Friday, November 18, 2011

ವಚನ-10

ಯಾರನ್ನೋ ನಂಬಿ ನೆಚ್ಚಿ ಸುಖ ಬಯಸಿ
ಹಿಂದಿನ ಇತಿಹಾಸವ ಹಾಸಗೈದು ಬರುವ
ಮಾಸು ಬಲಿತಿರದ ಕೂಸುಗಳಿಗೆ
ಕುಂಬಾರ ಗಡಿಗೆಯ ಗಟ್ಟಿತನವಿಲ್ಲ ; ಅವಿನ್ನು ಸುಟ್ಟಿಲ್ಲ !
ಗಟ್ಟಿತನವಿರದ ಗಡಿಗೆ ಮುಟ್ಟಿದರೆ ಒಡೆವುದು ಕಾರಣಿಕ ಸಿದ್ಧರಾಮ
ಒಡೆದ ಮೇಲೆ ಬೀಳುವ, ಅಳುವ ಬಾಳು ಯಾತರದು ?

1 comment:

  1. nau gatti Aadamele tane gadige gattiyagudu kumbaran talave gatti illa

    ReplyDelete

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.