Thursday, December 08, 2011

ವ್ಹಿ.ಆರ್. ಭಟ್ಟರ ಲೇಖನಕ್ಕೆ ಪ್ರತಿಕ್ರಿಯೆ !

ಡಾ. ಸಿದ್ರಾಮ ಕಾರಣಿಕ
 ಮಡೆ ಮಡೆ ಸ್ನಾದ ಬಗ್ಗೆ ವಿ.ಆರ್. ಭಟ್ಟ ಅವರು ಬ್ರಾಹ್ಮಣಿಕೆಯ ನೆಲೆಯಲ್ಲಿಯೇ ತಮಗೆ ತೋಚಿದ್ದನ್ನು ಗೀಚಿದ್ದಾರೆ ! 'ಮಡೆ ಸ್ನಾನ ಯಾರೋ ಬ್ರಾಹ್ಮಣರು ಹೇಳಿ ಮಾಡಿದ್ದಲ್ಲ, ಬದಲಿಗೆ ಬ್ರಾಹ್ಮಣ್ಯದ ಮೇಲಿನ ಭಕ್ತಿಯಿಂದ, ಕಳಕಳಿಯಿಂದ ಎಲ್ಲಾ ವರ್ಗದ ಭಕ್ತರು ತಾವೇ ಕಂಡುಕೊಂಡ ಮಾರ್ಗ ಅದು. ಅದು ಅಲ್ಲಿ ಬಿಟ್ಟು ಇನ್ನೆಲ್ಲೂ ಇಲ್ಲ! ಬೇಕೆಂದರೆ ನಡೆಸಲಿ ಬೇಡವೆಂದರೆ ನಿಲ್ಲಿಸಲಿ, ಅಲ್ಲಿ ಬ್ರಾಹ್ಮಣರ ಪಾತ್ರವೇನೂ ಇರುವುದಿಲ್ಲ' ಅಂದಿರುವುದು ಶುದ್ಧ ಬ್ರಾಹ್ಮಣ ಯಜಮಾನಿಕೆಯ ಸಂಕೇತ. ಹಾಗಾದರೆ ದಲಿತರು ಊರ ಹೊರಗೆ ಇರುತ್ತಾರೆ ಅದು ಅವರ ಶ್ರದ್ದೆ ಎಂದರೆ ಅದು ಡಾ. ಬಾಬಾಸಾಹೇಬ ಅಂಬೇಡ್ಕರ ನೀಡಿದ ಸಂವಿಧಾನಕ್ಕೆ ವಿರುದ್ಧವಾದ ನಡೆ. ಸಂವಿಧಾನವನ್ನೇ ಒಪ್ಪಿಕೊಳ್ಳದವರು ಡಾ. ಬಾಬಾಸಾಹೇಬರನ್ನು ಒಪ್ಪಿಕೊಳ್ಳುತ್ತಾರೆಯೇ ! ಇದೊಂದು ನೇರ ಸವಾಲು ; ಹೇಳಿ ವೈದಿಕ ಸಂಪ್ರದಾಯದ ವಾರಸುದಾರರೇ ನಿಮಗೆ ಎಂದಾದರೂ ಒಬ್ಬ ದಲಿತ ಆಗಿ ಇರಲು ಸಾಧ್ಯವಾಗುತ್ತದೆಯೇ ? ಎಲ್ಲೋ ಒಂದು ದಲಿತ ಕೇರಿಗೆ ಹೋಗಿ ಪಾದ ಪೂಜೆ ಮಾಡಿಕೊಂಡಂತಲ್ಲ ಎಂಬುದನ್ನು ನೆನಪಿಡಿ ! ನಿಮಗೆ ಕಷ್ಟಕರವೆನಿಸದ್ದು, ನಿಮಗೆ ಅಸಹ್ಯ ಎನಿಸದ್ದು, ನಿಮಗೆ ಮಾನ್ಯತೆ ನೀಡುವಂಥದ್ದು ಏನೇ ಇದ್ದರೂ ಅದನ್ನು ಒಪ್ಪಿಕೊಂಡು ಬಿಡುತ್ತೀರಿ. ಯಾರೋ ಹೇಲು ಬಳೆಯುತ್ತಾರೆ ಎಂದರೆ ಅದು ಅವರ ಕರ್ಮ ಸಿದ್ಧಾಂತ ಹೇಳುತ್ತೀರಿ ! ಬಹುಶಃ ಮಲ ತಿನ್ನುವುದನ್ನು ಕೂಡ ನೀವು ಹೀಗೆ ಸ್ವಾಗತಿಸಬಹುದು ! ಹೋಗಲಿ ಒಮ್ಮೆ ಮಲ ಹೊತ್ತು ನೋಡಿ ! ರಾಮ-ಕೃಷ್ಣರ ಉಲ್ಲೇಖ ಮಾಡಿದ್ದೀರಿ. ಸ್ವಾಮಿ ನೀವು ಬದುಕಲು ಅವರ ಹೆಸರನ್ನು ಬಳಿಸಿಕೊಂಡಿದ್ದೀರಿ ! ಅವರ ಹೆಸರಿನಿಂದಲೇ ನೀವು ಇಲ್ಲಿಯವರೆಗೆ ಅಧಿಕಾರ-ಆಡಳಿತ ಮಾಡಿದ್ದೀರಿ ! ಆ ಹೆಸರಿನಿಂದಲೇ ನೀವು ನಿಮ್ಮ ಬೇಳೆ ಬೇಯಿಸಿಕೊಂಡಿದ್ದೀರಿ.  ನಿಮ್ಮ ರಕ್ತದಲ್ಲಿ ಬಂದಿರೋ ಈ ಪ್ರವೃತ್ತಿ ಒಂದೊಮ್ಮೆ ನಿಮ್ಮನ್ನೆ ಇಲ್ಲವಾಗಿಸುತ್ತದೆ ; ವಾಸ್ತವದ ಅರಿವು ಮೂಡಿಸುತ್ತದೆ. ಕಾಲ ಯಾವುದಕ್ಕೂ ಕಾಯುವುದಿಲ್ಲ. ಇಷ್ಟು ದಿನ ದಲಿತರ ಮೇಲೆ ಮಾಡಿದ ನಿಮ್ಮ ಕಾರ್ಯಗಳು ನಿಮಗೇ ತಗುಲಿ ಹಾಕಿಕೊಳ್ಳುವ ಕಾಲ ದೂರವಿಲ್ಲ ! ಆದಷ್ಟು ಬೇಗನೇ ನಿಮಗೆ ಅಸ್ಪೃಶ್ಯತೆ ಪ್ರಾಪ್ತವಾಗಲಿ. 
ವ್ಹಿ.ಆರ್. ಭಟ್ಟರ ಲೇಖನ  : https://blogger.googleusercontent.com/img/b/R29vZ2xl/AVvXsEieloRQQp5Lysm3WaPjm_4WwylA0CdSR65W5PtjhavcuPjQEVpJ9NqoHC6_h8_p-kKl7Xpzab4T7xvW1RI92KBDr92npO3DjsAQbANWfFhDaKVk0wbux-9KNMFxjI0laBtKZUiixgtyLNo/s1600/dharmasthala.jpg

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.