Tuesday, November 22, 2011

ವಚನ-12

ಏನೋ ಘನಂದಾರಿ ಕೆಲಸ ಮಾಡಿದ್ದೇವೆ 
ಎಂದು ಗತ್ತಿನಲ್ಲಿ ಗೊತ್ತು ಗುರಿಯಿಲ್ಲದೆ  
ಹತ್ತಿ ಇಳಿದು ಮೆತ್ತಿ ಬಳಿದು
ಕ್ಷಣಕಾಲದ ಉದ್ರೇಕದಂತೆ ಮತ್ತೇ ಮೆತ್ತಗಾಗುವ
ಮುಠ್ಠಾಳತನದ ಬಯಕೆಗೆ ಸಲ್ಲ ಕಾರಣಿಕ ಸಿದ್ಧರಾಮ !

1 comment:

  1. ಸಮಕಾಲೀನ ಸಮಾಜಿಕರಿರುವುದೇ ಹಾಗೆ...
    ಕಾಕತಾಳೀಯ ಪ್ರಸಂಗಗಳನ್ನು ಬಾಚಿಕೊಂಡು...
    ಕಾಕಾ ಹೊಡೆದು...
    ತಾವೇ ಕಿಸಿದದ್ದೆಂದು ಬಡಾಯಿ ಕೊಚ್ಚಿಕೊಳ್ಳುವ...
    ಬಂಡಲ್ ಬಾಜಿಗಳು ಉದಿದ್ದು ಹಳೆಯ ತಗಡಿನ ತುತ್ತೂರಿ...
    ಪಕ್ಕವಾಧ್ಯಗಳಾಗಿ ಪುಕ್ಕಟೆ ಬಾಚಿಕೊಳ್ಳುವ ಕಸ್ತೂರಿಗಳು...
    ಸರಿಗಮ ಪದನಿಸವೆಂಬ ಅಪಸ್ವರಗಳು....

    ReplyDelete

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.