Friday, December 02, 2011

ನಮಗಿನ್ನೂ ಬಸವ ಅರ್ಥವೇ ಆಗಿಲ್ಲ !


ಡಾ. ಸಿದ್ರಾಮ ಕಾರಣಿಕ 
ನಾಚಿಕೆಯಾಗುತ್ತಿದೆ ಸ್ವಾಮಿ
ಬಸವ ಮತ್ತೊಮ್ಮೆ ಹುಟ್ಟಿ ಬಾ ಎನ್ನಲು !
ಯಾಕೆಂದರೆ ಬಸವ
ನಮಗಿನ್ನೂ ಅರ್ಥವೇ ಆಗಿಲ್ಲ !
ಮತ-ಧರ್ಮ-ಜಾತಿಗಳ
ಜೋಕಾಲಿ ಜೀಕುತ್ತಿರುವ
ನಮಗೆಲ್ಲ ಬಸವ ಬರೀ
ಹೆಸರಾಗಿದ್ದಾನೆ ; ಉಸಿರಾಗಿಲ್ಲ !
ಅರಿವಿನ ಮರುವೆಯಿಂದ
ಮೆರೆಯುವ ನಮಗೆಲ್ಲ
ಬಸವ ಇನ್ನೂ ಅರ್ಥವೇ ಆಗಿಲ್ಲ !
ಇಂದು,
ಬಸವ ಎತ್ತಾಗಿದ್ದಾನೆ
ಮತ್ತೇ ಕೆಲವರಿಗೆ
ಮುತ್ತಿನ ಸತ್ತಿಗೆಯಾಗಿದ್ದಾನೆ
ಕಲ್ಲಾಗಿ-ಮಣ್ಣಾಗಿ ನಿಂತಿರೋ
ಬಸವ ಮಾರಾಟದ ಸರಕಾಗಿದ್ದಾನೆ !
ಬಸವ ಇಂದು ಲಿಂಗವಾಗಿದ್ದಾನೆ
ಅಂಗಹೀನನಾಗುತ್ತಿದ್ದಾನೆ !
ಅಂತರಂಗ-ಬಹಿರಂಗ ಶುದ್ಧಿ
ಇಲ್ಲದವರ ನಡುವೆ ಕಂಗಾಲಾಗಿದ್ದಾನೆ !
ಮತಿಯಿಲ್ಲದ ಮಂದಿಯ
ನಡುವೆ ಮಾತಿಲ್ಲದೇ ಮೂಕನಾಗಿದ್ದಾನೆ !
ಯಾಕೆಂದರೆ
ಬಸವ ನಮಗೆ
ಇನ್ನೂ ಅರ್ಥವೇ ಆಗಿಲ್ಲ !
ಬಸವ ಎಂದರೆ ಎತ್ತ
ಲ್ಲ ; ಬರೀ ಮತ್ತೂ ಅಲ್ಲ !
ಬಸವ ಎಂದರೆ
ಸಮಬದುಕಿನ ತತ್ವ ;
ಮನುಷ್ಯರನ್ನು ಮನುಷ್ಯರನ್ನಾಗಿ
ನೋಡುವ ಸಾಧನೆಯ ಸತ್ವ !

2 comments:

  1. Nice one and true also..Still people have not understood what Basava is and what is his prechings are..That is why,still Basava is prisoned with Lingayaths only.His vachanas and works should spread to all the people of the world and for all the community.

    ReplyDelete
  2. very good poem meaningfull everybody socalled basava anuyayi shoud rethink

    ReplyDelete

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.