Saturday, February 22, 2014

ಮಾತ್ಗವಿತೆ-167

 ಹೊದರಿನೊಳಗೆ ಹೊಕ್ಕು
 ಪದರು ಬಿಚ್ಚಿ ನೀರುಣಿಸಿ
ತೃಪ್ತ-ಸಂತೃಪ್ತಗೊಳಿಸಿದರೂ
ತಲ್ಲಣದ ಎಳೆಯೊಂದು
ಗಿರಿ ಗಿರಿ ತಿರುಗುತ್ತಲೇ ಇದೆ !
ತರಕು ಬೇಕು ಬದುಕಲಿ
ಬೆಳೆ ಬೆಳೆಯಲಿಕ್ಕಾದರೂ...
ಬೆಳೆ ಬೆಳೆಸಲಿಕ್ಕಾದರೂ !

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.