Saturday, December 03, 2011

ಮಾತ್ಗವಿತೆ-14

ಯಾವುದೀ ಚಡಪಡಿಕೆ ?
ಇರುಳ ಕೂಡ ಹಗಲಾಗಿಸುವ
ದಡಪಡಿಕೆ !
ಖತಿಗೊಳ್ಳದಿರು ಮನವೇ
ಜತೆಗಿದೆ ಅರಗಿಳಿ
ಹೇಗೆ ಸಾಧ್ಯ .... ?
ಪುಕ್ಕ ಬೆಳೆದು ಪುರ್ರನೇ
ಹಾರಿ ಹೋಗದಿರದೆ ?
ಸಾಧ್ಯ .... !
ಮತ್ತೇ ಹೇಳುತ್ತೇನೆ ಸಾಧ್ಯ !
ನಾನು ವನಚರ ... ! 
ನಿಶಾಚರ ... !

No comments:

Post a Comment

ದಾಸಿಮಯ್ಯನ ವಚನ

ಒಡಲುಗೊಂಡವ ಹಸಿವ;  ಒಡಲುಗೊಂಡವ ಹುಸಿವ  ಒಡಲುಗೊಂಡವನೆಂದು  ನೀನೆನ್ನ ಜರಿದೊಮ್ಮೆ ನುಡಿಯದಿರ ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ ರಾಮನಾಥ.