Tuesday, November 08, 2011

ಧ್ವನಿ

ಮನಸ್ಸಿನ ಮಾತಿನ ಮೇಲೆ 
ಕಲ್ಲುಚಪ್ಪಡಿ ಎಳೆದು ; 
ಬಳುವಳಿಯಾಗಿ ಬಂದದ್ದು 
ಸ್ವೀಕರಿಸು ಎನ್ನುವವರಿಗೆ 
ಚಪ್ಪಡಿಯನ್ನೇ ಸೀಳಿಕೊಂಡು 
ಬರುವ 
ಎದೆಗಾರಿಕೆಯ ಧ್ವನಿಯಾಗಬೇಕು 
ನಾನು !

1 comment:

  1. ಆಗು ಬೇಡವೆಂದವರುಂಟೆ?
    ಆಗುವ ಮುನ್ನ ಬಳುವಳಿಯ ಹಂಗೇಕೆ?

    ಆಗಬೇಕೆಂಬ ದೃಢತೆಯಿದ್ದಾಗ ಸ್ವೀಕಾರದ ಉಸಾಬರಿಯೇಕೆ?
    ಆಗಬೇಕು ಕೇವಲ ಚಪ್ಪಡಿ ಸೀಳಿಕೊಂಡು ಬರುವ ಧ್ವನಿಯಷ್ಟೇಕೆ?

    ಆಗಲೇಬೇಕು ಸಮೂಹದ ಎದೆಗಾರಿಕೆಯ ಧ್ವನಿಯಾಗಲು ಅನುಮತಿಯೇಕೆ?
    ಆಗುವುದು ಬೇಕು ಈ ಮಾನವ ಜನಾಂಗಕ್ಕೆ ಪೂರ್ತಿಯಾದ-ಸ್ಪೂರ್ತಿಯಲ್ಲವೇ?

    ReplyDelete

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.