Tuesday, November 22, 2011

ಮಾತ್ಗವಿತೆ-5

ಅರ್ಥವಿಲ್ಲವೆಂದು ಅರ್ಥ ಕಳೆದು
ಬದುಕು ನೀಗುವುದು ಯಾತರದು ?
ತಮದ ಕೇಡಿಗೆ ಸಣ್ಣ ದೀಪ ಸಾಕಲ್ಲವೇ ?
ಚಿಂತೆ, ಬೇಸರ, ಕಳವಳ ಕ್ಷಣಕಾಲ
ಮನಸ ಬಾಧಿಸುತ್ತವೆ ನಿಜ
ಅದೇ ಸ್ಥಿರವಲ್ಲ ; ಬದಲಾಗುತ್ತದೆ
ಒಂದಿಷ್ಟು ತಾಳ್ಮೆ-ಸಂಯಮವಿದ್ದರೆ
ಜಗತ್ತನ್ನೇ ಗೆಲ್ಲಬಹುದು !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.