Tuesday, November 06, 2012

ವಚನ-23


ಅಯ್ಯಾ ಎನ್ನ ಕುರುಡನ ಮಾಡಿದಿರಿ ;
ಎನ್ನ ಕುಂಟನ ಮಾಡಿದಿರಿ !
ಇನ್ನೂ ಮುಂದುವರೆದು
ನನ್ನ ಮೂಕನಾಗಿಸಿ, ಕಿವುಡನ ಮಾಡಿದಿರಿ !
ನಾನು, ನನಗೇ ಗೊತ್ತಿಲ್ಲದಂತೆ
ಗುದಮುರಗಿ ಹಾಕುವದ ಕಲಿಸಿದಿರಿ
ನನಗೇನು ಅರಿಯದೇ ? ನಾನು ಕಾರಣಿಕ ಸಿದ್ಧರಾಮ
ಅರ್ಥಕ್ಕೆ ನಿಲುಕುವುದಿಲ್ಲ ; ಅರಿವಿಗೆ ತೆರೆದುಕೊಳ್ಳುತ್ತೇನೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.