ಹಾದರದ ಲಾಡಿ ಬಿಗಿದುಕೊಳ್ಳುತ್ತ
ಹಾದಿ ಮ್ಯಾಗಳ ಹಾದರಕ್ಕೆ ಹೇಸಿ ಹೌಹಾರಿ
ಹುಯಿಲಿಡುವ ಹುಚ್ಚಪ್ಪಗಳಿರಾ
ಹಾದಿ-ಬೀದಿ ಬಿಟ್ಟು ನಡುಮನೆಯ ಹಾದರಿಗರ
ಹಸಿ-ಪಿಸಿಗಳ ನೆನಪ ಮಾಡಿಕೊಳ್ಳಿ
ಹೇಳುವಾತನ ಹೇಲುತನಕ್ಕೆ ಕಿವಿಯಾದೊಡೆ
ಕಾರಣಿಕ ಸಿದ್ಧರಾಮ ಅಲ್ಲಮ-ಅಕ್ಕನಿಗೂ ಹಾದರ ಹುಟ್ಟಿಸಬಲ್ಲರು !
ಹಾರೈಸು ನಿತ್ಯದ ನಿಜ ಬದುಕಿಗೆ !
ಹಾದಿ ಮ್ಯಾಗಳ ಹಾದರಕ್ಕೆ ಹೇಸಿ ಹೌಹಾರಿ
ಹುಯಿಲಿಡುವ ಹುಚ್ಚಪ್ಪಗಳಿರಾ
ಹಾದಿ-ಬೀದಿ ಬಿಟ್ಟು ನಡುಮನೆಯ ಹಾದರಿಗರ
ಹಸಿ-ಪಿಸಿಗಳ ನೆನಪ ಮಾಡಿಕೊಳ್ಳಿ
ಹೇಳುವಾತನ ಹೇಲುತನಕ್ಕೆ ಕಿವಿಯಾದೊಡೆ
ಕಾರಣಿಕ ಸಿದ್ಧರಾಮ ಅಲ್ಲಮ-ಅಕ್ಕನಿಗೂ ಹಾದರ ಹುಟ್ಟಿಸಬಲ್ಲರು !
ಹಾರೈಸು ನಿತ್ಯದ ನಿಜ ಬದುಕಿಗೆ !