Tuesday, October 02, 2012

ಮಾತ್ಗವಿತೆ-98

ನಿನ್ನೊಳಗಿನ ನನ್ನ ಹಿರಿದೊಗೆದು ಬಿಡು
ಹರಿದು ಹೋಗಲಿ ಸಂಬಂಧ
ಮತ್ತೇ ಸೂತಕ !
ಬೇವು ಬೆಲ್ಲದೊಳಲಿಡಲೇನು ಫಲ
ತತ್ವ ಹಳತಾಯಿತು ;
ಎರಡೂ ಸೇರಿದರೆ ಮಾತ್ರ
ಬದುಕು ; ಬೆದಕು ; ಕಲಕು
ಜಿಡ್ಡು ಗಟ್ಟಿದ ಮನಸ್ಸು
ಒಂದಿಷ್ಟು ನಿರಾಳವಾಗಲಿ !
ಇಲ್ಲವೆಂದರೆ ಹಿರಿದೊಗೆದು ಬಿಡು
ನಿನ್ನೊಳಗಿನ ನನ್ನ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.