÑÛƒÑÚßÈÚâ´¥æÞ @¥æ‡>ç}Ú }Ú}Ú‡, @¥æÞ ÑÚ«Û}Ú«Ú ¨ÚÈÚß%¥Ú ~ÁÚß×Úß G«Úß„ÈÚ ËÚMOÚÁÚÁÚ«Úß„ «ÛÈÚâ´ @«ÚßÑÚÂÑÚ†æÞOÚß. ÑÛ‡Éß ÉÈæÞOÛ«ÚM¥Ú, _«Ú½¾ÚáÛ«ÚM¥Ú, †ÛÄVÚMVÛ¨ÚÁÚ ~ÄOé, ÑÚ}ÚÀÑÛ¿ß †Û†Û, ÌÁÚt Ñۿ߆ۆÛ, ÁÚd¬ÞËé BÈÚÁæÄÇ ËÚMOÚÁÚÁÚ«Úß„ J¯°OæàMt¥æ§Þ C OÛÁÚyOæQ, BÈÚÁæà×ÚVæ GÄÇÁÚà JM¥æÞ GM… ºÛÈÚ«æ JsÚÈÚßàsÚÄà ËÚMOÚÁÚÁæÞ OÛÁÚy. }ÚßOÛÁÛÈÚáé, ÉßÞÁÛºÛ¿ß, eÛk«Ú¥æÞÈÚ, «ÛÈÚߥæÞÈÚ, OÚ¸ÞÁé, }Úß×ÚÒ¥ÛÑÚÁÚß ®ÚÃ~®Û¦Ò¥ÚৠB¥æÞ OÚndndsÚsÚ @«Úß„. ¥ÚßÁÚ¥ÚäÎÚoÈÚËÛ}é, eÛ~ ÑÛ‡ÉßVÚØVæ B¥æÄÇ @¢Ú%ÈÛVæàÄÇ. VÚßtVÚØWM}Ú Èæà¥ÚÄß BM¢Ú ÑÛ‡ÉßVÚ×Ú ÈÚß«ÚÒ¤~Væ Èæà¥ÚÄß «ÚÉÞOÚÁÚy, fÞzæà%¥ÛªÁÚ ÈÚáÛsÚ†æÞOÚß. AVÚ ÈÚáÛ}Úà CVÛVÚÅæÞ ÈÚß}ÛM}ÚÁÚ¥Ú ¯sÚßWVæ VÚß¾ÚáÛWÁÚßÈÚ «ÚÈÚß½ ÕM¥Úà ÑÚÈÚáÛd JM¥ÛVÚÄß, JM¥Úß GM¥Úß ¾æàÞ_ÑÚÄß ÑÛ¨Ú´À. BÄÇÈÛ¥ÚÁæ ¥ÚÆ}ÚÁÚß OæÞÂVÚ×ÚÆÇ, B}ÚÁæ ÕM¥ÚßØ¥ÚÈÚÁÚß }ÚÈÚß½¥æÞ OÛĬVÚ×ÚÆÇ, †ÛÃÔÚ½yÁÚß @VÚÃÔÛÁÚVÚ×ÚÆÇ DØ¥ÚßOæà×ÚßÙÈÚ ÈÚߨڴÀ¾ÚßßVÚ ÈÚßÁÚßOÚØÒ ÑÚÈÚáÛd }ÚßMsÛW ÈÚß}æ¡ ®ÚÁÚPÞ¾ÚßÁÚ AOÚÃÈÚßyOæàQ×ÚVÛVÚ†æÞOÛVÚß}Ú¡¥æ @ÄÇÈæÞ?
Oæà«æVÚà OÛsÚßÈÚ ®ÚÃËæ„ H«æM¥ÚÁæ, ®æÞeÛÈÚÁÚ *VÚ×Úß ÔæÞØ¥ÚM}æ ÈÚáÛMÑÛÔÛÂVÚ×Ú d}æ ÑÚÔÚºæàÞd«Ú ÈÚáÛt¥ÚÁæ †ÛÃÔÚ½yÀOæQ ^ÚßÀ~ DMmÛVÚßÈÚâ´¥æÞ A¥ÚÁæ @†ÛÃÔÚ½yÁÚß ¬ÞsÚßÈÚ ¥ÚPÐzæ, ¥Û«ÚVÚ×Úß †ÛÃÔÚ½yÀÈÚ«Úß„ ÔÛ×ÚßÈÚáÛsÚßÈÚâ´¦ÄÇÈæÞ ¾Úß~ÈÚ¾Úß%ÁæÞ!?
ಕೃಪೆ : ಕನ್ನಡ ಪ್ರಭ

ದಾರಿ ತಪ್ಪುತ್ತಿರುವ ಅಣ್ಣಾ !

ಭ್ರಷ್ಟಾಚಾರದಿಂದ ರೋಸಿಹೋಗಿದ್ದ ದೇಶದ ಜನರ ಮನದಲ್ಲಿ ಅಣ್ಣಾ ಹಜಾರೆ ತಂಡ ನಿರೀಕ್ಷೆಯ ಬುಗ್ಗೆಗಳನ್ನೆಬ್ಬಿಸಿದ್ದು ನಿಜ. ಆದರೆ ಅದೇ ತಂಡ ಈಗ ಸ್ವಯಂಕೃತ ಅಪರಾಧಗಳ ಮೂಲಕ ಜನರ ವಿಶ್ವಾಸ ಕಳೆದುಕೊಳ್ಳುತ್ತಿರುವುದು ವಿಷಾದನೀಯ. 

ಕಳೆದ ಕೆಲವು ದಶಕಗಳಿಂದ ಮಹಾರಾಷ್ಟ್ರದ ರಾಳೆಗಣಸಿದ್ದಿಯಲ್ಲಿ ಗ್ರಾಮೀಣ ಅಭಿವೃದ್ದಿಯ ಚಟುವಟಿಕೆಗಳ ಜತೆ ಭ್ರಷ್ಟರ ವಿರುದ್ದ ಹೋರಾಟವನ್ನೂ ನಡೆಸುತ್ತಾ ಬಂದಿದ್ದ ಅಣ್ಣಾಹಜಾರೆ ಟೀಕಾತೀತರಾಗಿದ್ದರು. ಅವರ ವಿರುದ್ದ ಯಾವ ಸಂದರ್ಭದಲ್ಲಿಯೂ ರಾಜಕೀಯ ಪೂರ್ವಗ್ರಹದ ಆರೋಪ ಕೇಳಿಬಂದಿರಲಿಲ್ಲ. 


ಕಾಂಗ್ರೆಸ್, ಬಿಜೆಪಿ,ಶಿವಸೇನೆ ಎನ್ನದೆ ಎಲ್ಲ ಪಕ್ಷಗಳಲ್ಲಿರುವ ಭ್ರಷ್ಟರು ಅವರ ದಾಳಿಗೆ ಈಡಾಗಿದ್ದರು. ಹೋರಾಟದ ಶಿಬಿರ ದೆಹಲಿಗೆ ಸ್ಥಳಾಂತರಗೊಂಡ ನಂತರದ ದಿನಗಳಲ್ಲಿ ಅದೇ ಹಳೆಯ ಪ್ರಶ್ನಾತೀತ, ಪಕ್ಷಾತೀತ ಮತ್ತು ವಿವಾದಾತೀತ ಅಣ್ಣಾಹಜಾರೆಯಾಗಿ ಅವರು ಉಳಿದಿಲ್ಲ.


ಪ್ರಾರಂಭದ ದಿನಗಳಲ್ಲಿ  ವ್ಯಕ್ತವಾದ ಜನಬೆಂಬಲದಲ್ಲಿ ತೇಲಿಹೋದ ಅಣ್ಣಾತಂಡ ಹೋರಾಟದ ಗೊತ್ತು-ಗುರಿಗಳನ್ನು ವಿಸ್ತರಿಸುತ್ತಲೇ ಹೋಗಿದ್ದು ಇದಕ್ಕೆ ಕಾರಣ ಇರಬಹುದು. ಲೋಕಪಾಲ ಮಸೂದೆ ಜಾರಿಗಾಗಿ ಪ್ರಾರಂಭಗೊಂಡ ಚಳವಳಿ ಈಗ ಕಪ್ಪುಹಣ, ಚುನಾವಣಾ ಪ್ರಚಾರ, ಪ್ರಧಾನಿ ಮತ್ತು ಸಚಿವರ ಭ್ರಷ್ಟಾಚಾರವೂ ಸೇರಿದಂತೆ ಕಣ್ಣೆದುರು ಕಾಣುವ ಎಲ್ಲ ಸಂಗತಿಗಳ ಬಗ್ಗೆ ಪ್ರತಿಕ್ರಿಯಿಸತೊಡಗಿ ತಾನೇ ಗೊಂದಲಕ್ಕೀಡಾದಂತೆ ಕಾಣುತ್ತಿದೆ. 

ಅವರ ಸಂಗಾತಿಗಳು ತಮ್ಮ ನಡೆ-ನುಡಿಗಳ ಮೂಲಕ ದಿನಕ್ಕೊಂದು ವಿವಾದವನ್ನು ಸೃಷ್ಟಿಸಿ ಸುದ್ದಿಗೆ ಗ್ರಾಸವಾಗುತ್ತಿದ್ದಾರೆ.  ದೇಶದ ನೂರುಕೋಟಿ ಜನರ ಚುನಾಯಿತ ಪ್ರತಿನಿಧಿಗಳು ತಾವು ಎಂಬಂತೆ ಹಮ್ಮಿನಿಂದ ವರ್ತಿಸತೊಡಗಿದ್ದಾರೆ. ಇದರ  ಫಲವಾಗಿಯೇ ದೇಶಕ್ಕೆ ಹೊಸ ದಿಕ್ಕು ತೋರಿಸುವವರಂತೆ ಕಂಡಿದ್ದ ಅಣ್ಣಾತಂಡ ತಾನೇ ದಿಕ್ಕುತಪ್ಪಿಸಿಕೊಂಡವರಂತೆ ಕಾಣುತ್ತಿದೆ.

 ವಿವಾದಾತ್ಮಕ ಯೋಗಗುರು ಬಾಬಾ ರಾಮ್‌ದೇವ್ ಜತೆಯಲ್ಲಿ ಸೇರಿಕೊಳ್ಳುವ ಮೂಲಕ ಅಣ್ಣಾತಂಡ ಅನಗತ್ಯವಾಗಿ ಇನ್ನೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ರಾಮ್‌ದೇವ್ ನಡವಳಿಕೆಯನ್ನು ಸಮರ್ಥಿಸಿಕೊಳ್ಳುವುದು ತಂಡದ ಸದಸ್ಯರಿಗೂ ಕಷ್ಟವಾಗುತ್ತಿದೆ.

ಕೆಲವೇ ವರ್ಷಗಳ ಅವಧಿಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಸಂಪಾದನೆ ಮಾಡಿರುವ ರಾಮ್‌ದೇವ್ ವಿರುದ್ದ ತೆರಿಗೆ ವಂಚನೆ, ಭೂ ಒತ್ತುವರಿಯೂ ಸೇರಿದಂತೆ ಹಲವಾರು ಆರೋಪಗಳಿವೆ. ಕಳೆದ ವರ್ಷ ದೆಹಲಿಯ ರಾಮಲೀಲಾ ಮೈದಾನದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೆಣ್ಣುವೇಷ ಧರಿಸಿ ಪಲಾಯನಗೈದ ನಂತರ ರಾಮ್‌ದೇವ್ ಹಿಂದಿನಷ್ಟು ಜನಪ್ರಿಯರಲ್ಲ.

ಸಾರ್ವಜನಿಕ ಹಿತಾಸಕ್ತಿಗಿಂತಲೂ ಹೆಚ್ಚಾಗಿ ವೈಯಕ್ತಿಕ ಸೇಡು ತೀರಿಸಿಕೊಳ್ಳುವವರಂತೆ ಇತ್ತೀಚಿನ ದಿನಗಳಲ್ಲಿ ಮಾತನಾಡುತ್ತಿರುವ ರಾಮ್‌ದೇವ್ ಅವರ ಸಂಘ ಪರಿವಾರದ ಮೇಲಿನ ಒಲವು ಕೂಡ ರಹಸ್ಯವೇನಲ್ಲ. ಮೊನ್ನೆ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಮರುಗಳಿಗೆಯಲ್ಲಿಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ರಾಮ್‌ದೇವ್ ಕಾಲುಮುಟ್ಟಿ ಬೆಂಬಲ ಘೋಷಿಸಿದ್ದಾರೆ.


ಪಕ್ಷದೊಳಗಿನ ಭ್ರಷ್ಟಾಚಾರವನ್ನು ನಿಯಂತ್ರಿಸಲಾಗದಿರುವುದಕ್ಕೆ ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರಿಂದಲೇ ಟೀಕೆಗೆ ಗುರಿಯಾದವರು ಗಡ್ಕರಿ. ಇಂತಹವರನ್ನು ಜತೆಯಲ್ಲಿ ಕಟ್ಟಿಕೊಂಡ ನಂತರ ತಮ್ಮದು ಪಕ್ಷಾತೀತ ಹೋರಾಟ ಎಂದು ಅಣ್ಣಾತಂಡ ಹೇಳುವ ಹಾಗಿಲ್ಲ. ವಿಶ್ವಾಸಾರ್ಹತೆ ಎನ್ನುವುದು ಒಂದು ಚಳವಳಿಯ ಪ್ರಾಣವಾಯು. ಅಣ್ಣಾ ಚಳವಳಿ ಅದನ್ನೇ ಕಳೆದುಕೊಳ್ಳುತ್ತಿದೆ.
ಕೃಪೆ : ಪ್ರಜಾವಾಣಿ ಸಂಪಾದಕೀಯ : 06-06-2012

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.