Saturday, October 12, 2013

ಮಾತ್ಗವಿತೆ-152

ಬೆಳದಿಂಗಳ ನಡುವೆ ಅದ್ಯಾಕೋ ಕಪ್ಪು
ದೀಪದ ಬುಡದ ಕತ್ತಲೆಯಲ್ಲ
ಕಡ್ಡಿ ಗೀರುವ ಮುನ್ನ ; ಬೆಂಕಿ ಹೊತ್ತಿಕೊಳ್ಳುವ ಮುನ್ನ
ಇರುವುದಲ್ಲ ಪೊಟ್ಟಣದ ಬೆಂಕಿ ಕಡ್ಡಿಯ ಹಾಗೆ !
ಸುಡವುದಕ್ಕೋ ? ಬೆಳಗುವುದಕ್ಕೋ ?
ಯಾಕೆಂದರೆ ಬೆಳದಿಂಗಳ ಬಿದ್ದರೂ
ಕತ್ತಲ ಮನೆಯಲ್ಲಿ ಬೆಳಕ ಹುಡುಕುವ ಹಪಿಕೆಯಲ್ಲಿರುವೆ ;
ಕಿಡಿ ಬೆಂಕಿಯಾಗಬಹುದು ಎಂಬ ಅಂಜಿಕೆಯೂ ಇದೆ !
ಬೆಂಕಿಯೋ ಬೆಳಕೋ ಈ ಬೆಳದಿಂಗಳಲ್ಲಿ ?

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.