ಡಾ. ಸಿದ್ರಾಮ ಕಾರಣಿಕ
ದೇವರಾಯ ಇಂಗಳೆಯವರ ಬಗ್ಗೆ 'ಇಂಗಳೆ ಮಾರ್ಗ' ಎನ್ನುವ ಕನ್ನಡ ಸಿನೇಮಾವೊಂದು ರೂಪುಗೊಳ್ಳುತ್ತಿರುವುದು ಖುಷಿಯ ಸಂಗತಿ. ಅಂಥ ಪ್ರಯತ್ನ ಮಾಡುತ್ತಿರುವವರು ನಿಜಕ್ಕೂ ಶ್ಲಾಘನೀಯರು.
ಆದರೆ ವಾಸ್ತವ ಇತಿಹಾಸವನ್ನು ಮರೆಮಾಚಿ, ಸುಳ್ಳನ್ನು ತುಂಬಿ ಬಿಡುವ ಮಂದಿ ಬಹಳ ಇದ್ದಾರೆ ಎಂಬುದನ್ನು ಚಿತ್ರದ ನಿರ್ದೇಶಕರು ತಿಳಿಯುವುದು ಉತ್ತಮ ಎಂಬುದು ನನ್ನ ಅನಿಸಿಕೆ ಮಾತ್ರವಲ್ಲ ; ದಲಿತನೊಬ್ಬನ ಇತಿಹಾಸವನ್ನು ತಿರುಚುವ ಕೆಲಸ ಆಗಬಾರದು ಎಂಬ ಕಾಳಜಿಯಾಗಿದೆ. ಬಹುಶಃ ನಿರ್ದೇಶಕರು ಇನ್ನೂ ಕೆಲವು ಸಂಗತಿಗಳನ್ನು ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ. ಅದು ಸಿನೇಮಾಗೆ ರೋಚಕತೆಯನ್ನೂ ಇತಿಹಾಸದ ದುರಂತವನ್ನೂ ಕಟ್ಟಿಕೊಡಲು ಸಾಧ್ಯವಾಗುತ್ತದೆ. ಚೇಳು ಕಡಿಸಿಕೊಂಡವನಿಗೆ ಮಾತ್ರ ಅದರ ಉರಿ ಗೊತ್ತಿರುತ್ತದೆ ಎಂಬ ವಿಚಾರವೂ ಮನಸ್ಸಿನಲ್ಲಿರಲಿ.

ಡಾ. ಬಾಬಾಸಾಹೇಬ ಅಂಬೇಡ್ಕರರ ವಿಚಾರಧಾರೆಯನ್ನೇ ಬುಡಮೇಲಾಗಿಸುವ ಪ್ರಸಂಗಗಳು ಮೇಲಿಂದ ಮೇಲೆ ಜರಗುತ್ತಿವೆ. ನಿಜವಾದ ದಲಿತರು (ಅಲ್ಪಸಂಖ್ಯಾತರನ್ನೂ ಒಳಗೊಂಡಂತೆ ಹಿಂದುಳಿದವರು, ಅಸ್ಪೃಶ್ಯರು, ಇತ್ಯಾದಿ ಜನಾಂಗ) ಧ್ವನಿ ಎತ್ತಬೇಕಾದ ಅವಶ್ಯಕತೆ ಇದೆ ಎನ್ನುವುದಕ್ಕಿಂತ ಅನಿವಾರ್ಯತೆ ಇದೆ. ದಲಿತರಲ್ಲದವರು ದಲಿತರ ಹೆಸರು ಹೇಳಿಕೊಂಡು, ಕೆಲವು ದಲಿತರನ್ನು ಒಳಗು ಮಾಡಿಕೊಂಡು ಬೆಳೆದದ್ದು ಸಾಕು. ಈಗಲೂ ನಾವು ಬಾಯಿ ಬಿಡದಿದ್ದರೆ ನಮಗೆ ಉಳಿಗಾಲವಿಲ್ಲ. ಪೇಶ್ವಾಯಿ ಹುಳಗಳಿಗೆ ನಾವು ಪಾಠ ಕಲಿಸಲೇಬೇಕು. ವೇದಿಕೆಯೊಂದು ಸಿದ್ಧವಾಗಬೇಕಾದ ತುರ್ತು ನಮ್ಮ ಮುಂದೆ ಇದೆ. ಆಗ ನಾನು ಮತ್ತು ನನ್ನಂತೆಯೇ ಇರುವವರು ವಾಸ್ತವದ ಬಗ್ಗೆ ಹೇಳಲು ಮುಂದಾಗುತ್ತಾರೆ. ನಾನಂತೂ ದೇವರಾಯ ಇಂಗಳೆಯವರ ಮೂರು ಪೆಟ್ಟಿಗೆಗಳ ರಹಸ್ಯವನ್ನೂ ಬಿಚ್ಚಿಡುತ್ತೇನೆ. (ಇದನ್ನು ಸುಮಾರು ಎರಡು ವರ್ಷಗಳ ಹಿಂದೆಯೇ ಗುಲ್ಬರ್ಗ ವಿಶ್ವವಿದ್ಯಾಲಯದ ವೇದಿಕೆಯ ಮೇಲೆ ನಿಂತು ಸಾರಿದ್ದೇನೆ) ಬಲಿತ ದಲಿತರನ್ನೂ ದರಿದ್ರ ದಲಿತರನ್ನೂ ಬಿಟ್ಟು ಬೇರೆ ವಿಚಾರ ಮಾಡಬೇಕಿದೆ. ಅಂಬೇಡ್ಕರ್ ಬಿಟ್ಟು ಹೋದ ರಥವನ್ನು ಹಿಂದಕ್ಕೆ ಒಯ್ಯುವವರ ನಡ ಮುರಿಯಬೇಕಿದೆ.
No comments:
Post a Comment