ಮೀಸಲಾತಿ ಹಾಗೆಂದಾಕ್ಷಣ ಬಹುತೇಕರ ಕಣ್ಣು
ಕೆಂಪಗಾಗುತ್ತದೆ. ಅವರ ಆ ಕೆಂಪಗಾದ ಕಣ್ಣು ಮೊದಲು ನೋಡುವುದು ದಲಿರತ್ತ. ಈ ಮೀಸಲಾತಿಯಿಂದ
ದಲಿತರು ಹೆಚ್ಚಿಕೊಂಡವರೆ, ಈ ಸಕರ್ಾರದ ಪ್ರತಿಯೊಂದು ಸವಲತ್ತು ಇವರಿಗೇನೆ. ಒಂದು ರೀತಿ
ಇವರು ಗೌಮರ್ೆಂಟ್ ಬ್ರಾಹ್ಮಣರು ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ. ಆಶ್ಚರ್ಯವೆಂದರೆ
ಅಂತಹ ಆಕ್ರೋಶವನ್ನು ಮೀಸಲಾತಿ ವ್ಯಾಪ್ತಿಯೊಳಗೆ ಬರುವ ಒಬಿಸಿಗಳೂ ಕೂಡ
ವ್ಯಕ್ತಪಡಿಸುತ್ತಾರೆ.! ಪ್ರಶ್ನೆಯೇನೆಂದರೆ ಮೀಸಲಾತಿ ಎಂಬ ಈ ಪರಿಕಲ್ಪನೆ ಹೊಸದೆ?
ದಲಿತರಿಗೆ ಹಿಂದುಳಿದವರಿಗೆ ಈಗ ಸಿಗುತ್ತಿರುವ ಅದು ಹಿಂದೆ ಯಾರಿಗೂ ಸಿಕ್ಕಿಲ್ಲವೇ?
ಹಿಂದೆ ಎಂದೂ ಕೂಡ ಅದು ಜಾರಿ ಇರಲಿಲ್ಲವೇ? ಯಾವ ರೂಪದಲ್ಲಾದರೂ ಸರಿ ಅಂತಹ ಒಂದು ಪದ್ಧತಿ
ಈ ದೇಶದಲ್ಲಿ ಅಸ್ತಿತ್ವ ದಲ್ಲಿರಲಿಲ್ಲವೇ? ಹಾಗಿದ್ದರೆ ಅಂತಹ ಮೀಸಲಾತಿಯ ಜನಕ ಯಾರು?
ಫಲಾನುಭವಿಗಳಾದರೂ ಯಾರು? ಅಂದು ಜಾರಿಯಾದ ಆ ಮೀಸಲಾತಿಯ ಪರಿಣಾಮವಾದರೂ ಏನು? ಇತ್ಯಾದಿ
ಪ್ರಶ್ನೆಗಳು ಪುಂಖಾನು ಪುಂಖವಾಗಿ ಹುಟ್ಟಿಕೊಳ್ಳುತ್ತವೆ. ಅಕ್ಷರಶಃ ನಿಜ, ಈ ಎಲ್ಲಾ
ಪ್ರಶ್ನೆಗಳಿಗೂ ಉತ್ತರ ಸಿಗುವುದು ಮನುಸ್ಮೃತಿಯಲ್ಲಿ ಹಾಗು ಅಂತಹ ಮೀಸಲಾತಿ ಪ್ರಥಮ
ಫಲಾನುಭವಿಗಳಾದ ಬ್ರಾಹ್ಮಣರಲ್ಲಿ. ಹಾಗಿದ್ದರೆ ಮನು ಸಂವಿಧಾನ ಬರೆದನೆ? ಮತ್ತು ಅಂತಹ
ಸಂವಿಧಾನದಲ್ಲಿ ಹಕ್ಕು ಮತ್ತು ಕರ್ತವ್ಯಗಳನ್ನು, ವಿಧಿಗಳನ್ನು ಸೇರಿಸಿದನೇ? ಮತ್ತು ಅಂತಹ
ಸಂವಿಧಾನ ಜಾರಿಯಲ್ಲಿತ್ತೇ? ಯಾರ ಕಾಲದಲ್ಲಿ ಅದು ಜಾರಿಯಲ್ಲಿತ್ತು? ಹೇಗಿತ್ತು?
ಯಾವರೀತಿ ಇತ್ತು? ಇತ್ಯಾದಿ ಪ್ರಶ್ನೆಗಳಿಗೆ ಬಾಬಾಸಾಹೇಬ್ ಡಾ. ಅಂಬೇಡ್ಕರ್ರವರು ತಮ್ಮ
ಕ್ರಾಂತಿ ಮತ್ತು ಪ್ರತಿಕ್ರಾಂತಿ ಎಂಬ ಕೃತಿಯಲ್ಲಿ (ಬಾಬಾಸಾಹೇಬರ ಈ ಕೃತಿಯನ್ನು ಉಲ್ಟಾ
ಪಲ್ಟಾ ಖ್ಯಾತಿಯ ಚಲನಚಿತ್ರ ನಿದರ್ೇಶಕ ಎನ್.ಎಸ್.ಶಂಕರ್ ಕನ್ನಡಕ್ಕೆ ಅನುವಾದಿಸಿದ್ದಾರೆ)
ಉತ್ತರ ಕೊಡುತ್ತಾ ಹೋಗುತ್ತಾರೆ. ಅಂಬೇಡ್ಕರರ ಪ್ರಕಾರ ಈ ದೇಶದಲ್ಲಿ ಸಾಮಾಜಿಕ
ಮೀಸಲಾತಿ ಜಾರಿಗೆ ತಂದ ಮನುಸ್ಮೃತಿಎಂಬ ಅಘೋಷಿತ ಸಂವಿಧಾನ ಜಾರಿಗೆ ಬಂದದ್ದು
ಬೌದ್ಧರಾಗಿದ್ದ ಮೌರ್ಯ ವಂಶದ ಕೊನೆಯ ದೊರೆ ಬೃಹದ್ರಥ ಮೌರ್ಯನ್ನು ಕೊಂದು ಶುಂಗವಂಶದ
ಮೂಲಕ ಬ್ರಾಹ್ಮಣರ ಆಳ್ವಿಕೆಗೆ ಅಡಿಪಾಯ ಇಟ್ಟ ಪುಷ್ಯಮಿತ್ರನ ಕಾಲದಲ್ಲಿ. ಪುಷ್ಯಮಿತ್ರನ
ಈ ಬ್ರಾಹ್ಮಣ ಕ್ರಾಂತಿ ಕ್ರಿಸ್ತ ಪೂರ್ವ 185 ರಲ್ಲಿ ಜರುಗಿತ್ತೆಂಬುದನ್ನು
ಮನಸ್ಸಿನಲ್ಲಿಟ್ಟುಕೊಂಡರೆ, ಇಂತಹ ಬ್ರಾಹ್ಮಣ ಕ್ರಾಂತಿಗೆ ಪೂರಕವಾದ ಕಾನೂನಾದ ಮನುಸ್ಮೃತಿ
ರೂಪುಗೊಂಡದ್ದು ಕ್ರಿಸ್ತ ಪೂರ್ವ 170 ರಿಂದ 150 ರ ಅವಧಿಯಲ್ಲಿರಬೇಕು ಎನ್ನುತ್ತಾರೆ
ಅಂಬೇಡ್ಕರ್. ಮುಂದುವರಿದು ಅವರು ಮನುಸ್ಮೃತಿ ಎಂಬ ಅಂತಹ ಕಾನೂನಿನ ಜನಕ ಸುಮತಿಭಾರ್ಗವ
ಎಂಬ ಬ್ರಾಹ್ಮಣ, ಮತ್ತದರ ಮೊದಲ ಫಲಾನುಭವಿಗಳು ಬ್ರಾಹ್ಮಣರು ಎಂಬ ಅಭಿಪ್ರಾಯವನ್ನು
ಸ್ಪಷ್ಟವಾಗಿ ದಾಖಲಿಸುತ್ತಾರೆ. ಹಾಗಿದ್ದರೆ ಬ್ರಾಹ್ಮಣರಿಗೆ ಈ ಪರಿಯ ವ್ಯಾಪಕ
ಸವಲತ್ತು ಕೊಟ್ಟ ಮತ್ತು ಅಂತಹ ಕೊಡುವಿಕೆಯ ಮೂಲಕ ಇಡೀ ದೇಶವನ್ನು ಸಾಮಾಜಿಕ ಅಸಮಾನತೆಗೆ
ತಳ್ಳಿದ ಮನುಧರ್ಮಶಾಸ್ತ್ರದ ಬಗ್ಗೆ ಚಚರ್ಿಸಲು ಯಾರು ಯಾಕೆ ಪ್ರಯತ್ನಿಸಿಲ್ಲ? ಅಥವಾ
ವಿಶ್ಲೇಷಿಸಲು ಹೋಗಿಲ್ಲ? ಉತ್ತರ ಸ್ಪಷ್ಟ. ಎಲ್ಲೋ ಒಂದು ಕಡೆ ಅಂತಹ ಚಚರ್ೆಯಾಗಬಾರದು,
ತಾವು ಪಡೆಯುತ್ತಿರುವ ಇಂತಹ ಸವಲತ್ತುಗಳು ಯಾರಿಗೂ ಗೊತ್ತಾಗಬಾರದು ಎಂದು ಕುತ್ಸಿತ
ಮನಸ್ಸುಗಳು ತಡೆದಿವೆ. ಇದು ಹೇಗೆ ಎಂದರೆ ಮನುಸ್ಮೃತಿ ಬರೆದದ್ದು ಯಾರು ಎಂದರೆ ಅದು ದೈವ
ಮೂಲದ್ದು ಎನ್ನಲಾಗಿದೆ! ಅಂದರೆ ಸಾಕ್ಷಾತ್ ದೇವರೇ ಅದನ್ನು ಬರೆದಿರುವುದರಿಂದ ಯಾರೂ
ಅದನ್ನು ಪ್ರಶ್ನಿಸಬಾರದೆಂದರ್ಥ! ನಿಜಕ್ಕೂ ಇದು ಅಪಾಯಕಾರಿ ಹುನ್ನಾರ. ಎರಡು ಸಾವಿರ
ವರ್ಷಗಳೀಂದ ಕೆಲವೊಂದು ಸಮುದಾಯಗಳು ಪಡೆಯುತ್ತಿರುವ ಅಘೋಷಿತ ಸೌಲಭ್ಯಗಳನ್ನು, ಸಾಮಾಜಿಕ
ಮೀಸಲಾತಿಯನ್ನು ಪ್ರಶ್ನಿಸಬಾರದೆಂದರೆ? ಅಂತಹ ಮೀಸಲಾತಿಯಿಂದ ಈ ದೇಶದಲ್ಲಿ ಉಂಟಾಗಿರುವ
ಸಾಮಾಜಿಕ ಏರುಪೇರುಗಳನ್ನು ಪ್ರಶ್ನಿಸಬಾರದೆಂದರೆ? Never, ಅಂತಹ ಪ್ರಶ್ನೆಗಳನ್ನು
ಹೆಚ್ಚು ಹೆಚ್ಚು ಕೇಳಬೇಕು. ಇಲ್ಲದಿದ್ದರೆ ಇನ್ನು ಹತ್ತು ಲಕ್ಷ ವರ್ಷವಾದರೂ ಸರಿ ಸಮಾಜ
ಹೀಗೆಯೇ ಇರುತ್ತದೆ. ಸಾಮಾಜಿಕ ತಾರತಮ್ಯವೂ ತೊಲಗುವುದಿಲ್ಲ, ಸಮಾನತೆಯಂತೂ ಸಾಧ್ಯವೇ
ಇಲ್ಲ. ಹಾಗಿದ್ದರೆ ಇಷ್ಟೊಂದು ಅಪಾಯಕಾರಿ ಎನಿಸುವ ಮನುಸ್ಮೃತಿಯು ಬ್ರಾಹ್ಮಣರಿಗೆ
ಕೊಟ್ಟಿರುವುದಾದರೂ ಏನು? ಮನುಸ್ಮೃತಿಯ ಒಂದೆರಡು ಸಾಲುಗಳನ್ನು ಉಲ್ಲೇಖಿಸುವುದಾದರೆ
ಮುಖದಿಂದ ಬಂದವನಾದ್ದರಿಂದ, ಜ್ಯೇಷ್ಠನಾದ್ದರಿಂದ ಮತ್ತು ವೇದವನ್ನು ಹೊಂದಿದವನಾದ್ದರಿಂದ
ಬ್ರಾಹ್ಮಣನೇ ಈ ಸೃಷ್ಟಿಯ ಪ್ರಭು, ಈ ಜಗತ್ತಿನಲ್ಲಿರುವುದೆಲ್ಲ ಬ್ರಾಹ್ಮಣನ ಸೊತ್ತು.
ತನ್ನ ಶ್ರೇಷ್ಠ ಜನ್ಮದಿಂದಲೇ ಬ್ರಾಹ್ಮಣನು ಎಲ್ಲಾ ವಸ್ತುಗಳಿಗೂ ಅರ್ಹತೆ ಪಡೆದಿದ್ದಾನೆ,
ಅಧ್ಯಯನ, ಅಧ್ಯಾಪನ, ತನಗಾಗಿ ಮತ್ತು ಇತರಿಗಾಗಿ ಯಜ್ಙ ಯಾಗಾದಿಗಳನ್ನು ಮಡುವುದು.
ದಾನಕೊಡುವುದು ಮತ್ತು ಸ್ವೀಕರಿಸುವುದು ಇವು ಬ್ರಾಹ್ಮಣನ ಕೆಲಸಗಳು! ಇಷ್ಟು ಹೇಳಿದ
ಮೇಲೆ ಮುಗಿದು ಹೋಯಿತು! ಮನು ಬ್ರಾಹ್ಮಣರನ್ನು ಯಾವ ಸ್ಥಾನದಲ್ಲಿಟ್ಟ ಮತ್ತು ಅವರಿಗೆ ಯಾವ
ಯಾವ ಕೆಲಸಗಳನ್ನು ಮೀಸಲಿಟ್ಟ ಎಂಬುದು ಅರ್ಥವಾಗುತ್ತದೆ. ಇನ್ನು ಬ್ರಾಹ್ಮಣರಿಗೆ
ಸಲ್ಲಬೇಕಾದ ಹಣಕಾಸಿಗೆ ಸಂಬಧಪಟ್ಟಂತೆ? ಈ ಕೆಳಗಿನ ಸಾಲುಗಳು ಅದಕ್ಕೆ ಸಾಕ್ಷಿ
ಒದಗಿಸುತ್ತವೆ. ವಿಧ್ವಾಂಸರು ಎಲ್ಲರಿಗೂ ಅಧಿಪತಿಯಾದ್ದರಿಂದ ಬ್ರಾಹ್ಮಣನ ಕಣ್ಣಿಗೆ
ಬಿದ್ದ ಪುರಾತನ ನಿಧಿಯು ಆತನಿಗೇ ಸಲ್ಲುತ್ತದೆ, ಅದೇ ರಾಜನಿಗೆ ನಿಧಿ ಸಿಕ್ಕಿದರೆ
ಅದರಲ್ಲಿ ಅರ್ಧವನ್ನು ಬ್ರಾಹ್ಮಣರಿಗೆ ಕೊಟ್ಟು ಉಳಿದರ್ಧವನ್ನು ರಾಜಕೋಶಕ್ಕೆ ಸೇರಿಸಬೇಕು!
ಇದಿಷ್ಟು ಮನು ಬ್ರಾಹ್ಮಣರಿಗೆ ಹಣಕಾಸು ‘ನಿಧಿ’ಗೆ ಸಂಬಂಧಪಟ್ಟಂತೆ ನೀಡುವ ಹಕ್ಕುಗಳು
ಮುಂದುವರಿದು ಮನು ತನ್ನ ಕಾಲ ಸನ್ನಿಹಿತವಾದಾಗ ರಾಜನು ಎಲ್ಲಾ ಧನವನ್ನು
ಬ್ರಾಹ್ಮಣರಿಗೆ ಒಪ್ಪಿಸಿ, ರಾಜ್ಯವನ್ನು ಮಗನಿಗೆ ಒಪ್ಪಿಸಿ ರಣಭೂಮಿಯಲ್ಲಿ ಸಾವು ಪಡೆಯ
ಬೇಕು ಎನ್ನುತ್ತಾನೆ. ಅಂದಹಾಗೆ ಮನು ಬ್ರಾಹ್ಮಣರಿಗೆ ಹಣಕಾಸು ಹಕ್ಕು ನೀಡಿದ. ಆದರೆ ಈ
ಹಣಕಾಸಿನ ಹಕ್ಕಿಗೆ ಕಳಸವಿಟ್ಟಂತೆ ಮನು ಬ್ರಾಹ್ಮಣರಿಗೆ ನೀಡಿದ್ದು ದಕ್ಷಿಣೆ ಮತ್ತು ದಾನದ
ಹಕ್ಕು. ಇದು ಹೇಗೆ ಎಂದರೆ ಮನು ಉದಾರ ದಕ್ಷಿಣೆಗಳನ್ನು ಕೊಟ್ಟು ರಾಜನು ಯಾಗವನ್ನು
ಮಾಡಬೇಕು. ಧಮರ್ಾರ್ಥವಾಗಿ ಬ್ರಾಹ್ಮಣರಿಗೆ ಧನ ಭೋಗಾದಿಗಳನ್ನು ಕೊಡಬೇಕು ಎನ್ನುತ್ತಾನೆ .
ಮುಂದುವರಿದು ಮನು ಬ್ರಾಹ್ಮಣೇತರರಿಗೆ ಕೊಟ್ಟ ದಾನ ಸಾಮಾನ್ಯ, ಬ್ರಾಹ್ಮಣನಿಗೆ
ಕೊಟ್ಟದ್ದು ದುಪ್ಪಟ್ಟು ಫಲಕಾರಿ, ಅಧ್ಯಯನ ಶೀಲ ಬ್ರಾಹ್ಮಣನಿಗೆ ಕೊಟ್ಟ ದಾನ ಶತ
ಸಹಸ್ರಫಲವುಳ್ಳದ್ದು, ಅದೇ ವೇದಪಾರಂಗತ ಬ್ರಾಹ್ಮಣನಿಗೆ ಮಾಡಿದ ದಾನ ಅನಂತ ಫಲಕಾರಿ
ಎಂದು ದಾನವನ್ನು ಶಾಸನಬದ್ಧಗೊಳಿಸುತ್ತಾನೆ. ಇದು ಹೇಗೆ ಎಂದರೆ ಸ್ವತಃ ಅಂಬೇಡ್ಕರ್ರವರೆ
ಮನು ಬ್ರಾಹ್ಮಣರಿಗೆ ದಾನದ ಹಕ್ಕು ಕೊಟ್ಟಿದ್ದ. ಆ ದಾನ ಯಾವಾಗಲೂ ಹಣ ಅಥವಾ
ಚಿರಾಸ್ತಿಯಾಗಿರಬೇಕಿತ್ತು. ಆದರೆ ಕಾಲಾಂತರದಲ್ಲಿ, ಬ್ರಾಹ್ಮಣನಿಗೆ ಉಪಪತ್ನಿಯಾಗಿ
ಇರಿಸಿಕೊಳ್ಳಲು ಹೆಣ್ಣಿನ ಉಡುಗೊರೆ ಅಥವಾ ಹಣ ಕೊಟ್ಟು ಬಿಡಿಸಿಕೊಳ್ಳಬಹುದಾದ ಹೆಣ್ಣನ್ನು
ಒತ್ತೆಯಾಗಿಡುವ ಕ್ರಿಯೆ ಸಹ ‘ದಾನದ ಕಲ್ಪನೆ’ಗೆ ಸೇರಿತು! ಎನ್ನುತ್ತಾರೆ.
ಒಟ್ಟಾರೆ ಮನು ನೀಡಿದ ಈ ದಾನದ ಹಕ್ಕಿನಿಂದಾಗಿ ಬ್ರಾಹ್ಮಣರಿಗೆ ಧನ ಧಾನ್ಯವಲ್ಲದೆ
ಬೇರೆಯವರ ಮನೆಯ ಹೆಣ್ಣು ಕೂಡ ಧಕ್ಕಿತು! ಹೀಗಿರುವಾಗ ಇದನ್ನು (ಮನುಧರ್ಮಶಾಸ್ತ್ರ)
ನಾಗರೀಕ ಕಾನೂನು ಎನ್ನಬೇಕೆ? ಮತ್ತು ಅಂತಹ ಕಾನೂನು ಈಗಲೂ ಅನೌಪಚಾರಿಕವಾಗಿ
ಜಾರಿಯಲ್ಲಿರುವುದನ್ನು ಖಂಡಿಸದೆ ಇರಬೇಕೆ? ಇರಲಿ ಬ್ರಾಹ್ಮಣರಿಗೆ ಶಿಕ್ಷಣ ಮತ್ತು
ಆಥರ್ಿಕ ‘ಮೀಸಲಾತಿ’ ನೀಡಿದ ಮನು ಅವರ ರಕ್ಷಣೆಗಾಗಿ ಯಾವ ರೀತಿಯ ‘ಕಾನೂನು’ ರೂಪಿಸಿದ
ಎಂದು ಚರ್ಚಿಸೋಣ. ಏಕೆಂದರೆ ಎಲ್ಲರೂ ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯ್ದೆ ಯನ್ನು
ಟೀಕಿಸುತ್ತಾರೆ. ಅಂತಹ ಕಾಯ್ದೆಯನ್ನು ಆಗಲೇ ಮನು ಬ್ರಾಹ್ಮಣರಿಗೆ ನೀಡಿದ್ದ ಎಂಬುದನ್ನು
ಬಹುತೇಕರು ಗಮನಿಸಲು ಹೋಗಿಲ್ಲ! ಅದಕ್ಕೆ ಅವನ ಒಂದೆರಡು ಸಾಲುಗಳನ್ನು ಇಲ್ಲಿ
ಹೇಳುವುದಾದರೆ ತನಗೆ ಹಾನಿ ಮಾಡಿದವರ ವಿರುದ್ಧ ಬ್ರಾಹ್ಮಣನು ರಾಜನಿಗೆ ದೂರು
ಒಯ್ಯಬೇಕಿಲ್ಲ. ತನ್ನ ಸ್ವಂತ ಬಲದಿಂದಲೇ ಅವರನ್ನು ಶಿಕ್ಷಿಸಬಲ್ಲನು. ಹಾಗೆಯೇ ಮನು
ವರ್ಣಾಶ್ರಮ ಧರ್ಮಕ್ಕೆ ಚ್ಯುತಿಬಂದಾಗ ಅಥವಾ ವಿಪ್ಲವಕಾಲದಲ್ಲಿ ದ್ವಿಜರು ಆತ್ಮ
ರಕ್ಷಣೆಗಾಗಿ ಶಸ್ತ್ರ ಹಿಡಿಯಬಲ್ಲರು ಎನ್ನುತ್ತಾನೆ. ಇವಿಷ್ಟರಿಂದಲೇ ಅರ್ಥವಾಗುತ್ತದೆ,
ಬ್ರಾಹ್ಮಣರ ಮೇಲಿನ ದೌರ್ಜನ್ಯಕ್ಕೆ ಬ್ರಾಹ್ಮಣರು ಯಾವ ಕ್ರಮವನ್ನಾದರೂ ಕೈಗೊಳ್ಳ
ಬಹುದಿತ್ತು! ಅಂದಹಾಗೆ ಬ್ರಾಹ್ಮಣರಿಗೆ ನೀಡಲಾದ ಈ ಪರಿಯ ಸ್ವರಕ್ಷಣೆಯ ಹಕ್ಕು ಯಾವ
ಮಟ್ಟದಲ್ಲಿತ್ತೆಂದರೆ ಆತ್ಮ ರಕ್ಷಣೆಗಾಗಿ ಅಥವಾ ದಕ್ಷಿಣೆಗಾಗಿ ಉಂಟಾದ ವ್ಯಾಜ್ಯದಲ್ಲಿ,
ಸ್ತ್ರೀಯರು ಮತ್ತು ಬ್ರಾಹ್ಮಣರ ರಕ್ಷಣೆಗಾಗಿ ಬ್ರಾಹ್ಮಣನು ಕೊಲೆ ಮಾಡಿದರೂ
ಅಪರಾಧವಲ್ಲ! ಆಶ್ಚರ್ಯ! ಈ ಜಗತ್ತಿನಲ್ಲಿ ಕೊಲೆ ಮಾಡಿದರೂ ಕೂಡ ಅಪರಾಧವಲ್ಲ! ಮನು
ಅಂತಹ ಮಹತ್ತರ ಹಕ್ಕನ್ನು ಬ್ರಾಹ್ಮಣರಿಗೆ ಕೊಟ್ಟಿದ್ದಾನೆ! ಇಂತಹ ಒಂದು ಹಕ್ಕನ್ನು
ಕನಸಿನಲ್ಲಿಯೂ ಕೂಡ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ! ಪ್ರಶ್ನೆ ಎಂದರೆ ಸ್ವರಕ್ಷಣೆಗಾಗಿ
ಇಷ್ಟೆಲ್ಲಾ ಹಕ್ಕುಗಳನ್ನು ಕೊಟ್ಟಮೇಲೆ ಅಂತಹ ಸಮುದಾದದ ಮೆಲೆ ದೌರ್ಜನ್ಯವಾದರೂ ಎಲ್ಲಿ
ನಡೆಯುತ್ತದೆ? ಹೀಗಿರುವಾಗ ಇಂತಹ ಅನೌಪಚಾರಿಕ ಹಕ್ಕನ್ನು ಪ್ರಶ್ನಿಸದ ಕುತ್ಸಿತ
ಮನಸ್ಸುಗಳು ಎಸ್.ಸಿ./ ಎಸ್.ಟಿ ದೌರ್ಜನ್ಯ ತಡೆ ಕಾಯಿದೆ ಬಗ್ಗೆ ಕೊಂಕು
ಮಾತನಾಡುವುದೇಕೆ? ಒಂದಂತು ನಿಜ ಶೂದ್ರರಿಗೆ ವಿದ್ಯೆಯನ್ನು ನಿರಾಕರಿಸುವ ಮೂಲಕ,
ಕ್ಷತ್ರಿಯರನ್ನು ಕ್ಷಾತ್ರಕ್ಷೇತ್ರಕ್ಕೆ ಕಳುಹಿಸುವ ಮೂಲಕ, ವೈಶ್ಯರನ್ನು ಕೃಷಿ ಮತ್ತು
ವಾಣಿಜ್ಯ ಕ್ಷೇತ್ರಕ್ಕೆ ಮೀಸಲಿರಿಸುವ ಮೂಲಕ, ಶಿಕ್ಷಣವನ್ನು ತಮಗೆ ಮಾತ್ರ
ಮೀಸಲಿರಿಸಿಕೊಳ್ಳುವುದರ ಮೂಲಕ ಬ್ರಾಹ್ಮಣರು ಸಮಾಜದ ದಿಕ್ಕು ತಪ್ಪಿಸಲು ಮತ್ತು ತಪ್ಪು
ಮಾರ್ಗದರ್ಶನ ನೀಡಲು ಸ್ವಂತಂತ್ರವಾದ ಏಕೈಕ ಶಿಕ್ಷಿತ ವರ್ಗವಾದರು. ಏಕೆಂದರೆ ಭಾರತೀಯ
ಸಮಾಜದಲ್ಲಿ ಇಂತಿಂತಹವರಿಗೆ ಇಂತಹದ್ದೆ ಕೆಲಸ, ಮತ್ತು ಆ ಕೆಲಸ ಮಾಡುವವರು ಇಂತಹದ್ದೆ
ಜಾತಿ ಎಂದು ಮಾರ್ಗದರ್ಶನ ನೀಡಿದ್ದು ಅವರೇ ಅಲ್ಲವೆ. ಏಕೆಂದರೆ ಮನು ಎಂದು ಕರೆಸಿಕೊಳ್ಳುವ
ಸುಮತಿ ಭಾರ್ಗವನೆಂಬ ಆತ ಬ್ರಾಹ್ಮಣನೇ ಅಲ್ಲವೇ? ಮತ್ತು ಆತ ಬರೆದ ಮನು ಧರ್ಮಶಾಸ್ತ್ರ
ಬ್ರಾಹ್ಮಣರ ಏಳ್ಗೆಗಾಗಿಯೇ ಅಲ್ಲವೇ? ಹೀಗಿರುವಾಗ ಮನುಸ್ಮೃತಿಎಂಬ ಪ್ರಾಚೀನ ಕಾಲದ
ಕಾನೂನಿನ ಮೂಲಕ ಪಡೆದಿರುವ ಆ ಅಮೂಲ್ಯ ಮೀಸಲಾತಿ ಇರುವಾಗ ಅವರು ಸಮಾಜದಲ್ಲಿ
ಉನ್ನತವರ್ಗದವರಾಗಿರದೆ ಇನ್ನೇನಾಗಿರಲು ಸಾಧ್ಯ? ಉನ್ನತವರ್ಗದವರಾಗಿರಲಿ,
ಅಭ್ಯಂತರವೇನಿಲ್ಲ. ಅದು ಅವರ ಹಕ್ಕು. ಪ್ರಶ್ನೆ ಏನೆಂದರೆ ಹಿಂದುಳಿದವರ್ಗದವರಿಗೆ ಮತ್ತು
ದಲಿತರಿಗೆ ಪ್ರಸ್ತುತ ಸಂವಿಧಾನಬದ್ಧವಾಗಿ ನೀಡಲ್ಪಡುತ್ತಿರುವ ಅದೇ ಹಕ್ಕುಗಳನ್ನು
ವಿರೋಧಿಸುವುದೇಕೆ? ಎನ್ನುವುದು. ಮಾತೆತ್ತಿದರೆ ಪ್ರತಿಭೆ, ಪ್ರತಿಭೆ ಎನ್ನುತ್ತಾರೆ.
Merit? My foot! D meritಅಥವಾ ಪ್ರತಿಭೆ ಅವರ ವ್ಯಕ್ತಿಗತವಾಗಿ ಬಂದದ್ದಲ್ಲ. ಅದು
ಮನುಸ್ಮೃತಿ ಮೂಲಕ ಅವರು ಪಡೆದ ಸಾಮಾಜಿಕ ಮೀಸಲಾತಿಯಿಂದ ಪಡೆದದ್ದು. ಹೀಗಿರುವಾಗ
ಅಂತಹದ್ದೆ ಮೀಸಲಾತಿಯನ್ನು, ಹಕ್ಕುಗಳನ್ನು ಸಂವಿಧಾನಬದ್ಧವಾಗಿ ಈ ದೇಶದ ಶೋಷಿತ ವರ್ಗಗಳು
ಪಡೆದರೆ ಕರುಬುವುದೇಕೆ? ಒಂದಂತು ನಿಜ, ಮನುಸ್ಮೃತಿ ಸ್ವಯಂಭೂ (ದೈವ ಸ್ವರೂಪಿ)
ಇರಬಹುದು. ಆದರೆ ಭಾರತದ ಸಂವಿಧಾನ ಮತ್ತು ಶೋಷಿತರಿಗೆ ಅದು ನೀಡಿರುವ ಹಕ್ಕುಗಳು?
ಮಹಾಮಾನವ ಅಂಬೇಡ್ಕರ್ ಸ್ವರೂಪಿ. ಹಾಗಿದ್ದರೆ ಇಲ್ಲಿ ಯಾರು ಗ್ರೇಟ್? ದೈವ ಅಥವಾ ಮಾನವ?
Man is always great. Because he is the creator of god!
ರಘೋತ್ತಮ ಹೊ.ಬ
No comments:
Post a Comment