Tuesday, December 06, 2011

ಮಾತ್ಗವಿತೆ-15

ನಾನು ಭಾವಜೀವಿಯಾಗಿದ್ದೆ
ಈ ಭಾವ ಬುದ್ಧಿಯನ್ನು
ಕೊಲ್ಲುತ್ತದೆ  ಪ್ರತಿಕ್ಷಣವೂ
ಒಳಗೊಳಗೆ ಕೋಯ್ತ ಮಾಡಿ
ಮನುಷ್ಯನನ್ನೇ ಬಲಿ ತೆಗದುಕೊಳ್ಳುತ್ತದೆ !
ಭಾವವನ್ನು ಬಿಡಲೂ ಆಗದು ;
ಬುದ್ಧಿ ಮಾತ್ರವಿದ್ದರೆ
ಅಹಂಕಾರ ಠೇಂಕರಿಸುತ್ತದೆ
ಸಂಬಂಧಗಳನ್ನು ಮುರಿಯುತ್ತದೆ
ಈ ಭಾವ ಮತ್ತು ಬುದ್ಧಿ
ಎರಡನ್ನೂ ಸೇರಿಸಿ
ಕಾಕಟೈಲ್ ತರಹದ ಬದುಕು
ಮನುಷ್ಯನನ್ನು ಮನುಷ್ಯನನ್ನಾಗಿಸುತ್ತದೆ
ನಾನು
ಆ ಬದುಕ ಕಲಿಯುತ್ತಿದ್ದೇನೆ !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.