Monday, April 22, 2013

ಬದುಕು ನಶಿಸುವುದಿಲ್ಲ !



- ಸಿದ್ಧರಾಮ ಹಿಪ್ಪರಗಿ, ಧಾರವಾಡ
 
ಶಾಶ್ವತ ಭಾವ ಅನುಭವಿಸಿದಾಗ
ಬದುಕು 
ಸಂತಸದ ಕಣಜ !
ಅರಿಯಿರಿ
ಚಿತೆಯಂತಹ ಚಿಂತೆಗಳು ಕರಗುವವು !
ಉದ್ವೇಗದಲಿ
ದೇಹ ಸಾಮರ್ಥ್ಯ ಕಳೆದುಕೊಳ್ಳುವುದು !
ನಕಾರಾತ್ಮಕ ಸಂಗತಿ
ಆವರಿಸದಂತೆ ನೋಡಿಕೊಳ್ಳಿ
ಕೆಟ್ಟ ಆಲೋಚನೆಗಳಿಂದ ದೂರವಿರುವುದ !
ಕ್ಷಮಿಸೆಂದು ಭಯ ಬಿದ್ದವರು
ಜವಾಬ್ದಾರಿ ನಿಬಾಯಿಸಲು
ಔಟ್-ಪುಟ್ ತೋರಿಸಲು
ನಿಖರತೆಯಿಲ್ಲದ ಫಲಿತಾಂಶಕೆ ಶರಣಾಗುವರು !
ಕೊನೆಗೆ
ಚಡಪಡಿಕೆ ಅನುಭವದ 
ಅತೃಪ್ತರು !
ಶಾಂತಿಯಿಂದ ಚಿಂತಿಸಿ 
ಮುಂದಡಿಯಿಟ್ಟಿದ್ದರೆ !?
ಇಟ್ಟಿದ್ದರೆ ...
ಯಶಸ್ವಿ ಫಲಿತಾಂಶದ ಪರಿಮಳ ಎಲ್ಲೆಡೆ
ವ್ಯಾಪಿಸುತ್ತಿತ್ತು ಸಹಜಾನಂದದಲಿ !
ಕಿರುಗೆಲಸದಲಿ ಗುಣಮಟ್ಟ ;
ಬೇಡ ಖಾಲಿತನದ ಅಬ್ಬರ
ಕಳೆದುಕೊಳ್ಳುವುದು ಏನಿಲ್ಲ !
ಸಮಯದ ಹಂಗಿಲ್ಲ
ಬದುಕು ನಶಿಸುವುದಿಲ್ಲ
ಸಂತಸ ಆಚರಿಸಲು ತೊಂದರೆಯೇನಿಲ್ಲ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.