Sunday, March 02, 2014

ಸಂಕಟಬುರುಕರಿಗೆ..

 ನೀಲಾ ಕೆ.

ನೀಲಾ
ಹೊಂಟೆನ ಹೊಲಕ
ಮೇವ ತರಾಕ
ಸಂಕಟಬುರಕ್ಯಾರು
ನಿಂತಾರ ನನ್ನ ನೋಡಾಕ !

ಜುಮಕಿಯ ಹಾಕೆನ
ಗೆಜ್ಜೀ ಕಟ್ಟೇನ ಕಾಲಾಗ
ಕೊಳ್ಳಾಗ ಸರಮಾಲೆ ಹಾಕೇನ
ಸಂಕಟಬುರಕರು
ನಿಂತಾರು ನನ್ನ ನೋಡಾಕ !


ಜರೀ ಸೀರಿ ಉಟ್ಟೇನ
ಹಣಿ ತುಂಬಾ ಕುಂಕುಮ ಇಟ್ಟೆನ
ಕೈತುಂಬಾ ಬಂಗಾರ ಪಾಟ್ಲು ಹಾಕೇನ
ಸಂಕಟ ಬುರುಕರು ನಿಂತಾರ
ನನ್ನ ನೋಡಾಕ !


ಎಡಕ್ಕೆ ಸೆರಗ ಹೊತ್ತಾಕೊಂಡು
ಬಲಕ್ಕೆ ಕುರಪಿಯ ಹಿಡಕೊಂಡು
ಹೊಂಟೆನ ಹೊಲಕ
ಮೇವ ತರಾಕ

ಸಂಕಟಬುರುಕರು ನಿಂತಾರ ನನ್ನ ನೋಡಾಕ !


ಕುರುಪಿ ಏತಿ ನನ್ನ ಕೈಯಾಗ
ತಡ ಮಾಡಿದರ ಹೀರ್ತೇತಿ ರಗುತವ
ಅಲ್ಲೇ ನಿಲ್ಲಬೇಕು ಮಂದಿ ; ನಾ ಅಂದುಕೊಂಡ
ಸಂಕಟಬುರುಕ ಮಂದಿ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.