Friday, January 17, 2014

ಮಾತ್ಗವಿತೆ-165

ಕರೆದ ಮನೆಯೊಳಗೆ ತಬ್ಬಿಕೊಂಡ ಕತ್ತಲೆ
ಕೆರೆದು ಕೊಳ್ಳತ್ತ ಬಿದ್ದ ಬೆತ್ತಲೆ ಮೈ
ಕೊತ್ತಲ ಗೆದ್ದವರ ಧಿಮಾಕಿನ ದಿರಿಸಿಗೆ
ಮೆತ್ತಿಕೊಂಡ ರಕುತದ ಕಲೆ ; ಕಮಟು ವಾಸನೆ !
ಕಿರ್ರೆನ್ನುವುದು ಬಾಗಿಲೋ ಕಿಟಕಿಯೋ ?
ಮರಳು ಸೋಸುವ ಸಪ್ಪಳ ತಾಳ
ಬೀಸುವ ಗಾಳಿಯಲೂ ಮೈ ಬೆವರಿನ ಇಳಿತ
ಜೀವಭಯದ ಸಂಕಟದಲೂ ನೆನಪಾದಳು ಆಕೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.