ಬೆಂಗಳೂರು, ಮೇ.7: ಕರ್ನಾಟಕ
ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಸಂಪುಟ ಪುನಾರಚನೆ, ಖಾತೆ ಹಂಚಿಕೆ, ಸಂಪುಟ
ವಿಸ್ತರಣೆ ಇನ್ನೊಂದು ವಾರದಲ್ಲೇ ಆಗಲಿದೆ ಎಂದು ಸೋಮವಾರ(ಮೇ.7) ಮತ್ತೊಮ್ಮೆ
ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರು ವಿದೇಶಿ ಪ್ರವಾಸದಲ್ಲಿರುವುದರಿಂದ ಸಂಪುಟ ವಿಸ್ತರಣೆ ಸದ್ಯಕ್ಕೆ ನಡೆಯುವ ಸಾಧ್ಯತೆ ಕಮ್ಮಿ ಎನ್ನಬಹುದು.
'ಕತ್ತೆಯೂ
ಹೊರದಷ್ಟು ಭಾರ ನಾನು ಹೊತ್ತಿದ್ದೇನೆ. ಸುಮಾರು 21 ಖಾತೆಗಳ ಭಾರ ಹೊರುವುದು ಸುಲಭದ
ಮಾತಲ್ಲ. ಎಲ್ಲಾ ಖಾತೆಗಳಿಗೂ ನ್ಯಾಯ ಸಲ್ಲಿಸಲಾಗುತ್ತಿಲ್ಲ. ಹೀಗಾಗಿ ಸಂಪುಟ ವಿಸ್ತರಣೆ
ಅನಿವಾರ್ಯ' ಎಂದು ಸದಾನಂದ ಗೌಡ ಹೇಳಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿಗಳಾದ ಸಿಟಿ ರವಿ
ಅವರು ಸಹಿ ಸಂಗ್ರಹ ಕಾರ್ಯ ಮುಗಿಸಿದ್ದು, ಸೋಮವಾರ(ಮೇ.7) ಪಕ್ಷದ ಹಿರಿಯ ನಾಯಕರಿಗೆ
ನೀಡುವ ಸಾಧ್ಯತೆಯಿದೆ. ಪಕ್ಷ ನಿಷ್ಠ ಶಾಸಕರು, ಸಚಿವರು ಪಕ್ಷದ ಸಂಘಟನೆಯಲ್ಲಿ ತೊಡಗಲಿ,
ಕುರ್ಚಿ ಬಿಟ್ಟು ಬರಲಿ ಎಂದು ಮನವಿ ಸಲ್ಲಿಸುತ್ತಿದ್ದಾರೆ.
Flash Back :
ಯಡಿಯೂರಪ್ಪ ಬಣದಿಂದ 12 ಜನ ಹಾಗೂ ಶೆಟ್ಟರ್ ಬಣದಿಂದ 9 ಜನ ಶಾಸಕರನ್ನು ಒಟ್ಟುಗೂಡಿಸಿ
ಮೊದಲ ಹಂತದಲ್ಲಿ 21 ಜನ ಶಾಸಕರು ಕ್ಯಾಬಿನೆಟ್ ದರ್ಜೆ ಸಚಿವರಾಗಿ ಡಿವಿ ಸದಾನಂದ ಗೌಡರು
ಸೇರಿಸಿಕೊಂಡಿದ್ದು ಇಲ್ಲಿ ಸ್ಮರಿಸಬಹುದು.
ಕ್ಯಾಬಿನೆಟ್ ಸಚಿವರು ಅವರ ಕ್ಷೇತ್ರ ಹಾಗೂ ಖಾತೆ ವಿವರ ಹೀಗಿದೆ:
ಸಚಿವರ ಹೆಸರು | ಕ್ಷೇತ್ರ | ಖಾತೆ |
ಡಿ.ವಿ. ಸದಾನಂದ ಗೌಡ | - | ಹಣಕಾಸು, ಕಂದಾಯ, ಗುಪ್ತಚರ, ಆರೋಗ್ಯ, ಗಣಿಗಾರಿಕೆ, ಉನ್ನತ ಶಿಕ್ಷಣ, ಪ್ರವಾಸೋದ್ಯಮ, ಮುಜರಾಯಿ, ಮೂಲ ಸೌಕರ್ಯ, ಯುವಜನ ಸೇವೆ ಮತ್ತು ಕ್ರೀಡೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಹಕಾರ, ಪರಿಸರ, ಮೀನುಗಾರಿಕೆ, ಯೋಜನೆ, ವಾರ್ತಾ ಇಲಾಖೆ, ಬೆಂಗಳೂರು ಅಭಿವೃದ್ಧಿ, ಸಂಪುಟ ವ್ಯವಹಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ವಕ್ಫ್ ಮತ್ತು ಹಜ್ ಇಲಾಖೆ ಬಾಕಿ ಉಳಿದ ಎಲ್ಲಾ ಖಾತೆಗಳು |
ಗೋವಿಂದ ಕಾರಜೋಳ | ಮುಧೋಳ | ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ, |
ದಿ. ವಿ.ಎಸ್. ಆಚಾರ್ಯ | ವಿಧಾನಪರಿಷತ್ ಸದಸ್ಯ | - |
ಉದಾಸಿ ಚನ್ನಬಸಪ್ಪ ಮಹಾಲಿಂಗಪ್ಪ | ಹಾನಗಲ್ | PWD, ಬಂದರು ಖಾತೆ ಹೊರತು ಪಡಿಸಿ |
ಜಗದೀಶ್ ಶೆಟ್ಟರ್ | ಹುಬ್ಬಳ್ಳಿ | ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್, ಗ್ರಾಮೀಣ ನೀರು ಪೂರೈಕೆ |
ಆರ್ ಅಶೋಕ್ | ಪದ್ಮನಾಭ ನಗರ | ಗೃಹ(ಗುಪ್ತಚರ, ಬಂದೀಖಾನೆ ಹೊರತುಪಡಿಸಿ), ಸಾರಿಗೆ |
ನಾರಾಯಣಸ್ವಾಮಿ | ಆನೇಕಲ್ | ಅಲ್ಪಸಂಖ್ಯಾತ ಸಮಾಜ ಕಲ್ಯಾಣ, ಬಂದೀಖಾನೆ |
ವಿಶ್ವೇಶ್ವರ ಹೆಗಡೆ ಕಾಗೇರಿ | ಶಿರಸಿ | ಪ್ರಾಥಮಿಕ ಶಿಕ್ಷಣ, ಸಾರ್ವಜನಿಕ ಗ್ರಂಥಾಲಯ ಹೊರತು ಪಡಿಸಿ |
ಬಿಎನ್ ಬಚ್ಚೇಗೌಡ | ಹೊಸಕೋಟೆ | ಕಾರ್ಮಿಕ ಖಾತೆ, ರೇಷ್ಮೆ |
ಸುರೇಶ್ ಕುಮಾರ್ | ರಾಜಾಜಿನಗರ | ಕಾನೂನು |
ಎಸ್ ಎ ರವೀಂದ್ರನಾಥ್ | ದಾವಣಗೆರೆ ಉತ್ತರ | ಸಕ್ಕರೆ, ತೋಟಗಾರಿಕೆ ಹಾಗೂ ಕೃಷಿ |
ಎಸ್ ಎ ರಾಮದಾಸ್ | (ಮೈಸೂರು) | ವೈದ್ಯಕೀಯ ಶಿಕ್ಷಣ(ಆರೋಗ್ಯ ಖಾತೆಯಿಂದ) |
ಮುರುಗೇಶ್ ನಿರಾಣಿ | ಬಿಳಗಿ | ಮಧ್ಯಮ ಹಾಗೂ ಭಾರಿ ಕೈಗಾರಿಕಾ |
ಶೋಭಾ ಕರಂದ್ಲಾಜೆ | ಯಶವಂತಪುರ | ಇಂಧನ, ಆಹಾರ ಮತ್ತು ನಾಗರಿಕ ಸೌಲಭ್ಯ ಪೂರೈಕೆ |
ಉಮೇಶ್ ಕತ್ತಿ | ಚಿಕ್ಕೋಡಿ | ಕೃಷಿ |
ರೇಣುಕಾಚಾರ್ಯ | ಹೊನ್ನಾಳಿ | ಅಬಕಾರಿ |
ಬಸವರಾಜ್ ಬೊಮ್ಮಾಯಿ | ಹಾವೇರಿ | ನೀರಾವರಿ |
ರೇವೂನಾಯಕ್ ಬೆಳಮಗಿ | ಗುಲಬರ್ಗ ಗ್ರಾಮೀಣ | ಗ್ರಂಥಾಲಯ, ಸಣ್ಣ ಉಳಿತಾಯ, ಹೈನುಗಾರಿಕೆ |
ಸಿಸಿ ಪಾಟೀಲ್ | ನರಗುಂದ | -ಸಂಪುಟದಿಂದ ಕೈ ಬಿಡಲಾಗಿದೆ |
ಲಕ್ಷ್ಮಣ್ ಸವದಿ | ಅಥಣಿ | -ಸಂಪುಟದಿಂದ ಕೈ ಬಿಡಲಾಗಿದೆ |
ಕೃಷ್ಣ ಪಾಲೇಮಾರ್ | ಮಂಗಳೂರು ಉತ್ತರ | -ಸಂಪುಟದಿಂದ ಕೈ ಬಿಡಲಾಗಿದೆ |
ವಿ ಸೋಮಣ್ಣ | ವಿಧಾನಪರಿಷತ್ ಸದಸ್ಯ | ವಸತಿ |
ಬಾಲಚಂದ್ರ ಜಾರಕಿಹೊಳಿ | ಅರಬಾವಿ | ಪೌರಾಡಳಿತ |
ಆನಂದ್ ಆಸ್ನೋಟಿಕರ್ | ಕಾರವಾರ | ಐಟಿಬಿಟಿ, ವಿಜ್ಞಾನ ತಂತ್ರಜ್ಞಾನ |
ಸಿ.ಪಿ ಯೋಗೀಶ್ವರ್ | ಚನ್ನಪಟ್ಟಣ | ಅರಣ್ಯ |
ನರಸಿಂಹ ನಾಯಕ(ರಾಜೂ ಗೌಡ) | ಸುರಪುರ | ಸಣ್ಣ ಕೈಗಾರಿಕೆ |
ವರ್ತೂರು ಪ್ರಕಾಶ್ | ಕೋಲಾರ | ಜವಳಿ |
No comments:
Post a Comment